(೨೦೬) ಜಗತ್ತಿನೊಂದಿಗೆ ಕ್ಯಾಮರಾಗಿರುವ ಒಂದೇ ನಿರ್ದಿಷ್ಟವಾದ ವ್ಯವಹಾರವೆಂದರೆ ಅದರ ನಿರ್ದಿಷ್ಟ ಕ್ಷಣವೊಂದನ್ನು ಭಾಗಶಃವಾಗಿಯಷ್ಟೇ ಹಿಡಿದಿರಿಸುವುದು ಮತ್ತು ಅದನ್ನು ಭೂತಕಾಲಕ್ಕೆ ತಳ್ಳಿಬಿಡುವುದು. ಮಿಕ್ಕಂತೆ ಛಾಯಾಚಿತ್ರದಲ್ಲಿ ಸೆರೆಹಿಡಿಯಲಾಗದಷ್ಟು ವೇಗಗತಿಯಲ್ಲಿರುವುದನ್ನು ಮತ್ತು ಸದಾ ಭವಿಷ್ಯಕಾಲವಾಗಿಬಿಡುವುದನ್ನು ’ಜಗತ್ತು’ ಎನ್ನುತ್ತೇವೆ!
(೨೦೭) ನಾವೇನನ್ನು ಮಾಡಬಾರದು ಎಂದುಕೊಂಡಿರುತ್ತೇವೆಯೋ ಅದನ್ನು ಮಾಡಿಬಿಡುವ ವ್ಯಕ್ತಿಯನ್ನು ’ಅನುಕೂಲಸ್ಥ’ ಎನ್ನುತ್ತೇವೆ. ನಾವು ಮಾಡಲಾಗದುದನ್ನು ಮಾಡಿತೋರಿಸುವ ವ್ಯಕ್ತಿಯನ್ನಷ್ಟೇ ’ಸಾಹಸಿ’ ಎಂದು ಪರಿಗಣಿಸುವುದು.
(೨೦೮) ಬದುಕಿನ ಐಭೋಗಗಳಲ್ಲಿ ಮುಳುಗೇಳಲಾರದ ವ್ಯಕ್ತಿಯನ್ನು ಈರ್ಷ್ಯೆಯಿಂದ ನಾವು ’ಸಫಲಪೂರ್ಣವಾಗಿ ಬಾಳಿಬದುಕಿದಾತ’ ಎಂದು ಕಡೆಗಣಿಸುತ್ತೇವೆ!
(೨೦೯) ಸೋಲು ಸಫಲತೆಯ ಅಹ್ಲಾದವನ್ನು ಹೆಚ್ಚಿಸಿದರೆ ಸಾಫಲ್ಯವು ಸೋಲಿನಲ್ಲಡಗಿರುವ ನೋವನ್ನು ಮರೆತುಬಿಡುತ್ತದೆ!
(೨೧೦) ದೊರದರ್ಶನವು ಆ ಸುದ್ಧಿಯನ್ನು ಭಿತ್ತರಿಸದಿದ್ದಲ್ಲಿ ಜಗತ್ತೂ ಸಹ ಬದಲಾಗಿರುವುದೇ ಇಲ್ಲ!








