ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

abdul ರವರ ಬ್ಲಾಗ್

"ಒಹ್, ಇದ್ ನಂಬಳ ಪೊಣ್ಣ್"

ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ ಪ್ರಶಸ್ತಿ ಪಡೆದಳು. ಪ್ರಶಸ್ತಿ ಪ್ರದಾನ ಮಾಡಲು ಆಕೆಯನ್ನು ಕರೆದಾಗ ವಿದ್ಯಾಳನ್ನು ನೋಡಿದ ರೇಖಾ ಎಲ್ಲರೂ ಕೇಳುವಂತೆ ಉದ್ಗರಿಸಿದ್ದು "ಒಹ್, ಇದ್ ನಂಬಳ ಪೊಣ್ಣ್" ಅಂತ. ಅಂದರೆ ಒಹ್ ಈಕೆ ನಮ್ಮ ಹುಡುಗಿ ಎಂದು. ಈ ಭಾವನೆ ಕನ್ನಡಿಗರನ್ನು ಬಿಟ್ಟು ಎಲ್ಲಾ ರಾಜ್ಯದವರಿಗೂ ಇದೆಯಲ್ಲಾ ಯಾಕೆ ಎಂದು ನನ್ನ ಸೋದರಿ ಮುಗ್ಧಳಾಗಿ ಕೇಳಿದಳು.
 ಮುಂದೆ ಓದಿ »

ಭಾವೀ ವರರೇ ಎಚ್ಚರ

ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ ಎಂದು ವಧು ಅವನನ್ನು ವರಿಸಲು ನಿರಾಕರಿಸಿದಳು. ಬೆಚ್ಚಿ ಬಿದ್ದ ವರ ರವಿ ಕುಮಾರ್ ಚೌಧುರಿ ದಾರಿ ಕಾಣದೆ ಪೋಲೀಸರ ಮೊರೆ ಹೊಕ್ಕ. 
ಜಪ್ಪಯ್ಯ ಅನ್ನಲಿಲ್ಲ ಮದುವೆ ಮಂಟಪಕ್ಕೆ ಆಗಮಿಸಿದ್ದ ಸಾಲಂಕೃತ ವಧು. ವಧುವಿನ ತಂದೆ ತನ್ನ ಮಗಳ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ವರ ಗಂಟು ಮೂಟೆ ಕಟ್ಟುವಂತೆ ಮಾಡಿದ. ಪಾಪ ಬಾಸಿಂಗ ಕಟ್ಟಿಕೊಂಡು ಏನೇನೋ ಆಸೆಗಳನ್ನು ಇಟ್ಟುಕೊಂಡು ಹಸೆ ಮಣೆ ಏರಲು ಬಂದಿದ್ದ ರವಿ ಕುಮಾರನಿಗೆ ಕಾಲಿಗೆ ಬುದ್ಧಿ ಹೇಳುವುದೊಂದೇ ಬಾಕಿ ಉಳಿದಿದ್ದು.   
 ಮುಂದೆ ಓದಿ »

"ಮಾತೃ ದೆವ್ವೋ ಭವ"

ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ ಮಾಡುತ್ತಿರುತ್ತಾಳೆ ಎಂದು ಪುತ್ರ ಮಹಾಶಯ ನ್ಯಾಯಾಲಯದ ಕಟ್ಟೆ ಹತ್ತಿದ. ಆಸ್ಟ್ರಿಯಾದ ೭೩ ವರ್ಷದ ಈ ವೃದ್ಧ ಮಾತೆ ದಿನಕ್ಕೆ ೪೯ ಸಲ ಫೋನ್ ಮಾಡಿ ಪೀಡಿಸುತ್ತಿದ್ದಳಂತೆ ಒಂಭತ್ತು ತಿಂಗಳು ಹೊತ್ತೂ, ಹೆತ್ತೂ ಸಾಕಿದ ಮಗನನ್ನು.
 ಮುಂದೆ ಓದಿ »

ಫೇಸ್ ಬುಕ್ ಮುಸ್ಲಿಂ ವಿರೋಧಿ?

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ "ಫ್ಯಾಷೆನ್ ಟ್ರೆಂಡ್" ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ.   ಮುಂದೆ ಓದಿ »

ಈ ಬ್ಲಾಗನ್ನೊಮ್ಮೆ ನೋಡಿ

ಸಂಪದ ಬಳಗದಲ್ಲಿ ಕೆಲವು ಹವ್ಯಾಸಿ ಛಾಯಾಗ್ರಾಹಕರನ್ನೂ, "ಡಬ್ಬ" ಕ್ಯಾಮೆರಾದ ಮೂಲಕ ನಿಸರ್ಗದ ವಿಸ್ಮಯವನ್ನು ಸೆರೆಹಿಡಿಯುವ ಉತ್ಸಾಹಿಗಳನ್ನೂ ಕಂಡಿದ್ದೇನೆ. ಹೀಗೇ browse ಮಾಡುತ್ತಿದ್ದಾಗ ಈ ಬ್ಲಾಗ್ ಸೈಟ್ ಕಾಣ ಸಿಕ್ಕಿತು.   

ಕೆಳಗಿದೆ ನೋಡಿ ಕೊಂಡಿ:

Syndicate content