ಅಂಭೇಡ್ಕರ್.
ಅಂಭೇಡ್ಕರ್
ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್
ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್
ಬೇಡಜನರ ಭೀಮನು
ಕಾಡುಜನರ ರಾಮನು
ನಾಡಜನರ ನಾಡಿಮಿಡಿತವಾದ ಅಂಭೇಡ್ಕರ್//
ರಾಮಜಿಯ ಪುತ್ರನಿವ ಭೀಮ ಅಂಭೇಡ್ಕರ್
ಗುರೂಜಿಯ ನಾಮಹೋತ್ತ ಧೀಮ ಅಂಭೇಡ್ಕರ್
ಕಲಿಯುಗದ ಕಲ್ಕಿಯು
ಸಂವಿಧಾನ ಶಿಲ್ಪಿಯು
ವಿದ್ಯೆಯಿಂದ ಯುದ್ಧಗೆದ್ದ ಬುದ್ಧ ಅಂಭೇಡ್ಕರ್/
ಜಾತಿಭೇದ ಭೇದಿಸಿದ ವೀರ ಅಂಭೇಡ್ಕರ್
ಮತಾಂಧರ ಸೆದೆಬಡಿದ ಶೂರ ಅಂಭೇಡ್ಕರ್
ಹರಿಜನಕೆ ಹರಿಯಿವ
ಗಿರಿಜನಕೆ ಗಿರಿಯಿವ
ಕಿರಿಯರಿಗೆ ಸಿರಿಯುಡಿಸಿದ ದೊರೆಯು ಅಂಭೇಡ್ಕರ್/
ಭಾರತಿಯ ಭಾರಕಳೆದ ಭರತ ಅಂಭೇಡ್ಕರ್
ಸಮರಸದ ಕಾರ್ಯದಲ್ಲಿ ನಿರತ ಅಂಭೇಡ್ಕರ್
ವಿದ್ಯೆಯಲ್ಲಿ ಶುದ್ಧನು
ಜನರಮನವ ಗೆದ್ದನು
ಬಿದ್ದಜನರ ಮೇಲೆತ್ತಿದ ಸಿದ್ಧ ಅಂಭೇಡ್ಕರ್
ಸಿದ್ಧಾರ್ಥ ಅಂಭೇಡ್ಕರ್//
ಆಹೋರಾತ್ರ.
ಸಮಯ:- ೧೫:೨೦.
೧೫/೦೪/೦೬.

- ahoratra ರವರ ಬ್ಲಾಗ್
- Login or register to post comments
- 403 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಕಲಿಯುಗದ ರಾವಣ
- ಈ ದೇಹ, ಮನಸ್ಸು ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆ
- ‘ವಿನಾದೈನ್ಯೇನ ಜೀವನಂ.. ಅನಾಯಾಸೇನ ಮರಣಂ’ ಬದುಕಿನ ಧ್ಯೇಯವಾಗಿಸಿಕೊಂಡಿರುವ ಮರಾಠಾ ಸಮುದಾಯದ ಕಾರ್ಯ ನಿರತ ನಾಟಿ ವೈದ್ಯ. ಚಿತ್ರ: ಹರ್ಷ.
- ‘ವಿನಾದೈನ್ಯೇನ ಜೀವನಂ.. ಅನಾಯಾಸೇನ ಮರಣಂ’ ಬದುಕಿನ ಧ್ಯೇಯವಾಗಿಸಿಕೊಂಡಿರುವ ಗೌಳಿ ಸಮುದಾಯದ ಕಾರ್ಯ ನಿರತ ನಾಟಿ ವೈದ್ಯ. ಚಿತ್ರ: ಹರ್ಷ.
- ಕಲ್ಲ ಕರಗಿಸುವುದೈ ಮಧುರ ನಾದ


RSS:
ಪ್ರತಿಕ್ರಿಯೆಗಳು
ಅಂಬೇಡ್ಕರ್/ಅಂಭೇಡ್ಕರ್
ನನಗೆ ಅಂಬೇಡ್ಕರ್ ಎಂದು ಶಾಲೆಯಲ್ಲಿ ಓದಿದ ನೆನಪು.
ಅಂಭೇಡ್ಕರ್ ಎನ್ನುವುದೂ ಕೂಡ ಸರಿಯಿರಬಹುದೆ?
ಇದು ತಪ್ಪುಗಳ ಹುಡುಕಾಟವಲ್ಲ, ಗೊಂದಲದಿಂದ ಸರಿಯಾದುದನ್ನು ಅರಿಯುವ ತವಕ.