ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಆನಂದ
ಪರಿಚಯ
ಜಾವ ಪರ್ಪಂಚ, ಶೆಲ್ಲೂ, ಲಿನಕ್ಸೂ, ವೆಬ್ ಸೈಟ್ಸೂ, ಡಾಟಾಬೇಸೂ, ಸರ್ವರ‍್ಸೂ.. ಶುಂಠಿ ಸುಡುಗಾಡು.
ಒಬ್ಬ ಸಾಫ್ಟ಼್ವೇರ್ ಡೆವೆಲಪರ್. Amen.
ಪ್ರಶ್ನೆಗಳು
ಕವಿತೆ ಗರ್ಭ ಕಟ್ಟುವುದು
ಮಧ್ಯರಾತ್ರಿಯಲ್ಲೇನಾ?
ಕನಸುಗಾರನಿಗೇನಾ?
ಭಗ್ನ ಪ್ರೇಮಿಗೇನಾ?
ಪ್ರೀತಿ ಹುಡುಕುವವನಿಗೇನಾ?
ಕವಿತೆ ಹುಟ್ಟುವುದು
ಒಂಟಿತನದ ನೀರವತೆಯಲ್ಲೇನಾ?
ಆಸೆಗಳ ಬೆನ್ನತ್ತಿದಾಗಲೇನಾ?
ದುಃಖದ ಮಡಿಲಲ್ಲಿರವಾಗಲೇನಾ?
ನಿರಂತರ ಸಂತಸದ ಕಾತರದಲ್ಲಿರುವಾಗಲೇನಾ?
ಕಾಮನಬಿಲ್ಲಿಂದ ಬಾಣ ಬಿಟ್ಟಾಗ
ಚೆಂದನೆಯ ಮಳೆ ಬಿದ್ದಾಗ
ಮನಸೊಂದನ್ನು ಸೆಳೆದಾಗ
ಕನಸೊಂದನ್ನು ಕಳೆದುಕೊಂಡಾಗ
ಹುಟ್ಟುವುದು ಕವಿತೆಯೇನಾ?
ಕವಿತೆಯೆಂದರೆ ರೂಪಕಗಳೇನಾ?
ಪ್ರಾಸಬದ್ಢ ಸಾಲುಗಳೇನಾ?
ತುಂಟತನದ ಮಾತುಗಳೇನಾ?
ಕೊನೆಗಾಣದ ಉಪಮೆಗಳೇನಾ?
ಅಥವಾ ಕವಿಯೊಬ್ಬನ ಆತ್ಮಕಥೇನಾ?
ಕವಿತೆಯೆಂದರೆ ಅಷ್ಟೇನಾ?
- aananda's blog
- Login or register to post comments
- 308 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಪ್ರಶ್ನೆಗಳು
ಕವಯತೇ ಕವಿಃ ಅಂದಿದ್ದಾರೇ ಅಲಂಕಾರ ಕೋವಿದರು. ಅಂದರೇ ಶಬ್ದ ಮಾಡುವವನು ಎಂದು. ಆದರೇ ಅದೆಂಥಾ ಶಬ್ದ ಎಂದು ಪ್ರಶ್ನೆ ಹಾಕಿಕೊಂಡರೇ...ಯಾವ ಶಬ್ದವಾದರೇ ತನ್ನ ಸಾಮಾನ್ಯ, ಲೌಕಿಕ ಅರ್ಥವನ್ನು ಕಳೆದುಕೊಂಡು ಅಲೌಕಿಕವಾಗಿ ಧ್ವನಿಸುತ್ತದೋ ಅದು "ಕವನ"ವಾಗುತ್ತದೆ. ಇಲ್ಲದಿದ್ದರೇ...ಈ ವ್ಯತ್ಯಾಸವಿಲ್ಲದಿದ್ದರೇ ದಿನಪತ್ರಿಕೆಗಳ ಹೆಡ್ ಲೈನ್ಸ್ ಗೂ, ಕವನಕ್ಕೂ ಏನೂ ವ್ಯತ್ಯಾರವಿರೋದಿಲ್ಲ.
ಏನಂತಿರಿ?
ಉ: ಪ್ರಶ್ನೆಗಳು
ನೀವ್ಹೇಳೋದು ನಿಜ.
ಯಾರ‍್ಯಾರ್ ಯಾವಾಗ ಯಾಕ್ಬರೀತಾರೆ ಅಂತ ಕೇಳ್ಲಿಕ್ಕೆ ಹೊರಟೋನು ಹಾಗೇ ಸ್ವಲ್ಪ ಮುಂದಕ್ಕೆ ಹೋಗ್ಬಿಟ್ಟೆ. :)
ಉ: ಪ್ರಶ್ನೆಗಳು
ಕವಿತೆ ಗರ್ಭಧರಿಸುವುದಕ್ಕೆ ಸಾಮಾಜಿಕ ಕಟ್ಟಳೆಗಳಿಲ್ಲ
ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕಾಯುವುದಿಲ್ಲ
ಕವಿ ನನಸಲ್ಲಿದ್ದಾನೋ ಕನಸಲ್ಲಿದ್ದಾನೋ, ಪ್ರೇಮಿಯೋ
ಭಗ್ನ ಪ್ರೇಮಿಯೋ ಎಂದರಿತುಕೊಂಡು ಹೊರ ಬರುವುದಿಲ್ಲ
ಪ್ರೀತಿಯನ್ನು ಹುಡುಕುತ್ತಿದ್ದಾನೋ, ಪ್ರೀತಿಯ ಮುಂಗಾರಿನಲ್ಲಿ
ತೊಯ್ದು ಹೋಗಿರುತ್ತಾನೋ ಎಂದರಿತು ಹೊರ ಬರುವುದಿಲ್ಲ
ಆಂತರಿಕ ಹೊಯ್ದಾಟಗಳು ಅಕ್ಷರಗಳ ರೂಪ ತಳೆವಾಗಲೆಲ್ಲಾ
ಬಾಹ್ಯದ ಆಗುಹೋಗುಗಳಿಗೆ ಭಾವ ಸ್ಪಂದನ ಆಗುವಾಗಲೆಲ್ಲಾ
ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗಕೆ
ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ
ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ
ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ
ಕವಿತೆ ಮನವ ಮುಟ್ಟಲು ಮನ ಮುದಗೊಂಡರೆ ಆನಂದದ ಅನುಭಾವ
ಕವಿ ಯಾರೆಂಬುದು ಅಲ್ಲಿ ಯಾವಾಗಲೂ ಗೌಣ
ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
-ಆಸು ಹೆಗ್ಡೆ, ಬೆಂಗಳೂರು.
ಉ: ಪ್ರಶ್ನೆಗಳು
ಬಹಳ ಚೆನ್ನಾಗಿ ಬಿಡಿಸಿ ಹೇಳಿದ್ದೀರ ಆಸು ಅವರೇ.
<<ಕವಿ ಯಾರೆಂಬುದು ಅಲ್ಲಿ ಯಾವಾಗಲೂ ಗೌಣ
ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!>>
ತುಂಬಾ ಹಿಡಿಸಿತು