ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Abhaya Simha ರವರ ಬ್ಲಾಗ್

ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

March 30, 2007 - 11:23am — Abhaya Simha

ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ ಇದ್ದಾರೆ. ದಿನ ದಿನ ಕಡುವಾ ಚೌತ್ ಮಾಡಿ ತಮ್ಮ ಗಂಡಂದಿರ ಆಯುಷ್ಯ ಹೆಚ್ಚಿಸುತ್ತಲೇ ಇದ್ದಾರೆ. ನಮ್ಮ ಕಾಲೇಜು ಹುಡುಗ ಹುಡುಗಿಯರು ಈ ಸೀರಿಯಲ್‍ಗಳನ್ನು ಬೈಯ್ಯುತ್ತಲೇ ಕದ್ದು ಮುಚ್ಚಿ ತಮ್ಮ ಪ್ರೇಮಿಗಳಿಗಾಗಿ ಉಪವಾಸ ಮಾಡುವುದು, ಕಡುವಾ ಚೌತ್ (ನಂಬಿದರೆ ನಂಬಿ ಬಿಟ್ಟರೆ ಬಿಡಿ... ಆದರೆ ಇದು ನಿಜ!) ನಡೆಸುತ್ತಿದ್ದಾರೆ! ಕನ್ನಡದ ಉತ್ತಮ ನಿರ್ದೇಶಕರೊಬ್ಬರ ಮನೆಗೆ ನಾನು ಹೋಗಿದ್ದ ಸಂದರ್ಭದಲ್ಲಿ ಉತ್ತಮ ಕಲಾವಿದೆಯಾಗಿರುವ ಅವರ ಹೆಂಡತಿಯೂ ಸಹ ಇಂಥದ್ದೇ ಸೀರಿಯಲ್ ನೋಡಿಕೊಂಡು ಕುಳಿತಿದ್ದದ್ದು ಕಂಡು ನಾನು ಎರಡು ವರ್ಷ ಹಿಂದೆ ಆಶ್ಚರ್ಯ ಪಟ್ಟಿದ್ದೆ. ವರ್ಷ ಉರುಳುತ್ತಾ ಸಾಗಿದೆ. ಸೀರಿಯಲ್‍ಗಳ ಎಪಿಸೋಡ್ ಸಂಖ್ಯೆ ಉರುಳಿದಂತೆ. ನಾವಿನ್ನೂ ಇದರಿಂದ ಮೇಲೆದ್ದಿಲ್ಲ.

ಅದ್ಯಾವುದೋ ಸೀರಿಯಲ್‍ನಲ್ಲಿ ಅತಿಭಯಂಕರ ಲಕ್ಷ್ಮಿ ವೃತ ( Eye-wink ) ಮಾಡಿ ನಾಯಕ ಬದುಕಿ ಉಳಿದನಂತೆ. ನಮ್ಮಲ್ಲಿ ಒಬ್ಬರು ಬಂದು ಆ ಪುಸ್ತಕ ಕೇಳಿದರು. ಇಲ್ಲವಲ್ಲಾ ಎಂದು ನಾವು ವಿಶಾದಪಟ್ಟು ಅವರನ್ನು ಹಿಂದೆ ಕಳಿಸಿದೆವು. ಆದರೆ ಮರುದಿನದ ಪಾರ್ಸೆಲ್ಲಿನಲ್ಲಿ ಬೆಂಗಳೂರಿನ ಯಾವುದೋ ಹೆಸರೇ ಕೇಳಿರದ ಪ್ರಕಾಶಕರ ಸೀಲ್ ಹೊತ್ತು ನಮ್ಮ ಹಂಚಿಕೆದಾರರ ಮೂಲಕ ಬಂತೇ ಬಂತು ಭಯಂಕರ ಲಕ್ಷ್ಮಿಯ ಭಯಂಕರ ಪುಸ್ತಕ (!) ನೋಡಿದರೆ ಕೆಟ್ಟ ಭಾಷೆಯಲ್ಲಿ ಏನೋ ಭಯಂಕರ ಮಂತ್ರ! ಈ ಪೂಜೆಯನ್ನು ಮಾಡಿ ಪೂಜೆಯಲ್ಲಿ ಈ ಪುಸ್ತಕದ ಎಂಟು ಪ್ರತಿಯನ್ನು ಬ್ರಾಹ್ಮಣರಿಗೆ ಹಂಚಬೇಕಂತೆ. (ಉಚಿತವಾಗಿ!) ವಾಹ್! ಭಲೇ! ದೇವರು ಪುಸ್ತಕದ ಬ್ರಾಂಡ್ ಅಂಬ್ಯಾಸಿಡರ್ ಆದದ್ದನ್ನೂ ನೋಡಿದ್ದಾಯಿತು!

ಎಂಥಾ ಕಾಲವಯ್ಯ! ಇದು ಎಂಥಾ ಕಾಲವಯ್ಯ! ಆದರೆ ಯಾರನ್ನೇ ಕೇಳಿ, ಅಯ್ಯೋ ಈಗಿನ ಸೀರಿಯಲ್ಲೋ.... ದರಿದ್ರ.. ದರಿದ್ರ... ಎನ್ನುವವರೇ ಎಲ್ಲ. ಹಾಗಾದರೆ ಇದನ್ನು ನೋಡುವವರು ಯಾರು? ಯಾಕೆ? ಆ ಸಂದರ್ಭದಲ್ಲಿ ಅವರು ತಮ್ಮ ತಲೆಯನ್ನು ಎಲ್ಲಿಟ್ಟಿರುತ್ತಾರೆ? ಇದನ್ನು ಸರಿಪಡಿಸುವುದು ಹೇಗೆ? ಎಂದಿತ್ಯಾದಿ ಯೋಚಿಸುತ್ತಾ ಇದ್ದೇನೆ.

~.~
  • Abhaya Simha ರವರ ಬ್ಲಾಗ್
  • Login or register to post comments
  • 806 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 30, 2007 - 1:40pm — hpn

ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

hpn's picture

ಬಹುಶಃ ಎಲ್ಲ ಪ್ರಾರಂಭವಾಗಿದ್ದು ಬಾಲಾಜಿ ಫಿಲಮ್ಸ್ (ಜಿತೇಂದ್ರ ಮತ್ತು ಅವನ ಮಗಳ ಕಂಪೆನಿ) 'ಕ' ಸೀರಿಯಲ್ಲುಗಳಿಂದ. ಅವುಗಳ ಯಶಸ್ಸನ್ನು ಕಂಡು ಮರುಳಾದ ಕನ್ನಡ, ತಮಿಳು, ತೆಲುಗು ಮಾಧ್ಯಮದವರು ಹೇಗಿತ್ತೋ ಹಾಗೇ ಕಾಪಿ ಹೊಡೆದರು.

ಟಿ ಆರ್ ಪಿ ಇಂತಹ ಸೀರಿಯಲ್ಲುಗಳಿಗೆ ಮುಂಚಿನಂತಿಲ್ಲ ಎಂಬುದು ಇತ್ತೀಚಿನ ವರದಿಗಳಿಂದ ತಿಳಿದುಬರುತ್ತದೆ. ಒಂದಾನೊಂದು ಕಾಲದಲ್ಲಿ ಇವೇ "ಫ್ಯಾಮಿಲಿ ಸೆಗ್ಮೆಂಟ್" ಟಿ ವಿ ಚ್ಯಾನಲ್ಲುಗಳನ್ನು ಆಳುತ್ತಿದ್ದವು.

ದರಿದ್ರವೋ ಅಲ್ವೋ, ಜನರಿಗೆ ನೋಡಲು ಏನಾದ್ರೂ ಬೇಕೇ ಬೇಕು. ಟಿವಿ ದಾಸರು ಬಹಳಷ್ಟು ಜನ Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 1:34am — anupkumart

Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

anupkumart's picture

Fridge: ತಂಗಳು ಪೆಟ್ಟಿಗೆ

TV: ಮೂರ್ಖ(ರ) ಪೆಟ್ಟಿಗೆ

 

ತೋರಿಸುವವನು ಸಾವಿರ ತೋರಿಸಲಿ. ನೋಡುವವರಿಗೆ ಪರಿಜ್ಞಾನ ಇದ್ದರೆ ಸಾಕು. TVಯನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದರ ಪರಿಣಾಮ ಇಂದು ಕನ್ನಡಕ್ಕೆ ಒದಗಿರುವ ವಿಷಾದನೀಯ ಸ್ಥಿತಿ.

ಮನೆಯಲ್ಲಿ TV ಮೇಲಿನ ಕುರುಡು ಒಲವು ತೊರೆದು, ನಮ್ಮ ಕಾವ್ಯ ಕಾದಂಬರಿ, ನಾಟಕ, ಸಂಗೀತ, ನೃತ್ಯ ಗಾಳ ಕಡೆಗೆ ದಿನಕ್ಕೆ ೩೦ ನಿಮಿಷ ಒಲವಿಟ್ಟು ನೋಡಿದರೆ ಕನ್ನಡ ನಿಜವಾಗಿಯೂ ಉಳಿಯುತ್ತದೆ.

 

Anup MalenaaDu

"Manassu MalenaaDinalli..."

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 1:44pm — mahesha

ಕಣ್ಣೀರ ನೀರೆ ಇದೇಕೆ, ಇದೇಕೆ !

mahesha's picture

ಕಣ್ಣೀರು ಸುರಿಸಿಸಿ ಕೂಡ ಸಕ್ಕತ್ ದುಡ್ಡ ಮಾಡೋ ಜಾಣತನ ಅದು ಸಾರ್‍. ಹೀಗೂ ರೊಕ್ಕ ಪೀಕಬೋದು ಅಂತ ತೋರಿಸಿರೋ ಅವರು.

ಇದು ತಮಾಸೆಯಾಗಿ...
ಗೃಹಿಣಿ -> ಗೃಹದಲ್ಲೇ ಗ್ರಹದಂತೆ ಇದ್ದು ಅಡುಗೆ-ಗಿಡುಗೆ ಸರಿಯಾಗಿ ಮಾಡದಿದ್ದರೂ, ಟೀವೀಲಿ 'ಬಕೇಟ್ ಸೀರಿಯಲ್' ನೋಡಿ, ಅತ್ತು ದಣಿಯುವವಳು. Laughing out loud ಸೀರಿಯಸ್ ಅಲ್ಲ "ನನ್ನನ್ನು ನಂಬಿ ಪ್ಲೀಸ್ ಪ್ಲೀಸ್" Smiling

ಇನ್ನೊಂದು ವಿಸಯ ನಾವು ಆ ಸೀರಿಯಲ್ ಹೆಸರು ನೋಡೇ ಇದು 'ಬಕೆಟ್ ಅಳು ಸೀರಿಯಲ್' ಅನ್ನಬೋದು.

ಕೆಲವು ಮಾದರಿ ಬಕೆಟ್ ಸೀರಿಯಲ್ಲು...

"ಕುಂಕುಮಾಂಜಲಿ"
"ಕಣ್ಣು ತುಂಬ ಅಳು"
"ಕಣ್ಣಲ್ಲಿ ಹೊಳೆ"
"ಕುಂಕುಮದ ಬೊಟ್ಟು"
"ಕನ್ಯಾ ದನ"
"ಕೂಡಿ ಅತ್ತೆ ಜೊತೆ ಅತ್ತ ಸೊಸೆ"
"ಕೂಡಿ ಅಳೋಣು ಬಾರಾ"
"ಕೂತಲ್ಲೇ ಅತ್ತವರು"
"ಕ್ಯೂಂ ಕೀ ಅತ್ತೆಯೂ ಅತ್ತಿದ್ದಳು" Smiling

ಎಲ್ಲವೂ 'ಕxxx', 'ಕyyyy'

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 3:45pm — aithalsandy

Re: ಕಣ್ಣೀರ ನೀರೆ ಇದೇಕೆ, ಇದೇಕೆ !

aithalsandy's picture

^^^^^^^^^^^^

Laughing out loud :D Laughing out loud

ಸಂದೀಪ್ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 4:48pm — Sunil Jayaprakash

ಮೊಟ್ಟಮೊದಲ ಕಣ್ಣೀರು

Sunil Jayaprakash's picture

ನನಗೆ ತಿಳಿದ ಮಟ್ಟಿಗೆ ಈ "ಅಳು" ಧಾರಾವಾಹಿಗಳಿಗೆ ಚಾಲನೆ ದೊರೆತದ್ದು, ಉದಯ ಟಿ.ವಿಯ "ಪಾರ್ವತಿ" ಎಂಬುದರಿಂದ ಅನ್ನಿಸುತ್ತೆ Eye-wink

ಪಾರ್ವತೀ ಪಾರ್ವತೀ..... :ಹೊಹುನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 4:56pm — mahesha

ಪಾರ್ವತಿ

mahesha's picture

ಅದರಲ್ಲಿ ಪಾರ್ವತಿ ಪರ್ವತದಷ್ಟು ಅತ್ತು ಗಂಗೆ-ಜಮುನೆಯರನ್ನು ಹರಿಸಿರಬೇಕು Laughing out loud....

ಆ ಜಲಪ್ರಳಯಕ್ಕೆ ಎಷ್ಟು ಪ್ರಾಣಗಳು ಹಾರಿ ಹೋದವೋ, ಕಡವಳಾ Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 3:35pm — ಸಂಗನಗೌಡ

ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

ಸಂಗನಗೌಡ's picture

ಟಿ.ವಿ ಯಿಂದಾಗಿ ಬಹುಶ ಓದೋರು ಕಡಿಮೇನೇ ಆಗಿದಾರೆ ಅನ್ನಬಹುದು. technical ಮಂದಿ ಬೇರೆ ದಾರಿ ಇರಲ್ಲ ಅಂತ ಹೇಳಿ technical ಹೊತ್ತಗೆಗಳನ್ನಷ್ಟೇ ಓದೋ ಗೋಜಲಿಗೆ ಹೋಗ್ತಾರೆ. ಓದೋರು ಕಡಿಮೆ ಆಗಿದಾರೆ ಅಂತ ಬುಕ್ಕುಗಳ ಬೆಲೆ ಹಾಗೆ ಗಗನಕ್ಕೇರಿ ಕುಳಿತಿದೆ. ಬೆಲೆ ಹೆಚ್ಚಾಯ್ತು ಅಂತ ಒದೋರು ಇನ್ನೂ ಕಡಿಮೆ ಆಗಿದಾರೆ.

 'ಕಾವ್ಯಾಂಜಲಿ' ಅನ್ನೋ ಸೀರಿಯಲ್ ಬಂದಾಗಲಂತೂ, ಅಂಜಲಿ ಒಂದು ದಿವಸ ಊಟ ಮಾಡ್ಲಿಲ್ಲ ಅಂದ್ರೆ, ಅಯ್ಯೋ ಪಾಪ ಅಂತ ಹೆಂಗಳೆಯರು ಮರುಗಿದ್ದೇ ಮರುಗಿದ್ದು. ತಮ್ಮ ಸೊಂತ ಅಕ್ಕನೋ ತಂಗಿನೋ ಊಟ ಬಿಟ್ಟರೆ ಅಷ್ಟು ಮರುಗುತ್ತಾರೋ ಇಲ್ಲವೋ!

ಸೀರಿಯಲ್ ಕಿಂಗ್ ಎಸ್.ನಾರಯಣರ ಕೈಗೆ ಸಿಕ್ಕರೆ ಮುಗೀತು. ಒಂದು dialogue ಅಯ್ತು ಅಂದರೆ, ಅಲ್ಲಿ ನಿಂತಿರುವವರ ಮುಖಗಳನ್ನು ಕೆಟ್ಟ background music ನಲ್ಲಿ ತೋರಿಸಿದ್ದೇ ತೋರಿಸಿದ್ದು. ಪಾಪ ಆ actor ಗಳು, ಅಷ್ಟೊತ್ತು expression ಹಿಡಿದಿಟ್ಟುಕೊಳ್ಳಲಾಗದೇ, ಸುಮ್ಮನೆ ಯಾವ ಕಡೆನೋ ನೋಡ್ತಾ ನಿಂತಿರ್ತಾರೆ, background music ಕೇಳಿದ್ರೆ ಅವ್ರು ಗಾಭರಿಯಾಗಿರಬೇಕು, ಅವರ ಮುಖದಲ್ಲಿ ನೋಡಿದ್ರೆ ಯಾವ ಎಕ್ಸಪ್ರೆಶನ್ನೂ ಇರಲ್ಲಾ.

ಒಂದು ಕಡೆಯಿಂದ ಇನ್ನೊಂದು ಕಡೆ ಕಾರಲ್ಲಿ ಹೋಗೋ ಸೀನ್ ಇದ್ರೆ, ಅವರು ಕಾರಲ್ಲಿ ಕೂತು, ಕೀ ಹಾಕಿ, ಸ್ಟಾರ್ಟ್ ಮಾಡಿ( ಟೈಮ್ ತುಂಬಾ ಇತ್ತು ಅಂದ್ರೆ, ಕಾರು ಸೊಲ್ಪ ಕೈ ಕೊಡುತ್ತೆ Eye-wink), ಊರೆಲ್ಲ ಒಂದು ಸುತ್ತು ಸುತ್ತಿ, ಸರಿಯಾಗಿ ಅರ್ಧ ತಾಸು ಆಗೋ ಹೊತ್ತಿಗೆ ಮನೆಗೆ ಬಂದು ನಿಲ್ಲುತ್ತೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 4:09pm — mahesha

ಕಣ್ಣೀರಿಗೆ background music

mahesha's picture

ಅದು background music ಅಲ್ಲ ಬರಿ 'background' sound!!! Laughing out loud

ಕಣ್ಣೀರೂ ಭೋರ್ಗರೆಯುತ್ತೇ ಆ music ಇಂದ Smiling

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 4:46pm — shreedn (not verified)

Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

shreedn's picture

ನೀವು ಇಲ್ಲಿ ಹೇಳಿರುವುದು ಬರಿಯ ಒ೦ದು ಮುಖ ಮಾತ್ರ... ಬುಧ್ಧಿಪೂರ್ವಕ ಯೋಚಿಸಿದಾಗ ಹುಟ್ಟುವ ಯೋಚನೆ ಇದು. ಆದರೆ, mass ಎನ್ನುವುದು ಅದರದೇ ಆದ ಸೂಕ್ಷ್ಮತೆಗಳನ್ನು ಹೊ೦ದಿರುತ್ತದಲ್ಲ? ಪ್ರತಿಯೊಬ್ಬ ಕಥೆ ಓದುವವರಿರಬಹುದು, ಸಿನಿಮಾ ನೋದುವವರಿರಬಹುದು, ಸೀರಿಯಲ್ ನೋಡುವವರಿರಬಹುದು... ಒ೦ದೋ ತಮ್ಮ ದು:ಖಗಳನ್ನು ಮರೆತು ಆರಾಮಾಗಿರಲಿಕ್ಕೆ ನೋಡುತ್ತಾರೆ, ಇಲ್ಲ, ತಮ್ಮನ್ನ ತಾವು relate ಮಾಡಿಕೊ೦ಡು ನೋಡುತ್ತಾರೆ, ಇಲ್ಲ, ಏನೋ ಹೊಸತನ ಹುಡುಕಿ, ಅದು ಸಿಕ್ಕಾಗ ನೋಡುತ್ತಿರುತ್ತಾರೆ. ಹಿಟ್ ಸೀರಿಯಲ್ 'ಮುಕ್ತ'ದಲ್ಲಿ ಮೂರನೇ ಅ೦ಶ ಕೆಲ ಮಟ್ಟಿಗೆ ಇತ್ತು, ಅದಕ್ಕೆ ಎಲ್ಲಾ ವರ್ಗದ ಜನರಿ೦ದಲೂ ಮೆಚ್ಚಿಗೆ ಸಿಕ್ಕಿತು. ಆದರೆ, ಹೊಸತು ಹುಡುಕಿ ಹೋಗುವ ಜನರ percentage ಬಲು ಕಡಿಮೆಯಾದ ಕಾರಣ, ಅವರು ನೋಡಿದರೂ ನೋಡದಿದ್ದರೂ ಅದರಿ೦ದ TRP ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ.

ಇದಕ್ಕೆ ಇನ್ನೊ೦ದು ಉದಾಹರಣೆ - ಇತ್ತೀಚಿನ ಮು೦ಗಾರುಮಳೆ ಮತ್ತು ದುನಿಯಾ. ಮೊದಲನೆಯದು ಸರ್ವರಿಗೂ ಮೆಚ್ಚುಗೆಯಾದ ಚಿತ್ರ. ವಿಮರ್ಶಕರನ್ನು, ಹೊಸತು ಹುಡುಕಿ ಹೋಗುವವರನ್ನು ಕೇಳಿದರೆ ದುನಿಯಾದ ಬಗ್ಗೆ ಮು೦ಗಾರುಮಳೆಗೆ ಸಿಕ್ಕಿದಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗಲಾರದೇನೋ, ಆದರೆ ಅದೂ ಕೂಡ ಚೆನ್ನಾಗಿಯೇ ಓಡುತ್ತಿದೆ. ಯಾಕೆ೦ದರೆ ಅದರಲ್ಲಿ ಸಾಮಾನ್ಯ ವರ್ಗಕ್ಕೆ ಬೇಕಾದ fantasy, melodrama, fights, dialogues ಇತ್ಯಾದಿ ಇದೆ. ನಿರ್ದೇಶಕ ಜನಕ್ಕೆ ಬೇಕಾದದ್ದು ಕೊಟ್ಟಿದ್ದಾರೆ.

ಜನಕ್ಕೆ ಬೇಕಾದದ್ದು ಕೊಡುವ ಜತೆಗೆ, ಅದರಲ್ಲಿ ತಾವು ಹೇಳಬಯಸುವುದನ್ನು ಹೇಗೆ ಜಾಣತನದಲ್ಲಿ ಸೇರಿಸಬೇಕು ಎ೦ದು ನಿರ್ದೇಶಕ ಯೋಚಿಸಿದಾಗ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದಾಗ ಮಾತ್ರ TRP, ಜನಪ್ರಿಯತೆ, ಗೆಲುವು ಇತ್ಯಾದಿ ಸುಲಭವಾಗುತ್ತವೆ... ನಮ್ಮ ಸಮಾಜ ಇನ್ನೂ ತು೦ಬ ಬುದ್ಢಿಪೂರ್ವಕವಾಗಿ ಯೋಚಿಸಿ, ತೂಕಮಾಡಿ ಮಾಧ್ಯಮವನ್ನು ಸ್ವೀಕರಿಸುವ ಸ್ಥಿತಿಯಲ್ಲಿದ್ದರೆ, ನಮ್ಮಲ್ಲಿ ಇಷ್ಟೊ೦ದು ಟಿವಿ ಚಾನೆಲ್ ಗಳು, ಇಷ್ಟೊ೦ದು ಪತ್ರಿಕೆಗಳು, ಇಷ್ಟೊ೦ದು ಚಲನಚಿತ್ರಗಳು, ಇಷ್ಟೊ೦ದು ಶ್ರಾವ್ಯ ವಾಹಿನಿಗಳು ಎಲ್ಲಾ ಇದ್ದು ಗುಣಮಟ್ಟಕ್ಕೆ ಕೊರತೆ ಬರುತ್ತಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 4:52pm — mahesha

ಕಣ್ಣೀರು ಸುರಿಸಿ ಮೋಜು

mahesha's picture

@shreedn

ನಿಮ್ಮ ಮಾತು ಬಹಳ ಒಪ್ಪ. ಕಣ್ಣೀರು ಸೀರಲ್ ನೋಡಕ್ಕೆ ಮಂದಿ ಇದ್ದಾರೆ ಅಂತ ತಾನೇ ಅದನ್ನು ಮಾಡೋದು...

"ಕಣ್ಣೀರು ಸುರಿಸಿ ಮೋಜು" ಮಾಡುವ right ಎಲ್ಲಿರಿಗೂ ಇದೆ Smiling ಅದು ಅವರ ಜನುಮ-ಸಿದ್ಧ ಹಕ್ಕು, ಯಾರು ಕಿತ್ತುಕೊಳ್ಳಲಾರರು. Laughing out loud

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 5:15pm — ismail

ಆಧುನಿಕ ಮೂಢ ನಂಬಿಕೆಗಳು

ismail's picture

ಧರ್ಮಸ್ಥಳದಲ್ಲಿ ಹಾವೊಂದು ಕಾಣಿಸಿಕೊಂಡು ಬ್ರಾಹ್ಮಣ ರೂಪ ಪಡೆದು ಏನೇನೋ ಹೇಳಿ ಕೊನೆಗೆ ಆ ವಿಷಯವಿರುವ ಕರಪತ್ರದ ಹದಿನಾಲ್ಕು ಪ್ರತಿಗಳನ್ನು ಹಂಚಿದವರಿಗೆ ಲಾಟರಿ ಬಂದದ್ದು, 28 ಪ್ರತಿ ಹಂಚಿದವರಿಗೆ ವ್ಯವಹಾರದ ಗೆಲುವುದು ಸಿಕ್ಕಿದ್ದು ಹಂಚದವರ ಮಗ ಸತ್ತು ಹೋದದ್ದು ಮುಂತಾದ ವಿಷಯಗಳನ್ನು ಓದಿದ ನೆನಪು ಎಲ್ಲರಿಗೂ ಇರಬೇಕು. ಕೊನೆಗೆ ವೀರೇಂದ್ರ ಹೆಗ್ಗಡೆಯವರೇ ಇಂಥದ್ದೇನೂ ಸಂಭವಿಸಿಲ್ಲ ಎಂದು ಹೇಳಿದರು. ಆದರೂ ಈಗಲೂ ಈ ಕರಪತ್ರಗಳು ಹರಿದಾಡುತ್ತಲೇ ಇವೆ. ಇತ್ತೀಚೆಗೆ ಯಾರೋ ಇಡೀ ವಿಷಯವನ್ನು ಇಂಗ್ಲಿಷ್ ಗೆ ಭಾಷಾಂತರಿಸಿ ಮೇಲ್ ನಲ್ಲಿ ಕಳುಹಿಸಿದ್ದರು. ಇಂಥದ್ದು ಎಲ್ಲಾ ಕಾಲಕ್ಕೂ ಇರುತ್ತವೆಯೇನೋ.

ಮೂಲತಃ ಪುಕ್ಕಲರಾದ ಕೆಲವರು ನಮಗ್ಯಾಕೆ ರಿಸ್ಕು ಎಂದು ಕೊಂಡು ಒಂದಷ್ಟು ಮಂದಿಗೆ ಪ್ರತಿಗಳನ್ನು ಹಂಚಿಬಿಡುತ್ತಾರೆ. ನಾವು ಕಾಲೇಜಿನಲ್ಲಿರುವಾಗ ಇಂಥ ಕರಪತ್ರವನ್ನು ಕೈಯಲ್ಲಿ ಬರೆದೇ ಹಂಚುವವರಿದ್ದರು. ಹೀಗೆ ಹಂಚಲು ಬಂದವರಿಂದ ಅವುಗಳನ್ನು ಪಡೆದುಕೊಳ್ಳದೆ ಬ್ಲಾಕ್ ಮೇಲ್ ಮಾಡುವರೂ ಇದ್ದರು. ನಾವೊಂದಷ್ಟು ಮಂದಿ ಎಲ್ಲರಿಂದಲೂ ಇವನ್ನು ಪಡೆದು ಅವರೆದುರೇ ಹರಿದು ಹಾಕಿ ಕ್ರಾಂತಿಕಾರಿಗಳಾದದ್ದೂ ಉಂಟು.

ಈಗ ಅದೇ ಸೀರಿಯಲ್ ಗಳಿಗೆ ವ್ಯಾಪಿಸಿದೆ. ಕರ ಪತ್ರ ಪುಸ್ತಕ, ಮೇಲ್ ಗಳಾಗಿವೆ. ಟೆಕ್ನಾಲಜಿಯನ್ನು ಬಳಸಿಕೊಂಡು ಉಳಿದೆಲ್ಲವೂ ಬೆಳೆದ ಹಾಗೆ  ಮೂಢನಂಬಿಕೆಯೂ ಬೆಳೆಯುತ್ತದೆ ಅನ್ನಿಸುತ್ತದೆ. ರಾಕೆಟ್ ಹಾರಿಸುವವರೂ ರಾಹುಕಾಲ ತಪ್ಪಿಸಿ ಹಾರಿಸಲು ಪ್ರಯತ್ನಿಸಿದಂತೆ....

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 9:15pm — hpn

ಉ: ಆಧುನಿಕ ಮೂಢ ನಂಬಿಕೆಗಳು

hpn's picture

ಹೌದ್ರೀ ಸರ್ರ. ಈಗೇನಿದ್ರೂ ಈ ತರಹದ ಇ-ಮೇಯ್ಲುಗಳು! Eye-wink

"ಈ ಇ-ಮೇಯ್ಲನ್ನ ನಿಮ್ಮ ಹತ್ತು/ನೂರು ಸ್ನೇಹಿತರಿಗೆ ಕಳುಹಿಸಿ. ನಿಮ್ಮ ವಿಂಡೋ ಮೇಲೊಂದು ಚೆಂದವಾದ ಚಿತ್ರ ಮೂಡೂವುದು"

"ಈ ಇ-ಮೇಯ್ಲನ್ನ ನಿಮ್ಮ ಹತ್ತು/ನೂರು ಸ್ನೇಹಿತರಿಗೆ ಕಳುಹಿಸಿ, ವಾಪಸ್ ನಿಮಗೊಂದು ವಾಚು ಕಳುಹಿಸುವರು"

ಎಂದೆಲ್ಲ.

ಇ-ಮೇಯ್ಲು ನೂರು ಜನರಿಗೆ ಕಳುಹಿಸೋದಕ್ಕೂ, ಸ್ಕ್ರೀನ್ ಮೇಲೆ ಒಂದು ಚೆಂದವಾದ ಚಿತ್ರ ಮೂಡೋದಕ್ಕೂ ಎಲ್ಲಿಯ ಸಂಬಂಧ?
ಈ ತರಹದ ಮೇಯ್ಲುಗಳಲ್ಲಿ Easter egg ಇರುತ್ತದೆಂದುಕೊಂಡು ತಂತ್ರಜ್ಞರಾದ ನನ್ನ ಕೆಲವು ಸ್ನೇಹಿತರೂ ಮಾರುಹೋಗಿ ಫಾರ್ವರ್ಡ್ ಮಾಡಿದ್ದುಂಟು!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 30, 2007 - 9:35pm — mahesha

ಕುರುಡು ನಂಬಿಕೆಗಳು

mahesha's picture

ಮಿಂಚಂಚೆನಾದರೂ ( e-mail ) ಕಳುಹಬಹುದು ಅದೇನು ಬಿಟ್ಟಿ...

ನನಗೆ ಒಂದು "jai kali maa", "jesus I love u" ಇಂತಹ ಚಿಕ್ಕೋಲೆ(SMS)ಗಳನ್ನು ೧೦ ಮಂದಿಗೆ ಕಳುಹಿಸದರೆ, ನಿಮಗೆ ಮೇಲೆ ಇರುವ ದೇವರು "ಸುಖ ಸಂವೃದ್ಧಿ ಶಾಂತಿ.. ಇನ್ನು ಏನು ಬೇಕೋ ಅದು" ಕೊಡುವುದು ಎಂದು ಬಂದಿತ್ತು, ಅದೂ ಈ ಹಬ್ಬದ ದಿನಗಳಲ್ಲಿ.

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 1, 2007 - 7:03pm — radhakrishna an...

TRP V/S ಜನಪ್ರಿಯತೆ

radhakrishna anegundi's picture

ಜನಪ್ರಿಯವಾಗಿರುವ ಸೀರಿಯಲ್ ಗಳಿಗೆ TRP ಇಲ್ಲ. ಜನಪ್ರಿಯವಾಗಿರದ ಸೀರಿಯ್ ಲ್ ಗಳಿಗೆ TRP ಇದೆ. ಆದರೆ ಕಿರುತೆರಯಲ್ಲಿ ಪ್ತತಿಭೆಗಳ ಕೊರತೆ ಸಾಕಷ್ಟಿದೆ. ಇವು ಯಾವುದರ ಬಗ್ಗೆ ಚಾನೆಲ್ ಗಳು ಅಥವಾ ನಿರ್ಧೇಶಕರು ತಲೆ ಕೆಡಿಸಿಲ್ಲ, ಅವರು ಕೆಡಿಸಿರುವುದು ಇಡೀ ಕೆರಯನ್ನು, ತಲೆ ಕೆಡಿಸಿಕೊಂಡಿರುವುದು ಜಾಹೀರಾತಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಿಲಯನ್ಸ್‌ನಲ್ಲಿ ಕನ್ನಡ
  • ಕನ್ನಡಿಗರೇಕೆ ಹೀಗೆ?
  • ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು
  • ಕ್ರಿಕೆಟ್ ಹುಚ್ಚಿಗೆ ಮಂತ್ರ ಶಿಕ್ಷೆ
  • ತ ರಾ ಸು ಮತ್ತು ಮಾಸ್ತಿ ಒಂದೇ ಸ್ಥಳಮಹಿಮೆ ಬಗ್ಗೆ ಬರೆದಿದ್ದರೇ?
Syndicate content

ಲೇಖಕರು

Abhaya Simha's picture

ಪರಿಚಯ

ನಾನು ವೃತ್ತಿಯಿಂದ ಚಿತ್ರ ನಿರ್ದೇಶಕ. ಪೂನಾದಲ್ಲಿರುವ Film and Television Institute of Indiaದ ಪದವೀಧರ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator