ಅರ್ಧ ಚಂದಿರ
ಇಂದು ಸಂಜೆ ಸ್ನೇಹಿತರನ್ನು ಭೇಟಿ ಮಾಡಲು ಜಯನಗರಕ್ಕೆ ಹೋಗಿದ್ದೆ. ಅಲ್ಲಿಂದ ಮನೆಗೆ ಹೊರಡುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು.
ಮನೆಗೆ ಬರುತ್ತಿದ್ದಾಗ ಆಗಸದ ಕಡೆ ಕಣ್ಣು ಹಾಯಿಸಿದೆ. ನೋಡಿದರೆ, ಅರ್ಧ ಚಂದಿರ ಆಕಾಶದಲ್ಲಿ ಕಾಣಿಸಿತು.
ಮನೆಗೆ ಬಂದಾಗ ಹನ್ನೊಂದು ಘಂಟೆ ಮೂವತ್ತು ನಿಮಿಷವಾಗಿತ್ತು. ಅಮ್ಮ ನನಗಾಗಿ ಕಾಯುತ್ತಿದ್ದರು.
ಬಂದೊಡನೆಯೇ ಕ್ಯಾಮೆರಾ ತೆಗೆದುಕೊಂದು ಆಚೆ ಹೋಗಿ ನೋಡಿದಾಗ, ಚಂದಿರ ಈ ರೀತಿ ಇದ್ದ.
- anil.ramesh's blog
- Login or register to post comments
- 535 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಅರ್ಧ ಚಂದಿರ
ಸಕ್ಕತ್ತ್ ಅನಿಲ್ :)
ರಾಕೇಶ್ ಶೆಟ್ಟಿ :)
ಉ: ಅರ್ಧ ಚಂದಿರ
ನನ್ನಿ ರಾಕೇಶ :)
-ಅನಿಲ್.
ಉ: ಅರ್ಧ ಚಂದಿರ
ಒಳ್ಳೆ ಟ್ಯೆಮಿಂಗ್ ಅನಿಲ್
ಇಂತಹ ಒಳ್ಳ್ಯೆಯ ಚಿತ್ರ ತೋರಿಸಿದ್ದಕ್ಕೆ ಧನ್ಯವಾದಗಳು.
:)
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಉ: ಅರ್ಧ ಚಂದಿರ
ನನ್ನಿ ಅರವಿಂದ್.
-ಅನಿಲ್.
ಉ: ಅರ್ಧ ಚಂದಿರ
ಚಿತ್ರ ಚೆನ್ನಾಗಿದೆ ಅನಿಲ್.
ಕ್ಯಾಮೆರಾ ಅನ್ನು ಹೇಗೆ configure ಮಾಡಿದ್ರಿ ಚಿತ್ರ ತೆಗೆಯಲು?
ಉ: ಅರ್ಧ ಚಂದಿರ
ನಂದಕುಮಾರ್,
ತುಂಬಾ ಧನ್ಯವಾದ.
>>ಕ್ಯಾಮೆರಾ ಅನ್ನು ಹೇಗೆ configure ಮಾಡಿದ್ರಿ ಚಿತ್ರ ತೆಗೆಯಲು?
Tv ಮೋಡ್.
ಎಕ್ಸ್ಪೋಶರ್ - 1/60s,
ಅಪೆರ್ಚರ್ - f/4.8,
ISO - 200
ಈ ಸೆಟ್ಟಿಂಗ್ ಉಪಯೋಗಿಸಿ ಈ ರೀತಿಯ ಚಿತ್ರ ತೆಗೆದೆ.
-ಅನಿಲ್.
ಉ: ಅರ್ಧ ಚಂದಿರ
TV mode ಎಲ್ಲ ಕ್ಯಾಮೆರಗಳಲ್ಲಿ ಇರುವುದಿಲ್ಲ ಅನ್ನಿಸುತ್ತದೆ?
Optical zoom ಎಷ್ಟು ಇತ್ತು?
ಉ: ಅರ್ಧ ಚಂದಿರ
zoom ಮಾಡ್ಲಿಲ್ಲ.
ಎಡಿಟ್ ಮಾಡೋವಾಗ ಕ್ರಾಪ್ ಮಾಡ್ದೆ.
-ಅನಿಲ್.
ಉ: ಅರ್ಧ ಚಂದಿರ
ಮಾಹಿತಿಗಾಗಿ ಧನ್ಯವಾದಗಳು ಅನಿಲ್.
ಉ: ಅರ್ಧ ಚಂದಿರ
:)
-ಅನಿಲ್.
ಉ: ಅರ್ಧ ಚಂದಿರ
ವಾಹ್ ! ಸಕ್ಕತ್ತಾಗಿದೆ ನಿಮ್ಮ ಚಿತ್ರ ಅನಿಲ್ .
ನಿಮ್ಮವ
ಮಧುಸೂದನ್ ಗೌಡ
ಉ: ಅರ್ಧ ಚಂದಿರ
ನನ್ನಿ ಮಧು.
-ಅನಿಲ್.
ಉ: ಅರ್ಧ ಚಂದಿರ
ಮಧ್ಯರಾತ್ರಿಯ ಅರ್ಧ ಚಂದಿರ ಚೆನ್ನಾಗಿದ್ದಾನೆ. ಝೂಮ್ ಮಾಡಿ, ಇನ್ನಷ್ಟು ಕ್ರಾಪ್ ಮಾಡಿದ್ದರೆ ಚಂದ್ರ ಇನ್ನಷ್ಟು ಸ್ಪಷ್ಟವಾಗುತ್ತಾನೆ ಅನಿಸುತ್ತದೆ. ಇವತ್ತು ರಾತ್ರಿ ಪ್ರಯತ್ನಿಸಿ ನೋಡಿ.
- ಚಾಮರಾಜ ಸವಡಿ
http://chamarajsavad...
ಉ: ಅರ್ಧ ಚಂದಿರ
ಖಂಡಿತ ಪ್ರಯತ್ನ ಪಡುವೆ.
ಸಲಹೆಗೆ ಮತ್ತು ಪ್ರತಿಕ್ರಿಯೆಗೆ ಥ್ಯಾಂಕ್ಸ್. :)
-ಅನಿಲ್.
ಉ: ಅರ್ಧ ಚಂದಿರ
ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ನಿಮ್ಮ ಹೊಸ ವರ್ಷದ ನಿರ್ಣಯ ಅಗಿರಲಿಲ್ವೆ? :)
*ಅಶೋಕ್
ಉ: ಅರ್ಧ ಚಂದಿರ
ಹೌದು.
ಆದರೆ, ಅರ್ಧ ಚಂದಿರನನ್ನು ನೋಡಿದ ಮೇಲೆ, ನಿದ್ರೆ ಹಾರಿ ಹೋಯ್ತು... ;)
-ಅನಿಲ್.
ಉ: ಅರ್ಧ ಚಂದಿರ
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ...ಹಾಡು ನೆನಪಿಗೆ ಬಂತಾ ಅನಿಲ್,
ಚಿತ್ರ ಬಾಳ ಚೊಲೊ ಬಂದೈತಿ...ನನ್ನಿ.
ನಿಮ್ಮವ,
ಗಿರೀಶ ರಾಜನಾಳ
ಊದುದು ಕೊಟ್ಟು ಬಾರಿಸುದು ತಗೊಂಡ್ರಂತ!!!
ಉ: ಅರ್ಧ ಚಂದಿರ
ಗಿರೀಶ್,
ಪ್ರತಿಕ್ರಿಯೆಗೆ ನನ್ನಿ. :)
ಚಿತ್ರ ಕ್ಲಿಕ್ಕಿಸುವ ಸಮಯದಲ್ಲಿ ಹಾಡು ನೆನಪಾಗ್ಲಿಲ್ಲ...
ಈ ಹಾಡನ್ನು ನೆನಪಿಸಿದ್ದಕ್ಕೆ ನಿಮಗೆ ಮತ್ತೊಮ್ಮೆ ನನ್ನಿ :)
-ಅನಿಲ್.
ಉ: ಅರ್ಧ ಚಂದಿರ
ಹಲೋ ಅನೀಲ್ ನಿಮ್ಮ ಚಿತ್ರ ಸೂಪರ್ ಡೂಪರ್ ಹಿಟ್ ಆಗಿದೆ ;)
ಓಟ್ಟಿನಲ್ಲಿ ಚಿತ್ರ ಸೂಪರ್
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
ಉ: ಅರ್ಧ ಚಂದಿರ
ಹಂಗಾ?
ಥ್ಯಾಂಕ್ಸ್.
-ಅನಿಲ್.
ಉ: ಅರ್ಧ ಚಂದಿರ
ಅನಿಲ್ ಅವರೇ,
ಚಿತ್ರ ಚೆನ್ನಾಗಿದೆ!
ಅಮ್ಮ ಎದ್ದೇ ಇದ್ದುದರಿಂದ ಬಹುಶ: ನಿಮ್ಮ ಊಟಕ್ಕೆ "ಅರ್ಧಚಂದ್ರ" ಆಗಲಿಲ್ಲ ಅನ್ಸತ್ತೆ :)
ಶಾಮಲ
ಉ: ಅರ್ಧ ಚಂದಿರ
ಶಾಮಲ/ಶ್ಯಾಮಲ (ಇವೆರಡರಲ್ಲಿ ಯಾವುದು ಸರಿ?) ಅವರೆ,
ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
>>ಅಮ್ಮ ಎದ್ದೇ ಇದ್ದುದರಿಂದ ಬಹುಶ: ನಿಮ್ಮ ಊಟಕ್ಕೆ "ಅರ್ಧಚಂದ್ರ" ಆಗಲಿಲ್ಲ ಅನ್ಸತ್ತೆ
ಇಲ್ಲ. ಊಟಕ್ಕೆ ಅರ್ಧಚಂದ್ರ ಆಗಲಿಲ್ಲ.
ಈಗಲೂ ನಾನು ಬರುವುದು ತಡವಾದರೆ, ಅಮ್ಮ ಊಟ ಮಾಡದೆ ನನಗೋಸ್ಕರ ಕಾಯ್ತಿರ್ತಾರೆ.
ನನಗೋಸ್ಕರ ಊಟಕ್ಕೆ ಕಾಯಬೇಡ ಅಂತ ಎಷ್ಟು ಹೇಳಿದ್ರೂ ಕೇಳೋದೇ ಇಲ್ಲ...
-ಅನಿಲ್.
ಉ: ಅರ್ಧ ಚಂದಿರ
ಅನಿಲ್ ರಮೇಶ್ ಅವರೇ,
ಶಾಮಲ ನನ್ನ ಹೆಸರಲ್ಲ - ಬರೀ online ID ಅಷ್ಟೆ. ನನ್ನ ಹೆಸರಿನ ಕೆಲವು ಅಕ್ಷರಗಳನ್ನು ತೆಗೆದುಕೊಂಡು ಈ ID ಮಾಡಿಕೊಂಡಿದ್ದೇನೆ. ಒಂದು ವೇಳೆ ನನ್ನ ಹೆಸರೇ ಶ್ಯಾಮಲಾ ಆಗಿದ್ದಿದ್ದರೆ, ಸ್ವಲ್ಪ ಮಟ್ಟಿಗೆ ಸಂಸ್ಕೃತ ಭಾಷೆಯ ಗಂಧವೂ ಇರುವುದರಿಂದ ಶ್ಯಾಮಲಾ ಎಂದೇ ಬರೆಯುತ್ತಿದ್ದೆ.
ಇರಲಿ, ನಿಮ್ಮ ಊಟಕ್ಕೆ 'ಅರ್ಧ ಚಂದ್ರ' ಆಗಲಿಲ್ಲವಲ್ಲ, ಸಂತೋಷ! ಅಮ್ಮಂದಿರೆಲ್ಲ ಹಾಗೇನೇ :)
ಶಾಮಲ
ಉ: ಅರ್ಧ ಚಂದಿರ
ಅನಿಲ್
ನಿಮ್ಮ ಫೋಟೋ ನೋಡಿದ ಮೇಲೆ ಚಂದ್ರನ್ನ ಮತ್ತೆ ಮತ್ತೆ ನೋಡ್ಬೇಕು ಅನ್ನಿಸ್ತ ಇದೆ, ಇವಾಗ ಚಂದ್ರ ಫುಲ್ ಶೈನಿಂಗ್ ಆಗ್ತ ಇದ್ದಾನೆ, ಇನ್ನೊಂದು ಫೋಟೋ ತೆಗೆದು ಅಪ್ಲೋಡ್ ಮಾಡಿ, ಕಾಯ್ತಾ ಇರ್ತೀನಿ :)
ರಾಕೇಶ್ ಶೆಟ್ಟಿ :)
ಎಲ್ಲರೊಳಗೊಂದಾಗು - ಮಂಕು ತಿಮ್ಮ
ಉ: ಅರ್ಧ ಚಂದಿರ
ಹು.
ಹುಣ್ಣಿಮೆಯ ದಿನದಂದು...
-ಅನಿಲ್.