ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ahoratra ರವರ ಬ್ಲಾಗ್

ನನ್ನ ಭಾಗ್ಯ

May 25, 2006 - 12:37am — ahoratra

ನನ್ನ ಭಾಗ್ಯ.

ದೇವ್ರಾಣೆ ನಿನ್ನಂಥ ಮಡದಿ ಸಿಗೋಲ್ಲ
ಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/
ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲ
ನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ//

ಕಲಿಕೆಯ ವಯಸಲಿ ಕುಲಗಳ ತೊರೆದು
ಹಿರಿಯರನೆದುರಿಸಿ ನನ್ನಲಿ ಬೆರೆತು/
ಬಂಗಾರವಿಲ್ಲದ ಬಡತನದಲ್ಲಿ
ಬಂಗಾರವಾಗಿ ನನ್ನನೀ ಸೇರಿದೆ//

ಹುಟ್ಟೂರು ಬೆಳೆದೂರು ಕಲೆತೂರು ತೊರೆದು
ಹೊರನಾಡ ಬಂದು ನನ್ನೊಡನೆ ನಿಂತೆ/
ಆಶಾಶೂನ್ಯದ ನಿನ್ನೊಡಗೂಡಿ
ಭವಭಾರದಲೂ ನಾ ನಾಕವ ಕಂಡೆ//

ಸಿಂಧೂರ ಶಿವಗಂಗ ರೋಹಿಣಿ ಪ್ರಣತಿ
ಶಿವ ನಮಗೆ ಕೊಡುತಿರುವ ಸಂಹಿತೆ ಸೇರಿ/
ನೀ ತಂದ ಭಾಗ್ಯದ ಪಾಂಚಜನ್ಯಗಳು
ನಿನ್ನ ತ್ಯಾಗಕೆ ಸಂದ ದೇವ ಕುರುಹುಗಳು.

ಅರಿಯದ ವಯಸಿಗೆ ಅರಿಗಳ ಕಂಡೆ
ಅರಿಗಳ ಮುರಿಯಲು ನೀ ಬಂದು ನಿಂದೆ/
ಗಿರಿಗಳ ಹತ್ತಿ ಗುರಿಗಳ ಮುಟ್ಟಲು
ಹರಿಹರರ ಸೇವೆಗೆ ಹೆಗಲಾಗಿ ಬಂದೆ//

ಅಹೋರಾತ್ರ.
೨೦:೧೦.
೧/೫/೬.
ಮುಂಬೈ.

~.~
  • ahoratra ರವರ ಬ್ಲಾಗ್
  • Login or register to post comments
  • 527 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2006 - 6:25am — benaka

ಪಾಂಚಜನ್ಯ-ಪತ್ನಿ!

benaka's picture

ಏನು ಕವಿಗಳೇ ನಿಮಗೆ ಐವರು ಮಕ್ಕಳೇ?
ಸ್ವಲ್ಪ ಭಾರತದ ಜನಸಂಖ್ಯೆಯ ಬಗ್ಗೆಯೂ ಯೋಚಿಸಿರಪ್ಪಾ.....

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2006 - 8:51am — ahoratra

ಕೋನಿಚೀವಾ ಬೆನಕರೆ.

ahoratra's picture

ಇಚಿ, ನಿ, ಸ್ಯಾನ್ ಯಾನ್ ಗೋ ರೋಖು......... ಎಲ್ಲ ಕಲಿತದ್ದಾಯಿತಾ?

ಕಾಮಿಸಾಮಾನ ಕೇಳಿದೆ ಅಂತ ಹೇಳಿ.

ಸಯನೋರ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2006 - 9:32am — Sunil Jayaprakash

ಏನಿದು. ಗೋ ರೋಖು

Sunil Jayaprakash's picture

ahoratra wrote:

ಇಚಿ, ನಿ, ಸ್ಯಾನ್ ಯಾನ್ ಗೋ ರೋಖು

ನನಗೆ ಗೊತ್ತಿರುವ ಗೊೋರೋ ಒಬ್ಬನೇ. ಅವನು Mortal Kombat ಆಡುವಾಗ, ದೈತ್ಯಾಕಾರನಾಗಿ, ನಾಲ್ಕು ಕೈಗಳುಳ್ಳವನಾಗಿ ಬರುತ್ತಾನೆ. ನನ್ನ ಸ್ನೇಹಿತರಿಗಾರಿಗೂ ಅವನನ್ನು ಸೋಲಿಸಲಾಗುತ್ತಿರಲಿಲ್ಲ. ನನಗಂತೂ ಅವನನ್ನು ಹೇಗೆ ಸೋಲಿಸಬೇಕು ಎಂಬುದು ತಿಳಿದಿತ್ತು, ಹೀಗಾಗಿ ನನ್ನ ಸ್ನೇಹಿತರಿಗೆ ಸ್ವಲ್ಪ ಹೊಟ್ಟೆಕಿಚ್ಚಿತ್ತು ನನ್ನ ಮೇಲೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2006 - 9:48am — ahoratra

ಗೋ ಅಂದರೆ ಐದು ರೋಖು ಅಂದರೆ ಆರು.

ahoratra's picture

ನಿಹೋನೀಸ್ ಅಂದರೆ ಜಪನೀಸ್ ನ ೧,೨,೩,೪,೫,

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2006 - 9:38am — Sunil Jayaprakash

ಆಶಾಶೂನ್ಯ

Sunil Jayaprakash's picture

ahoratra wrote:

ಆಶಾಶೂನ್ಯದ ನಿನ್ನೊಡಗೂಡಿ

ಇಲ್ಲಿ ನೀವು ಏನನ್ನು ಹೇಳಹೊರಟಿದ್ದೀರಿ ಎಂದು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಸಮಸ್ಯೆಯನ್ನು ನೀವೇ ತಿಳಿಯಾಗಿಸಿ.
ಆಶಾಶೂನ್ಯದ ನಿನ್ನೊಡಗೂಡಿ = ಆಶಾಶೂನ್ಯದ + ನಿನ್ನ + ಒಡಗೂಡಿ.
ಇದು ವಿರೋಧಾಭಾಸದಿಂದ ಕೂಡಿದಂತಿದೆ.
ಅಥವಾ ನೀವು,
ಆಶಾಶೂನ್ಯದೆ(ಎಕಾರ ವಿದೆ) ನಿನ್ನೊಡಗೂಡಿ = ಆಶಾಶೂನ್ಯದೆ + ನಿನ್ನ + ಒಡಗೂಡಿ.
ಹೇಳಬೇಕೆಂದಿರುವಿರೇ.
ಇಲ್ಲಿ ಆಶಾಶೂನ್ಯ ಯಾರಲ್ಲಿ ಆವರಿಸಿತ್ತು ತಿಳಿಯುತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2006 - 9:53am — ahoratra

ಬುದ್ಧನ 'ಆಶೆ'.

ahoratra's picture

ಇದ್ದುದರಲ್ಲಿ ಆನಂದದಿಂದ ಬಾಳುವ ಆಕೆಯ ಗುಣ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2006 - 9:59am — Sunil Jayaprakash

ಸ : ಬುದ್ಧನ ಆಶೆ

Sunil Jayaprakash's picture

ಸವಿಯೊದಗು ಅಹೋರಾತ್ರಗಳೇ, ನನ್ನ ಸಮಸ್ಯೆ ತಿಳಿಯಾಯಿತು. ಆಶಾಶೂನ್ಯದ ಪದವನ್ನು ನಾನು ತಪ್ಪಾಗಿ ಗ್ರಹಿಸಿಕೊಂಡಿದ್ದೆೆನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನವರಿಕೆಯೊಳು ಕಂಡೆ ಕಳವಳವ..!!
  • ಭಾಗ್ಯ...
  • ಹೃದಯದ ತುಂಬ ಅದೇ ಬಿಂಬ !
  • ಸೇರು ಬಾ ನನ್ನಲಿ
  • ಪ್ರೇಮದ ಅಮಲು
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator