ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › aniljoshi ರವರ ಬ್ಲಾಗ್

ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

February 7, 2008 - 8:15am — aniljoshi

ಸಂಪದದಾಗ ಭಾಷಾದ ಮ್ಯಾಲೆ ಮಸ್ತ ಡಿಸ್ಕಶನ್ ನಡದದ. ಇದನ್ನೆಲ್ಲ ಬಾಜೂಕ ನಿಂತು ನೋಡ್ಲಿಕತ್ತೀನಿ ಇನ್ನ ಹೆಂಗ-ಹೆಂಗ, ಯಾ-ಯಾ ಕಡೆ ಹರಿತದ ವಿಚಾರ ಅಂತ. ಬಾಜೂಕ ನಿಂತು ಅವರೇನಂದ್ರು, ಇವರೇನಂದ್ರು ಅಂತ ನೋಡೊದ್ರಾಗ ಮಜ ಅದ, ಜೊತೀಗೆ ನನ್ನವೇ ಎಷ್ಟೊ ಅಭಿಪ್ರಾಯನ ಪ್ರಶ್ನೆ ಮಾಡ್ಕೊಳ್ಳೊದೂ ನಡದದ. ಇರಲಿ, ಆದರ ಈ ವೀಕೆಂಡಿನ್ಯಾಗ ಒಂದು ಸಣ್ಣ ಟಿಪ್ಪಣಿ ಬರೀಬೇಕು.

ಅಲ್ಲೀತನಕ ಈ ಕೆಳಗಿನ ಕನ್ನಡ ಪ್ರಯೋಗ ನೋಡ್ರಿ. ಇವನ್ನ ಜಗನ್ನಾಥದಾಸರು ಹರಿಕಥಾಮೃತಸಾರದಾಗ ಬಳಸ್ಯಾರ. ಹಂಗ ನೋಡಿದ್ರ ಹರಿಕಥಾಮೃತಸಾರದಾಗ ಬೇಕಾದಷ್ಟು ಸಂಸ್ಕೃತ ಪದ ಅವ. ಜೊತೀಗೆ ಎಷ್ಟು ಛೊಲೊ ಕನ್ನಡ ಬಳಸ್ಯಾರ ನೋಡ್ರಿ.

೧. ನುಡಿವೆಣ್ಣಿನಾಣ್ಮಾಂಡದೊಳು
೨. ಎಲರುಣಿಯವೋಲ್
೩. ಚಳಿವೆಟ್ಟಳಿಯ

(ಹೆಚ್ಚು ಕಡಿಮಿ ನಮ್ಮ ಮನಿ ಒಳಗ ಮಾತಾಡಿಧಂಗ ಬರದೀನಿ ಇಲ್ಲೆ. ನಿಮಗೆಲ್ಲ ಸರಳ ತಿಳೀತು ಅಂದರ ಇಷ್ಟರ ಮಟ್ಟಿಗೆ ಕರ್ನಾಟಕ ಏಕೀಕರಣ ಆಗೇದ ಅಂತ ಅನ್ಕೋತೀನಿ Eye-wink )

  • ಕನ್ನಡ
  • ಖಾಲಿ-ಪುಕಟ್
~.~
  • aniljoshi ರವರ ಬ್ಲಾಗ್
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 7, 2008 - 9:12am — ವೈಭವ

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

ವೈಭವ's picture

ಚಂದ್ ಬರೆದಿದಿರ್ ರೀ.. ಹಿಂಗ ಬರೀರೆ ಮತ್ತ ( ನಾನು ಮಯ್ಸೂರಿನವನು ..ನೀವ್ ಬರೆದುದು ನಂಗೆ ಅರ್ತ ಆಗುತ್ತೆ Smiling )

೨) ಎಲರುಣಿಯವೋಲ್ = ಎಲರ್+ಉಣಿಯ+ಪೋಲ್= ಗಾಳಿಯನ್ನು ಉಣ್ಣುವ ಹಾಗೆ ಅಂತಿರ್ಬೋದು ...ಸಕ್ಕತ್ ಪದ ರೀ ಇದು.
ಇದರ ಹಿಂದು ಮುಂದು ಹೇಳಿದ್ರೆ ನಮಗೂ ತಿಳಿಯೋದಕ್ಕೆ ನೆರವಾಗುತ್ತೆ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 9:22am — Sunil Jayaprakash

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

Sunil Jayaprakash's picture

ಕನ್ನಡ ಒಂದಾತು ಬಿಡ್ರೀ ಅಣ್ಣಾ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 9:28am — Sunil Jayaprakash

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

Sunil Jayaprakash's picture

ಚಳಿವೆಟ್ಟಳಿಯ - ಚಳಿ + ಬೆಟ್ಟ + ಅಳಿಯ. ಇಲ್ಲಿ "ಚಳಿಯಾದ ಬೆಟ್ಟ" ಸಹ್ಯಾದ್ರಿಯೋ ಹಿಮಾಲಯವೋ ತಿಳಿಯುತ್ತಿಲ್ಲ. ಹಿಮಾಲಯವಾದರೆ, ಅದು ಶಿವನನ್ನು ಕುರಿತು ಹೇಳಿದುದಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 10:40am — mahesha

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

mahesha's picture

ಎಲರ ಬೆಳಕರೆ ( ಅನಿಲ ಜೋತಿಷಿ : ) ( ಜೋತಿಷಿ => ಜೋಶಿ )

ಬಲು ಚಂದಾಗೆ ಬರೆದಿದ್ದೀರಿ. ಇಂತವುಗಳ ಬಗ್ಗೆ ಮಾತಾಡುಮ.. ನೀವ್ ಹಾಗ್ತಾ ಇರ್ರಿ‍.

೧) ನುಡಿವೆಣ್ಣಿನಾಣ್ಮಾಂಡದೊಳು

ನುಡಿವೆಣ್ಣೆ = ನುಡಿ + ಪೆಣ್ಣೆ = ( ವಾಣಿ / ಶಾರದೆ )
ನುಡಿವೆಣ್ಣಿನ = ವಾಣಿಯ

ಆಣ್ಬ/ಆಳ್ಮ/ಆಣ್ಮ = ಗಂಡ

( āḷma, āṇma, āṇba husband; http://dsal.uchicago.edu/cgi-bin/philologic/getobject.pl?c.0:1:402.burro... )

ನುಡಿವೆಣ್ಣಿನಾಣ್ಮ = ವಾಣಿಪತಿ = ಬ್ರಹ್ಮ/ಬೊಮ್ಮ( ಆಂಡಯ್ಯ )

ಆಂಡ ಅಂದ್ರೆ ತಿಳಿದಿಲ್ಲ.!

೨)ಎಲರುಣಿಯವೋಲ್ = ಗಾಳಿ ತಿಂದಂತೆ, ಗಾಳಿ ಉಂಡಂತೆ, ಗಾಳಿ ತಿನ್ನುವುದರಂತೆ

೩) ಚಳಿವೆಟ್ಟಳಿಯ = ಚಳಿ ಬೆಟ್ಟ = ಹಿಮಾಲಯ
ಚಳಿವೆಟ್ಟದ ಅಳಿಯ = ನಂಜ/ಗುಂಡ/ಲಿಂಗ = ಈಶ್ವರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 11:17am — mahesha

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

mahesha's picture

ಹೊಳೆಯಿತು

ನುಡಿವೆಣ್ಣಿನಾಣ್ಮಾಂಡ = ಬ್ರಹ್ಮಾಂಡ

ನುಡಿವೆಣ್ಣಿನಾಣ್ಮ = ಬ್ರಹ್ಮ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 11:27am — ವೈಭವ

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

ವೈಭವ's picture

ಬ್ರಹ್ಮಾಂಡದಲ್ಲಿರುವ ' ಆಂಡ' ಅಂದ್ರೇನು?

ಆಂಡ ಅಂದ್ರೆ ಬ್ರಹ್ಮ ಅಲ್ಲವ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 11:33am — Sunil Jayaprakash

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

Sunil Jayaprakash's picture

ಅದು ಬ್ರಹ್ಮ + ಅಂಡ - ಬ್ರಹ್ಮಾಂಡ -> ಸವರ್ಣದೀರ್ಘಸಂಧಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 10:57am — madhava_hs

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

madhava_hs's picture

ಇದೋ ನೋಡ್ರಿ, ಜಗನ್ನಾಥದಾಸರ ಇನ್ನೊಂದು ಪದ್ಯ:

ಕಣ್ಣಿಗೆವೆಯಂದದಲಿ ಕೈ ಮೈ |
ತಿಣ್ಣಿಗೊದಗುವ ತೆರದಿ ಫಲ್ಗಳು |
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ |
ಪುಣ್ಯ ಫಲವೀವಂದದಲಿ ನುಡಿ|
ವೆಣ್ಣಿ ನಾನ್ಮಾಂಡದೊಳು ಲಕ್ಷ್ಮಣ |
ನಣ್ಣ ನೊದಗುವ ಭಕ್ತರವಸರಕಮರಗಣ ಸಹಿತ ||

ಯಾರಾದ್ರೂ ಅರ್ಥ ಬಿಡಿಸ್ರೀ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 7, 2008 - 11:16am — mahesha

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

mahesha's picture

http://sampada.net/forum/7362

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 8, 2008 - 6:37am — aniljoshi

ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

aniljoshi's picture

ಅರ್ಥ ಬಿಡಿಸಿದವರಿಗೆಲ್ಲ ಥ್ಯಾಂಕ್ಯೂ Smiling
ಚಳಿವೆಟ್ಟಳಿಯ => ಚಳಿ ಬೆಟ್ಟದ[ಅಭಿಮಾನಿಯ] ಅಳಿಯ => ಹಿಮವಂತನ ಅಳಿಯ => ಶಿವ
ನುಡಿವೆಣ್ಣಿನಾಣ್ಮಾಂಡದೊಳು => ನುಡಿ ಹೆಣ್ಣಿನ ಆಣ್ಮನ ಅಂಡದೊಳು => ಬ್ರಹ್ಮಾಂಡದೊಳು
ಎಲರುಣಿಯವೋಲ್ => ಎಲರ್ ಉಣಿಯಂತೆ => ಗಾಳಿಯನ್ನೇ ತಿನ್ನುವುದರಂತೆ => ಗಾಳಿಯನ್ನೇ ತಿಂದು ಬದುಕುವದು ಹಾವು => ಹಾವಿನಂತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು
  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಅನಂತಮೂರ್ತಿಯವರು ಅವಶ್ಯ ಮಾತಾಡಬಹುದು !
  • enjoy ಮಾಡಿ?!?
  • ಹಂಪಿ ಚಿತ್ರಗಳ್ನ ನೋಡ್ರಿ !
Syndicate content

ಲೇಖಕರು

aniljoshi's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator