anant pandit ರವರ ಬ್ಲಾಗ್
ಕನ್ನಡತನ
February 27, 2007 - 4:39pm — anant pandit೧೯೪೬ ರ ಅ.ನ.ಕೃ. ಅವರ ಲೇಖನದ ಬಗ್ಗೆ ಓದುತ್ತಾ ನಾವು ಕನ್ನಡಿಗರು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ವಿದು ಎನಿಸುತ್ತದೆ. ಎರಡುಜನ ತಮಿಳರು ಅಥವಾ ಅನ್ಯ ಬಾಷೆಯಜನ ಮೂರನೆಯವರು ಕನ್ನಡಿಗನಾಗಿದ್ದರೂ ನಿರ್ದಾಕ್ಷಣ್ಯವಾಗಿ ಅವರ ಬಾಷೆಯಲ್ಲಿ ಮಾತಾಡಿ ಕೊಳ್ಳುತ್ತಾರೆ. ಆದರೆ ಇಬ್ಬರು ಕನ್ನಡಿಗರು ಮೂರನೆಯವ ಅನ್ಯಬಾಷಿಕ ನಾದರೆ ಒಂದೆ ಅವನ ಬಾಷೆಯಲ್ಲಿ ಮಾತಾಡುತ್ತಾರೆ ಅಥವಾ ಬರದಿದ್ದರೆ ಇಂಗ್ಲೀಷಿನಲ್ಲಿ ಮಾತಾಡಿ ತಮ್ಮ ಉದಾರತೆ ಮೆರೆದಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ. ಇದಕ್ಕೆ ನಮ್ಮ ವಿಚಾರವಾದಿ ಗಳೆನಿಸಿ ಕೊಂಡವರು ಆಗಾಗ ಸಾರ್ವಜನಿಕ ವಾಗಿ ಉದರಿಸುವ ಅಣಿಮುತ್ತುಗಳು ಕಾರಣ ಎಂದು ನನಗನಿಸುತ್ತದೆ. ಯಾಕಂದರೆ ಇನ್ನೂ ವಿದ್ಯಾರ್ಥಿದೆಸೆಯಲ್ಲಿರುವವರಿಗೆ ಅದು ವಿಶಾಲಮನೋಭಾವದ ಸತ್ಯವಾಗಿ ಗೋಚರಿಸುತ್ತದೆ. ಮುಂದೆ ಓದಿ »

- Login or register to post comments
- 347 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ರಾಜಕಾರಣಿಗಳೂ ಕಾವೇರಿಯೂ
February 20, 2007 - 5:02pm — anant panditವಿಧಾನ ಸಭೆ ಕಾವೇರಿ ತೀರ್ಪು ಬರುವಾಗ ಸರಿಯಾಗಿ ಪ್ರಾರಂಭ ವಾಯಿತು. ಆದರೆ ಇಲ್ಲಿಯವರೆಗೂ ವಿಧಾನ ಪರಿಷತ್ತು ಒಂದು ದಿನದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ರಾಜಕಾರಣಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಈ ಸನ್ನಿವೇಶ ದಲ್ಲಿ ಕನ್ನಡಿಗನಿಗೆ ಎಂಥಹ ಅನ್ಯಾಯ! ಇದಕ್ಕೆ ಮೊದಲನೆಯದಾಗಿ ಯಾವುದೇ ಕಾರಣಕ್ಕೆ ಕಲಾಪ ನಡೆಯದಿದ್ದರೆ ಆದಿನದ ಬೆತ್ತೆ ಅವರಿಗೆ ಸಿಗದಂತೆ ಕಾನೂನು ರಚಿಸುವದು ಅತ್ಯಾವಶ್ಯಕ. ಅಲ್ಲದೆ ಯಾವುದೇ ವರ್ಷ ಕನಿಷ್ಟ ೮೦% ರಷ್ಟು ದಿನ ಕಲಾಪ ನಡೆಯದೇ ಹೋದರೆ ಅಥವಾ ಯಾವನೇ ಎಮ್.ಎಲ್.ಏ ಅದರಲ್ಲಿ ಭಾಗವಹಿಸದೇ ಹೋದರೆ (ಅನಾರೋಗ್ಯ
ಹೊರತು ಪಡಿಸಿ) ಅವರ ಎಮ್.ಎಲ್.ಎ ಹುದ್ದೆ ರದ್ದಾಗಬೇಕು. ಆಗಮಾತ್ರ ಇವರು ಸ್ವಲ್ಪವದರೂ ಗಂಭೀರ ವಾಗಿ ಪ್ರಜೆಗಳ ಬಗ್ಗೆ ಚಿಂತಿಸಿಯಾರು. ಇಲ್ಲದಿದ್ದರೆ ಅಧ್ಯಕ್ಷರಬಗ್ಗೆ ಕಾಂಗ್ರೆಸ್ಸಿಗೆ ತಕರಾರು ಇದ್ದರೆ ಅದನ್ನು ಸಭೆಯಲ್ಲಿ ನಿಲುವಳಿ ಮಡಿಸಿ ಚರ್ಚಿಸಬಹುದಿತ್ತು. ಒಂದುವೇಳೆ ಅದು ಸಾಧ್ಯವಾಗದಿದ್ದರೆ ಇಂದಿನಪರಿಸ್ಥಿತಿಯಲ್ಲಿ ಕಾವೇರಿ ಬಗ್ಗೆ ಚರ್ಚೆ ಆದನಂತರ ಸದನದ ಹೊರಗೆ ಎಲ್ಲರೀತಿಯ ಚಳವಳಿ ನಡೆಸಬಹುದಿತ್ತು. ಆದರೆ ಅದಕ್ಕೆ ಹೆಚ್ಚಿನ ಶ್ರಮ ವಾಗುತ್ತದೆ. ಕಾರಣ ಒಳಗೆ ಸ್ವಲ್ಪಹೊತ್ತು ಗದ್ದಲ ವೆಬ್ಬಿಸಿ ಸದನ ಮುಂದೂಡುವಂತೆ ನೋಡಿಕೊಂಡು ನಂತರ ಸ್ವಂತ ಕೆಲಸ ಮಾಡಬಹುದು. ಸಂಬಳ ಎಲ್ಲವೂ ಸುಲಭವಾಗಿ ಸಿಗುತ್ತದೆ.
ಅದೇ ತಮಿಳು ರಾಜಕಾರಣಿಗಳು ಸರ್ವ ಪಕ್ಷ ಸಭೆಕರೆದು ಒಗ್ಗಟ್ಟಿನಿಂದ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಟೊಪ್ಪಿ ಹಾಕಲು ತಯಾರಿ ನಡೆಸಿದ್ದಾರೆ. ಉ.ಪ್ರ ಸರ್ಕಾರದ ವಿಚಾರದಲ್ಲಿ ವಿಭಿನ್ನ ನಿಲುವೆ ತಳೆದ ಡಿ.ಎಮ್.ಕೆ. ನಂತರ ಕಾಂಗ್ರೆಸ್ಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಹಕರಿಸಲು ಒಪ್ಪಿದೆ. ಇದರ ಅರ್ಥ ಸಧ್ಯದಲ್ಲೇ ನ್ಯಾಧಿಕರಣದ ತೀರ್ಪು ಗೆಜೆಟ್ ನಲ್ಲಿ ಪ್ರಕಟ ವಾಗುವದು ನಿಶ್ಚಿತ. ಆದ್ದರಿಂದ ಕರ್ನಾಟಕದ ಜನತೆ ಇಲ್ಲಿಯ ಎಲ್ಲಾ ರಾಜಕೀಯ ಪಕ್ಷಗಳನ್ನು ಕಾವೇರಿ ತೀರ್ಪಿನ ಚಳುವಳಿಯಿಂದ ಹೊರಗಿಡಬೇಕು. ಅವರು ನದೆಸುವ ಸೋಗಲಾಡಿ ಪ್ರತಿಭತನೆಗೆ ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ ಪ್ರಕಟಿಸಬೇಕು. ಮುಂದೆ ಓದಿ »


RSS: