19
June
2013

’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!

June 21, 2010 - 12:29am
anilkumar

(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ ದಂತಕಥೆಗಳೊಳಗಿನ ಪಾತ್ರಧಾರಿಗಳು ಮಾತ್ರ ಇವೆಲ್ಲವನ್ನೂ ಅನುಭವಿಸಬೇಕಾಗಿ ಬರುತ್ತವಷ್ಟೇ!

(೧೩೨) ನಿಜದಲ್ಲಿ ಏನನ್ನು ಕಳೆದುಕೊಂಡಿದ್ದೇವೆಯೋ ಅದನ್ನು ಕಲ್ಪನೆಯಲ್ಲಿ ಪುನರ್-ಸಂಪಾದಿಸಿಕೊಳ್ಳಬಹುದು!

(೧೩೩) ದೇವನೇ ಸರಿಯಾದ ಅಡುಗೆಭಟ್ಟನೆಂದು ಅರಿತವರು ಇತರ ಪ್ರಾಣಿಗಳು. ಹಾಗೆ ತಯಾರಾದ ಊಟಕ್ಕೂ ಅಡುಗೆಯ ಮೂಲಕ ಮಸಾಲೆ ಸೇರಿಸಿ ಹೊಟ್ಟೆ ಕೆಡಿಸಿಕೊಂಡ ಒಂದೇ ಪ್ರಾಣಿ--ಮಾನವ!

(೧೩೪) ಸಣ್ಣದೊಂದು ತಪ್ಪು ಅಳತೆಮೀರಿ ಬೆಳೆವುದನ್ನು ಕೊಲೆ ಎನ್ನಬಹುದು. ದೇಹವೊಂದನ್ನು ಭೌತಿಕವಾಗಿ ಇಲ್ಲವಾಗಿಸುವ ಮೂಲಕ ಸಮಸ್ಯೆಯೊಂದನ್ನು ಕೊನೆಗಾಣಿಸಬಹುದೆಂಬ ಚಿಂತನೆಯ ಸಪಲ ಕ್ರಿಯೆಯೇ ಕೊಲೆ. ಚಿಂತನೆಯೊಂದರೆ ಕೊಲೆಯನ್ನು ಹಿಂಸೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ!

(೧೩೫) ನಾವು ಮಾಡಲಾರದ್ದನ್ನು ಮತ್ತೊಬ್ಬರು ಮಾಡಿ ತೋರಿಸಿದರೆ ಅವರಿಗೆ ದೊರಕುವ ಕೊಡುಗೆ ’ಹೊಗಳಿಕೆ’. ಬೇರೆಯವರು ಮಾಡಬಾರದ್ದನು ನಾವು ಮಾಡಿಬಿಟ್ಟು ಯಾರ ಕೈಗೂ ಸಿಕ್ಕಿಹಾಕಿಕೊಳ್ಳದಿದ್ದರೆ ನಮ್ಮಲ್ಲಿ ಉಂಟಾಗಬಹುದಾದ ಭಾವವೇ ’ಪಶ್ಚಾತ್ತಾಪ’. ನಾವು ಮಾಡಬಾರದೆಂದುಕೊಂಡದ್ದನ್ನು ಮತ್ತೊಬ್ಬರು ಮಾಡಲಾಗದೆ ಬಿಟ್ಟರೆ ಅವರ ಬಗ್ಗೆ ನಮ್ಮಲ್ಲಿ ಉದ್ಭವಿಸುವುದೇ ’ಸ್ನೇಹ’. ನಮಗೆ ಅವಕಾಶವಿದ್ದಾಗಲೂ ತಪ್ಪು ಮಾಡದೆ ಉಳಿದಲ್ಲಿ ಬೇರೆಯವರ ಪ್ರಕಾರ ನಾವು ’ಒಳ್ಳೆಯವರು’. ನಿಜದಲ್ಲಿ ಅದು ನೈತಿಕತೆಯೆಂಬ ನಮ್ಮ ಗುಣದೋಷದಿಂದ ಉದ್ಭವಿಸಿದ ಬಲಹೀನತೆ!

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಭಾಗ್ವತ on

ನಿಜದಲ್ಲಿ ಏನನ್ನು ಕಳೆದುಕೊಂಡಿದ್ದೇವೆಯೋ ಅದನ್ನು ಕಲ್ಪನೆಯಲ್ಲಿ ಪುನರ್-ಸಂಪಾದಿಸಿಕೊಳ್ಳಬಹುದು! ಈ ಮಾತು ಇಷ್ಟವಾಯಿತು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anilkumar on

ನಿಮಗೆ ಇಷ್ಟವಾದದ್ದು ಕೇಳಿ ಖುಷಿಯಾಯಿತು. ಥ್ಯಾಂಕ್ಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on

<<" ...... ನಮಗೆ ಅವಕಾಶವಿದ್ದಾಗಲೂ ತಪ್ಪು ಮಾಡದೆ ಉಳಿದಲ್ಲಿ ಬೇರೆಯವರ ಪ್ರಕಾರ ನಾವು ’ಒಳ್ಳೆಯವರು’. ನಿಜದಲ್ಲಿ ಅದು ನೈತಿಕತೆಯೆಂಬ ನಮ್ಮ ಗುಣದೋಷದಿಂದ ಉದ್ಭವಿಸಿದ ಬಲಹೀನತೆ!">>
ಒಳ್ಳೆಯತನ, ನೈತಿಕತೆ ಇವೆಲ್ಲವೂ ಬಲಹೀನತೆ ಎಂದು ಎಲ್ಲರಿಗೂ ತೋರುತ್ತದೆಯೋ ಅಥವಾ ಕೆಲವರಿಗೆ ಮಾತ್ರ ಹಾಗೆ ತೋರುತ್ತದೆಯೋ ಎನ್ನುವ ಯೋಚನೆ ಬಂತು.
ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anilkumar on

ಶಾಮಲ,
ಒಳ್ಳೆಯತನದ ಒಂದು ಕೆಟ್ಟ ಗುಣವೆಂದರೆ ಅದು ಕೆಟ್ಟವರನ್ನು ಸೃಷ್ಟಿಸಿಬಿಡುತ್ತದೆ. ಒಳ್ಳೆಯವರು ಮತ್ತು ಕೆಟ್ಟವರು ಎಂಬುದು ಎರಡು ಭಿನ್ನ ವರ್ಗವಲ್ಲ. ಒಬ್ಬರನ್ನು ಇಬ್ಬರು ಅರ್ಥಮಾಡಿಕೊಳ್ಳಲು ಇಷ್ಟಪಡುವ ಎರಡು ಕ್ರಮಗಳು. ಜೈಲಿನಲ್ಲಿರುವವರನ್ನು ಇಷ್ಟಪಡುವವರಿರುವುದಿಲ್ಲವೆ? ನಾಯಕರನ್ನು ದ್ವೇಷಿಸುವವರಿಲ್ಲವೆ? ಆದ್ದರಿಂದ ಒಳ್ಳೆಯತನವೆಂಬುದೇ ’ರೆಲೆಟಿವ್’ ಎಂಬುದು ನನ್ನ ಭಾವನೆ. ಆದರೂ ಒಂದು ಆಶಾವಾದವಿದೆ. ಇನ್ನೊಬ್ಬರು ನಾವು ಮಾಡಿದ ಕೆಲಸಕ್ಕೆ ಕೆನ್ನೆಗೆ ಬಾರಿಸಿದಾಗಲೂ, ನಾವು ಮಾಡಿದ್ದು ಸರಿ ಹಾಗೂ ನಿಸ್ವಾರ್ಥದಿಂದ ಕೂಡಿತ್ತು ಎನ್ನಿಸಿದಲ್ಲಿ ನಾವು ಒಳ್ಳೆಯವರು--ನಮ್ಮ ಪ್ರಕಾರ.
:-) ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ೆಅನಿಲಕುಮಾರರೇ,
{{ಚಿಂತನೆಯೊಂದರೆ ಕೊಲೆಯನ್ನು ಹಿಂಸೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ!}} ನಿಮ್ಮ ಈ ಮಾತಿನಂತೆಯೇ ಕೆಲವರ ಚಿಂತನೆಗಳೂ ಕೊಲೆಗಳಿಗೆ ಕಾರಣವಾಗುತ್ತವೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.