ತಲೆನೋವು
ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ್ಸುತ್ತೆ ಮಳೆ ಬರ್ತಾ ಇದೆ" ಅಂತ ಹೇಳಿ ನಕ್ಕರು. ನಾನು "ಹಾಗೇನಿಲ್ಲ, ಸ್ವಲ್ಪ ತಲೆ ನೋವು. ಅದಕ್ಕೆ ಬೇಗ ಬಂದೆ. ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಕೊಡು. ತಲೆ ನೋವು ಸರಿ ಹೋಗುತ್ತೆ" ಅಂತ ಹೇಳಿ ರೂಮಿನೊಳಗೆ ಬಂದೆ. ಅಣ್ಣ Walking ಗೆ ಹೋಗಿದ್ರು. ನಾನು ಬಂದ ಹದಿನೈದು ನಿಮಿಷದ ನಂತರ ಅವರೂ ಮನೆಗೆ ಬಂದರು... ಅವರೂ ಸಹ "ಏನು, ಈ ದಿನ ಬೇಗ ಬಂದಿದ್ದೀಯಾ? ಅದಕ್ಕೆ ಮಳೆ ಬರ್ತಿದೆ" ಅಂತ ಹೇಳಿದರು. ನಾನು "ಇಲ್ಲ ಅಣ್ಣ, ತಲೆ ನೋವು, ಅದಕ್ಕೆ ಬೇಗ ಬಂದೆ" ಅಂತ ಹೇಳಿದೆ.
ಮಳೆ ಬರುತ್ತಿದ್ದರಿಂದ ಅಣ್ಣ "ಬಿಸಿ ಬಿಸಿಯಾಗಿ ಏನಾದರೂ ಮಾಡು" ಅಂತ ಅಮ್ಮನಿಗೆ ಹೇಳಿದರು... "ಮೆಣಸಿನಕಾಯಿ ಇದೆ. ಬಜ್ಜಿ ಮಾಡ್ತೀನಿ" ಅಂತ ಹೇಳಿ ಅಡುಗೆ ಮನೆಗೆ ಹೋದರು... ನನಗೆ ತಲೆನೋವಿದ್ದ ಕಾರಣ ಕೋಣೆಯಲ್ಲಿ ಸ್ವಲ್ಪ ಹೊತ್ತು ಮಲಗಿದೆ. ಅಮ್ಮ ಒಳಗೆ ಬಂದು "ಏಳೋ, ಮುಸ್ಸಂಜೆ ಹೊತ್ತು ಮಲಗಬಾರ್ದು" ಅಂತ ಹೇಳಿದ್ರು. ನಾನು "ಸರಿ ಏಳ್ತೀನಿ" ಅಂತ ಹೇಳಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿದೆ.
ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಗಡಿಯಾರದಲ್ಲಿ ಆರು ಘಂಟೆ ಆಗಿತ್ತು... ಎದ್ದು ಮುಖ ತೊಳೆದುಕೊಂಡು, ಟಿವಿ ಹಾಕಿ ಟಾಮ್ ಅಂಡ್ ಜೆರ್ರಿ ನೋಡಲು ಕುಳಿತೆ... ಅಷ್ಠೊತ್ತಿಗೆ ಅಮ್ಮ ಮೆಣಸಿನಕಾಯಿ ಬಜ್ಜಿಯನ್ನು ತಂದರು... ಬಿಸಿಬಿಸಿಯಾದ ಮೆಣ್ಸಿನ್ಕಾಯ್ ಬಜ್ಜಿಯನ್ನು ತಿನ್ನುವ ಹೊತ್ತಿಗೆ ಬಿಸಿಬಿಸಿ ಸ್ಟ್ರಾಂಗ್ ಕಾಫಿ ತಂದಿಟ್ಟರು... ಕಾಫಿ ಕುಡಿದು ಮತ್ತೆ ಸ್ವಲ್ಪ ಹೊತ್ತು ಮಲಗಿದೆ... ಮತ್ತೆ ಎದ್ದಾಗ ಏಳು ಘಂಟೆ ನಲವತ್ತೈದು ನಿಮಿಷವಾಗಿತ್ತು... ತಲೆ ನೋವು ಮಾಯವಾಗಿತ್ತು...
ಕಂಪ್ಯೂಟರ್ ಆನ್ ಮಾಡಿ ಸಂಪದದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ಊಟ ಮುಗಿಸಿ, ನನ್ನ ತಲೆನೋವಿನ ಕತೆಯನ್ನು ಬರೆಯುವ ಹೊತ್ತಿಗೆ ರಾತ್ರಿ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು...
ಈಗ ನೀವು ನನ್ನ ತಲೆನೋವಿನ ಕತೆಯನ್ನು ಓದಿ...

- anil.ramesh ರವರ ಬ್ಲಾಗ್
- Login or register to post comments
- 292 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ತಲೆನೋವು
ಕೊನೆಯ ವಾಕ್ಯ ಬಹುಶಃ ಬೇಡವಾಗಿತ್ತು
ವೆಬ್ಲಾಗ್ ದಿನಚರಿ ಇದ್ದ ಹಾಗೇನೆ. ನಮ್ಮ ಜನ (ಕನ್ನಡದವರು) ಅದನ್ನ ಕಥೆ ಕವನಕ್ಕೆ ಬಳಸಿಕೊಳ್ತಿದಾರೆ - ಎರಡೂ ಓಕೇನೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ತಲೆನೋವು
ಆಗಾಗ ನಿಮಗೆ ತಲೆನೋವು ಬರುತ್ತಿರಲಿ. ಆಗಾಗ ಮಳೆಯೂ ಬರಲಿ. ಆಗಾಗ ಮೆಣಸಿನಕಾಯಿ ಬಜ್ಜಿಯೂ ದಕ್ಕುವಂತಾಗಲಿ. ಆಗಾಗ ಇಂತಹ ಬರಹಗಳನ್ನೂ ಬರೆಯುವಂತಾಗಲಿ.
- ಚಾಮರಾಜ ಸವಡಿ
http://chamarajsavadi.blogspot.com
ಉ: ತಲೆನೋವು
veena.
ಬರಹ ಓದಿ ಬಾಯಲ್ಲಿ ನೀರೂರಿತು. ಬಜ್ಜಿ ಮಾಡಿಕೊಡಲು ಅಮ್ಮ ಹತ್ತಿರ ಇಲ್ಲವಲ್ಲ ಅದೇ ಬೇಜಾರು.
ನೀವು ಅದೃಷ್ಟವಂತರು ಬಿಡೀಪ್ಪ. (ಅಮ್ಮ ನ ಜೊತೆಗಿರುವವರೆಲ್ಲರೂ ಅದೃಷ್ಟವಂತರೇ).