ಹೀಗೆ ಎನೋ ಹೇಳಬೇಕೆನಿಸುತ್ತದೆ
ಹೇಳಬೇಕೆನ್ನಿಸಿದ್ದೆಲ್ಲಾ ಕವಿತೆಯಾಗಿದೆ..
ನೆನಪು
ಅಂದು ಮಧ್ಯಾಹ್ನ ಮಳೆಗೇನೋ ಅರಿವಿಲ್ಲ
ನೆನೆದವರ ಪರವಿಲ್ಲ
ಯಾರೋ ಗುನುಗುತ್ತಿದ್ದ ಪ್ರೇಮಿ..
ನನಗೇಕೋ ಚಿತ್ತಚಂಚಲ..
ಕಣ್ಣೆಲ್ಲ ಮಂಜು, ಮಳೆಹನಿ
ರೆಪ್ಪೆಯೊಳಗೆ ಹೊರಟುನಿಂತ ನೀನು
ಕೇಳುತ್ತಿದ್ದುದ್ದೊಂದೆ ಕೊಡೆ ಮೇಲೆ ಬಿದ್ದ ನೀರು..
ಮತ್ತೆ ಭಾವನೆ ಅದಕ್ಕಿಂತ ಭಾರ !
ನಿಂತೆ !ಕುಸಿದಂತೆ ಭೂಮಿ !
ಮತ್ತದೇ ತವಕ,ಹೋಗಲಾರೆನೋ ಎಂದು..
ಸಾವರಿಸಿ ಓಡಿದ್ದ ನನಗೆ
ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರ..
ಮುಸುಕಿದ್ದು ಧೂಳು,ಚಲಿಸಿದ್ದು ರೈಲು
ಅಲ್ಲೆಲ್ಲ ನೀರವತೆ ,ನಿಶ್ಯಬ್ಧ !
ಮರೆಯಾದರೂ ನಿನ್ನದೇ ನೆನಪು
ಮತ್ತೆಲ್ಲ ಸ್ತಬ್ಧ !!

- anikethana ರವರ ಬ್ಲಾಗ್
- Login or register to post comments
- 246 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: