19
June
2013

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧

May 28, 2010 - 4:16pm
anilkumar

(೫೧) ಕಾಯುವುದೆಂದರೆ ಅದೊಂದು ಹಿಂಸೆ. ಏಕೆಂದರೆ ಅದು ಬಂದಾಗ ’ಕಾಯುವ’ ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ!

(೫೨) ಜಗತ್ತಿನ ಬಗ್ಗೆ ಎಂದಿಗೂ ಅಚ್ಚರಿಪಡಬೇಡಿ. ಅದೆಷ್ಟು ತಿಕ್ಕಲು ಎಂದು ತಿಳಿಯಬೇಕಾದರೆ ಕನ್ನಡಿ ನೋಡಿಕೊಳ್ಳಿ ಸಾಕು!

(೫೩) ’ಶೂನ್ಯ’ ಎಂಬ ನಿರಂತರವಾಗಿ ಪ್ರಸಾರವಾಗುವ, ನಿರಂತರ ಮೆಗಾಸೀರಿಯಲ್ಲಿನ ನಡುವಿನ ’ಕ್ಷಣಿಕ ವಿರಾಮವನ್ನು’ ಬದುಕು ಎನ್ನುತ್ತೇವೆ. ಈ ಸತ್ಯವನ್ನು ನಂಬಲಿಚ್ಛಿಸದವರು ದೇವರು, ತೀರ್ಥಯಾತ್ರೆ, ಮೋಕ್ಷ, ದೈಹಿಕ ವಾಂಛೆ ಮತ್ತು ಮ್ಯಾಕ್ ಡೋನಾಲ್ಡ್ ಪಿಝ್ಜ ಮುಂತಾದ ಜಾಹಿರಾತನ್ನು ಹೆಚ್ಚು ಹೆಚ್ಚು ಅನುಭವಿಸಲಿಚ್ಛಿಸುತ್ತಾರೆ.

(೫೪) ನೋವೆಂಬುದು ನೋವಿನ ಭಯದಲ್ಲಿದೆ. ಸತ್ತವರಿಗಾಗಿ ನಾವು ಅಳುತ್ತೇವೆಯೇ ಹೊರತು ಸ್ವತಃ ಅವರು ದುಃಖಿಸುವುದಿಲ್ಲ!

(೫೫) ನಿಶ್ಚಿತ ಹಾದಿಯೊಂದನ್ನು ಅನುಸರಿಸದೆ ಮಾತನಾಡುವವರನ್ನು ಹುಚ್ಚರು ಅಥವ ಮೇಧಾವಿಗಳೆನ್ನುತ್ತೇವೆ. ನಿಶ್ಚಿತ, ನಿರೀಕ್ಷಿತ ಮಾತುಗಳನ್ನು ಅನುಸರಿಸುವವರನ್ನು ಏರ‍್ಪೋರ್ಟ್, ರೇಲ್ವೆ ಮತ್ತು ಬಸ್‍ಸ್ಟಾಪ್‍ಗಳಲ್ಲಿನ ಸುದ್ಧಿವಾಹಕರೆನ್ನುತ್ತೇವೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vasanth on

ತುಂಬಾ ಚೆನ್ನಾಗಿದೆ ಸಾರ್. ಈ ತರ ಗಾದೆಗಳನ್ನು ಓದಿ ಬಹಳ ದಿನಗಳಾಗಿತ್ತು ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anilkumar on

ವಸಂತ್, ನಿಮಗೆ ಇಷ್ಟವಾದುದಕ್ಕೆ ನನಗೆ ಖುಷಿಯಾಯಿತು. ಧನ್ಯವಾದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.