ಫೇಸ್ ಬುಕ್ ಮುಸ್ಲಿಂ ವಿರೋಧಿ?
ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ "ಫ್ಯಾಷೆನ್ ಟ್ರೆಂಡ್" ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ.
ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ. ಅಷ್ಟಕ್ಕೂ ಆ ಧರ್ಮ ಗುರು ನೀಡಿದ ವಿವರಣೆ ಸ್ವಲ್ಪ ನೋಡೋಣ. ಫೇಸ್ ಬುಕ್ ಮೂಲಕ ಅನೈತಿಕ ಸಂಬಂಧ ಅರಸಿ ವೈವಾಹಿಕ ಸಂಬಂಧವನ್ನು ಹಾಳುಗೆಡವುವರ ಬಗ್ಗೆ ಮಾತ್ರ ಈ ಎಚ್ಚರಿಕೆ. ಧರ್ಮ ಸಂದೇಶಗಳನ್ನೂ ಸಾರಲೂ,, ವ್ಯಾವಹಾರಿಕವಾಗಿಯೋ, ಬರೀ ಸ್ನೇಹಕ್ಕಾಗಿಯೋ ಉಪಯೋಗಿಸುವವರ ವಿರುದ್ಧ ಅಲ್ಲ ಈ "ಫತ್ವ".
ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡವರು ಹಲವರು. ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ, ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ. ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ "ಶನಿ ಪೆಟ್ಟಿಗೆ" ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು. ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು.
ಹಾಗೆಂದು ತಂತ್ರ ಜ್ಞಾನಕ್ಕೆ ಬೆನ್ನು ತಿರುಗಿಸಿ ಬದುಕಬೇಕೆಂದಲ್ಲ. ಮಿತಿಯನ್ನು ಅರಿತು ಪ್ರಜ್ಞಾ ಶೀಲತೆ ಮೆರೆದರೆ ಅದೇ ಚೆಂದ.
- abdul's blog
- Login or register to post comments
- 1045 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಹೌದು, ಸರಿಯಾಗಿ ಹೇಳಿದ್ದೀರಿ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
prabhuddha baraha
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್,
ಆ ತಲೆಬರಹದೊಂದಿಗೆ ಪ್ರಕಟವಾದ ಪೂರ್ತಿ ಸುದ್ದಿಯ ಪರಿಚಯ ನಮಗಾದರಷ್ಟೇ ನಾವು (ಓದುಗರು) ಪ್ರತಿಕ್ರಿಯಿಸಲು ಸಾಧ್ಯ.
ತಲೆಬರಹ ಪ್ರಶ್ನಾರ್ಥಕವಾಗಿರುವಾಗ, ಅವರಲ್ಲೂ ಸಂದೇಹ ಇದೆ ಅನ್ನುವುದನ್ನು ಸೂಚಿಸುತ್ತದೆ.
ಸಂದೇಹ ವ್ಯಕ್ತಪಡಿಸಿ ಸುದ್ದಿ ಪ್ರಕಟಿಸುವುದರಲ್ಲಿ ಮತ್ತು ಸತ್ಯಾಸತ್ಯತೆಯನ್ನು ಅರಿವ ಪ್ರಯತ್ನದಲ್ಲಿ ತಪ್ಪಿರಲಾರದು ಎನ್ನುವುದು ನನ್ನ ಅಭಿಪ್ರಾಯ.
ಆ ಪ್ರಶ್ನಾರ್ಥಕ ಚಿಹ್ನೆ ನೀವಷ್ಟೇ ನೀಡಿದ್ದೀರೇನೋ...ಅನ್ನುವುದೂ ನನ್ನ ಸಂಶಯ!
ನನ್ನ ಈ ಅಭಿಪ್ರಾಯ ಬದಲಾಗಬೇಕಾದರೆ ಅಲ್ಲಿ ಪ್ರಕಟವಾದ ಪೂರ್ತಿ ಸುದ್ದಿ ನನಗೆ ಸಿಗಬೇಕಾಗುತ್ತದೆ, ಅಷ್ಟೇ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
<<ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ "ಫ್ಯಾಷೆನ್ ಟ್ರೆಂಡ್" ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ.
ಮೇಲೆ ಆಸು ಹೆಗ್ಡೆ ಅವರು ಹೇಳಿದಂತೆ , ಪೂರ್ತಿ ಲೇಖನ ಓದದೆ ನಾವು ಬರೆಯುವುದು ತಪ್ಪೇ . ಇಲ್ಲಿ '?' ಮೇಲೆ 'ಪ್ರಶ್ನಾರ್ಥಕ' ಚಿನ್ಹೆ ಇದೆ !
ಆದರೆ ತಮ್ಮ ಪ್ರಥಮ ಪ್ಯಾರ ದಲ್ಲಿ ತಾವು ಹೇಳಿದಂತೆ ಅದ್ಯಾಕೆ "ಫ್ಯಾಶನ್ ಟ್ರೆಂಡ್ " ಅಂದುಕೊಂಡಿರಿ ಗೊತ್ತಾಗಿಲ್ಲ . ಫೇಸ್ ಬುಕ್ ಗೆ ಫತ್ವಾ ನನಗೆ ಸರಿ ಕಾಣುತ್ತಿಲ್ಲ ! ಅದು ಯಾವುದೇ ಕಾರಣಗಳು ಇರಲಿ . ಅನೈತಿಕ ಸಂಬಂಧ ಅರಸಿ ಹೋಗಲು ಅಂತರ್ಜಾಲದಲ್ಲಿ ಪೂರ್ತಿಯಾಗಿ ಹುಡುಕಿದರೆ ಸಾವಿರಾರು ತಾಣಗಳು ಸಿಗುತ್ತವೆ ! ಅದು ಬಿಟ್ಟು ಫೇಸ್ ಬುಕ್ ಮೇಲೆ ಯಾಕೆ ? ನನ್ನ ಪ್ರಕಾರ ಅನೈತಿಕ ಸಂಬಂಧಗಳ ಬಗ್ಗೆ ತಾವು ಹೇಳ್ದನ್ನೇ ಪುನರುಚ್ಚರಿಸಿದರೆ , ಪೂರ್ತಿ ಅಂತರ್ಜಾಲದಲ್ಲೇ ಆ ಪಿಡುಗು ಇದೆ ! ಹಾಗಾಗಿ ಪೂರ್ತಿ ಅಂತರ್ಜಾಲಕ್ಕೆ ಫತ್ವಾ ಹಾಕಬೇಕಾಗಬಹುದು !!
೨೦೧೦ ರ ಈ ಜಗತ್ತಿನ ಓಟ ಆರಂಭವಾಗಿರುವ ಕಾಲದಲ್ಲಿ ನಮ್ಮ ನಮ್ಮ ಮನಸಿಗೆ ನಾವು ನಾವು ಬೇಕಾದಾಗ "ಫತ್ವಾ" ಹಾಕಿಕೊಂಡರೆ ಬೇರೆ ಹುಕುಂ ಗಳ ಅಗತ್ಯ ಇರುವುದಿಲ್ಲ , ಹಾಗೆ ಹುಕುಂ ಹಾಕಿದಲ್ಲೂ , ಅದು ನಡೆಯುವುದಿಲ್ಲ ಎನ್ನುವುದು ನನ್ನ ಭಾವನೆ. ಒಳ್ಳೆಯ ಲೇಖನ .
ಪ್ರೀತಿ ಇಂದ ,
ಪ್ರವೀಣ ಸಾಯ
ಉ: ಅಬ್ದುಲ್, ದಯವಿಟ್ಟು ನನಗೂ ಉತ್ತರಿಸಿ
ಅಬ್ದುಲ್, ದಯವಿಟ್ಟು ನನಗೂ ಉತ್ತರಿಸಿ.
ಉ: ಅಬ್ದುಲ್, ದಯವಿಟ್ಟು ನನಗೂ ಉತ್ತರಿಸಿ
ಸುರೇಶ್, ತಮ್ಮ ಪ್ರಶ್ನೆ ಸ್ವಲ್ಪ ಕ್ಲಿಷ್ಟಕರ ವಾದ್ದರಿಂದ ಉತ್ತರಿಸಲಿಲ್ಲ, (ನಗು)
ಉ: ಅಬ್ದುಲ್, ದಯವಿಟ್ಟು ನನಗೂ ಉತ್ತರಿಸಿ
ಅಬ್ದುಲ್,
>>ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು.<<
ನನ್ನ ಸರಳವಾದ ಪ್ರಶ್ನೆಗಳು (ನಿಮಗಾಗಿ ಸರಳೀಕರಿಸಿದ ಪ್ರಶ್ನೆಗಳು - ನಗುವಿನೊಂದಿಗೆ):
ಪ್ರಶ್ನೆ ೧. "ಫೇಸ್ ಬುಕ್ ಮುಸ್ಲಿಮ್ ವಿರೊಧಿ?" ಇದು ಆ ಪತ್ರಿಕೆಯಲ್ಲಿದ್ದ ತಲೆಬರಹವೇ (ಪ್ರಶ್ನಾರ್ಥಕ ಚಿಹ್ನೆಯೊಂದಿಗೆ)?
ಪ್ರಶ್ನೆ ೨. ಅಲ್ಲಿದ್ದ ಪೂರ್ತಿ ಸುದ್ದಿ ಏನು?
ಇವುಗಳಿಗೆ ದಯವಿಟ್ಟು ಉತ್ತರ ನೀಡಿ.
ಉ: ಅಬ್ದುಲ್, ದಯವಿಟ್ಟು ನನಗೂ ಉತ್ತರಿಸಿ
ಸುರೇಶ್, ತಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಕಂಡುಕೊಳ್ಳಿ, ನಮಸ್ತೆ.
http://cautiousmind....
ಉ: ಅಬ್ದುಲ್, ದಯವಿಟ್ಟು ನನಗೂ ಉತ್ತರಿಸಿ
ಅಬ್ದುಲ್,
ಧನ್ಯವಾದಗಳು. ಸುದ್ದಿಯನ್ನು ಓದಿದೆ.
"ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ"ದ ಕೈರೋ ವರದಿಗಾರ ಕಳುಹಿಸಿರುವ ವರದಿಯ ಕನ್ನಡ ಅನುವಾದ ಅದು.
ಅದರಲ್ಲಿ ಪತ್ರಿಕೆಯ ಪಾತ್ರ ಏನೂ ಇಲ್ಲ. ಅಲ್ಲದೆ, ಪತ್ರಿಕೆ ತನ್ನ ಸ್ವಂತದ್ದೇನನ್ನೂ ಅಲ್ಲಿ ಸೇರಿಸಿಲ್ಲ. ಸುದ್ದಿಯ ಮೂಲ "ಪಿಟಿಐ".
ಸುದ್ದಿಯನ್ನು ಜನರಿಗೆ ತಲುಪಿಸಿದ ಪ್ರಜಾವಾಣಿ ಯಾವುದೇ ಅಪರಾಧ ಮಾಡಿಲ್ಲ ಅನ್ನುವುದು ನನ್ನ ಅಭಿಪ್ರಾಯ. ಹಾಗೆ ಮಾಡಿರದೇ ಇದ್ದರೆ ನೀವು ಇಲ್ಲಿ ಬರೆಯುತ್ತಿರಲೇ ಇಲ್ಲ. ಒಳ್ಳೆಯದೇ ಆಯ್ತಲ್ವೇ? :)
"ಪಿಟಿಐ" ಕೂಡ ಸುನ್ನಿ ವಿಚಾರವಾದಿ ಹಾಗೂ ಹಿಂದೆ ಫತ್ವಾ ಸಮಿತಿ ಮುಖ್ಯಸ್ಥರಾಗಿದ್ದ ಶೇಖ್ ಅಬ್ದೆಲ್ ಹಮೀದ್ ಅಲ್ - ಅತ್ರಾಸ್ ಅವರು ಹೀಗೆ ಹೇಳಿದ್ದಾರೆ ಎಂಬುದನ್ನಷ್ಟೇ ವರದಿ ಮಾಡಿದೆ.
ಇದರಿಂದ "ಪಿಟಿಐ" ಯಾಗಲೀ ಪ್ರಜಾವಾಣಿ ಪತ್ರಿಕೆಯಾಗಲೀ ಯಾವುದೇ "ಟ್ರೆಂಡ್" ಗೆ ಒಳಗಾಗಿ ಸುದ್ದಿ ಪ್ರಕಟಿಸಿದ್ದಾರೆ ಅಂತ ಅನಿಸುತ್ತಿಲ್ಲ. ಅವರ ಉದ್ದೇಶ ಏನು ಅನ್ನುವುದು ನಿಮಗೆ ಅರಿವಾದಂತೆ ನನಗೆ ಆಗುತ್ತಿಲ್ಲ. ಇಸ್ಲಾಂ ಧರ್ಮಕ್ಕೆ ವಿರೋಧವಾದದ್ದು ಅನ್ನುವುದು ಆ ವಿಚಾರವಾದಿಯ ಬಾಯಿಯಿಂದ ಬಂದ ಮಾತುಗಳಂತೆ. ಹಾಗಿರುವಾಗ, ಅದನ್ನು ತಲೆಬರಹದಲ್ಲಿ ಉಪಯೋಗಿಸಿದರೆ ತಪ್ಪೇನು ಅನ್ನುವುದು ನನಗರ್ಥವಾಗುತ್ತಿಲ್ಲ. ಆ ಸುದ್ದಿಗೆ ಬೇರೆ ಯಾವ ತಲೆಬರಹ ಸೂಕ್ತವೆನಿಸುತ್ತಿತ್ತು ಅಂತಾನೇ ಗೊತ್ತಾಗ್ತಿಲ್ಲ.
ನೀವು ಮಂಡಿಸಿರುವ ಬಾಕಿ ವಿಚಾರಗಳ ಬಗ್ಗೆ ವಾದಮಂಡನೆ ಮಾಡುವ ಮಟ್ಟದಲ್ಲಿ ನಾನು ಇದ್ದೇನೆ ಅಂತ ನನಗೆ ಅನಿಸುವುದಿಲ್ಲ.
ಹಾಗಾಗಿ ಆ ವಿಚಾರಗಳ ಬಗ್ಗೆ ನಾನೇನನ್ನೂ ಹೇಳ ಬಯಸುವುದಿಲ್ಲ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್ ಅವರೆ ನಿಮ್ಮದೇ ಬರಹದ ಎರಡು ವಾಕ್ಯ ಹೀಗಿವೆ....
"
ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ."
"ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ "ಶನಿ ಪೆಟ್ಟಿಗೆ" ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು. ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು. "
ಮೇಲಿನ ಎರಡೂ ವಾಕ್ಯಗಳು ಧರ್ಮಗುರುಗಳು ಹೇಳಿದ್ದು ಎಂದು ನೀವು ಸೂಚಿಸುತ್ತೀರಿ. ಆ ಗುರುಗಳು ನಿಮ್ಮ ಇಸ್ಲಾಂಗೆ ಸಂಭಂದ
ಪಟ್ಟವರೋ ಹೇಗೆ ಯಾಕೆಂದರೆ ನಮ್ಮ ಗುರುಗಳು ಹೇಳಿದ ಬಗ್ಗೆ ಉಲ್ಲೇಖವಿಲ್ಲ. ಹಿಂಸಾಪ್ರಿಯರನ್ನಾಗಿ ಮಾಡುವುದು ಎಳೆಯ
ಮನಸ್ಸುಗಳನ್ನು ಕೆಡಿಸಿ ಜಿಹಾದಿಗಳನ್ನಾಗಿ ಮಾಡುವರು ಯಾರು ಇದು ಜಗತ್ತಿಗೆ ಗೊತ್ತಿದ್ದ ಸತ್ಯ.ಒಂದೆಡೆ ಫತ್ವಾ ಹೊರಡಿಸಿದವರ
ಬಗ್ಗೆ ಒಂದೆಡೆ ತೆಗಳುತ್ತೀರಿ ಅದೇ ನಿಟ್ಟಿನಲ್ಲಿ ಟಿವಿಯಿಂದ ಜನ ಕೆಡ್ತಾರೆ ಅಂತ ನಿಮ್ಮ ಧರ್ಮಗಳು ಹೇಳಿದ್ರು ಅಂತಾನೂ ಹೇಳ್ತೀರಿ
ನಿಮ್ಮ ನಿಲುವು ಯಾಕೋ ಅರ್ಥ ಆಗಲಿಲ್ಲ....
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಉಮೇಶ್, ತಲೆಕೆಟ್ಟ ಫತ್ವ ಗಳಿಗೆ ನನ್ನ ಸಹಮತವಿಲ್ಲ. ಸಾವಧಾನದಿಂದ ಓದಿದರೆ ತಿಳಿಯುತ್ತದೆ ನನ್ನ ನಿಲುವು. ಅಂದ ಹಾಗೆ ತುಂಬಾ ದಿನಗಳ ನಂತರ ಬಂದಿದ್ದೀರಿ ಸಂಪದಕ್ಕೆ, ಆರೋಗ್ಯ ತಾನೇ? ಪ್ರೀತಿಯಿಂದ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
>> ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ <<
ಹೌದು. ಯಾಕೆಂದರೆ ಅಲ್ಲಿ ಪುರೋಹಿತರು ಇಲ್ಲ. ಆದರೆ ಮೌಲ್ವಿಗಳು ಇದ್ದಾರೆ. ಹಾಗಾಗಿ ಪುರೋಹಿತಶಾಹಿ ಬದಲಾಗಿ ಅಲ್ಲಿರುವುದು ಮೌಲ್ವಿಗಳ ಶಾಹಿ. ಇದೇ ಮೌಲ್ವಿಗಳ ಶಾಹಿಯೇ ಮುಸ್ಲಿಮರು ಹಾಡು ಕೇಳಬಾರದು, ಡಾನ್ಸ್ ಮಾಡಬಾರದು, ಟಿವಿ ನೋಡಬಾರದು, ಹೆಣ್ಣು ಮಕ್ಕಳು ಬುರ್ಖಾ ಹಾಕಬೇಕು ಎಂದು ಹೇಳುವುದು ಇತ್ಯಾದಿ.. ಇದೇ ಮೌಲ್ವಿ ಶಾಹಿಯೇ ವಂದೇ ಮಾತರಂ ಹಾಡಬಾರದೆಂದು ಫತ್ವಾ ಹೊರಡಿಸಿದ್ದಲ್ಲವೇ ಅಬ್ದುಲ್ಲಾ ಅವರೆ?
ಇತರರಲ್ಲಿರುವ ಹುಳುಹುಗಳನ್ನು ಹುಡುಕುವ ಮೊದಲು ನಮ್ಮ ಹುಳುಹುಗಳನ್ನು ಒಪ್ಪಿಕೊಳುವ ದೊಡ್ಡ ಮನಸು ಬೇಕು ಅಲ್ಲವೇ ಅಬ್ದುಲ್ಲ ಅವರೇ? (ಈ ಮಾತು ಎಲ್ಲಾ ಮತಾನುನುಯಾಯಿಗಳಿಗೂ ಅನ್ವಯಿಸುತ್ತದೆ).
ಸಂಪದದಲ್ಲಿ ನಿಮ್ಮ ಬರಹಗಳನ್ನು ನಾನು ಗಮನಿಸಿದ್ದೇನೆ. ತಾವು ಸಾಕಷ್ಟು ವಿಚಾರವಾದಿಗಳೆಂದೂ ಅನಿಸಿದ್ದಿದೆ ಸಾಕಷ್ಟು ಬಾರಿ. ಆದರೂ ಎಲ್ಲೋ ಮನದ ಮೂಲೆಯಲ್ಲಿ ಸ್ವಧರ್ಮವೇ ಶ್ರೇಷ್ಟ ಎಂಬ ಭಾವನೆಯೂ ಇದ್ದ ಹಾಗಿದೆ ತಮಗೆ. ಅಸಲಿ ನಮ್ಮಲ್ಲಿ ಬಹುತೇಕರಿಗೆ ಇರುವ ಸಮಸ್ಸ್ಯೆಯೇ ಇದು. ಎಲ್ಲ ಧರ್ಮಗಳಲ್ಲೂ ಒಂದೊಂದು ನ್ಯೂನತೆ ಇರುತ್ತದೆ ಎಂಬುದನ್ನು ನಾವು ಮರೆತು ಬಿಡುತ್ತೇವೆ. ನನ್ನಲ್ಲೂ ಈ ಸಮಸ್ಯೆ ಇರಬಹುದು. ಆದರೆ ಸಾಧ್ಯವಾದಷ್ಟು ವಸ್ತುನಿಷ್ಠವಾಗಿ ಇರಲು ಪ್ರಯತ್ನಿಸುತ್ತೇನೆ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್ ,
<<ಹಾಗೆ ಸಂಭವಿಸಿತೂ ಕೂಡಾ. ೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು. ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು.
ತಮ್ಮ ಈ ವಾಕ್ಯಗಳ ಮೇಲೆ ನನ್ನ ಆಕ್ಷೇಪಣೆ ಇದೆ . "೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು " ಅನ್ನುತ್ತಿರಿ ! ನಮ್ಮ ಪ್ರಸಾರ ಖಾತೆ ಯ ಕಾನೂನುಗಳು ಇನ್ನೂ ಗಟ್ಟಿಯಾಗಿವೆ ! ಅಶ್ಲೀಲ ದ ಪರಮಾವಧಿಯ ಯಾವ "ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ " ಮಕ್ಕಳು ಹಿಂಸಾ ಪ್ರಿಯರಾಗಿದ್ದು ? ಪ್ರೇಮ ಪತ್ರ ಬರೆದಿದ್ದು ! ದಾರಿ ತಪ್ಪಿಸುವ ವಾಕ್ಯಗಳು ! ದೂರದರ್ಶನ ಬಂದ ಹೊಸತರಲ್ಲಿ ತುಂಬಾ ತಣ್ಣಗಿದ್ದ ಮಾಧ್ಯಮ ಲೋಕ , ಬೆಳ್ಳಿತೆರೆ ೨೦೦೦ ದ ನಂತರ ದ ದಶಕದಲ್ಲಿ ಜಾಸ್ತಿ ಗ್ಲಾಮರ್ ನತ್ತ ವಾಲಿದ್ದು ! ಈಗ ತಾವು ಹೇಳಿದ್ದು ಭಾಗಶಃ ನಿಜ , ಆದರೆ ಮೊದಲಲ್ಲ , ಈಗ !
ಪ್ರೀತಿ ಇಂದ ,
ಪ್ರವೀಣ ಸಾಯ
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಪ್ರವೀಣ್, ನನ್ನ ಮಾತು ಅತಿಶಯೋಕ್ತಿಯಲ್ಲ. ದೆನವೂ ಪತ್ರಿಕೆ ಓದುವವರಿಗೆ ಇದು ಮನದಟ್ಟಾಗಿದೆ. ಸೀರ್ಯಲ್ಲುಗಳು, ಮೂವಿಗಳು, ಕಂಪ್ಯೂಟರ್ ಗೇಮ್ ಗಳು ಯಾವ ರೀತಿ ಎಳೇ ವಯಸ್ಸಿನವರ ಮೇಲೆ ಪ್ರಭಾವ ಬೀರುತ್ತಿದೆ ಎಂದು. ಕೊನೆಯಲ್ಲಿ ನಾನು ಇದನ್ನೂ ಬರೆದಿದ್ದೇನೆ, ತಂತ್ರಜ್ಞಾನಕ್ಕೆ ಬೆನ್ನು ತಿರುಗಿಸಬೇಕಿಲ್ಲ ಎಂದು.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಮೌಲ್ವಿಗಳು ಫತ್ವ ಹೊರಡಿಸಿದ ಮಾತ್ರಕ್ಕೆ ಎಲ್ಲರೂ ಅದನ್ನು ಅನುಕರಿಸಲಿಲ್ಲ. ಟೀ ವೀ ಬೇಡ ಎಂದರೂ ಬಹುತೇಕ ಎಲ್ಲರ ಮನೆಯಲ್ಲೂ ಟೀ ವೀ ಇದೆ.
"ಆದರೂ ಎಲ್ಲೋ ಮನದ ಮೂಲೆಯಲ್ಲಿ ಸ್ವಧರ್ಮವೇ ಶ್ರೇಷ್ಟ ಎಂಬ ಭಾವನೆಯೂ ಇದ್ದ ಹಾಗಿದೆ ತಮಗೆ"
ಮೇಲಿನ ತಮ್ಮ ಮಾತು ಸುಳ್ಳಲ್ಲ.
ನನ್ನನ್ನು ಅಬ್ದುಲ್ ಎಂದು ಕರೆಯಿರಿ ದಯವಿಟ್ಟು.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಪುರೋಹಿತಶಾಹಿ ಇಲ್ಲ ಎಂಬ ನಿಮ್ಮ ಮಾತಿಗೆ ಉತ್ತರಿಸಿದೆ ಅಷ್ಟೆ. ನೀವು ಅದನ್ನು ಪಾಲಿಸುತ್ತೀರಿ ಅಥವಾ ಎಲ್ಲರೂ ಅದನ್ನು ಪಾಲಿಸುತ್ತಾರೆ ಎಂದಲ್ಲ. ಹಿಂದೂ ಧರ್ಮದಲ್ಲೂ ಅದು ಹಾಗೆಯೇ. ಪುರೋಹಿತ ಶಾಹಿ ಹೇಳಿದ ಮಾತ್ರಕ್ಕೆ ಎಲ್ಲರೂ ಅದನ್ನು ಪಾಲಿಸುವುದಿಲ್ಲ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
u r wright Mr ,curret agi hellidire
muslims think like that
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ನೋಡಿ...
http://gulfnews.com/...
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಮಂಜು, ತಮ್ಮ ಲಿಂಕ್ ಪ್ರಸ್ತಾಪ ನೋಡಿದಾಗ ಯಾವುದೋ ಹೊಸ ವಿಚಾರ,( ನ್ಯೂಟನ್ ತಲೆ ಮೇಲೆ ಸೇಬು ಅಪ್ಪಳಿಸಿದಂಥ), ಎತ್ತಿ ಕೊಂಡು ಬಂದಿದ್ದೀರಾ ಎಂದು ನೋಡಿದರೆ ನಿರಾಶೆ ಆಯಿತು. ಅದೇ ವಿಚಾರದಲ್ಲೇ ಇಲ್ಲಿ ಚರ್ಚೆ ನಡೆಯುತ್ತಾ ಇರೋದು. ತುಂಬಾ ದಿನಗಳ ನಂತರ ತಮ್ಮ ಭೇಟಿ, ಮರಳಿ ಸ್ವಾಗತ ಸಂಪದಕ್ಕೆ.
ತಲೆಗಪ್ಪಳಿಸುವ ಸುದ್ದಿ...
ಅಬ್ದುಲ್:
ಆ ಲಿಂಕ್ ನಲ್ಲಿ ಕೊನೆಯ ೨ ಪ್ಯಾರ ನೋಡಿದ್ರಾ? ನಾನಂತೂ ಇಲ್ಲಿಯವರೆಗೆ ಅದನ್ನು ಕೇಳಿರಲಿಲ್ಲ. ನನಗಂತೂ ಇದು "ಸೇಬು ತಲೆಗಪ್ಪಳಿಸಿದಂತೆ" ಆಯಿತು.
In May 2007, Al Azhar University, Egypt's leading governmental Islamic seminary sacked a professor after decreeing on a TV talk show that it is permissible for women to breastfeed their male colleagues at workplace as a way around segregation of women and men at work.
According to his fatwa, if a woman fed a male colleague "directly from her breast" at least five times, they would establish a family bond and thus would not violate Islamic Sharia by being together at work.
ಇತೀ, ಉಉನಾಶೆ
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
Quote
"ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡವರು ಹಲವರು" Quote end
ಸ್ವಲ್ಪ ಈ ಲೇಖನದ ಕಡೆ ತಮ್ಮ ಕಣ್ಣು ಹಾಯಿಸಿ
http://kanchangupta....
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಭಾಸಿಪ್, ಕಾಶ್ಮೀರಿ ಪಂಡಿತರ ಮೇಲಿನ ಶೋಷಣೆ, ಕ್ರೌರ್ಯ ನಾಗರೀಕತೆಯನ್ನು ನಾಚಿಸುವಂಥದ್ದು. ಅಂತ ಘಟನೆಗಳು ಅಲ್ಪ ಸಂಖ್ಯಾತರ ಮೇಲೂ ನಡೆದಿದೆ. ದಯಮಾಡಿ ಲಿಂಕ್ ಕೇಳಬೇಡಿ. ೪ ಪುಟಗಳು ಬೇಕಾಗಬಹುದು. ಕ್ರೌರ್ಯವನ್ನು ಯಾವ ಧರ್ಮೀಯನೆ ಮಾಡಲಿ, ಅವನು ಧರ್ಮದ ಸಾರ ತಿಳಿಯದವನು ಅಷ್ಟೇ. ಅಂಥ ಹಿಂಸ್ರ ಪಶುಗಳಿಗೆ ಧಿಕ್ಕಾರವಿರಲಿ.
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
:)
ಹಿಂದುಗಳ ಮೇಲೆ ನಡೆದಿದ್ದು ನಡೆಯುತ್ತಾ ಇರೋದು ಬರೆದರೆ.. ೪೦ ಪುಟ ಕೂಡ ಸಾಕಗಲ್ಲ......
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್ ,
ಒಂದು ಲೇಖನ ಸಂಪದ ದಲ್ಲಿ ಬರೆಯುವಾಗ ತಾವು ಆ ವಿಷಯದ ಬಗ್ಗೆ ಎಲ್ಲ ತಿಳಿದು ಬರೆಯುತ್ತೀರಿ ಅಂತ ನಂಬಿ ಈ ಮಾತುಗಳು :
೧ . << ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ.
ತಾವು ಓದಿದವರು. ಒಬ್ಬ ಪತ್ರಕರ್ತ ತಾನು ಓದಿದ ,ಕೇಳಿದ ಸೋಜಿಗದ ,ಕಾಮೆಡಿ ಯಾ ಲೇಖನ ವನ್ನು ಬರೆಯುವುದು ತಪ್ಪ ?
ತಪ್ಪಾದರೆ ಯಾಕೆ ?
ಫೇಸ್ ಬುಕ್ ಗೆ ಫತ್ವ , ನಮ್ಮದ್ದೆ ದೇಶ ದಲ್ಲಿ ವಂದೇ ಮಾತರಂ ಗೆ ಫತ್ವ , ಅಷ್ಟಕ್ಕೂ ಯಾರೆಲ್ಲ ಫತ್ವ ಹೊರಡಿಸಬಹುದು ?
ಫೇಸ್ ಬುಕ್ಕನ್ನು ಒಳ್ಳೆಯ ಉದ್ದೇಶಕ್ಕೆ ಉಪಯೋಗಿಸುವಂತೆ ಫತ್ವ ದಲ್ಲಿ ಡಿಸ್ಕೌಂಟ್ ಆಫರ್ ಇದ್ದಂತೆ ವಂದೇ ಮಾತರಂ ಫತ್ವಾ ದಲ್ಲೂ ಇದೆಯಾ ?
ಅಷ್ಟಕ್ಕೂ ಈ ಫತ್ವ ಒಳ್ಳೆಯದಕ್ಕ ಕೆಟ್ಟದ್ದಕ್ಕ ? ತಾಲಿಬಾನಿಗಳು ೨೪ ಚಾಡಿ ಏಟು ಕೊಟ್ಟ ಫತ್ವ ಸ್ಟೋರಿ ಓದಿದ್ದಿರ ತಾವು ? ಅದು ಕೂಡ ಫತ್ವ ವ? ಹಾಗಿದ್ದಲ್ಲಿ ಮನ ಬಂದಂತೆ ಫತ್ವ ಹೊರಡಿಸಿದಲ್ಲಿ ಅದರ ಬೆಲೆ ಕಡಿಮೆ ಅಗಲ್ಲ್ವ ? ನೋಡಿ ಫೇಸ್ ಬುಕ್ , ವಂದೇ ಮಾತರಂ , ತಾಲಿಬಾನಿನ ಉದಾಹರಣೆಗಳು ಓದಿ ನನಗೆ ಇದೊಂದು ಮೂಲಭೂತವಾದಿಗಳ ಹೊಸ ವಿಧ ದ ಭಯ ಹುಟ್ಟಿಸುವಿಕೆ ಯ ವಿಧಾನ ಅನ್ನಿಸಿದೆ .
<<ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ.
ತಾಲಿಬಾನಿಗಳು ಮಾಡುತ್ತಿರುವುದು ಏನು ಹಾಗಿದ್ರೆ ? " ಪುರೋಹಿತ" ಅಂದಿದ್ದು ತಾವು ಕೃತಿಗೋ ಅಲ್ಲ ಹುಟ್ಟಿದ ಜಾತಿಗೋ ?
<<ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ
ಫತ್ವ ಅಂದರೆ ಯಾರೋ ಮನ ಬಂದಂತೆ ಹೇಳಿಕೆ ನೀಡುವುದೋ ?
<<ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ "ಶನಿ ಪೆಟ್ಟಿಗೆ" ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು. ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು
ಈ ೮-೧೦ ವರ್ಷ ದ ಮಕ್ಕಳ ಪ್ರೇಮ ಪ್ರಕರಣ ತಾವು ಎಲ್ಲಿ ಓದಿದ್ದು ? ಈ ಪ್ರಶ್ನೆ ಯಾಕೋ ಚಿನ್ಥಕನೊಬ್ಬನ ಮನಸ್ಸಿನ ಮಾತಲ್ಲ ಅನ್ಸ್ಲಲ್ವ , ನೀವು ಕೂಡ "reserved " ಆಗಿ ಯೋಚಿಸಿದರೆ ಮತ್ತೆ ಉಳಿದವರಿಗೂ ತಮಗೂ ವೆಥ್ಯಾಸವೇ ಉಳಿಯುವುದಿಲ್ಲ ಅಲ್ಲವಾ .
<< ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ.
ಈ ಫತ್ವ ತಪ್ಪು ಅಂತ ನೀವೇ ಒಪ್ಪಿದ್ರಲ್ವ ತಮ್ಮ ಲೇಖನದಲ್ಲಿ ( "ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ" )
ಮತ್ತೇಕೆ ಎರಡನೇ ಸಾಲಲ್ಲಿ ಪುನಃ ನೋವು ಪಡಬೇಕು ತಾವು .ಅಂದಿದ್ದು ತಮಗಲ್ಲ . ಅನೈತಿಕ ಅರಸುವ ಜನರಿಗೆ ಅಂತ ಸುಮ್ಮನಿರಬಹುದಲ್ಲ !
ಒಬ್ಬರು ತಮ್ಮ ರಿಪ್ಲೈ ಅಲ್ಲಿ ತಮ್ಮ ಹೆಸರು ಹೇಳದಿದ್ದದ್ದು ಸಿಟ್ಟೇಕೆ ಬರಿಸಿತು ? ತಾವು ಎಸ್ಟೋ ರಿಪ್ಲೈ ಓದಿದವರು , ಎಸ್ಟೋ ಜನ ಹೆಸರು ಹೇಳಲ್ಲ ರಿಪ್ಲೈ ಗೆ . ಇಷ್ಟು ಓದಿದವರು , ಬರೆದವರು ತಾವು ಒಂದಿಸ್ಟು ಸಹನೆ ಕೂಡ ಇದ್ದಲ್ಲಿ ಅದು ಮುಕುಟಪ್ರಾಯ ಅಲ್ಲವ !
ತಮ್ಮ ಲೇಖನ ದ ಆಶಯದ ಬಗ್ಗೆ ಚಪ್ಪಾಳೆ !ಇನ್ನೂ ಚಂದ ವಿಷಯಗಳ ಬಗ್ಗೆ ಬರೆಯಿರಿ ಆದರೆ ಪೂರ್ವಾಗ್ರಹದಲ್ಲಿ ಬರೆದರೆ ನಿಮಗೂ ( ಅರಿತವರಿಗೂ ) ಉಳಿದವರಿಗೂ ಏನು ವೆತ್ಯಾಸ ಅಲ್ವ,
ಪ್ರವೀಣ ಸಾಯ
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಪ್ರವೀಣ್, << ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ"
ಮಸೀದಿಯಿಂದ ೨ ಕಿಲೋ ಮೀಟರ್ ದೂರ ಒಂದು ಮನೆಯಲ್ಲಿ ಆಯುಧ ಸಿಗುತ್ತದೆ. ಪತ್ರಿಕೆಯಲ್ಲಿ ಬಂದ ಸುದ್ದಿ ಹೇಗೆ ಗೊತ್ತಾ? " ಮಸೀದಿ ಬಳಿ ಆಯುಧ ಪತ್ತೆ". ಈ ರೀತಿಯ ವರದಿ ಪ್ರಕಟಿಸಿದಾಗ ಪತ್ರಿಕೆ ಆತ್ಮ ಕಳಕೊಳ್ಳುತ್ತೋ, ಬೆಲೆ ಕಳಕೊಳ್ಳುತ್ತೋ?
ತಾಲಿಬಾನಿಗಳನ್ನು ವಿಷಾನಿಲ ಹರಡಿ ಕೊಲ್ಲಬೇಕೆನ್ನುವವನು ನಾನು. ತಾಲಿಬಾನಿಗಳ ಕಡೆಯಿಂದಲೇ ತಮ್ಮಂಥ ಕುತೂಹಲಾನ್ವೇಷಿಗಳಿಗೆ ಉತ್ತರ ಕೊಡುವ ತಾಪತ್ರಯ ನನಗೆ ಬಂದಿದ್ದು, ( ತಮ್ಮನ್ನು ದೂಷಿಸುತ್ತಿಲ್ಲ, just frustrated).
ಒಬ್ಬರು ತಮ್ಮ ರಿಪ್ಲೈ ಅಲ್ಲಿ ತಮ್ಮ ಹೆಸರು ಹೇಳದಿದ್ದದ್ದು ಸಿಟ್ಟೇಕೆ ಬರಿಸಿತು ? ಇದರ ಬಗ್ಗೆ ನಿದರ್ಶನ ಕೊಡುವಿರಾ ?
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ನನ್ನ ರಿಪ್ಲೈ ಗಳಿಗೆ ರಿಪ್ಲೈ ನೀಡಿ !
ಫತ್ವ ವಿಷಯಕ್ಕೆ, "ಮಸೀದಿಯಿಂದ ೨ ಕಿಲೋ ಮೀಟರ್ ದೂರ ಒಂದು ಮನೆಯಲ್ಲಿ ಆಯುಧ ಸಿಗುತ್ತದೆ. ಪತ್ರಿಕೆಯಲ್ಲಿ ಬಂದ ಸುದ್ದಿ ಹೇಗೆ ಗೊತ್ತಾ? " ಮಸೀದಿ ಬಳಿ ಆಯುಧ ಪತ್ತೆ". ಈ ರೀತಿಯ ವರದಿ ಪ್ರಕಟಿಸಿದಾಗ ಪತ್ರಿಕೆ ಆತ್ಮ ಕಳಕೊಳ್ಳುತ್ತೋ, ಬೆಲೆ ಕಳಕೊಳ್ಳುತ್ತೋ? " ಸೆಂಟಿಮೆಂಟ್ ಮಿಕ್ಸ್ ಮಾಡ್ತಿದ್ದೀರ !
<<ಒಬ್ಬರು ತಮ್ಮ ರಿಪ್ಲೈ ಅಲ್ಲಿ ತಮ್ಮ ಹೆಸರು ಹೇಳದಿದ್ದದ್ದು ಸಿಟ್ಟೇಕೆ ಬರಿಸಿತು ? ಇದರ ಬಗ್ಗೆ ನಿದರ್ಶನ ಕೊಡುವಿರಾ ?
ತಮ್ಮ ರಿಪ್ಲೈ ಓದಿ ನೋಡಿ !
<
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್,
ನಾನಾಗಲೇ ಹೇಳಿದ್ದೀನಿ ,ನನಿಗೆ ಮುಸಲ್ಮಾನ ಬಾಂಧವರ ಮೇಲೆ ಪ್ರೀತಿ ಇದೆ. ಆದ್ರೆ ಪೂರ್ವಗ್ರಹ ಪೀಡಿತರಾಗ್ಬೇಡಿ ಅಂದಿದ್ದು ಅಸ್ಟೆ . ನಾನು airport ನಲ್ಲಿ ಮುಸ್ಲಿಂ ಜನರನ್ನು ಯುರೋಪ್ ನಲ್ಲಿ ಹೆಂಗೆ ತಪಾಸಣೆ ಮಾಡುತ್ತಾರೆ ಅಂತ ಸುಮಾರು ಸಲ ನೋಡಿ ಬೇಸರ ಪಟ್ಟವ . ಆದರೆ ಅದನ್ನೇ frustrate ಅಂತ ನೀವು ತಿಳ್ಕೊಬೇಕಾಗಿಲ್ಲ . ದೇಶ ಕಟ್ಟೋಣ . ದೇಶಕ್ಕಾಗಿ ಎಲ್ಲ ಎದ್ದು ನಿತ್ರೆ ಆಯಿತು . ನಮ್ಮ ದೇಶದಲ್ಲಿ ಪಾಕಿಸ್ಥಾನ ಗೆದ್ದಾಗ ಪಟಾಕಿ ಸಿಡಿಸುವ ಜನರನ್ನು , ತಾಲಿಬಾನಿನ ನೆರಳಿನ ಹಾವಳಿಗಳನ್ನು ಕಿತ್ತೊಗೆದಾಗ ನಿಮ್ಮ ಈ frustration ನಿಲ್ಲುತ್ತದೆ .ಅದಾಗಲು ಮತ್ತೆ ರಾಜಕೀಯ . ವಿಷಯಾಂತರ ಬೇಡ. frustrate ಆಗಬೇಡಿ . ಒಳ್ಳೆ ಸ್ವಾಸ್ಥ್ಯ ಸಮಾಜ ಕಟ್ಟೋಣ ಫತ್ವಗಳಿಲ್ಲದ್ದು !
ಪ್ರೀತಿ ಇಂದ
ಪ್ರವೀಣ ಸಾಯ
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲಾ ಒಂದೇ, ಪ್ರವೀಣ್. ಇಷ್ಟೊಂದು ನಿಷ್ಠುರವಾಗಿ ಮಾತನಾಡುವ ನಾವು ಮುಖಾ ಮುಖಿ ಭೇಟಿಯಾದಾಗ ನಿಷ್ಕಳಂಕ ನಗು, ಒಂದರ್ಧ ಕಾಫಿ, ಇವೇ ನಮ್ಮೆಡೆಯಲ್ಲಿ ಉಳಿಯೋದು. ಏನಂತೀರ?
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ನಿಮ್ಮ ಮಾತಿಗೆ ಒಪ್ಪಿದೆ :) ನಾನೆನಿದ್ರು ದೇಶದ ಬಗ್ಗೆ ಮಾತನಾಡುವವ. ಖಂಡಿತವಾಗಿಯೂ ಭೇಟಿಯಾದಾಗ ಅರ್ಧ ಯಾಕೆ ಪೂರ್ತಿ
ಕಾಫೀ ಆಗಲಿ :)
ಪ್ರವೀಣ ಸಾಯ
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ನಾವೆಲ್ಲ ಒಂದೇ ಎಂದು ನೀವು ಪ್ರವೀಣ್ ಗೆ ಹೇಳಿದ್ದಿರಬಹುದು. ಆದ್ರೆ ಕೇಳಿ ನಂಗೂ ಖುಷಿಯಾಯ್ತು :)
ಇತ್ತೀಚಿನ ಡಿಎನ್ಎ ಸಂಶೋಧನೆಯೂ ಅದನ್ನೇ ಹೇಳುತ್ತದಂತೆ. ಭಾರತೀಯರೆಲ್ಲಾ ಮುಖ್ಯವಾಗಿ ಎರಡು ಮಾನವ ತಳಿಗಳಿಂದ ಕೂಡಿದವರಾಗಿದ್ದಾರೆ. ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರು ಎಂಬ ಎರಡು ತಳಿಗಳು ಎಲ್ಲರಲ್ಲೂ ಬೆರಕೆಯಾಗಿದೆ. (ಹಾಗಾಗಿ ಬ್ರಾಹ್ಮಣರು ತಾವು 'ಪ್ಯೂರ್' ಎಂದ ಹೇಳುವ ಹಾಗಿಲ್ಲ!!!). ಈ ಜಾತಿ ಪಧ್ಧತಿ ಹುಟ್ಟುವ ಮೊದಲೇ ಅಂದರೆ ೩೦೦೦ ವರ್ಷಕ್ಕಿಂತಲೂ ಮೊದಲೇ ಅವೆರಡೂ ತಳಿಗಳು ಸಂಕರವಾಗಿವೆ. :) ಹಾಗೆಯೇ ಇತರರು ತಮ್ಮನ್ನು ತಾವು ಹಳಿದುಕೊLLಅಬೇಕಿಲ್ಲ. ಎಲ್ಲರ ಜೀನುಗಳೂ ಒಂದೇ (ಅರ್ಥಾತ್ ಎರಡು) ಮೂಲವನ್ನು ಹಂಚಿಕೊಂಡಿವೆ. ಅಲ್ಲಿಗೆ ನಾವೆಲ್ಲರೂ ಒಂದೇ ಎಂಬ ನಿಮ್ಮ ಮಾತಿಗೆ ಸಾಕ್ಷಿ ದೊರೆಯಿತು.
http://www.sciencene...
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್:
>>> ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ.
ಈ ಮಾತನ್ನು ಸ್ವಲ್ಪ ವಿವರಿಸ್ತೀರಾ?
ಇತೀ, ಉಉನಾಶೆ
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಅಬ್ದುಲ್ ಆರೋಗ್ಯ ವಿಚಾರಿಸಿರುವಿರಿ ಧನ್ಯವಾದಗಳು. ಸಂಪದ ದಲ್ಲಿಯೆ ಇದ್ದೆ ನೀವು ಗಮನಿಸಿಲ್ಲ ಅಂತ ಕಾಣುತ್ತದೆ ಇಡೀ ತಮ್ಮ
ಲೇಖನ ಹಾಗೂ ಅದಕ್ಕೆ ಬಂದ ಪ್ರತಿಕ್ರಿಯೆ ಓದಿದೆ ತಾವೇಕೆ ಈ ಇಬ್ಬಂದಿತನದಿಂದ ಬಾಧಿತರಾಗಿರುವಿರಿ ಒಂದೆಡೆ ತಾಲೀಬಾನಿಕರಣ,ಫತ್ವಾ ವಿರೋಧಿಸುವ ನಿವು ನಿಮಗೆ ಗೊತ್ತಿಲ್ಲದೆಯೆ ಮೌಲ್ವಿಗಳ ಮುಖವಾಣಿಯಂತೆ ಮಾತಾಡುತ್ತೀರಿ ಈ ಜಗತ್ತು
ನಾಶವಾಗೋದು ಉಗ್ರವಾದದಿಂದ ಮಾತ್ರ ಹೊರತು ಟಿವಿ,ಸಿನೇಮಾಗಳಿಂದಲ್ಲ. ಈ ಮಾತು ತಮಗೂ ಗೊತ್ತಿದೆ ಆದರೆ
ಯಾಕೋ ನಿಮ್ಮ ನಿಲುವುಗಳು ಇನ್ನೂ ದ್ವಂದ್ವದಲ್ಲಿವೆ ಬೇಗ ಅದರಿಂದ ನಿಮಗೆಮುಕ್ತಿ ಸಿಗಲಿ ಗೆಟ್ ವೆಲ್ ಸೂನ್.....!
ಉ: ಫೇಸ್ ಬುಕ್ ಮುಸ್ಲಿಂ ವಿರೋಧಿ?
ಹೌದು ಉಮೇಶ್ . ನನಗೂ ಹಾಗನ್ನಿಸಿದೆ . ಅಬ್ದುಲ್ ಒಳ್ಳೆಯ ಉದ್ದೇಶಕ್ಕೆ ಲೇಖನ ಬರೆದಿದ್ದಾರೆ . ಆದರೆ ಹಾಗಂತ ಅಲ್ಲಲ್ಲಿ ದ್ವಂದ್ವಗಳು ಎದ್ದು ಕಾಣುತ್ತಿವೆ . ಈ ಫತ್ವ ಅನ್ನುವುದು ಒಂದು 'ರಿಸೆರ್ವೆದ್' ಫೀಲಿಂಗ್ ಹುಟ್ಟಿಸುತ್ತೇನೋ ಅಂತ ನನ್ನ ಭಾವನೆ . ಯಾಕೋ ತುಂಬಾ restrictions ಒಳ್ಳೇದಲ್ಲ ಅನ್ನೋದು ನನ್ನ ಭಾವನೆ