ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸರ್ವಗುಣ ಸಂಪನ್ನ ಕನ್ಯೆ.

ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"

ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದರವತಿ, ಜೊತೆಗೆ ಗುಣವತಿ"

"ಆದರೆ, ನಿಮ್ಮ ಮಗಳು ಅಡುಗೆ ಮಾಡಿ, ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾಳೆಯೇ?"

"ಖಂಡಿತ. ಅವಳು ಧರ್ಮವತಿ"

"ನಿಮ್ಮ ಮಗಳಿಗೆ ಕಲೆಯಲ್ಲಿ ಆಸಕ್ತಿಯಿದೆಯೇ?"

"ಅವಳು ಕಲಾವತಿ"

"ಅವಳು ವಿದ್ಯಾಭ್ಯಾಸ ಮಾಡಿದ್ದಾಳೆಯೇ?"

"ಹು. ಅವಳು ವಿದ್ಯಾವತಿ".

"ವೇದಗಳ ಅಧ್ಯಯನ ಮಾಡಿದ್ದಾಳೆಯೇ?"

"ಓಹ್. ಅವಳು ವೇದವತಿ".

ಆ ಯುವಕ ಸಂತೋಷಗೊಂಡು ಸರ್ವಗುಣ ಸಂಪನ್ನಳಾದ ಇವಳೇ ತನಗೆ ತಕ್ಕ ವಧು ಎಂದು ತಿಳಿದು ಆ ಹುಡುಗಿಯನ್ನು ಮದುವೆಯಾಗುತ್ತಾನೆ.

ಒಂದು ವಾರದ ನಂತರ ಆ ಯುವಕ ಮತ್ತೆ ಮಾವನ ಮನೆಗೆ ಬರುತ್ತಾನೆ. ಅವನ ಮುಖ ಬಾಡಿರುತ್ತದೆ.

ಮಾವ "ಯಾಕಪ್ಪ? ಏನಾಯ್ತು? ಏಕೆ ನಿನ್ನ ಮುಖ ಬಾಡಿದೆ? ನಿನ್ನ ಮನದಲ್ಲಿ ಏನೋ ಚಿಂತೆ ಇರೋ ಹಾಗಿದೆ?" ಎಂದು ಕೇಳುತ್ತಾನೆ.

ಅದಕ್ಕೆ ಆ ಯುವಕ "ಮಾವ, ನೀವು ನಿಮ್ಮ ಮಗಳು ಸುಂದರವತಿ, ಗುಣವತಿ, ಧರ್ಮವತಿ, ಕಲಾವತಿ, ವಿದ್ಯಾವತಿ, ವೇದವತಿ ಎಂದೆಲ್ಲಾ ಹೇಳಿದಿರಿ. ಅಲ್ವೇ?"

"ಹೌದು. ಹೇಳಿದೆ."

"ಆದರೆ, ಈಗಾಗಲೇ ಅವಳು ಗರ್ಭವತಿ ಎಂದು ಹೇಳಲು ಮರೆತಿರಲ್ಲಾ?" :(

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸರ್ವಗುಣ ಸಂಪನ್ನ ಕನ್ಯೆ.

Rakesh Shetty's picture

ಹ್ಹ ಹ್ಹ :D

ಹುಷಾರಾಗಿರಬೇಕು ;)

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

:)

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

sathvik N V's picture

ಅನಿಲ್,
ಅಷ್ಟೊಂದು ಒಳ್ಳೆಯ ಗುಣವುಳ್ಳ ಹೆಣ್ಣು ನಿಮ್ಮ ಕಥೆಯ ಕಡೆಯಲ್ಲಿರುವ ಸ್ಥಿತಿಗೆ ಬರಲು ಸಾಧ್ಯವಿಲ್ಲ. ಇಂಥ ಜೋಕ್ ಗಳು ಪಾಪ ಭಗ್ನಪ್ರೇಮಿಗಳಿಂದ ರಚನೆಯಾಗಿರುತ್ತವೆ. ರಾಕೇಶ್ ಅವರು ನಿಮಗೆ ಮಿಂಚಂಚೆ ಮೂಲಕ ಈ ಜೋಕ್ ಕಳಿಸಿರಬಹುದು. ಒಮ್ಮೆ ಚೆಕ್ ಮಾಡಿ.
ಸಾತ್ವಿಕ್ ಎನ್.ವಿ

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

ಇಲ್ಲ ಸಾತ್ವಿಕ್.
ರಾಕೇಶ ಕಳಿಸಿದ ಮಿಂಚಂಚೆಯಲ್ಲ.

ಬೇರೋಬ್ಬ ಸ್ನೇಹಿತರಿಂದ ಬಂದ ಮಿಂಚಂಚೆ.
ಇಂಗ್ಲೇಷಿನಲ್ಲಿತ್ತು. ಕನ್ನಡಕ್ಕೆ ಅನುವಾದಿಸಿದೆ.

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

Rakesh Shetty's picture

ರೀ ಸಾತ್ವಿಕ್
ನಾನು ಭಗ್ನ ಪ್ರೇಮಿಯಲ್ಲ .... ನಮ್ದೆನಿದ್ರು ಎವರ್ ಗ್ರೀನ್ ಪ್ರೀತಿ ಕಣ್ರೀ :)
ಹಿಂಗೆಲ್ಲ ಹೇಳ್ಬೇಡಿ ;)

ರಾಕೇಶ್ ಶೆಟ್ಟಿ :)

ಉ: ಸರ್ವಗುಣ ಸಂಪನ್ನ ಕನ್ಯೆ.

Chamaraj's picture

ಹಲವಾರು ’ವತಿ’ಗಳು ಅತಿಯಾಗಿದ್ದರಿಂದ ಮೋಸ ಹೋಗಿದ್ದಾನೆ ವರ ಮಹಾಶಯ. ಚೆನ್ನಾಗಿದೆ ಪನ್‌. :)

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

ಹೆ ಹೆ
ಹೌದು. :)

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

cherambane's picture

ನನ್ನ ಹೆಸರು ಹೇಳಿಲ್ಲ ತಾನೆ? :)

ಬಶೀರ್ ಕೊಡಗು, ದುಬೈ

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

ಹ್ಹ ಹ್ಹ :)

ಇಲ್ಲ ಬಶೀರ್.

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

ಅರವಿಂದ್'s picture

ಹುಡುಗನಿಗೆ ಒಂಚೂರು ಮುಂದಾಲೋಚನೆಯಿದ್ದಿದ್ದರೆ ಆ ಎಲ್ಲ ವತಿಯನ್ನು ಅಳವಡಿಸಿಕೊಂಡವಳಿಗೆ ಸವತಿಯನ್ನು ತರಬಹುದಿತ್ತೇನೋ :)

ಅರವಿಂದ್

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

ಹ್ಹ ಹ್ಹ :D

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

inchara123's picture

ಅರವಿಂದ್ ಅವರಿಗೆ ಸೂಫಿ ಕಥೆ ಓದಿದಾಗಿನಿಂದ ಎರಡೆರಡು ಕನಸುಗಳು

ಉ: ಸರ್ವಗುಣ ಸಂಪನ್ನ ಕನ್ಯೆ.

msudan86's picture

:)

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

:)

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

girish.rajanal's picture

ಅನಿಲ್,
ಯಾರು ರೀ ನಿಮಗಿದನ್ನು ಕಳಿಸಿದ್ದು... :D
ಸಖತ್ತಾಗಿದೆ...:)

ಒಲುಮೆಯಿಂದ,
ಗಿರೀಶ ರಾಜನಾಳ.

ಉ: ಸರ್ವಗುಣ ಸಂಪನ್ನ ಕನ್ಯೆ.

anil.ramesh's picture

ಸ್ನೇಹಿತರೊಬ್ರು ಕಳಿಸಿದ್ದು. :)

ಚೆನ್ನಾಗಿದೆ ಅಂತ ಅನ್ನಿಸ್ತು. ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ ಕೂಡ ಅನ್ನಿಸ್ತು. ಅದಕ್ಕೆ ಇಲ್ಲಿ ಪೋಸ್ಟ್ ಮಾಡಿದೆ.

-ಅನಿಲ್.

ಉ: ಸರ್ವಗುಣ ಸಂಪನ್ನ ಕನ್ಯೆ.

venkatb83's picture

ಇದನ್ನು ಮುಂಚೆ ಓದಿದ್ದೆ, ಈಗಲೂ ಓದಿದೆ, ಸೂಪರ್... ನಾವು ಹುಶಾರಾಗಿರ್ಬೇಕಪ್ಪ...

ಉ: ಸರ್ವಗುಣ ಸಂಪನ್ನ ಕನ್ಯೆ.

hariharapurasridhar's picture

ಸರ್ವ ವಿದ್ಯಾಸಂಪನ್ನ ಅನಿಲ್ ರಮೇಶ್,
ಕಥೆ ಚೆನ್ನಾಗಿದೆ. ಅರವಿಂದ್ ಎಲ್ಲಿ?