ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಹೇಗೆ ಓದಿದರೂ ಒಂದೇ!!!
ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು.
ಇಂಥಾ ಪದಗಳಿಗೆ ಏನೆಂದು ಕರೆಯುವುದು?
ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ.
ಕನಕ
ಕಿಟಕಿ
ಕಟಕ
ಕುಟುಕು
ಗುಡುಗು
ಗುನುಗು
ಚಮಚ
ಜಲಜ
ನಮನ
ನರ್ತನ
ಸರಸ
ಸಮಾಸ
ಸಮೋಸ
ಟಮೋಟ
ಕುಬೇರನಿಗೇನಿರಬೇಕು
ಗದಗ
ರಿಪೇರಿ
ವಿಕಟಕವಿ
ಮಧ್ಯಮ
ಇದೇ ರೀತಿಯ ಇನ್ನಷ್ಟು ಪದಗಳನ್ನು ಸೇರಿಸ್ತೀರಾ?

- anil.ramesh ರವರ ಬ್ಲಾಗ್
- Login or register to post comments
- 413 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೇಗೆ ಓದಿದರೂ ಒಂದೇ!!!
ನವೀನ
ಉ: ಹೇಗೆ ಓದಿದರೂ ಒಂದೇ!!!
ಧನ್ಯವಾದ ಅರವಿಂದ್
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ನಯನ
ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.blogspot.com/
ಉ: ಹೇಗೆ ಓದಿದರೂ ಒಂದೇ!!!
ಮಂಜು,
ಧನ್ಯವಾದ...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಮದ್ರಾಸಿನ ಸಿದ್ರಾಮ

ರಾಮನ ಮರಾ
ನನ್ನಿ
-ಮಾಯ್ಸ
ಉ: ಹೇಗೆ ಓದಿದರೂ ಒಂದೇ!!!
palindrome ಅಲ್ವೆ?
malayalam
ಶ್ರೀವತ್ಸ ಜೋಷಿಯವರು ಈ ಬಗ್ಗೆ ಅಂಕಣ ಬರೆದಿದ್ದ ನೆನಪು. ಸಿಗ್ತಿಲ್ಲ.
*ಅಶೋಕ್
ಉ: ಹೇಗೆ ಓದಿದರೂ ಒಂದೇ!!!
ಹೌದು ಇದು Palindrome...
ಈಗ ನೆನಪಿಗೆ ಬಂತು.
Palindrome ಗೆ ಕನ್ನಡದಲ್ಲಿ ಏನು?
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಅಶೋಕ್,
Palindrome ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದಗಳು...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ನನ್ನಿ ಮಾಯ್ಸ, ಅಲ್ಲ ಅಲ್ಲ, ಮಹೇಶ...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಸಕತ್
Lakshdeep!!
ಉ: ಹೇಗೆ ಓದಿದರೂ ಒಂದೇ!!!
ಕುಬೇರನಿಗೇನಿರಬೇಕು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹೇಗೆ ಓದಿದರೂ ಒಂದೇ!!!
ಈದಾ ಪಟ್ಟಿಯಲ್ಲಿದೆ
ನನ್ನಿ
-ಮಾಯ್ಸ
ಉ: ಹೇಗೆ ಓದಿದರೂ ಒಂದೇ!!!
@ಶ್ರೀಕಾಂತ್,
ಇನ್ನಷ್ಟು ಪದಗಳನ್ನು ಸೇರಿಸಿರಿ...
ಧನ್ಯವಾದ...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಇದಕ್ಕೆ "ದ್ವಿಮುಖಿ ಪದ" ಅಥವಾ "ದ್ವಿಮುಖಿ ಪದಗುಚ್ಛ" ಎಂದು ಕರೆಯಬಹುದು.
ಎಸ್. ಎನ್. ಗಣನಾಥ ಎಂಬುವವರು ಕೆಳಗಿನ ಕೊಂಡಿಯಲ್ಲಿ ಒಂದು ಸಣ್ಣ ಪುಸ್ತಕವನ್ನು ಸೇರಿಸಿದ್ದಾರೆ.
http://www.scribd.com/doc/2445926/Kannada-palindromes
ನನಗೆ ಹಿಡಿಸಿದ ಕೆಲವು sample ಗಳು:
ವಿಕಟಕವಿ
ವಿದೇಶೀದೇವಿ
ಸಕತ್ ಕಸ
ಸುರರರಸು
ಗೆಲಿಸದೀ ಸಲಿಗೆ
ನೀಲಿಮಾಳೇ ಮಾಲಿನೀ
ಯಮ ಸತ್ತ ಸಮಯ
ಪಕೋಡ ಬೇಕಾ ಬೇಡ ಕೋಪ
ಮನುಜನ ಹೀನ ಜನುಮ
-ಶಶಿಭೂಷಣ
ಉ: ಹೇಗೆ ಓದಿದರೂ ಒಂದೇ!!!
ವೆಂಕಟಸುಬ್ಬಯ್ಯನವರ ನಿಘಂಟಿನ ಪ್ರಕಾರ ಇದಕ್ಕೆ "ಗತಪ್ರತ್ಯಾಗತ" ಎಂದು ಹೆಸರು.
-ಶಶಿಭೂಷಣ
ಉ: ಹೇಗೆ ಓದಿದರೂ ಒಂದೇ!!!
ಸಕ್ಕತ್
ನನ್ನಿ
-ಮಹೇಶ
ಉ: ಹೇಗೆ ಓದಿದರೂ ಒಂದೇ!!!
ಶಶಿಭೂಷಣ್,
ಧನ್ಯವಾದ...
ನೀವು ಕೊಟ್ಟಿರುವ ಉದಾಹರಣೆಗಳಿಗೆ ಮತ್ತೊಮ್ಮೆ ಧನ್ಯವಾದಗಳು...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಹಿಂದುಮುಂದೊಂದೋದು=ಹೇಗೆ ಓದಿದರೂ ಒಂದೇ ಓದು. palindrome.
ಉ: ಹೇಗೆ ಓದಿದರೂ ಒಂದೇ!!!
ನನ್ನಿ...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಹಿಂಮಂಬೋಲ್
ನನ್ನಿ
-ಮಹೇಶ
ಉ: ಹೇಗೆ ಓದಿದರೂ ಒಂದೇ!!!
http://thatskannada.oneindia.in/nri/article/2005/080205palindrome2.html
*ಅಶೋಕ್
ಉ: ಹೇಗೆ ಓದಿದರೂ ಒಂದೇ!!!
ಹೀಗೇ 'ಹಿಂದುಮುಂದೊಂದೋದು' ಗಳ ಬಗ್ಗೆ ಗೂಗಲಿಸುತ್ತಿದ್ದಾಗ ಸಿಕ್ಕ ಮಾಹಿತಿ:
ದೈವಜ್ಞ ಸೂರ್ಯ ಪಂಡಿತ (೧೫೦೭-೧೫೮೮) ಎಂಬಾತ ಸಂಸ್ಕೃತದಲ್ಲಿ 'ರಾಮ ಕೃಷ್ಣ ವಿಲೋಮ ಚರಿತ' ಎಂಬ ಕಾವ್ಯ ಬರೆದಿದ್ದಾನೆ.
ಇದರ ಪ್ರತಿಯೊಂದು ಪದ್ಯದ ಎರಡನೇ ಸಾಲು ಮೊದಲನೇ ಸಾಲನ್ನು ಹಿಂದುಮುಂದು ಮಾಡಿ ಬರೆಯಲಾಗಿದೆ.
ಮೊದಲ ಸಾಲು ರಾಮನ ಕತೆಯನ್ನೂ, ಎರಡನೆಯ ಸಾಲು ಕೃಷ್ಣನ ಕತೆಯನ್ನೂ ಹೇಳುತ್ತದಂತೆ.
ಅದರ pdf ಈ ಕೆಳಗಿನ ಕೊಂಡಿಯಲ್ಲಿದೆ:
http://www.granthamandira.com/texts/ramakrsna-viloma-kavya_-_daivajna_su...
ಸಂಸ್ಕೃತ ಬಲ್ಲವರು ಓದಿ ಆನಂದಿಸಬಹುದು.(ನನಗೆ ಎರಡನೇ ಸಾಲು ಮೊದಲ ಸಾಲಿನ ಹಿಂದುಮುಂದು ಎಂಬುದಷ್ಟೇ ತಿಳಿಯಿತು
)
-ಶಶಿಭೂಷಣ
ಉ: ಹೇಗೆ ಓದಿದರೂ ಒಂದೇ!!!
ಶಶಿಭೂಷಣ್,
ಮತ್ತೊಮ್ಮೆ ನಿಮಗೂ ನನ್ನಿ...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಮತ್ತೊಮ್ಮೆ ನನ್ನಿ ಅಶೋಕ್...
-ಅನಿಲ್ ರಮೇಶ್.
ಉ: ಹೇಗೆ ಓದಿದರೂ ಒಂದೇ!!!
ಅನಿಲ್ "ನನ್ನಿ" ಅಂದರೇನು?
Lakshdeep!!
ಉ: ಹೇಗೆ ಓದಿದರೂ ಒಂದೇ!!!
ನನ್ನಿಯ ಬಗ್ಗೆ ಇಲ್ಲಿ ನೋಡಿ
ನನ್ನಿ.
-ಅನಿಲ್.
ಉ: ಹೇಗೆ ಓದಿದರೂ ಒಂದೇ!!!
ನನ್ನಿ ರಹಸ್ಯ ತಿಳಿದು ಸಂತೋಶವಾಯ್ತು. ಇದರ ಹಿಂದೆ ಇಷ್ಟು ವಿಷಯ ಅಡಗಿದೆಯೆಂದು ಎಂದೂ ಊಹಿಸಿರಲಿಲ್ಲ.
ನನ್ನಿ ಅನಿಲ್.
Lakshdeep!!
ಉ: ಹೇಗೆ ಓದಿದರೂ ಒಂದೇ!!!
ಕನ್ನಡದ "ಗಪ್ರಗ"*ಗಳ ಲೇಖನದೊಂದಿಗೆ ವಿಜಯಕರ್ನಾಟಕದಲ್ಲಿ ’ಪರಾಗಸ್ಪರ್ಶ’ ಅಂಕಣ ಆರಂಭವಾದದ್ದು! (ಭಾನುವಾರ ನವೆಂಬರ್ ೪, ೨೦೦೭). ಆ ಲೇಖನವನ್ನು ಇಲ್ಲಿ ಸಂಗ್ರಹಿಸಿಟ್ಟಿದ್ದೇನೆ. ಆಸಕ್ತರು ಓದಿ ಆನಂದಿಸಿ.
ಹಾಗೆಯೇ ಕನ್ನಡಪದವಿನೋದ ಯಾಹೂಗ್ರೂಪ್ ಸದಸ್ಯರು ಸೇರಿ ರಚಿಸಿದ ಗತಪ್ರತ್ಯಾಗತಕೋಶವನ್ನೂ ಇಲ್ಲಿ ಸಂಗ್ರಹಿಸಿಟ್ಟಿದ್ದೇನೆ. ಆಸಕ್ತರು ಅದನ್ನೂ ಓದುವಂಥವರಾಗಿ.
ಉ: ಹೇಗೆ ಓದಿದರೂ ಒಂದೇ!!!
ಸರ್,
ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು...
-ಅನಿಲ್.