ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನನ್ನ ಮುದ್ದಿನ ಸೊಸೆ.

ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು.
ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು.

ಅಮ್ಮಾ! 

 

ನಂತರ ಹಾಲು ಕುಡಿದು ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ನೋಡುತ್ತಿದ್ದಳು. ಆಗ ಸೆರೆಹಿಡಿದ ಚಿತ್ರ ಇದು. 

 

 

ಹಾಸಿಗೆಯ ಮೇಲೆ ಮಲಗಿ ಬೇಜಾರಾಯ್ತೇನೋ?
ಅಮ್ಮನ ಮಡಿಲಲ್ಲಿ ಕುಳಿತಳು.

ಆಗ ಸೆರೆ ಹಿಡಿದ ಚಿತ್ರ ಇದು.  

 

 

ಯಾರಿದು? ನನ್ನನ್ನೇಕೆ ದುರುಗುಟ್ಟಿಕೊಂಡು ನೋಡುತ್ತಿದ್ದಾರೆ?

 

 

ನೀ ಹಿಂಗ ನೋಡಬ್ಯಾಡ ನನ್ನ. ನಾಚಿಕೆಯಾಗುವುದು.

  

 

ನನಗೆ ನಿದ್ದೆ ಬರ್ತಿದೆ. Disturb ಮಾಡ್ಬೇಡಿ. ಆಯ್ತಾ?

 

ಅಂದಹಾಗೆ, ಇವಳಿಗೆ ಈಗ ನಾಲ್ಕು ತಿಂಗಳು. ಇದೇ ತಿಂಗಳ ೨೩ರಂದು ಇವಳಿಗೆ "ನಾಮಕರಣ".

ಏನು ಹೆಸರಿಟ್ಟೆವು ಎಂದು ಆಮೇಲೆ ಹೇಳುವೆ.

 

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನನ್ನ ಮುದ್ದಿನ ಸೊಸೆ.

asuhegde's picture

ಮಕ್ಕಳ ಕಣ್ಣುಗಳೇ ಮಾತಾಡುತ್ತಿವೆ ಅನ್ನಿಸುತ್ತದೆ.
ನಿಮ್ಮ ಸೊಸೆ ಸುಂದರಿ
ಚಿತ್ರಗಳು ಸುಂದರ
ಸುಂದರವಾದ ಹೆಸರನ್ನೇ ಇಡಿ.
ಇಪ್ಪತ್ತಮೂರಕ್ಕೆ ಅವಳ ನಾಮಕರಣ
ಸಂಪದಿಗರಿಗೆ ಇಲ್ಲವೇ ಆಮಂತ್ರಣ?
:-)

ಉ: ನನ್ನ ಮುದ್ದಿನ ಸೊಸೆ.

anil.ramesh's picture

>>ಇಪ್ಪತ್ತಮೂರಕ್ಕೆ ಅವಳ ನಾಮಕರಣ
ಸಂಪದಿಗರಿಗೆ ಇಲ್ಲವೇ ಆಮಂತ್ರಣ?

ಮನೆಮಟ್ಟಿಗೆ ಇವಳ ನಾಮಕರಣ
ಹಾಗಾಗಿ ಯಾರಿಗೂ ಇಲ್ಲ ಆಮಂತ್ರಣ. :)

-ಅನಿಲ್.

ಉ: ನನ್ನ ಮುದ್ದಿನ ಸೊಸೆ.

bhavanilokesh mandya's picture

ನಿಮ್ಮ ಪುಟ್ಟ ಪುಟಾಣಿ ಸೊಸೆಗೆ ನನ್ನ ಪ್ರೀತಿಯ ನೆನಪುಗಳು. ಚಿತ್ರಗಳು ನಿಮ್ಮ ಸೊಸೆಯಷ್ಟೇ ಮುದ್ದಾಗಿವೆ ಅನಿಲ್...

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಭವಾನಿ,
ತುಂಬಾ ಧನ್ಯವಾದಗಳು.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

roopablrao's picture

ಮಗುವನ್ನುನೋಡುತ್ತಿದ್ದರೆ ಪ್ರೀತಿ ಉಕ್ಕಿ ಹರಿಯುತ್ತಿದೆ.
ನಿಮ್ಮ ಸೊಸೆ ತುಂಬಾ ಚೆನ್ನಾಗಿದ್ದಾಳೆ

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಧನ್ಯವಾದಗಳು ರೂಪ.

>>ಮಗುವನ್ನು ನೋಡುತ್ತಿದ್ದರೆ ಪ್ರೀತಿ ಉಕ್ಕಿ ಹರಿಯುತ್ತಿದೆ.
ಮಕ್ಕಳೇ ಹಾಗೆ ಅಲ್ವಾ? ಪ್ರೀತಿಯ ಪ್ರತೀಕ. :)

-ಅನಿಲ್.

ಉ: ನನ್ನ ಮುದ್ದಿನ ಸೊಸೆ.

palachandra's picture

ಚೆಂದ ಇದ್ಲು

ಉ: ನನ್ನ ಮುದ್ದಿನ ಸೊಸೆ.

anil.ramesh's picture

ನನ್ನಿ ಪಾಲ.

-ಅನಿಲ್.

ಉ: ನನ್ನ ಮುದ್ದಿನ ಸೊಸೆ.

harshab's picture

ಮುದ್ದು ಪಾಪು :)

ಉ: ನನ್ನ ಮುದ್ದಿನ ಸೊಸೆ.

anil.ramesh's picture

:)

-ಅನಿಲ್

ಉ: ನನ್ನ ಮುದ್ದಿನ ಸೊಸೆ.

vinutha.mv's picture

Chooo Cuuute! ತುಂಬಾನೇ ಮುದ್ದಾಗಿದೆ.
ಅನಿಲ್, ಮನೆಯಲ್ಲಿ, ಮಗುವಿಗೆ ದೃಷ್ಟಿ ತೆಗೆಯಲು ಹೇಳಿ :)

ಉ: ನನ್ನ ಮುದ್ದಿನ ಸೊಸೆ.

anil.ramesh's picture

ವಿನುತ,
ನನ್ನ ಸೊಸೆಯನ್ನು ಮೆಚ್ಚಿದ್ದಕ್ಕೆ ನನ್ನಿ. :)

>>ಮನೆಯಲ್ಲಿ, ಮಗುವಿಗೆ ದೃಷ್ಟಿ ತೆಗೆಯಲು ಹೇಳಿ
ದೊಡ್ಡಮ್ಮನಿಗೆ ಹೇಳಾಯ್ತು. ಇಂದು ರಾತ್ರಿ ದೃಷ್ಟಿ ತೆಗೆಯುವುದಾಗಿ ಹೇಳಿದ್ದಾರೆ.

-ಅನಿಲ್.

ಉ: ನನ್ನ ಮುದ್ದಿನ ಸೊಸೆ.

nkumar's picture

ಮುದ್ದಾಗಿದೆ ಮಗು. "ಮುದ್ದಿನ ಗಿಣಿಯೆ ಬಾರೋ.." ಹಾಡು ನೆನಪಾಯಿತು :)

ಉ: ನನ್ನ ಮುದ್ದಿನ ಸೊಸೆ.

anil.ramesh's picture

ನಂದ,
ಮಗುವನ್ನು ಮೆಚ್ಚಿ ಹಾಡನ್ನು ನೆನಪಿಸಿದ್ದಕ್ಕೆ ತುಂಬಾ ಧನ್ಯವಾದ. :)

-ಅನಿಲ್.

ಉ: ನನ್ನ ಮುದ್ದಿನ ಸೊಸೆ.

Seetharmorab's picture

ಅನಿಲ್...
ಚಿತ್ರಗಳೆಲ್ಲಾ ಚನ್ನಾಗಿ ಬಂದಿದೆ,
ಕೊನೆಯ ಚಿತ್ರ ತುಂಬಾ ಮುದ್ದಾಗಿದೆ.

ಸೀತ ಆರ್. ಮೊರಬ್

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಸೀತಾ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

>>ಕೊನೆಯ ಚಿತ್ರ ತುಂಬಾ ಮುದ್ದಾಗಿದೆ.
ವೈಯಕ್ತಿಕವಾಗಿ ನನಗೆ ಮೂರನೆಯ ಚಿತ್ರ ತುಂಬಾ ಹಿಡಿಸಿತು.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

Ananatha's picture

ಮುದ್ದಿನ ಸೊಸೆಯ ಮುದ್ದಿನ ಚಿತ್ರಗಳು..ಅನಿಲ್

ಎಲ್ಲವೂ ಮಕ್ಕಳ ಫೋಟೋ ಆಲ್ಬುಮ್ ಗೆ...!

ವ೦ದನೆಗಳು..

ಅನ೦ತ್

ಉ: ನನ್ನ ಮುದ್ದಿನ ಸೊಸೆ.

anil.ramesh's picture

ನನ್ನಿ.

>>ಎಲ್ಲವೂ ಮಕ್ಕಳ ಫೋಟೋ ಆಲ್ಬುಮ್ ಗೆ
ಫೋಟೋಗಳ copyrights reserved.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

Santhu's picture

ಚಿತ್ರಗಳು ತುಂಬಾ ಚೆನ್ನಾಗಿವೆ, ಅನಿಲ್.
ನಿಮ್ಮ ಸೊಸೆ ಮುದ್ದಾಗಿದ್ದಾಳೆ.
ಮೇ ತಿಂಗಳ ಮೊದಲವಾರದಲ್ಲಿ ಮೊದಲ ಬಾರಿಗೆ ನಾನು ’ಮಾಮ’ನಾಗ್ತಾ ಇದ್ದೇನೆ. :)

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಸಂತೋಷ್,
ತುಂಬಾ ಧನ್ಯವಾದ.

>>ಮೇ ತಿಂಗಳ ಮೊದಲವಾರದಲ್ಲಿ ಮೊದಲ ಬಾರಿಗೆ ನಾನು ’ಮಾಮ’ನಾಗ್ತಾ ಇದ್ದೇನೆ
ಮುಂಚಿತವಾಗಿ ಅಭಿನಂದನೆಗಳು.

ನಾನು ಮೂರನೆಯ ಬಾರಿ ’ಮಾಮ’ನಾಗಿದ್ದು.

ನಮ್ಮ ದೊಡ್ಡಪ್ಪನಿಗೆ ಮೂರು ಹೆಣ್ಣುಮಕ್ಕಳು.
ಸೋದರಳಿಯನಿಗೆ ಈಗ ೧೨ ವರ್ಷ.
ಇನ್ನೊಬ್ಬ ಸೋದರಸೊಸೆಗೆ ಈಗ ೫ ವರ್ಷ.
ಇವಳಿಗೆ ೪ ತಿಂಗಳು.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

shaamala's picture

(ಭಾವಿ) ಮಾಮಂದಿರಿಗೆಲ್ಲ ಅಭಿನಂದನೆಗಳು, ಮುದ್ದಿನ ಸೊಸೆ ತುಂಬಾ ಮುದ್ದಾಗಿದಾಳೆ. ನನ್ ತಮ್ಮಾನೂ ಆನ್ಲೈನ್ ಬಂದಾಗಲೆಲ್ಲ ನನ್ ಮುದ್ದಿನ ಸೊಸೇರು ಹೇಗಿದಾರೆ ಅಂತಾನೆ ಶುರು ಮಾಡ್ತಾನೆ :)
ಶಾಮಲ

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಶಾಮಲ,
ನಿಮ್ಮ ಅಭಿನಂದನೆಗಳಿಗೆ :) ಮತ್ತು ನನ್ನ ಸೊಸೆಯನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

-ಅನಿಲ್.

ಉ: ನನ್ನ ಮುದ್ದಿನ ಸೊಸೆ.

savithasr's picture

ಅನಿಲ್.
ಪಾಪು ಮುದ್ದಾಗಿದೆ :) ಫೋಟೋ ನೋಡಿ ಖುಷಿಯಾಯ್ತು :)
-ಸವಿತ

ಉ: ನನ್ನ ಮುದ್ದಿನ ಸೊಸೆ.

manjunathams's picture

ಚಿತ್ರಗಳಲ್ಲೇ ಕವನ ಬರೆದಂತಿದೆ!

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಮಂಜುನಾಥ್,
ನನ್ನಿ.

ಅಂದಹಾಗೆ, ಕವನ ಇಷ್ಟ ಆಯ್ತಾ?

-ಅನಿಲ್

ಉ: ನನ್ನ ಮುದ್ದಿನ ಸೊಸೆ.

manjunathams's picture

ಕವನ ಅಂದಮೇಲೆ ಇಷ್ಟವಾಗದೆಯೆ ಇರುತ್ತಾ? ಅನಿಲ್, ತುಂಬಾ ಸೊಗಸಾಗಿವೆ ನೀವು ರಚಿಸಿದ ಕವನ.

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಸವಿತ,
ನಿಮ್ಗೆ ಖುಷಿ ಆಗಿದ್ ತಿಳ್ದು ನಂಗೂ ಖುಷಿ ಆಯ್ತು. :)

-ಅನಿಲ್

ಉ: ನನ್ನ ಮುದ್ದಿನ ಸೊಸೆ.

Shamala's picture

ಅಮ್ಮನ ಮಡಿಲಲ್ಲಿರುವ ಪುಟ್ಟ ಪಾಪು ತುಂಬಾ ಮುದ್ದಾಗಿದ್ದಾಳೆ. ಅಭಿನಂದನೆಗಳು ಮೂರನೆಯ ಬಾರಿ ’ಮಾಮ’ ನಾಗಿದ್ದಕ್ಕೆ !

ಶ್ಯಾಮಲ

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಶ್ಯಾಮಲ,
ನನಗೂ ಅದೇ ಚಿತ್ರ ಇಷ್ಟ ಆಯ್ತು.

ಧನ್ಯವಾದ.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

kamalap09's picture

ಅನಿಲ್,

ಭಾವಚಿತ್ರಗಳು ಅತಿ ಸುಂದರವಾಗಿದೆ. ನೋಡ್ತಿದ್ರೆ ಮುದ್ದಾಡಬೇಕೆನ್ನಿಸುತ್ತಿದೆ. ಎಲ್ಲ ಚಿತ್ರಗಳು ಇಷ್ಟವಾದವು. ಅದರಲ್ಲಿ ಎರಡನೆಯ ಹಾಗೂ ಮೂರನೆಯ ಚಿತ್ರಗಳು ತುಂಬಾ ಇಷ್ಟವಾದವು. ಈ ಭಾವಚಿತ್ರಗಳನ್ನು ನೋಡುತ್ತ ನನಗೆ ನೆನಪಾಯಿತು ಈ ಭಾವಗೀತೆ "ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...... ನಿನ್ನ ರಕ್ಷೆಗೂಡಲ್ಲಿ ಭೆಚ್ಚಗೆ"

ಕಮಲ

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಕಮಲ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

>>"ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...... ನಿನ್ನ ರಕ್ಷೆಗೂಡಲ್ಲಿ ಭೆಚ್ಚಗೆ"

ಹಾಡಿನ ಸಾಹಿತ್ಯ ಇಲ್ಲಿದೆ ನೋಡಿ.

ಅಮ್ಮ - ಸುಬ್ಬಾ ಭಟ್ಟರ ಮಗಳೇ ಕವನ ಸಂಕಲನ - ಬಿ. ಆರ್. ಲಕ್ಷ್ಮಣ್ ರಾವ್
------------------------------------------------------------------------------
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

ಉ: ನನ್ನ ಮುದ್ದಿನ ಸೊಸೆ.

kamalap09's picture

ಹಾಡಿನ ಸಾಹಿತ್ಯಕ್ಕಾಗಿ ಧನ್ಯವಾದಗಳು. ಆ ಸಾಲುಗಳನ್ನು ಪ್ರತಿಕ್ರಿಯೆಯಲ್ಲಿ ಬರೆದಾಗ ನನಗು ಈ ಹಾಡಿನ ಸಾಹಿತ್ಯ ಹಾಕಬೇಕೆನ್ನಿಸಿತು. ಆದರೆ ಟೈಪ್ ಮಾಡಲು ಸಮಯವಿಲ್ಲದ ಕಾರಣ ಹಾಕಲಿಲ್ಲ. ಅದೇನೇ ಇರಲಿ ನಿಮ್ಮ ಸೊಸೆ, ಈ ಹಾಡು ಎಲ್ಲ ಇಷ್ಟವಾಯಿತು. ನಿಮಗೆ ಇನ್ನೊಂದು ಹಾಡಿನ ಸಾಹಿತ್ಯ ಕೊಡಬೇಕಿತ್ತು. ಮನೆಯಲ್ಲು ಅಂತರ್ಜಾಲ ಇಲ್ಲದ ಕಾರಣ, ಕಚೇರಿಯಲ್ಲೂ ಕೆಲಸದ ಒತ್ತಡ, ಹಾಗಾಗಿ ಸಾಹಿತ್ಯ ಕೊಡಲಾಗಲಿಲ್ಲ. ಕ್ಷಮಿಸಿ.

ಉ: ನನ್ನ ಮುದ್ದಿನ ಸೊಸೆ.

anil.ramesh's picture

>>ನಿಮಗೆ ಇನ್ನೊಂದು ಹಾಡಿನ ಸಾಹಿತ್ಯ ಕೊಡಬೇಕಿತ್ತು. ಮನೆಯಲ್ಲು ಅಂತರ್ಜಾಲ ಇಲ್ಲದ ಕಾರಣ, ಕಚೇರಿಯಲ್ಲೂ ಕೆಲಸದ ಒತ್ತಡ, ಹಾಗಾಗಿ ಸಾಹಿತ್ಯ ಕೊಡಲಾಗಲಿಲ್ಲ. ಕ್ಷಮಿಸಿ.
ಕ್ಷಮಿಸುವಷ್ಟು ದೊಡ್ಡವನಲ್ಲ ನಾನು.
ಯಾವಾಗ ಆಗತ್ತೋ ಆಗಲೇ ಬರೀರಿ. ಪರ್ವಾಗಿಲ್ಲ. ಏನೂ Urgent ಇಲ್ಲ. :)

-ಅನಿಲ್

ಉ: ನನ್ನ ಮುದ್ದಿನ ಸೊಸೆ.

kamalap09's picture

ಅನಿಲ್,

ನಾವು ಹದಿನೇಳರಂದು ಉತ್ತರ ಭಾರತದ ಕಡೆಗೆ ಹೊರಟಿದ್ದೇವೆ. ಬರುವುದು ಸುಮಾರು ಇಪ್ಪತ್ತು ದಿನಗಳ ನಂತರ. ನಂತರ ನೀವು ಕೇಳಿದ ಹಾಡಿನ ಸಾಹಿತ್ಯವನ್ನು ಕೊಡುತ್ತೇನೆ.

ಕಮಲ

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಕಮಲ,
ಪ್ರಯಾಣ ಸುಗಮವಾಗಿರಲಿ. :)

ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು ಮರೆಯದಿರಿ.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಕಳೆದ ಗುರುವಾರ ನಾಮಕರಣವಾಯ್ತು.

ಈ ಪುಟಾಣಿಯ ಹೆಸರು ಸೃಷ್ಠಿ.

-ಅನಿಲ್

ಉ: ನನ್ನ ಮುದ್ದಿನ ಸೊಸೆ.

ananthesha nempu's picture

ಫೋಟೋಗಳು ಮುದನೀಡಿದವು,ನನ್ನ ಅಕ್ಕನ ಮಗಳು ಶರ್ವಾಣಿಯ ನೆನಪಾಯಿತು.

ಸೃಷ್ಠಿ ಅಲ್ಲ, ಸೃಷ್ಟಿ ಅಂತ ಇರಬೇಕಲ್ವಾ?

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಹೌದು,
ಟೈಪ್ ಮಾಡುವಾಗ ಆದ ತಪ್ಪು.
ಸರಿಪಡಿಸಿದ್ದಕ್ಕೆ ಥ್ಯಾಂಕ್ಸ್. :)

-ಅನಿಲ್

ಉ: ನನ್ನ ಮುದ್ದಿನ ಸೊಸೆ.

ravikh's picture

ಮುದ್ದಾದ ಮಗು (ಸೊಸೆ ;-)), ಮೆಚ್ಚುವಂತಹ ಚಿತ್ರಗಳು. ಮಕ್ಕಳ ಲೋಕವೇ ಸೂಪರ್!!

ಉ: ನನ್ನ ಮುದ್ದಿನ ಸೊಸೆ.

anil.ramesh's picture

ಮೆಚ್ಚುಗೆಗೆ ಥ್ಯಾಂಕ್ಸ್. :)

>>ಮಕ್ಕಳ ಲೋಕವೇ ಸೂಪರ್!!
ದಿಟ.

-ಅನಿಲ್