ನಿನ್ನ ಹೆಸರು
ಮೆಚ್ಚಿದ್ದೆ ನಾನ೦ದು,
ಇವಳ ನಗೆಯೊ೦ದನ್ನೆ|
ಬೆಚ್ಚಿ ಬಿದ್ದೆ ಇ೦ದು ನಾ,
ಓದಲು ಈ ಕಣ್ಣಲ್ಲೆ ||
ನಾನೇನ ಓದಿದೆ ?
ನಿನ್ನರ್ಥ ತಪ್ಪಿಹುದು|
ಮತ್ತೇನಲ್ಲ ಅವಳ ಆ..
ಬರಹಗಳೇ ಕಾಡುತಿಹುದು||
ಯಾರಾಕೆ ಯಾರಾಕೆ ?
ನೀ ನನ್ನ ಕೇಳದಿರು |
ಕೇಳಿದರು ಹೇಳೆನು ನಾ,
ದಯಮಾಡಿ ಕಾಡದಿರು ||
ಒಳಗಿರುವ ಕವಿಯ ನೀ,
ಕೆರಳಿಸಿದೆ ಓ ಗೆಳತಿ |
ಯಾರ ಬಳಿ ಹೇಳಲಿ ನಾ..
ಚ್ಚೊಚ್ಚಲ ಈ ಕವಿತೆ ||
ಕಳುಹಿಸುವೆ ಓದಿಸುವೆ..
ನಿನ್ನ ಬಳಿ ಇದನು ನಾ |
ಕ೦ಡುಹಿಡಿವೆ ನೀನಾಗ,
ಅವಿತಿರುವ ನಿನ್ನ ಹೆಸರಾ ||
--ಅಭಿ
- abhijithj's blog
- Login or register to post comments
- 251 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನಿನ್ನ ಹೆಸರು
ಓದಿದೆನು ನಿನ್ನೀ ಕವಿತೆಯ ಗೆಳೆಯ
ಕಂಡುಕೊಂಡೆನು ಅದರೊಳು ಅವಿತಿರುವ ನನ್ನ ಹೆಸರ
ಸೊಗಸಾಗಿದೆ ನಿನ್ನೀ ಚೊಚ್ಚಲ ಪ್ರಯತ್ನ
ಹೀಗೆ ಬರುತಿರಲಿ ನಿನ್ನಿಂದ ಒಂದರ ಹಿಂದೊಂದು ಕವನ....
ಉ: ನಿನ್ನ ಹೆಸರು
ಬೆಚ್ಚಿ ಬಿದ್ದೆ ’ಇಂದು’,,,,ನಾ!;) ;-)