21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮

August 12, 2010 - 4:33pm
anilkumar

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!

(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ ಸಾಕಷ್ಟು ನಂಬಿಕೆ ಇಲ್ಲದಿರುವುದು!

(೧೪೮) ಆಧುನಿಕ ಮತ್ತು ಸಮಕಾಲೀನ ಬದುಕಿನ ನಡುವಣ ವ್ಯತ್ಯಾಸವೇನೆಂದರೆ, ಆಗೆಲ್ಲ ವಿಷಯಗಳ ಸಂಗ್ರಹವನ್ನು ಸುದ್ಧಿ ಎನ್ನುತ್ತಿದ್ದರು. ಈಗ ವಿಷಯಗಳನ್ನು ಸೃಷ್ಟಿಸುವುದನ್ನೇ ಸುದ್ಧಿ ಎನ್ನುತ್ತೇವೆ!

(೧೪೯) ಕಾರಿನ ಚಾಲನೆ ಮಾಡುವಾಗ ಶಿರಸ್ತ್ರಾಣ ಧರಿಸುವುದನ್ನು ಅತ್ಯುತ್ತಮ ರಕ್ಷಣಾತಂತ್ರವೆನ್ನುತ್ತೇವೆಯೇ ಹೊರತು ಅದು ನೆಮ್ಮದಿಯಲ್ಲ!

(೧೫೦) ಗಂಭೀರ ಪರಿಸ್ಥಿತಿಯೊಂದನ್ನು ಮನಃಪೂರ್ವಕವಾಗಿ ಎದುರಿಸಲು ನಿರ್ಧರಿಸಿದ ಕೂಡಲೆ ಸೋಲೆಂಬುದು, ಅದು ಬಂದಲ್ಲಿ, ಬಂದಾಗ ಮಾತ್ರ ಬರುತ್ತದೆ. ಇಲ್ಲದಿದ್ದಲ್ಲಿ ಗಂಭೀರಪರಿಸ್ಥಿತಿಯೊಂದಿಗೇ ಸೋಲೂ ಸಹ ಬಂದುಬಿಟ್ಟಿರುತ್ತದೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by raghusp on

ಚೆನ್ನಾಗಿವೆ (:-

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anilkumar on

ಥ್ಯಾಂಕ್ಸ್ ರಘು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

149) "ಕಾರಿನ ಚಾಲನೆ ಮಾಡುವಾಗ ಶಿರಸ್ತ್ರಾಣ ಧರಿಸುವುದನ್ನು ಅತ್ಯುತ್ತಮ ರಕ್ಷಣಾತಂತ್ರವೆನ್ನುತ್ತೇವೆಯೇ ಹೊರತು ಅದು ನೆಮ್ಮದಿಯಲ್ಲ"
ಇದೇನು ಹೊಸ ಕಾನೂನು? ಬೈಕಿನದ್ದು ಆಗಬೇಕಲ್ಲವೇ
148) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anilkumar on

ಪೋಗೋ ಛಾನೆಲ್ಲಿನಲ್ಲೊಂದು ಕಾರ್ಯಕ್ರಮ ನೋಡಿದ್ದೆ. ಶೂಟಿಂಗ್ ಮಾಡುತ್ತಿದ್ದೇವೆ ತಲೆ ಬಗ್ಗಿಸಿ ಹೋಗಿ ಎಂದು ಕ್ಯಾಮರವಲ್ಲದ ಕ್ಯಾಮರದಂತೆ ಕಾಣುವದನ್ನು ಪಾರ್ಕಿನಲ್ಲಿ ಹಿಡಿದು ನಾಟಕ ಮಾಡುತ್ತಿರುತ್ತಾರೆ. ಆಗ ಅಲ್ಲಿ ಹಾಯ್ದು ಹೋಗುವ ಕಾರೊಂದರೊಳಗಿನ ಚಾಲಕ ಅಚಾನಕ್ಕಾಗಿ ತಲೆಬಾಗಿಸಿ ಮುಂದೆ ಹೋಗುತ್ತಾನೆ! ಆಗ ಅನ್ನಿಸಿದ ಗಾದೆಯಿದು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಚೆನ್ನಾಗಿದೆ. ಸಿಲೋಟು ಎಂದರೆ ಸಾಮಾನ್ಯವಾಗಿ ಹೇಳಲಾಗುವ ಸ್ಲೇಟು ಅಲ್ಲವೇ? ಬಳಪ ಎಂಬ ಪದ ಬಂದಿದ್ರಿಂದ ಸ್ಲೇಟು ಎಂದು ಊಹಿಸಿದ್ದೇನೆ. ಬೇರೆ ಆದರೆ ಸಿಲೋಟು ಎಂಬುದರ ಅರ್ಥ ನನಗೆ ಗೊತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anilkumar on

ಸಿಲೋಟು ಎಂದರೆ ಸ್ಲೇಟು ಎಂಬುದು ಸರಿ. ದೇವನೂರು ಮಹಾದೇವರ ’ಒಡಲಾಳ’ದಲ್ಲಿದೆ ಈ ಪದ, ಆ ಕಥೆಯ ಮುಖ್ಯ ಭಾಗವೊಂದರಲ್ಲಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.