ಆರು ವೈರಿಗಳು
ಆರು ವೈರಿಗಳು.
ಕಾಮ ಕ್ರೋಧ ಲೋಭಗಳು
ಮೊದಲ ಮೂರು ವೈರಿಗಳು
ಇದನು ಗೆದ್ದ ನಂತರ
ಮೋಹ ಮದ ಮತ್ಸರ
ಆಶೆಯೆಂಬ ಬೀಜವು
ಕಾಮಗಿಡದ ಮೂಲವು
ಗಿಡದ ನಾಶಕಿಂತಲೂ
ಮೂಲನಾಶ ಶ್ರೇಷ್ಠವು
ಕಾಮ ಫಲಿಸದಾಗ ಬರುವ
ವೈರಿಯೇ ಕ್ರೋಧವು
ಕ್ರೋಧವೂ ನಡೆಯದಾಗ
ಲೋಭ ಪ್ರ-ವೇಶವು.
ಆಶೆ ಕೊಂದ ವ್ಯಕ್ತಿಗೇ
ಭಕ್ತಿ ಕೊಡುವ ಶಕ್ತಿಯಿಂದ
ಕಾಮ ಕ್ರೋಧ ಲೋಭವೆಂಬ
ಶತೃ ನಾಶ ಸುಲಭವು
ನಾಲ್ಕನೆಯ ಶತೃವು
ಮಾಯಾಮೋಹಪಾಶವು
ಮೋಹ ನಾಶ ಶಸ್ತ್ರಗಳು
ಸ್ನೇಹ ಪ್ರೇಮ ಕರುಣೆಗಳು
ಕಂಸ ಜರಾಸಂಧರು
ಮದಕೆ ದಾಸರಾದರು
ಮಾಧವನಾ ದೆಸೆಯಿಂದ
ಜೀವ ಕಳೆದುಕೊಂಡರು
ಕೊನೆಯ ವೈರಿ ಮತ್ಸರ
ಸಹನೆ ಇದಕೆ ಉತ್ತರ
ಬೆಳೆಯಬೇಕು ಎತ್ತರ
ಭಗವಂತನ ಹತ್ತಿರ.
ಅಹೋರಾತ್ರ.

- ahoratra ರವರ ಬ್ಲಾಗ್
- Login or register to post comments
- 1418 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಗಹನಾರ್ಥ
ಅಹೋರಾತ್ರರೆ,
ಸರಳವಾಗಿದ್ದೂ ಗಹನಾರ್ಥ ಒಳಗೊಂಡಿದೆ!
ಸಣ್ಣ ತಿದ್ದುಪಡಿ:
ಶತೃ ಎಂಬುದು ತಪ್ಪು ಪದ! ಸರಿಯಾದದ್ದು - ಶತ್ರು
ಕೆಲವರು ಹೆಸರನ್ನು 'ಶೃತಿ' ಎಂದು ತಪ್ಪಾಗಿ ಬರೆಯುತ್ತಾರೆ; ಅದು ಶ್ರುತಿ!
ಮುಂದುವರೆಸಿ.
ಬೆನಕ
ಧನ್ಯವಾದಗಳು ಬೆನಕರೆ.
ನಿಮ್ಮ ವಿಮರ್ಶಗಳಿಗಾಗಿ ನಾವು ಸದಾ ಕಾಯುತ್ತೆವೆ.
ಅಹೋರಾತ್ರ
Re: ಆರು ವೈರಿಗಳು - ಸೊಗಸಾಗಿದೆ!!!
ಪ್ರೀತಿಯ ಅಹೋರಾತ್ರ (ರವರೇ),
ನಿಮ್ಮ ಕವನ ಸುಂದರವೂ, ಸುಮಧುರವೂ ಮತ್ತು ಅರ್ಥಗರ್ಭಿತವೂ ಆಗಿದೆ!!! ಅಷ್ಟಲ್ಲದೇ ಜೀವನದ ಮಾರ್ಗದರ್ಶನಕ್ಕೂ ಸಹಕಾರಿಯಾಗುವಂತಿದೆ! ಭಲೇ! ದಯವಿಟ್ಟು ಮುಂದುವರೆಸಿ.
ಕನ್ನಡ ಕಾವ್ಯಭಿಮಾನಿ,
ಶಿವಣ್ಣ.
Re: ಆರು ವೈರಿಗಳು - ಸೊಗಸಾಗಿದೆ!!!
ಆಧ್ಯಾತ್ಮಿಕ ಕಾವ್ಯಾಸಕ್ತ ಶಿವಣ್ಣರಿಗೆ,
ಅಹೋರಾತ್ರನ ಅಭಿವಂದನೆಗಳು.
ತಾವು ಧಯವಿಟ್ಟು ಡಿ ವಿ ಜಿ ಯವರ ಕಗ್ಗಕ್ಕೊಂದು ಕೈಪಿಡಿ ಓದಿ.
ಅಹೋರಾತ್ರ
Re: ಆರು ವೈರಿಗಳು
ಆತ್ಮೀ ಯ ಅಹೋರಾತ್ರ ರವರೆ ನಿಮ್ಮ ಆರು ವೈರಿಗಳು ಸೊಗಸಾಗಿದೆ ನಿಮ್ಮ ಬರವಣಿಗೆ ಸದಾ ಕಾರಂಜಿಯಾಗಿ ಹರಿಯಲೆಂಬ ಮಹದಾಸೆ ನಮ್ಮದು ನೈಜ ಮೌಲ್ಯಗಳ ಅರಿವು ಪ್ರತಿಯೊಬ್ಬರಲ್ಲಿ ಇದ್ದರೆ ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆ ಇದು ಸತ್ಯ.
ನಮ್ಮ ವಂದನಾಭಿನಂದನೆಯೊಂದಿಗೆ
ಕೃಷ್ಣಮೊರ್ತಿಅಜ್ಜಹಳ್ಳಿ ಬಿ ಎಂ ಎಸ್ ಸಿ ಇ
Re: ಆರು ವೈರಿಗಳು
ಕೃಷ್ಣ ಮೂರ್ತಿಗಳ ಹೂವಿನ ಹೃದಯಕ್ಕೆ ತಲೆಬಾಗಿ ವಂದಿಸುವೆ. ತಮ್ಮ ಆಶೀರ್ವಾಧ ಸದಾ ನನ್ನನ್ನು ಬರೆಯುವಂತೆ ಮಾದಲಿ ಎಂದು ಈಶನಲ್ಲಿ ಪ್ರಾರ್ಥನೆ.
ಅಹೋರಾತ್ರ
Re: ಆರು ವೈರಿಗಳು
ನೀವು ಈ ಮನುಷ್ಯ ಸ್ವಭಾವದ ಅವಗುಣಗಲನ್ನು ವೈರಿ ಎ೦ದು ನೋಡಿದರೆ
ಅವನ್ನು ಗೆಲ್ಲಬೇಕು . ಹಾಗೆ ನೋಡಿದರೆ ನಮ್ಮ ಮನಸ್ಸು ನಮಗೆ ಶತ್ರು
ಎ೦ದು ನೀವು ಹೇಳಬಹುದು. ಭಗವದ್ಗೀತೆಯಲ್ಲಿ ಕೃಷ್ಣ ಈ ಪದಗಳನ್ನು
ಉಪಯೋಗಿಸಿದರಲ್ಲಿ ಅರ್ಥ ಇತ್ತು , ಹಿ೦ದೆ ಯುದ್ಧದ ಸ೦ಧರ್ಭ ಬೇರೆ ಇತ್ತು.
ನನ್ನ ಪ್ರಕಾರ ಈ ಗುಣಗಳನ್ನು ವೈರಿ ಅನ್ನು ವುದಕಿನ್ನಾ ,
ಇವು ವ್ಯಕ್ತಿಯ ಜೀವನವನ್ನು ಹೇಗೆ ರೂಪಿಸುತ್ತವೆ, ಮನುಷ್ಯ
ಇವಗಳ ವಶದಲ್ಲಿ ಯಾವ ಮಟ್ಟಕ್ಕೆ ಹೋಗ್ತಾನೆ ಅ೦ತಾ ತಿಳಿದುಕೊ೦ಡರೆ,
ಆ ಅರಿವಿನಲ್ಲಿ ನಾವು ಗುಣಗಳಿ೦ದ ಬಿಡುಗಡೆಯನ್ನು ಕಾಣುತ್ತೇವೆ.
ಅಲ್ಲಿ ಯವರೆಗೂ ಗಾಳಿಯಲ್ಲಿ ಗುಣಗಳೊಡನೆ ಕತ್ತಿ ವರಸೆ ನಡೆಯುತ್ತಿರುತ್ತದೆ.
Re: ಆರು ವೈರಿಗಳು
ಮುರಳಿಯವರ ಮಾತನ್ನು ಕೃಷ್ಣನ ಮಾತೆಂದೆ ಭಾವಿಸಿ ಮುಂದುವರಿಯುವೆ.
ಅಹೋರಾತ್ರ
Re: ಆರು ವೈರಿಗಳು- ಒ೦ದು ವ್ಯತ್ಯಾಸ.
ದಯವಿಟ್ಟೂ ಆ ರೀತಿ ಭಾವಿಸ ಬೇಡಿ.
ಮಹಾತ್ಮನೂ ಮಹಾನುಭಾವನು ಆದ ಶ್ರಿ ಕೃಷ್ಣನ ವಾಣಿ ಅಮೃತ ವಾಣಿ.
ಅವನು ಆಡಿದ ಒ೦ದೊ೦ದು ಮಾತು ಒ೦ದು ರಾಷ್ಟ್ರ, ಒ೦ದು ಸ೦ಸಾರ,
ಒ೦ದು ಜನಾ೦ಗವನ್ನು ಕಟ್ಟಿದೆ. ನಮ್ಮ ದೇಶ ಯಾವಾಗ ತೀರ ಕೆಳಗಿನ
ಮಟ್ಟಕ್ಕೆ ಹೋಗಿ ಕೊಚ್ಚೆಯಲ್ಲಿ ಬಿದ್ದಾಗ ಈ ಮಹಾನುಭಾವನು ನುಡಿದ ಗೀತೆಯ ಚೈತನ್ಯ
ಶಕ್ತಿ ಜನರ ಮನರ ಮೋಹಾ೦ಧಕಾರವನ್ನು ತೊಲಗಿಸಿ ನಮ್ಮನ್ನು ಮು೦ದಕ್ಕೆ ತ೦ದಿದೆ.
ಆತನ ಜೀವನ ಅದೆಷ್ಟೋ ಸಾಹಿತ್ಯ, ಕಾವ್ಯಕ್ಕೆ ಅಡಿಪಾಯ ಹಾಕಿದೆ.
ಆತನ ಚೇತನ ಅದೆಷ್ಟೋ ಋಷಿಗಳಿಗೆ ಸತ್ಯ ದರ್ಶನ ವನ್ನು ಮಾಡಿಸಿದೆ.
ಇ೦ತಹವನಾಡುವ ಮಾತು ಮಾತಲ್ಲಾ ವೇದ ವಾಕ್ಯ.
ನಾವಾಡುವ ಮಾತು ಬರೀ ಮಾತು..ಭೇದ ವಾಕ್ಯ.
ಆದರಿ೦ದ .. ಮುರಳಿಯ ಮಾತು ಮುರಳಿಯದು..
ಕೃಷ್ಣನ ಮಾತು ...ಮುರಳಿಯ(ಕೊಳಲು) ಗಾನದಲ್ಲಿ ಕೇಳಿ...
ಇನ್ನೂ ಎಲ್ಲಾ ಕಡೆಗಳಿ೦ದ ಕೇಳಬಹುದು...
ಅರಿಷಡ್ವರ್ಗಗಳು v/s ಸಪ್ತರಿಪುವರ್ಗ
ಗೆಳೆಯರೇ, ಇತ್ತೀಚೆಗೆ ನನಗೆ ಹೊಸ ವಿಷಯವೊಂದು ತಿಳಿಯತು.
ಪ್ರಸಿದ್ಧವಾದ ಅರಿಷಡ್ವರ್ಗಕ್ಕೆ ಬದಲಾಗಿ, ಕನ್ನಡದ ಕವಿರಾಜಮಾರ್ಗದಲ್ಲಿ ಸಪ್ತರಿಪುವರ್ಗ ಹೇಳಲ್ಪಟ್ಟಿದೆ(೩ನೇ ಪರಿಚ್ಛೇದ, ಪದ್ಯದ ಎಣ್ಕೆ, ೨೨೭)
ಆ ಏಳು ಶತ್ರುಗಳೆಂದರೆ,
ಮದ, ಮಾನ, ಮಾಯ, ಭಯ, ಲೋಭ, ವಿಷಾದ, ಹರ್ಷಾಭ್ಯುದಿ -
ಇವೆಲ್ಲವೂ ಅಂತರಂಗ ರಿಪುವರ್ಗ ಎಂದು ಕವಿರಾಜಮಾರ್ಗದ ಕರ್ತೃ ಹೇಳಿದ್ದಾನೆ. ಇದರಲ್ಲಿ ಮಾಯ, ವಿಷಾದ ಮತ್ತು ಹರ್ಷಾಭ್ಯುದಿಯ ಪ್ರಸ್ತಾಪ ತುಂಬಾ ಸಮಂಜಸವಾಗಿದೆ ಎಂದು ನನಗನ್ನಿಸಿತು. ಅದರಲ್ಲಿಯೂ, ವಿಷಾದದ ಪ್ರಸ್ತಾಪ, ಆನಂದವೇ ಬ್ರಹ್ಮ ಎಂಬ ಮಾತಿಗೆ ಪುಷ್ಟಿಯನ್ನು ನೀಡಿತ್ತಿದೆ ಎಂದನಿಸುತ್ತಿದೆ.
Re: ಆರು ವೈರಿಗಳು
>>ಪಲಿಸದಾಗ
ಫಲಿಸದಾಗ
>>ಸುಲುಭವು
ಸುಲಭವು
Re: ಆರು ವೈರಿಗಳು
ಅಶೋಕರೆ ಈ ವ್ಯಾಕರಣ ದೋಷಗಳಿಂದಲೇ ನಾನು ಕವಿಯಾಗಲಿಲ್ಲ. ಕವಿಯಾದವನು ಸಕಲಕಲಾ ವಲ್ಲಭನಾಗಿರಬೇಕು, ದೋಷವಿಲ್ಲದವನಾಗಿರಭೇಕು, ಆ ಪದವಿ ನಮ್ಮ ಗುರಿಯಾಗಿರಬಾರದು, ಹಾಗಂತ ನಮ್ಮ ಪ್ರಯತ್ನವೂ ನಿಲ್ಲಬಾರದು. ತಪ್ಪುಗಳನ್ನು ಮನ್ನಿಸಿ.
ಅಹೋರಾತ್ರ
Re: ಆರು ವೈರಿಗಳು
ಗೀತೆಯ "ಧ್ಯಾಯತೋ ವಿಶಯಾನ್ ಪುಂಸಃ..." ಈ ಕೆಲವು ಶ್ಲೋಕಗಳ ನೆರಳು ಇರುವಂತೆ ಕಾಣುತ್ತದೆ. ನಿಮ್ಮಿಂದ ಇನ್ನೂ ಅನೇಕ ಕವಿತೆಗಳು ಹೊರಹೊಮ್ಮಲಿ.
ಪ್ರಭು ಮೂರ್ತಿ