25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪತ್ರಿಕಾ ಧರ್ಮ

April 6, 2009 - 5:02pm
abdul
"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗಳ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ." — ಕುವೆಂಪು ಮೇಲಿನ ಸಾಲುಗಳು ಸಂಪದ ಪೋರ್ಟಲ್ ನ ಸುಭಾಷಿತಗಳನ್ನು ತೋರಿಸುವ ಕಡೆ ಸಿಕ್ಕಿತು. ಯಾವ ಪತ್ರಿಕೆಯ ಬಗ್ಗೆ ಇರಬೇಕು ಕುವೆಂಪು ಈ ರೀತಿ ಅಸಮಾಧಾನದಿಂದ ಗೊಣಗುಟ್ಟಿದ್ದು? ನನ್ನ ಸಂದೇಹ ಮಣಿಪಾಲದಿಂದ ಪ್ರಕಾಶಿತವಾಗುವ ಪತ್ರಿಕೆಯೆಡೆಗೆ ಹೋಗುತ್ತಿದೆ. ಈ ಪತ್ರಿಕೆಯ ಒಳ ಭಾಗಗಳಲ್ಲಿ ತುಂಬಿರುವುದು ಕುವೆಂಪು ಅವರು ಹೇಳಿದ ವಿಷಯಗಳೇ. ಧಾರ್ಮಿಕತೆ ಇರಬೇಕು, ಆದರೆ ಅದು ಸರ್ವಸ್ವ ಆಗಬಾರದು. ಜನ ಪತ್ರಿಕೆ ಓದುವುದು ನಿತ್ಯ ನಡೆಯುವ ವಿದ್ಯಮಾನಗಳು, ಚರ್ಚೆಗಳು, ವಾಚಕರ ಪ್ರತಿಕ್ರಿಯೆಗಳನ್ನು ಓದಲು. ಸಂಪಾದಕನ ತೆವಲನ್ನಲ್ಲ. ಪತ್ರಿಕೆಗಳು ಜವಾಬ್ದಾರಿ ಅರಿತು ನಡೆದುಕೊಂಡರೆ ಸಮಾಜವನ್ನು ಸುಧಾರಿಸಲು ಸಾಧ್ಯ. ತಮ್ಮ ರಾಜಕೀಯ ನಿಲುವುಗಳನ್ನು ಮತ್ತು ವೈಯಕ್ತಿಕ ಆಶಯಗಳನ್ನು ಜನರ ಮೇಲೆ ಹೇರುವುದು ಪತ್ರಿಕಾ ಧರ್ಮಕ್ಕೆ ಹೇಳಿಸಿದ್ದಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by thesalimath on
ಇದು ತಮ್ಮ ಪತ್ರಿಕೆ ಹಾಕುವವನಿಗೆ ಕುವೆಂಪು ಬಯ್ಯುತ್ತಿದ್ದುದು. ಕನಿಷ್ಠ ವಾರಕ್ಕೊಮ್ಮೆ ಈ ರೀತಿ ಬೈದು ಪತ್ರಿಕೆ ಬದಲಿಸುತಿದ್ದರಂತೆ ಕುವೆಂಪು. ಈ ಬೈಗುಳಕ್ಕೆ ಎಲ್ಲಾ ಪತ್ರಿಕೆಗಳು ಒಳಗಾಗಿದ್ದವು. ಪೂ ಚಂ ತೇ ಅವರ ಅಣ್ಣನ ನೆನಪು ಓದಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by abdul on
thank you for the information, shri harsha.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
>>ನನ್ನ ಸಂದೇಹ ಮಣಿಪಾಲದಿಂದ ಪ್ರಕಾಶಿತವಾಗುವ ಪತ್ರಿಕೆಯೆಡೆಗೆ ಹೋಗುತ್ತಿದೆ. ಈ ಪತ್ರಿಕೆಯ ಒಳ ಭಾಗಗಳಲ್ಲಿ ತುಂಬಿರುವುದು ಕುವೆಂಪು ಅವರು ಹೇಳಿದ ವಿಷಯಗಳೇ. ಧಾರ್ಮಿಕತೆ ಇರಬೇಕು, ಆದರೆ ಅದು ಸರ್ವಸ್ವ ಆಗಬಾರದು. ಜನ ಪತ್ರಿಕೆ ಓದುವುದು ನಿತ್ಯ ನಡೆಯುವ ವಿದ್ಯಮಾನಗಳು, ಚರ್ಚೆಗಳು, ವಾಚಕರ ಪ್ರತಿಕ್ರಿಯೆಗಳನ್ನು ಓದಲು. ಸಂಪಾದಕನ ತೆವಲನ್ನಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಘಟನೆಗಳ ಬಗ್ಗೆ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಬರೆಯುವ ಪತ್ರಿಕೆ ಅದೊಂದೆ. ಅದಕ್ಕೆ ಈಗಲೂ ಕರಾವಳಿಯಲ್ಲಿ ಆ ಪತ್ರಿಕೆಯನ್ನೆ ಹೆಚ್ಚು ಜನರು ಓದುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.