ಈಗಿನಂತೆ 5 ಸದಸ್ಯರು ಮತ್ತು 66 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

’ಸಂಸ್ಕೃತದಲಿನ್ನೇನು?’ ಎಂದ ಕವಿ ಮಹಲಿಂಗರಂಗ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
22
Jan
2010
ಪುಟ

  ’ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ...

ಪ್ರತಿಕ್ರಿಯೆಗಳು: 0
ಹಿಟ್ಸ್ : 910
ಸಂಸಾರ ತಾಪತ್ರಯಗಳು
hamsanandi's picture
ಹಂಸಾನಂದಿ
24
Apr
2011
ಬ್ಲಾಗ್ ಬರಹ

ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ...

ಪ್ರತಿಕ್ರಿಯೆಗಳು: 8
ಹಿಟ್ಸ್ : 724
ಅಸ್ತಮಿಸಿದ ಕನ್ನಡ ಅರುಣೋದಯದ ಕೊಂಡಿ
sathvik N V's picture
ಸಾತ್ವಿಕ್ ಎನ್.ವಿ.
06
Apr
2010
ಪುಟ

    ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,323
ನೆಲದ ಮರೆಯ ನಿದಾನ-1
ismail's picture
ismail
26
Feb
2006
ಬ್ಲಾಗ್ ಬರಹ

ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 3,799
ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯
anilkumar's picture
ಎಚ್.ಎ. ಅನಿಲ್ ಕುಮಾರ್
17
Apr
2011
ಬ್ಲಾಗ್ ಬರಹ

 (೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ....

ಪ್ರತಿಕ್ರಿಯೆಗಳು: 1
ಹಿಟ್ಸ್ : 486
ತರಕಾರಿಯೇ ಅಲ್ಲದ ತರಕಾರಿಗಳು!(ಪ್ರಬಂಧ)
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
03
Oct
2011
ಲೇಖನ

 

 

 

"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ...

ಪ್ರತಿಕ್ರಿಯೆಗಳು: 15
ಹಿಟ್ಸ್ : 371
ಡಾಲ್ಫಿನ್: ನೀರೊಳಗಿನ ಬೆರಗು
balukolar's picture
ಡಾ. ಜೆ.ಬಾಲಕೃಷ್ಣ
04
Dec
2010
ಲೇಖನ

ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ.

-ಚಾರ್ಲ್ಸ್ ಡಾರ್ವಿನ್

  1998ರಲ್ಲಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 711
ಜೋಗ ನೋಡಿರಿ ಈಗ
rajeshnaik111's picture
14
Aug
2006
ಬ್ಲಾಗ್ ಬರಹ

ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ,...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,482
ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ
hamsanandi's picture
ಹಂಸಾನಂದಿ
01
Jan
2012
ಬ್ಲಾಗ್ ಬರಹ

ಎಲ್ಲ ಸಂಪದಿಗರಿಗೂ ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ...

ಪ್ರತಿಕ್ರಿಯೆಗಳು: 0
ಹಿಟ್ಸ್ : 109
ನನ್ನ ನೆನಪಿನಾಳದಲ್ಲಿ ಅಣ್ಣಾವ್ರು
tvsrinivas41's picture
14
Apr
2006
ಬ್ಲಾಗ್ ಬರಹ
೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,751

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಬರಹದಲ್ಲಿ ಯಶಸ್ವಿಯಾಗಲು ಮೂರು ಸೂತ್ರಗಳಿವೆ.ಅವುಗಳ ಬಗ್ಗೆ ತಿಳಿಯುವ ಮೊದಲು ಒಂದು ನೋಟ ಬೀರೋಣ ನಮ್ಮ ಆಕಾಂಕ್ಷೆಯ ಬಗ್ಗೆ.

ಬರೆಯಬೇಕು ಎನ್ನುವ ಹಂಬಲ, ಚಪಲ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದಿದ್ದೇ. ಆದರೆ ಕೆಲವರು ಬರವಣಿಗೆಯನ್ನು ಎಲ್ಲಿಂದ ಆರಂಭಿಸಬೇಕು ಎಂದು ತಿಳಿಯದೆ ಭಾವನೆಗಳನ್ನು ತಮ್ಮಲ್ಲೇ ಇಟ್ಟು ಕೊಂಡಿರುತ್ತಾರೆ. ತಾವು ಬರೆದದ್ದನ್ನೆಲ್ಲಾ ಪತ್ರಿಕೆಗಳು ಪ್ರಕಟಿಸಬೇಕೆಂದೇನೂ ಇಲ್ಲವಲ್ಲ. ಆದರೆ ಅಂತರ್ಜಾಲದ ಉಗಮದೊಂದಿಗೆ ಬರೆಯುವವರಿಗೆ ಒಂದು ವೇದಿಕೆಯಾಗಿ, ವರವಾಗಿ ಬಂದವು ಬ್ಲಾಗ್ ಗಳು. ಚಿಕ್ಕಾಸಿನ ಖರ್ಚಿಲ್ಲದೆ ತಮಗೆ ಇಷ್ಟವಾದ ಹೆಸರಿನಲ್ಲಿ ಬ್ಲಾಗೊಂದನ್ನು ಆರಂಭಿಸಿಕೊಂಡು ನಮಗೆ ತೋಚಿದ್ದನ್ನು ಬರೆಯಬಹುದು. ಅಥವಾ ತಾವು ಬರೆದದ್ದು ಸಾರ್ವಜನಿಕರಿಗೆ ಕಾಣಿಸಬಾರದು ಎಂದೇನಾದರೂ ಆಸೆಯಿದ್ದರೆ ಅದಕ್ಕೂ ಹಾಕಬಹುದು ಕಡಿವಾಣವ ಸೆಟ್ಟಿಂಗ್ಸ್ ಮೂಲಕ.

ಸರಿ ಬ್ಲಾಗ್ ಏನೋ ತೆರೆದಾಯಿತು. ಬರೆಯಲು ಈಗ ಲಾಂಚಿಂಗ್ ಪ್ಯಾಡ್ ಆಗಿ ಬ್ಲಾಗ್ ಒಂದನ್ನು ತೆರೆದಾಯಿತು. ಜಿಗಿಯೋದು ಹೇಗೆ?

ಈಜಲು ಕಲಿಯಬೇಕೆಂದರೆ ಧುಮುಕಬೇಕು ನೀರಿಗೆ. ಬರೆಯಬೇಕು ಎಂದೆನ್ನಿಸಿದರೆ ಕೂಡಲೇ ಒಂದು ಪ್ರಶಸ್ತವಾದ ಸ್ಥಳವನ್ನ ಆರಿಸಿಕೊಂಡು ತೊಡಗಬೇಕು ಪೋಣಿಸಲು ಅಕ್ಷರಗಳನ್ನು. ಆದರೆ ಈ ಕೆಲಸ ಹೇಳಿದಷ್ಟು ಸುಲಭವಲ್ಲದಿದ್ದರೂ ಬರೆಯುವ ಹಂಬಲವಿದ್ದರೆ ಬರೆಯಲೇಬೇಕು. we do not write because we want to; we write because we have to ಸುಪ್ರಸಿದ್ಧ ಸಾಹಿತಿ "ಸಾಮರ್ಸೆಟ್ ಮಾಹಂ" (somerset maugham) ಅವರ ಮಾತುಗಳಿವು.  

ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ "ಓದು" ಮೊಟ್ಟ ಮೊದಲನೆಯದು. ನಮಗಿಷ್ಟವಾದ ಲೇಖಕರ ಲೇಖನ, ಬರಹಗಳನ್ನ ಓದಿ ಅವರು ಬರೆಯುವ ಶೈಲಿ, ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ. ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset  Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು. ಮಾಹಂ ಅವರ of human bondage ನನ್ನನ್ನು ಕಾಡಿದ, ಮನ ಕರಗಿಸಿದ ಪುಸ್ತಕಗಳಲ್ಲೊಂದು. ಮತ್ತೊಂದು Wilkie Collins ಅವರ woman in white.  

ಮೊನ್ನೆ ದುಬೈ ನಗರದ ಕಂಪೆನಿಯೊಂದು ಜೆಡ್ಡಾದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಅಲ್ಲಿ ಪುಸ್ತಕವೊಂದನ್ನು ಕೊಂಡೆ. "chicken soup for writer's soul". ಈ ಪುಸ್ತಕ ನೂರಾರು ಉದಾಹರಣೆಗಳ ಸಮೇತ ಹಲವು ಬರಹಗಾರರ ಅನುಭವಗಳನ್ನ ಕೊಟ್ಟು ಎಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಗೂ ಸೊಪ್ಪು ಹಾಕದೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನನ್ನ ಪ್ರಕಾರ ನವ ಬರಹಗಾರರಿಗೆ ಇದಕ್ಕಿಂತ ಉತ್ತಮ ಪುಸ್ತಕ ಬೇರೊಂದಿಲ್ಲ. ಆ ಪುಸ್ತಕದಲ್ಲಿ ನ ಸ್ವಾರಸ್ಯಕರವಾದ ತುಣುಕುಗಳನ್ನು ವೈಯಕ್ತಿಕ ಬ್ಲಾಗ್ ನಲ್ಲಿ ಬರೆಯುತ್ತೇನೆ.   

ಒಹ್, ಈ ಪುರಾಣ ಎಲ್ಲಾ ಬಿಟ್ಟು ಆ ಮಾಂತ್ರಿಕ "ಸೂತ್ರ" ಗಳ ಬಗ್ಗೆ ಹೇಳಬಾರದೇ  ಎಂದು ಹಲ್ಲನ್ನು ಕಟ ಕಟಾಯಿಸಬೇಡಿ. ಬರುತ್ತೇನೆ, ಸೂತ್ರಕ್ಕೆ ಶೀಘ್ರದಲ್ಲೇ.     

ಹಾಂ, ನೋಡಿ. ಸೂತ್ರಗಳು ಎಂದಾಗ ಮತ್ತೊಂದು ಮಾತು ನೆನಪಾಯಿತು. ಸುಖ ಸಂಸಾರಕ್ಕೆ ಹತ್ತು ಸೂತ್ರಗಳು. ಅವುಗಳಲ್ಲಿ ಒಂದು, ಯಾವುದೇ ಕಾರಣಕ್ಕೂ ರಾತ್ರಿ ತರಗತಿಗಳಿಗೆ ಹೋಗಬಾರದು. (ಈ ರಾತ್ರಿ ತರಗತಿ ಬಗ್ಗೆ ಬ್ಲಾಗ್ ಬರೆದಿದ್ದೇನೆ ಸಂಪದದಲ್ಲಿ). ಮೂಗಿಗೆ ತುಪ್ಪ ಸವರೋದನ್ನು ನಿಲ್ಲಿಸಿ ಸೂತ್ರ ಅನಾವರಣ ಮಾಡ್ತೀಯೋ ಇಲ್ವೋ ಎಂದು ಧಮಕಿ ಕೊಡಬೇಡಿ. ತಾಳಿದವನು ಬಾಳಿಯಾನು. ಬರಹಕ್ಕೆ ಈ attitude ಅತ್ಯವಶ್ಯಕ. ಸುಖೀ ಸಂಸಾರಕ್ಕೂ ಅಷ್ಟೇ. ಸಂಯಮ ಬೆಳೆಸಿಕೊಳ್ಳಬೇಕು. ಲೇಖನ ವಾಪಸು ಮಾಡಿದ ಸಂಪಾದಕನ ಮೇಲೆ ಹರಿಹಾಯ್ದರೆ ಕೆಲಸ ನಡೆಯೋಲ್ಲ. chicken soup for soul ಎನ್ನುವ ಮತ್ತೊಂದು ಪುಸ್ತಕ ಡಜನ್ಗಟ್ಟಲೆ ಒಂದು ಪ್ರಕಾಶಕರಿಂದ ಮತ್ತೊಂದು ಪ್ರಕಾಶಕರವರೆಗೆ ಗಡಿಯಾರದ pendulum ನಂತೆ ಲಾಳಿ ಹೊಡೆದ ನಂತರವೇ ಕ್ಲಿಕ್ ಆಗಿದ್ದು. ಹಾಗಾಗಿ ತಾಳ್ಮೆ ಇರಲಿ. perseverance and patience. ಇವೆರಡು ಬರೀ ಬರಹಕ್ಕೆ ಮಾತ್ರವಲ್ಲ ಬದುಕಿನ ಎಲ್ಲಾ ಮಜಲುಗಳಿಗೂ  ಹರಡಲಿ ಈ ಕಂಪು. perseverance and patience ನ ಕಂಪು.

ಮತ್ತೊಂದು ವಿಷಯ. ಬರೆಯಿರಿ, ಆದರೆ ಯಾರನ್ನೂ ಇಂಪ್ರೆಸ್ ಮಾಡಲು ಬೇಡ. ಏನಿಲ್ಲವೆಂದರೂ ನಿಮ್ಮ  ತುಡಿತ, ತುರಿಕೆ ತೀರಿಸಿಕೊಳ್ಳಲಾದರೂ ಬರೆಯಿರಿ. ಅಬ್ದುಲ್, ಆ ಮೂರು ಸೂತ್ರ ಗಳು ಎಲ್ಲಯ್ಯ..... ಇಗೋ ಬಂದೆ ಮೂರು ಸೂತ್ರಗಳೊಂದಿಗೆ.

ಸಾಮರ್ಸೆಟ್ ಮಾಹಂ ಹೇಳುತ್ತಾರೆ, "ಬರೆಯಲು ಮೂರು ಸೂತ್ರಗಳು. ಆದರೆ ಅವು ಯಾವುವು ಎಂದು ದುರದೃಷ್ಟವಶಾತ್ ಯಾರಿಗೂ ಗೊತ್ತಿಲ್ಲ".

ಹೌದು, ಮಾಹಂ ಹೇಳಿದ್ದು ಸರಿ. ಮಂತ್ರಕ್ಕೆ ಮಾವಿನ ಕಾಯಿ ಉದುರಿದ್ದನ್ನು ಕಂಡಿದ್ದೀರಾ?

ನನ್ನ ತಲೆ ಚಚ್ಚಲು ಇಟ್ಟಿಗೆ ಚೂರನ್ನು ಯಾಕೆ ಹುಡುಕುತ್ತಿದ್ದೀರಾ, ಅಲ್ಲೇ ಪಕ್ಕದಲ್ಲೇ ಇರುವ ಕೀ ಬೋರ್ಡಿನಿಂದ ಟ್ವೀಕಿಸಬಾರದೇ ನಿಮ್ಮ ಮನದೊಳಗಿನ ಮಾತುಗಳನ್ನು, ಮೌನಗಳನ್ನು?   

ಚಿತ್ರ: ನನ್ನ "ನಡೆಯುಲಿ"ಯಿಂದ

 

 

Average: 4.3 (4 votes)
1033 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
hamsanandi's picture
18
May
2010
3:12
asuhegde's picture
18
May
2010
8:51

ಉ: (ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಹೇಳಬೇಕಾದುದನ್ನು ನೀವು ಕೊನೆಗೂ ಹೇಳಲೇ ಇಲ್ಲ

ಆದರೆ ಹೇಳಬಯಸಿದ್ದನ್ನು ಹೇಗೋ ಹೇಳಿ ಮುಗಿಸಿದಿರಲ್ಲಾ...

:)

kavinagaraj's picture
18
May
2010
2:26

ಉ: (ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ವಿವಾದಾತ್ಮಕ ವಿಷಯಗಳನ್ನು ಬಿಟ್ಟು ಇಂತಹ ಬರವಣಿಗೆ ನಿಮ್ಮಿಂದ ಹೆಚ್ಚು ಬರಲಿ. ಕುತೂಹಲ ಮೂಡಿಸಿದ ಲೇಖನ. ಚೆನ್ನಾಗಿದೆ ಅಬ್ದುಲ್.

manju787's picture
18
May
2010
8:45

ಉ: (ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಕರ್ಮಕಾಂಡ ಕಣ್ರೀ ಅಬ್ದುಲ್! :):)

partha1059's picture
04
Oct
2010
10:31

ಉ: (ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಅಬ್ದುಲ್ ಆ ಮೂರು ಸೂತ್ರಗಳು ನಿಮ್ಮ ಬರಹದಲ್ಲೆ ಇದೆಯಲ್ಲ
-ಹೇಗಾದರು ಸರಿ ಓದುವವರನ್ನು ಕಡೆಯ ಸಾಲು ಓದುವವರೆಗೂ ಓದುವಂತೆ ಹಿಡಿದಿಡುವುದು
-ಮಾಯಬುಟ್ಟಿಯ ಮುಚ್ಚಲವನ್ನು ಕಡೆಯ ಕ್ಷಣದವರೆಗು ತೆಗೆಯದಿರುವುದು
-ಪೂರ್ತಿ ಓದಿದ ನಂತರ ನಾವು ಸಹ ಬೇರೆಯವರಿಗೆ ಇದೇ ರೀತಿ ಹೇಗೆ 'ಟೋಪಿ' ಹಾಕುವುದು ಅಂತ ಸ್ಕೆಚ್ ಹಾಕುವುದು
ಈಗ ಎಲ್ಲರು ಯಶಸ್ವಿ ಬರಹ ಬರೆಯಲು ಸಿದ್ದ

roopablrao's picture
04
Oct
2010
10:46

ಉ: (ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು

ಅಂದ ಹಾಗೆ ಆ ಸೂತ್ರಗಳು ಯಾವವು ಎಂದು ನನಗೆ ಗೊತ್ತು

ಆ ...................ಆ.........................ಆ (ಧಾರಾವಾಹಿಗಳಲ್ಲಿ ಬರುವ ಅಚ್ಚರಿಯ ನೋಟ)
ಆ ಸೂತ್ರಗಳು ಯಾವವು ಅನ್ನೋದನ್ನ ಮುಂದಿನವಾರ ಕಾದು ನೋಡಿ

:)