18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಒಂದು ಪುಟ್ಟ ಹರಟೆ

May 6, 2010 - 4:39pm
abdul

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.

ರಾಮನ್:  ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.

ನಾರಯಣ್: ಓಹ್

ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?

ನಾರಾಯಣ್: ಇಲ್ಲ.

ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.

ಮಾರನೆ ದಿನ...

ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?

ನಾರಾಯಣ್: ಇಲ್ಲ

ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.

ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?

ರಾಮನ್: ಇಲ್ಲ, ಗೊತ್ತಿಲ್ಲ.

ನಾರಾಯಣ್: ಅಯ್ಯೋ, ಅವನೇ ಅಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ನಿನಗೆ ತಿಳಿಯಬಹುದು" ಎಂದು ಹೇಳಿದ.

 moral of the story:

ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by koushikgraj on

:)... ಎಲ್ಲೋ ಕೇಳಿದ್ದ ನೆನಪು... :) :) ಹೆಸರುಗಳೂ ಕೂಡ ಅವೇ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by abdul on

ಕೌಶಿಕ್, ನನ್ನ ಮೇಲ್ ಬಾಕ್ಸ್ ನಲ್ಲಿ ಇವತ್ತು ಕಂಡಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

<< ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ. >>

ಇದಕ್ಕಾಗಿ ರಾತ್ರಿ ಹೊತ್ತು ತನ್ನ ಮನೆಯಲ್ಲೇ ಇರಬೇಕಾಗುತ್ತದೆ...!?

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raji on

ಅಬ್ದುಲ್ ಚೆನ್ನಾಗಿದೆ. ನಾನು ನೋಡಿದ್ದು ಇದೇ ಮೊದಲು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೆ೦ಕಟೇಶಮೂರ್ತಿ. ... on

ಚೆನ್ನಾಗಿದೆ ಅಬ್ದುಲ್
ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಅಬ್ದುಲ್ ಭಾಯಿ, ಹರಟೆ ಚ೦ದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by IsmailMKShivamogga on

ಸೂಪರ್,,,,,,,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nilgiri on

ಸಕತ್! ನಾನು ಮೊದಲೇ ಎಲ್ಲೋ ಓದಿದ್ದೆ. " ಗಂಭೀರ" ವಿಷಯಗಳ ಮಧ್ಯೆ ನಿಮ್ಮದೊಂದು " ಹರಟೆ" ಇಷ್ಟವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreekant.mishrikoti on

ಇದೇ ತರಹ ಇನ್ನೊಂದು ಓದಿದ್ದೆ . ಅದು ಹೀಗಿದೆ .

ತಂದೆಯೊಬ್ಬ ಮಗನಿಗೆ ಕೇಳುತ್ತಿರುತ್ತಾನೆ.
ಅಪ್ಪ :- ತಾಜ ಮಹಲ್ ಯಾವಾಗ ಕಟ್ಟಿಸಿದ್ದು ?
ಮಗ - ...... (ಮೌನ)
ಅಪ್ಪ:- ಕುತುಬ್ ಮಿನಾರ್ ಯಾರು ಕಟ್ಟಿದ್ದು ?
ಮಗ - ...... (ಮೌನ)
ಅಪ್ಪ:- ಆಸ್ಟ್ರೇಲಿಯಾದ ರಾಜಧಾನಿ ಯಾವುದು?
ಮಗ - ...... (ಮೌನ)

ಇತ್ಯಾದಿ

ಕೊನೆಗೆ ಅಪ್ಪ ಬೈಯುತ್ತಾನೆ - ನಿನಗೆ ಜನರಲ್ ನಾಲೇಜೇ ಇಲ್ವಲ್ಲೋ ? ಜಗತ್ತಿನಲ್ಲಿ ಏನೇನಿದೆ ? ಏನೇನಾಗ್ತಿದೆ ಅಂತ ಎಲ್ಲ ತಿಳ್ಕೊಂಡಿರ್ಬೇಕು.

ಆಗ ಮಗ ಕೇಳುತ್ತಾನೆ - ಅಪ್ಪ , ನೀನು ಮನೇಲಿರದೇ ಇದ್ದಾಗ ಯಾರು ಬಂದಿರ್ತಾರೆ ಗೊತ್ತ ?
ಅಪ್ಪ :- ಆಂ ? .........
ಮಗ:- ಜಗತ್ತಿನಲ್ಲಿ ಏನೇನಾಗ್ತಿದೆ ಅನ್ನೋದು ಬಿಡು , ಮನೇಲಿ ಏನಾಗ್ತಿದೆ ಅಂತ ಸ್ವಲ್ಪ ತಿಳ್ಕೋ !!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by abdul on

ಶ್ರೀಕಾಂತ್, ಈ ತೆರನಾದ ಕಥೆಗಳು ಹುಟ್ಟಬೇಕು ಅಂದ್ರೆ ನಮ್ ಸಮಾಜವೇ ಹೀಗೆ ಅಂತಾನ? ನನಗೆಕೋ ಭಯ ಆಗ್ತಿದೆ ಮಾರಾಯ್ರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SHANKAR MURTHY.K.N on

ಇದರ ಒಟ್ಟು ಆಶಯ....
"ಸಾಮಾನ್ಯ ಜ್ಞಾನಕ್ಕಿಂತ ವ್ಯವಹಾರಿಕ ಜ್ಞಾನ ಪ್ರಾಮುಖ್ಯವಾದುದು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.