ತೆರೆದ ಕಣ್ಣು

ತೆರೆದ ಕಣ್ಣುಗಳ ಎಳೆರವಿ ಕಿರಣಗಳಿಗೆ
ಅರಳಿದೆ ಮುಗ್ಧತೆಯ ಚೈತನ್ಯದ ಇನ್ನೊಂದು ಪದವಾಗಿ
ನಕ್ಕೆ ನಾ ವಸುಂಧರೆಯ ತೆಕ್ಕೆಯಲಿ
ಕಂಡೆನಾ ಜಗವ ಆ ಹಸಿರಿನ ಸೆರಗಲಿ
ಕಲೆತೆ ಅದೆಷ್ಟು ಪಾಠಗಳ ಆ ಪಕ್ಶಿಗಳ ಕಂಠದಲಿ

ಪಯಣ ಸಾಗಿತ್ತು ಎಷ್ಟೋ ಕನಸುಗಳ ಹೊತ್ತು
ಹೊಸ ಅನುಭವಗಳ ನಡುವೆ ಇತ್ತು ಚಿಂತೆಗಳ ಕಂತೆ
ನೆತ್ತಿಯ ಮೇಲಿನ ಮಾರ್ತಂಡ
ಮೇಲೆ ಸಂಭಂಧಗಳ ಸರಪಳಿಗಳು ಭವದ ಬಂಧನಕೆ  ಮುಂದೆ ಓದಿ »

Ornamental seperator

ಅನುಭವ

ಮುಂಗಾರಿನ ಮಳೆಯ
ಅದೊಂದು ಸುಂದರ ಅನುಭವ

ಸದ್ದಿಲ್ಲದ ಆ ಮಳೆಯ
ತಿಳಿಯದೆ ಹೋಯಿತು ಆರಂಭ

ಇಡೀ ಜಗವೆ ನಿಂತಲ್ಲೆ ನಿಂತ
ಮನಸಿನೊಳಗಿನ ಓಂದು ಭಾಸ

ಒಂದೇ ಒಂದು ಹನಿಗೆ ಅದೆಷ್ಟು
ಪುಟ್ಟ ಪುಟ್ಟ ಹನಿಗಳು

ಎಲೆಂಚಿನ ತುದಿಗೆ ನಿಲ್ಲದಾಗಿ
ಜಾರಿವೆ ಮಿಂಚುವ ಆ ಹನಿಗಳು

ಮನಹಾಕಿದೆ ನೆನಹುಗಳ ಮೆಲಕು
ಇನ್ನೊಂದು ನೆನಪು
ಈ ಹೊಸ ಅನುಭವ ಮುಂದಿನ ಮುಂಗಾರಿಗೆ

Ornamental seperator

ಮುಕ್ತಿ

ಪಡಿಬೆಕೆನಿಸೆದ ಮುಕ್ತಿ
ಅದ್ರಿಲ್ಲಾ ಅದನ್ ಪಡೆಯೋ ಯುಕ್ತಿ

ಹಿಂಗ್ಯಾಕ ಆಗ್ಯದ ಈ ಹದಿನೆಂಟ
ತುಂಬ್ಯಾವ ಚಿಂತಿ ನೊರಾಯಂಟ

ಮುಗಿಸ್ಬೆಕ್ ನಾ ಇನ್ನೂ ದಿಗ್ರಿ
ಓಂದೊಂದರ ಸಿಗಬೆಕಲ್ಲಾ ಭಕ್ರಿ

ಮುಂದ ,ಹೆಂಡತಿ , ಮಕ್ಳು
ಸಂಸಾರದ ಗೋಳು.....

ಅದ್ರೂ ತೊಗೋಂಡ... ಹೊಗ್ಬೆಕ್
ಇಷ್ಟೆಲ್ಲಾ, ಅನುಭವ ಯದಕ್ಕ...?

ಪಡಿಬೆಕೆನಿಸೆದ ಮುಕ್ತಿ
ಅದ್ರಿಲ್ಲಾ ಅದನ್ ಪಡೆಯೋ ಯುಕ್ತಿ

Ornamental seperator

ಏಂತಹ ಹೊಸತು ಈ ದಿವಸ....

ಏಂತಹ ಹೊಸತು ಈ ದಿವಸ....

ಕಾರ್ಮೋಡಗಳು ತುಂಬಿದ ಆಗಸ
ಏನೀ.. ಜಿಟಿಜಿಟಿ ಮಳೆಯ ಸಂದೇಷ

ಓಹೋ ಇದು ವಸಂತನ ಉಲ್ಲಾಸ
ಅವನಿಗೆ ಚೈತ್ರಳು ನಕ್ಕ ಭಾಸ..!

ಸಣ್ಣ ಸಣ್ಣ ಅಲ್ಲಿ ಇಲ್ಲಿ ಹಸಿರಿನ ಚಿಗುರು
ಮನವು ನೆನಹು ತುಂಬಿದ ಬಸಿರು

ಕಂಡಿದ್ದ ಕನಸು, ನನಸಾಯ್ತು ಏಂಬ ಹರುಷ
ಆದರೂ ಮುಕ್ತಾಯವಿಲ್ಲದ ದಿನದ ಈ ಸಂಘರ್ಷ

ಮುಂಜಾವಿನ ತಂಪುಗಾಳಿಯ ಆ ಸ್ಪರ್ಷ  ಮುಂದೆ ಓದಿ »

Ornamental seperator

ಅನಿಸಿಕೆ

ಹೊಂಬಿಸಿಲ ಮುಂಜಾವಿಗೆ
ನನ್ನ ಒಂದು ಅನಿಸಿಕೆ

ಕತ್ತಲು ಮನಕೆ ಆಸೆ ತಂದ ಆ
ಹೊಂಗಿರಣವಗಲೆ.....?

ಭಾನುವಿಗೆ ಮೈಚೆಲ್ಲಿ ಕುಳಿತು
ನಸುನಗುತಿರುವ ಮಲ್ಲಿಗೆಯಾಗಲೆ.......?

ಮನ ಮುದದಿಂದ ತುಂಬುವ
ತಂಪಾದ ಗಾಳಿಯಗಲೆ....?

ಹೂಹೂಗೆ ಹಾರಿ ಮಧು ಮಧು ಹೀರುವ
ದುಂಬಿಯಾಗಲೆ..? ಇಲ್ಲಾ ಮಧುವಾಗಲೆ...?

ದಟ್ಟ ಹಸಿರಿನ ಸೆರಗಿನಂತೆ ಇರುವ
ಹೊಗೆ ನಾನಾಗಲೆ...? ಇಲ್ಲಾ ಹಸಿರೆ ನಾನಾಗಲೆ...?  ಮುಂದೆ ಓದಿ »

Ornamental seperator
Syndicate content