ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಲೇಖಕರು

Abhaya Simha's picture

ಪರಿಚಯ

ನಾನು ವೃತ್ತಿಯಿಂದ ಚಿತ್ರ ನಿರ್ದೇಶಕ. ಪೂನಾದಲ್ಲಿರುವ Film and Television Institute of Indiaದ ಪದವೀಧರ.

ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

ನಮಸ್ಕಾರ,

ನನ್ನ ಕೆಲವು ಕಿರುಚಿತ್ರಗಳನ್ನು ಇಲ್ಲಿ ತೋರಿಸುತ್ತಿದ್ದೇನೆ. ನೋಡಿ ಆನಂದಿಸಿ.

ನಿಮ್ಮ ಅಭಿಪ್ರಾಯಗಳನ್ನು ಅವಶ್ಯ ನನಗೆ ತಿಳಿಸಿರಿ.

ಇಂತು ನಿಮ್ಮವ,

- ಅಭಯ ಸಿಂಹ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ

venkatesh's picture

ಅಭಯ್ ರವರೆ,

ನಿಮ್ಮ ಸಾಕ್ಷಿ ಚಿತ್ರ, 'ಸಾವಿನ ವೃತ್ತಾಂತ' ನನಗೆ ಬಹಳ ಹಿಡಿಸಿತು. ನಿಮಗೆ ಅಭಿನಂದನೆಗಳು. ಹೀಗೆಯೇ ಕೆಲವು ಆಕಸ್ಮಿಕ ಘಟನೆಗಳನ್ನು ನಿಮ್ಮ ಕ್ಯಾಮರ ಕಣ್ಣಿನಲ್ಲಿ ಕ್ಲಿಕ್ಕಿಸಿ. ಕಳಿಸಿ. ೭/೧೧ ದೃ‍ಷ್ಯಗಳನ್ನು ಅಮೆರಿಕದ 'ಫಾಕ್ಸ್ ಕ್ಯಾಮರಗಳು' ಸೆರೆಹಿಡಿದು ಒಂದು ಹೊಸ ದಿಕ್ಕನ್ನು ಸೂಚಿಸುವ ಕೆಲಸ ಮಾಡಲಿಲ್ಲವೇ ?

ಭಾರತದ ಮಹಾನ್,ಅದ್ವಿತೀಯ ವ್ಯಂಗ್ಯ ಚಿತ್ರಕಾರ, ಡಾ. ಆರ್.ಕೆ.ಲಕ್ಷ್ಮಣ್ ಹೇಳುವಂತೆ, " ಇಲ್ಲಿ ಸಿಗುವ ಸನ್ನಿವೇಷಗಳು, ವ್ಯಂಗಕ್ಕೇ ಹೇಳಿಮಾಡಿಸಿದಂತೆ ಸಿಗುವ ಜನ, ವಿಶ್ವದ ಯಾವ ತಾಣದಲ್ಲು ಸಿಗಲಾರರು." ! ಕೇಳಿಸ್ಕಂಡ್ರಿ , ಅನ್ಕಂತೀನಿ !
"ಏನೊ, ಎಲ್ಲಾ ಕಡೆ ತೆಲೆ ಆಕ್ಕಂಡ್ ಬರ್ತಾನಲ್ಲಪಾ ಈಯಪ್ಪ", ಅಂದ್ರು ಸಿರಿ ಬಿಡಪ್ಪ. ನನ್ಗೇನೂ ಬ್ಯಾಸರ್ಕೆ ಇಲ್ಲ. ನೀವೆಲ್ಲ ಮುಂದ್ ಬರ್ರಿ. ಆ ಕಾವೇರಿ ನದಿ, " ಕೊಡಿ ಅರ್ಯೊ ದನ್" ಮಾತ್ರ ನಮ್ ಅಕ್ ಪಕ್ದೊರ್ಗೆ ತೊರಿಸ್ ಬ್ಯಾಡ್ರಿ, ಜ್ವಾಕೆ , ಬರ್ಲ್ರಾ ! ಜ್ವಾಪಾನ.....

Re: ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ

Abhaya Simha's picture

ಮಾನ್ಯ ವೆಂಕಟೇಶರೇ
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
ಇಂತು ನಿಮ್ಮವ
ಅಭಯ ಸಿಂಹ

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

kannadiga_1956's picture

ಎರಡು ಕ್ಲಿಪ್ ನೋಡ್ದೆ - "ಒಂದು ಸಾವಿನ ವ್ರುತ್ತಾಂತ" ಮತ್ತೆ "ಸುಬ್ಬು". ಒಂದು ಸಾವಿನ ವ್ರುತ್ತಾಂತ ತುಂಬಾ ಚೆನ್ನಾಗಿದೆ.  

ನನ್ನದೊಂದು ಸಣ್ಣ ಕೋರಿಕೆ - ಕೆಲವು ಕನ್ನಡ Hip-Hop ಶೈಲಿ ಗೀತೆಗಳನ್ನ ಮಾಡಿ.

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

Abhaya Simha's picture

ಖಂಡಿತಾ ಪ್ರಯತ್ನಿಸುವೆ...

ಮೆಚ್ಚುಗೆ: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ...

Sunil Jayaprakash's picture

ಅಭಯ ಸಿಂಹರೆ,

ನಿಮ್ಮ ಸುಬ್ಬು ತುಂಬಾ ಇಷ್ಟವಾಯಿತು, ಕಾರಣ ನೀವೇ ಊಹಿಸಬಹುದು. ಇನ್ನು ಮುಂದೆ ಇದನ್ನು ಇಟ್ಟುಕೊಂಡು ಸಿಗರೇಟು ಸೇದುವ ಚಟವನ್ನು ಕುರಿತು ವ್ಯಂಗ್ಯವಾಡುತ್ತಾ ಇರಬಹುದು.

ಕನ್ನಡಿಗ_1956ರವರು ಪ್ರಸ್ತಾಪಿಸಿದ Hip-Hop ಗೀತೆಗಳ ಮಧ್ಯೆ ಇಂತಹ ಪ್ರಯತ್ನಗಳನ್ನೂ ನಿರೀಕ್ಷಿಸುತ್ತಿರುತ್ತೇವೆ, ಎಂಬುದು ನಿಮ್ಮ ಗಮನದಲ್ಲಿರಿ.

ನನ್ನಿ.

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

Rohit's picture

ಅಭಯ್,
ಮೇಲಿನ ಎಲ್ಲ ಕಿರುಚಿತ್ರಗಳನ್ನು ನೋಡುವ ಪ್ರಯತ್ನ ಮಾಡಿದೆ. ಮೊದಲ ಮೂರು(ಸೀ ಸೈಡ್ ಸ್ಟೋರಿ,ಸೋಲೋ ಸಿಂಗರ್‍,ಕಾಮಿಕ್ ಝೋನ್) ಬಹಳ ಇಷ್ಟವಾದುವು. ಸೀ ಸೈಡ್ ಸ್ಟೋರಿಯ ಚಿತ್ರಣವಂತೂ ಬಹಳ ಇಷ್ಟವಾಯಿತು. ಸೋಲೋ ಸಿಂಗರ್‍ನಲ್ಲಿ ಕ್ಯಾಮೆರಾ ಸೆರೆಹಿಡಿದಿರುವ ದೃಶ್ಯಗಳು, ಕ್ಲೋಸ ಅಪ್ ಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಇತರ ಗೆಳೆಯರು, ಸೂಚಿಸಿದಂತೆ ಕನ್ನಡದ ಹಿಪ್-ಹಾಪ್(ಫ್ಯೂಷನ್) ಗೀತೆಗಳನ್ನು ತಮ್ಮಿಂದ ಅಪೇಕ್ಷಿಸುತ್ತೇನೆ.

ರೋಹಿತ್

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ...

ಸಂಗನಗೌಡ's picture

ಅಭಯ್ ಅವರೇ,

ಒಂದು ಕಿರುಚಿತ್ರ ಇಲ್ಲವೇ ಒಂದು ಸಣ್ಣ ವಿಡಿಯೋ ಅಲ್ಬಮ್ ಮಾಡೋಕೆ, ಅದರ ಸಂಗೀತ, ಹಿನ್ನೆಲೆ ಸಂಗೀತ, ಚಿತ್ರೀಕರಣ ಎಲ್ಲಾ ಸೇರಿ ಸುಮಾರು ಎಷ್ಟು ಹಣ ತಗುಲುತ್ತದೆ?

ನಿಮ್ಮ ಸಣ್ಣ ಸಿನಿಮಾಗಳು ಚೆನ್ನಾಗಿವೆ. ಇವು ಕನ್ನಡದಲ್ಲಿ ಇಂತ ಸಣ್ಣ ಸಿನಿಮಾ ಇಲ್ಲವೇ ವಿಡಿಯೋ ಅಲ್ಬಮ್‍ಗಳನ್ನು ಮಾಡೋಕೆ ಹುಮ್ಮಸ್ಸು ಕೊಡಬಲ್ಲವು. ಹಾಗೆ ನಿಮ್ಮ ಉತ್ತರ ಹಲವರಿಗೆ ನೆರವಾಗಬಲ್ಲದು.

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ...

Abhaya Simha's picture

ನಿಮ್ಮೆಲ್ಲರ ಪ್ರೋತ್ಸಾಹದಿಂದ ಉತ್ಸಾಹಿತನಾದ ನಾನು ನನ್ನ ಇನ್ನೆರಡು ಚಿತ್ರಗಳನ್ನು ನಿಮಗೆ ತೋರಿಸಬಯಸುತ್ತಿದ್ದೇನೆ. ದಯವಿಟ್ಟು ನೋಡಿ.

http://www.youtube.com/watch?v=ehAyOf6kiVI ಯ ಕನ್ನಡ

ಯಕ್ಷೋತ್ತಮ - ಇದು ಯಕ್ಷಗಾನ ಕಲಾವಿದನೊಬ್ಬನ ಜೀವನದ (ಕಾಲ್ಪನಿಕ) ಮೇಲಿನ ಒಂದು ಕಿರು ಕಥಾ ಚಿತ್ರ. ಇದನ್ನು ೩೫ ಎಮ್.ಎಮ್. ನೆಗೆಟಿವ್ ಮೇಲೆ ಚಿತ್ರೀಕರಿಸಲಾಗಿದೆ. ಯಕ್ಷಗಾನ ಕೇಂದ್ರ, ಉಡುಪಿಯವರ ಸಹಕಾರದಿಂದ ಈ ಪ್ರಯತ್ನ ಸಫಲವಾಯಿತು. ಚಿತ್ರ ನಿಮಗೆ ಸಂತೋಷ ನೀಡುತ್ತೆ ಎಂದು ಭಾವಿಸಿದ್ದೇನೆ.

http://www.youtube.com/watch?v=JKXc22i7TWQ

ಪೂರ್ವರಂಗ - ಇದು ಉಡುಪಿ ಯಕ್ಷಗಾನ ಕೇಂದ್ರದ ಗುರು ಶ್ರೀ ಸಂಜೀವ ಸುವರ್ಣರ ನೇತೃತ್ವದಲ್ಲಿ ಮರು-ರೂಪಿತಗೊಂಡ ಯಕ್ಷಗಾನ ಪೂರ್ವರಂಗ ಪ್ರಯೋಗದ ಕುರಿತಾದ ಸಣ್ಣ ಸಾಕ್ಷ್ಯಚಿತ್ರ. ಇದನ್ನು ನೋಡಿ ಚಿತ್ರಕ್ಕೂ ಯಕ್ಷಗಾನ ಪುನರುತ್ಥಾನಕ್ಕೂ ಬೆಂಬಲ ನೀಡುವಿರೆಂದು ಭಾವಿಸಿದ್ದೇನೆ.

ಇನ್ನು ಸಂಗನ ಗೌಡ ಅವರೇ, ನಿಮ್ಮ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡುವುದು ಕಷ್ಟ. ಏಕೆಂದರೆ, ನಾವು ಯಾವ ಮಾಧ್ಯಮದಲ್ಲಿ ಚಿತ್ರೀಕರಣ ನಡೆಸುತ್ತೇವೆ, ಎಷ್ಟು ಸ್ಥಳಗಳಲ್ಲಿ ಚಿತ್ರೀಕರಿಸುತ್ತೇವೆ. ನಮಗೆ ಬೇಕಾಗುವ ಸಲಕರಣೆಗಳು ಏನು, ಯಾವ ರೀತಿಯ ಸಂಗೀತದ ಅಗತ್ಯ ಇದೆ, ನಟರ ಸಂಭಾವನೆ ಎಷ್ಟು, ತಂತ್ರಜ್ಞರು ಯಾರು? ಅವರ ಸಂಭಾವನೆ ಎಷ್ಟು ಇತ್ಯಾದಿ ಅನೇಕ ವಿಷಯಗಳು ಅನಿಶ್ಚಿತವಾದ್ದರಿಂದ ಒಂದು ಅಂದಾಜು ಮೊತ್ತವನ್ನು ನಾನು ಹೇಳುವುದು ಕಷ್ಟವಾಗುತ್ತೆ. ನಿಮಗೇನಾದರೂ ನಿರ್ಧಿಷ್ಟ ಯೋಜನೆ ಇದ್ದರೆ, ಅದನ್ನು ತಿಳಿಸಿದಲ್ಲಿ ನಾನು ಒಂದು ಅಂದಾಜು ಹೇಳುವುದು ಸಾಧ್ಯವಾಗಬಹುದು.

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ...

ASHOKKUMAR's picture

ಯಕ್ಷೋತ್ತಮ ಮನಮುಟ್ಟುವಂತಿದೆ...ಕಲಾವಿದನ ನೋವು ಚೆನ್ನಾಗಿ ಅಭಿವ್ಯಕ್ತವಾಗಿದೆ.

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ - ವಿಶ್ಲೇಷಣೆ, ಸಲಹೆ, ಕೋರಿಕೆ

ವೈಭವ's picture

ಅಭಯಸಿಂಹರವರೆ,
   ನಿಮ್ಮ  ಸುಬ್ಬು, ಯಕ್ಷೋತ್ತಮ ನೋಡಿದೆ. ಒಳ್ಳೆಯ ಪ್ರಯತ್ನಗಳು.
ಸುಬ್ಬುವು ಯೂತ್ ಫುಲ್ ಆಗಿದ್ದು ಅಬ್ಬರದಿಂದ ಕೂಡಿದೆ. ಸಿಗರೇಟಿನ ಹೊಗೆ ಸ್ವಲ್ಪ ಜಾಸ್ತಿಯಾಯಿತು ಅನ್ಸುತ್ತೆ.!!

ಇನ್ನು ಯಕ್ಷೋತ್ತಮ ತುಂಬ ಒಳ್ಳೆಯ ಚಿತ್ರ. ಆಧುನಿಕತೆ v/s ಸಾಂಪ್ರದಾಯಿಕ ಕಲೆಗಳ ನಡುವಿನ ತಿಕ್ಕಾಟ ಅರ್ಥಪೂರ್ಣವಾಗಿ ಹಾಗೂ ವಾಸ್ತವಕ್ಕೆ ಹತ್ತಿರವಾಗಿ ಚಿತ್ರಿತವಾಗಿದೆ.
ಸಂಭಾಷಣೆಯ ಮಧ್ಯೆ ಆ Pause ಗಳು ಮತ್ತು ಯಕ್ಷಗಾನದ ಹಿಮ್ಮೇಳ ಸಾಂದರ್ಭಿಕವಾಗಿ ಮೂಡಿ ಬಂದಿದೆ. ಈ ಯಕ್ಷೋತ್ತಮ ನನಗೆ ಗಿರೀಶ್ ಕಾಸರವಳ್ಳಿಯ "ದ್ವೀಪ"ದ ವಾಸುದೇವರಾವರನ್ನು ಙ್ನಾಪಕಕ್ಕೆ ತಂದಿತು. ನಿರೀಕ್ಷೆ ಮಾಡಬಲ್ಲ (predictable) ಕಥೆಯಾದರೂ ನೀವು ನಿರೂಪಿಸಿರುವ ರೀತಿ ಇಷ್ಟವಾಯಿತು. ಕೊನೆಗೆ ಅಜ್ಜನು ತನ್ನ ಮೊಮ್ಮಕ್ಕಳೊಂದಿಗೆ ಕುಣಿಯುವ ದೃಶ್ಯವನ್ನು ತುಂಬ ಸೊಗಸಾದ ಕ್ಯಾಮೆರಾ ಕೋನದಿಂದ ಸೆರೆ ಹಿಡಿದಿದ್ದೀರ.

ನಿಮ್ಮ ಚಿತ್ರಗಳಲ್ಲಿ ನಿಮ್ಮ ಪ್ರತಿಭೆ ಕಾಣುತ್ತದೆ. ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಬಹುದು.

ನನ್ನ ಕೆಲವು ಸಲಹೆಗಳು
೧) ಪರಿಸರದ ಕಥೆಗಳು,ಸಮಸ್ಯೆಗಳು ಮತ್ತು ಅದರ ಸೌಂದರ್ಯವನ್ನು ಸೆರೆಹಿಡಿಯುವಂತಹ ಕೆಲವು ಕಿರುಚಿತ್ರ(ಸಾಕ್ಷ್ಯಾಚಿತ್ರ)ಗಳನ್ನು ದಯವಿಟ್ಟು ಮಾಡಿ
೨) ಹಾಗೆಯೆ ನಮ್ಮ ನಾಡಿನ ಹಲವು ಐತಿಹಾಸಿಕ ಸ್ಥಳಗಳ ಬಗ್ಗೆಯೂ ನಿಮ್ಮ ಇನ್ನೋವೇಶನ್ ಶಕ್ತಿಯನ್ನು ಉಪಯೋಗಿಸಿ ಚಿತ್ರ ಮಾಡಿ.

ಹಾಗೂ ನನ್ನ ಇನ್ನೊಂದು ಕೋರಿಕೆ ಏನೆಂದರೆ ಹೇಗೆ ಕಿರುಚಿತ್ರ ಮಾಡುತ್ತೀರ ಹಾಗೂ ಯಾವ ಯಾವ ಸಾಧನಗಳನ್ನು ಉಪಯೋಗಿಸುತ್ತೀರಾ ಇದರ ಬಗ್ಗೆ ಒಂದು ಲೇಖನ ಬರೆದರೆ ನಮಗೂ ಇದರ ಬಗ್ಗೆ ತಿಳಿಯುತ್ತದೆ.

-ಜೈ ಕರ್ನಾಟಕ

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ...

tarlesubba's picture

ಒಂದು ಸಾವಿನ ವೃತ್ತಾಂತ

excellent. the editorial and image quality is just top notch. pbs.org standards alli moodibandide.

tadadi power plant, BMIC, inthaha issues nimma gamanakke tarodu sahaja.

have you considered covering events like ninasam @ heggodu. then ofcourse there are jaanapada jaathre, karaga etc., not to mention docufilms on people like yusuf arakal, kasaravalli, kambara, arundhati nag, tejaswi, hr leelavathi, ashwath, vasundhara rao. mebbe you could team up with ismail.

voTalli local docus beku.

 

just watched it again. excellent.yaavudaadaru tv channels alli bantha idu?

 

nimma yakshottama poorva ranga noo noDide. comments aamele post maaDthini. 

 

 

ಒಂದು ಸಮಸ್ಯೆ-ಸಹಾಯ ಬೇಕು: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ...

Shyam Kishore's picture

ವಾರಾಂತ್ಯದಲ್ಲಿ ಆರಾಮಾಗಿ ಎಲ್ಲ ಚಿತ್ರಗಳನ್ನೂ ನೋಡೋಣ ಅಂತ ಅಂದುಕೊಂಡಿದ್ದೆ. ಇವತ್ತು ನೋಡಲು ಕೂತರೆ, ಅದೇನೋ ನಾನು ಯಾವ ಚಿತ್ರಗಳನ್ನೂ ಪ್ಲೇ ಮಾಡೋಕೆ ಆಗುತ್ತಿಲ್ಲ. ಅದೇನೋ ಹೊಸ Flash Player ಬೇಕು ಅಥವಾ Javascript enable ಮಾಡಿಕೊಳ್ಳಿ ಅಂತ ಒಂದು ಸಂದೇಶ ಬಂದಿತು. ಸರಿ ಅವರು ಕೊಟ್ಟ ಕೊಂಡಿಯನ್ನೇ ಬಳಸಿ ಹೊಸ flash player ಇಳಿಸಿಕೊಳ್ಳೋಣ ಅಂತ ಹೊರಟರೆ, ಅದೂ ಆಗುತ್ತಿಲ್ಲ. ಇನ್ನು ಈ ಜಾವಾಸ್ಕ್ರಿಪ್ಟ್ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ದಯವಿಟ್ಟು ಯಾರಾದರೂ ಸ್ವಲ್ಪ ಸಹಾಯ ಮಾಡುತ್ತೀರಾ?

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

bloggerkannadiga's picture

ಅಭಯ ಸಿಂಹ ಅವರೆ,
ನಿಮ್ಮ ಕಿರುಚಿತ್ರಗಳು ತುಂಬಾ ಚೆನ್ನಾಗಿವೆ ಅಂತ ಹೇಳಿದ್ರೆ ಅವಕ್ಕೆ ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲ, ಅದಕ್ಕೆ ನನ್ನ ಅಭಿಪ್ರಾಯವನ್ನು ವಿಸ್ತ್ರುತವಾಗಿ ಬರೆಯುತ್ತಿದ್ದೇನೆ.
ಇಲ್ಲಿರುವ ಕಿರುಚಿತ್ರಗಳಲ್ಲಿ ಒಂದು ಗಮನಾರ್ಹ ಸಂಗತಿಯೆಂದರೆ, ಒಬ್ಬ ವಿದ್ಯಾರ್ಥಿಯಾಗಿ ಚಿತ್ರ ನಿರ್ದೇಶನದ ಹಲವಾರು ಮಜಲುಗಳನ್ನು ನೀವು ಪ್ರಯೋಗಿಸಿದೀರಾ ಅಂತ ನನಗೆ ಅನಿಸ್ತದೆ. ಫ಼್ಲಾಷ್‍ಬ್ಯಾಕ್, ಹಾಡು, ಕುಣಿತ, ಹೊರದೇಶದ ಚಿತ್ರಣ, ಗ್ರಾಮೀಣ ಬದುಕು, ನಗರ ಜೀವನ, ಮಧ್ಯಮ ವರ್ಗದ ಅನಿವಾರ್ಯತೆಗಳು, ಹೀಗೆ ಹತ್ತು ಹಲವಾರು ಮಜಲುಗಳು ಚಿತ್ರಣಗೊಂಡಿವೆ. ಒಬ್ಬ ನಿರ್ದೇಶನ ವಿದ್ಯಾರ್ಥಿಗೆ ಇದು ಒಂದು ಪರಿಪೂರ್ಣ ಅವಕಾಶ ಅಂತ ನನ್ನ ಭಾವನೆ.
೧. ಸೀ ಸೈಡ್ ಸ್ಟೋರಿ : ಇದು ಸದ್ಯದ ಗ್ರಾಮೀಣ ಭಾರತದ ಕುಟುಂಬಗಳ ಚಿತ್ರಣ ನೀಡುತ್ತೆ. ಮುಖ್ಯವಾಗಿ ವೃತ್ತಿ ಸಂಬಂಧವೋ ಅಥವಾ ಇನ್ಯಾವುದೋ ಅನಿವಾರ್ಯತೆಯಿಂದ ಹೊರನೆಲೆಸಿರುವ ಮಕ್ಕಳಿಗೆ ಪಾಲಕರ ಒಂಟಿತನದ ಬದುಕನ್ನು ಹಂಚಿಕೊಂಡು ನಿವೃತ್ತಿಯ ಬದುಕನ್ನು ಸಹನೀಯಗೊಳಿಸುವುದರ ಅವಶ್ಯಕತೆ ಹಾಗೂ ಜೀವನದ ಅನಿವಾರ್ಯತೆಯ ಇಬ್ಬಂದಿತನವನ್ನ ಚೆನ್ನಾಗಿ ಹೇಳಿದೀರ. ಇದನ್ನ ನೋಡಿದಾಗ ನಂಗೆ ಶಂಕರ್ ನಾಗ್ ಅವರ ಆಂಗಲ್ ನೆನಪಿಗೆ ಬಂತು.
೨. ಸೋಲೊ ಸಿಂಗರ್ ಆಂಡ್ ಬ್ಲೂ ಸಿಟಿ : ಇದು ನನ್ನ ಫ಼ೇವರಿಟ್; ಸೂಪರ್ ಆಂಗಲ್ಸ್, ಒಳ್ಳೇ ಥೀಮ್
೩. ಕಾಮಿಕ್ ಝೋನ್ : ಇದು ಶುರುವಿನಲ್ಲಿ ಸ್ವಲ್ಪ ಬೋರ್ ಅನಿಸಿದರೂ, ನಂತರ ಒಳ್ಳೇ ಮಾಹಿತಿ ನೀಡಿತು. ನನ್ನ ಮೆಚ್ಚಿನ ಅಮರ ಚಿತ್ರ ಕಥೆಯ "ಗರ್ಭರಹಸ್ಯ" ತಿಳಿದಿರಲಿಲ್ಲ.
೪. ಸುಬ್ಬು : ಈ ವ್ಯಕ್ತಿ ಇಂದಿನ ಐ ಟಿ ಪೀಳಿಗೆಯನ್ನು ಪ್ರತಿನಿಧಿಸುವ ವ್ಯಕ್ತಿ ಎನ್ನಬಹುದು, ನನ್ನ ಹಲವಾರು ಸ್ನೇಹಿತರು ಸುಬ್ಬುಗಳೇ!
೫. ರಬ್ ಜಾನೆ: ಇದು ಕೂಡಾ ಸೂಪರ್ ಆಗಿ ಬಂದಿದೆ. ಇದರ ಹೈಲೈಟ್ ಅಂದರೆ, ಸಿನಿಮಾಟೋಗ್ರಫಿ; ಮಣಿರತ್ನಂಗೆ ಸಂತೋಷ್ ಶಿವನ್, ಅಥವಾ ರಾಜೀವ್ ಮೆನನ್ ಶೂಟಿಂಗ್ ಮಾಡಿದ ಹಂಗೆ ಬಂದಿದೆ. ಈ ಹಾಡಿಂದ ಹೇಳ್ಬಹುದು; ನಿಮ್ಗೆ ಒಂದು ಸಿನಿಮಾನ ಪೂರ್ಣ ರೆಡಿ ಮಾಡೋಕೆ ಗೊತ್ತು ಅಂತ.
೬. ಒಂದು ಸಾವಿನ ವೃತ್ತಾಂತ : ಇದು ರಿಯಾಲಿಟಿ ಶೋ ಅಥ್ವಾ ಕ್ರೈಂಡೈರಿ ಸೀರಿಯಲ್ ಥರಾ ಅನಿಸ್ತು. ಘಟನೆ ಮನಕಲುಕುವಂತೆ ಇದೆ ಅನಿಸಿದರೂ, ನಮ್ಮ ದೇಶದಲ್ಲಿ ಇತ್ತೀಚೆಗೆ ಇದು ತುಂಬಾ ಸಾಮಾನ್ಯ ಆಗೋಗಿದೆ. ಯಾರ್ದೋ ತಪ್ಪಿಗೆ ಇನ್ನಾರೋ ಕಷ್ಟ ಅನುಭವಿಸ್ತಾರೆ.

ಇವಿಷ್ಟೂ ನಂಗೆ ಅನಿಸಿದ್ದು. ನಾನೇನೂ ಚಲನಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದವನಲ್ಲ. ನಿಮ್ಗೆ ಒಳ್ಳೇ ಭವಿಷ್ಯವಿದೆ ಎಂದು ನನ್ನ ಅನಿಸಿಕೆ, ನಿಮ್ಗೆ ಒಳ್ಳೇದಾಗಲಿ

- ಕನ್ನಡಿಗ

ಅಭಯಸಿಂಹರ ಲೇಖನ ಓದಿ

ASHOKKUMAR's picture

ಇಂದಿನ "ಉದಯವಾಣಿ"ಯಲ್ಲಿ ಅಭಯಸಿಂಹ ಲೇಖನ ಓದಿ:

ಲೇಖನ

Re: ಅಭಯಸಿಂಹರ ಲೇಖನ ಓದಿ

Abhaya Simha's picture

Dear friends

I am extreamly sorry I am out of station right now and am not able to reply in Kannada. So kindly excuse me for not replying in Kannada...

I am honored to read so many reviews of my films. Kannadiga took so much effort to write in detail about each film. And brother... what ever you say will help me improve so please dont hesitate to say anything that you really feel. I am really thankful to you for those sweet words you have written on my films.  I hope you will watch two more films that I have posted in one of my comments above... hope you will like them too...

Dear Ashok Kumar, thanks for reading my article in Udayavani. I hope you liked that.

I am at present out in Pune starting a shoot from tomorrow and will be traveling for about a month through out India for a documentary film. Once I am back and the film is finished will get back with you all... thanks so much once again for your kind words on my films....

Regards

Abhaya Simha

ಉ: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.

venkatb83's picture

ಅಭಯಣ್ಣ
ನಾನು ನಿಮ್ಮ ಕೆಲ VIDEOGALANNA ನೋಡಿದೆ ಸುಪೆರ್ಬ್.... ಕೀಪ್ ಇಟ್ ಅಪ್
V