October 4, 2010 - 7:43pm
(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ.
(೨೪೨) ನಿಸರ್ಗದ ವಿರುದ್ಧದ ಸೋಲುವ ಯುದ್ಧವನ್ನು ಗೆಲುವೆಂದು ಭಾವಿಸುವ ಮಾನವನ ಪ್ರಯತ್ನದ ಫಲವೇ ’ನಗರ’.
(೨೪೩) ಭೂಮಿಯ ಬೃಹತ್ ಕಸದಬುಟ್ಟಿಗಳ ಔಪಚಾರಿಕ ಹೆಸರೇ ’ನಗರೀಕರಣ’.
(೨೪೪) " ’ಅಭ್ಯಾಸವು ಬೋಧನೆಗಿಂತಲೂ ಮಿಗಿಲು’ ಎಂಬ ಈ ವಾಕ್ಯವೂ ಒಂದು ಬೋಧನೆಯೇ" ಎಂದು ಭಾವಿಸುವುದು ಒಂದು ದುರಭ್ಯಾಸವಲ್ಲವೆ?!
(೨೪೫) ನೀವು ಎಂದರೆ ಏನೆಂದು ಇತರರು ಭಾವಿಸಿದ್ದಾರೋ ಅದರ ಒಟ್ಟಾರೆ ಮೊತ್ತವೇ ನೀವು. ಆ ನಂಬಿಕೆಯಾಚಿಗೆ ಅವರ ಪಾಲಿಗೆ ನೀವಿಲ್ಲ. ಆ ನಂಬಿಕೆಯಾಚೆಗಿನ ನಿಮಗೆ ಅವರುಗಳ ಅವಶ್ಯಕತೆಯಿಲ್ಲ!
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ...
[[ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು]] ಆದರೆ ಎಲ್ಲರೂ ಸಮಾನರು ಎನ್ನುವವರಲ್ಲಿಯೂ ಕೆಲವರು ಹೆಚ್ಚು ಸಮಾನರು ಇರುತ್ತಾರೆ!