ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಕವಿಕಾಯಚೂಡಾಮಣಿ - ಒಂದು ನೆನಪು

May 3, 2007 - 6:29pm — anivaasi

ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯತೊಡಗಿದೆ ಎಂದು ಕಾಣುತ್ತದೆ. ಅದಕ್ಕೆ ಯಾರೂ ಅಕ್ಷೇಪಣೆ ಎತ್ತಿರಲಿಲ್ಲ. ಅವರ ಹೆಸರು ಅರಳೆ ಪುಟ್ಟಣ್ಣ ಎಂದು ಎಲ್ಲರೂ ಕರೆಯುತ್ತಿದ್ದುದು. ಆದರೆ ತನ್ನ ಹೆಸರು ಅರಳಿ ಪುಟ್ಣಣ್ಣ ಎಂದು ಎಲ್ಲರನ್ನೂ ಸದಾ ತಿದ್ದುತ್ತಿದ್ದರು. ಅಜಾನುಬಾಹುವಾಗಿದ್ದ ಅವರೊಡನೆ ಯಾರೂ ಜಗಳವಾಡುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಹಳೆಗನ್ನಡ ಪದ್ಯ ಉರು ಹೊಡೆಯುವುದನ್ನು ಕೇಳಿ ಅವರು ನನಗೆ ಹೇಳಿದ ವಿಷಯವಿದು. ನೆನಪಿದ್ದಷ್ಟು ವಿವರಿಸುತ್ತೇನೆ.
ಸುಮಾರು ಹದಿಮೂರನೇ ಶತಮಾನದಲ್ಲಿ ರಚಿಸಲಾಯಿತೆನ್ನಲಾದ ಒಂದು ವಿಶಿಷ್ಟ ಕನ್ನಡ ಕೃತಿ ಕವಿಕಾಯಚೂಡಾಮಣಿ. ಕುಗ್ರಾಮವೊಂದರಲ್ಲಿ ಒಂಟಿಯಾಗಿ ವಾಸವಾಗಿರುವ ಒಬ್ಬ ಕುರುಡು ಅಜ್ಜಿಯ ವಿಶಾಲವಾದ ಮನೆಯ ಅಟ್ಟದಲ್ಲಿ ಕವಿಕಾಯಚೂಡಾಮಣಿ ಸಿಕ್ಕತು. ಕಾಗದದ ಮೇಲೆ ಮೂಲದಿಂದ ಮಾಡಿಕೊಂಡ ಪ್ರತಿಯಾಗಿದ್ದು, ಲಭ್ಯವಿರುವ ಏಕಮಾತ್ರ ಪ್ರತಿ. ಸುಮಾರು ೭೦೦ಕ್ಕೂ ಹೆಚ್ಚು ಪದ್ಯಗಳಿದೆ ಎಂದು ಊಹಿಸಲಾಗಿರುವ ಈ ಕೃತಿಯ ಕೇವಲ ೧೦೬ ಪದ್ಯಗಳು ಈಗ ಲಭ್ಯವಿದೆ. ಹೆಚ್ಚು ಜನ ಕನ್ನಡ ವಿದ್ವಾಂಸರಿಗೇ ಇನ್ನೂ ಈ ಕೃತಿಯ ಬಗ್ಗೆ, ಅದರ ಕರ್ತೃವಿನ ಬಗ್ಗೆ ಗೊತ್ತಿರುವಂತಿಲ್ಲ. ಗೊತ್ತಿರುವವರೂ ಈ ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಂತೆ ತೋರುವುದಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳಿವೆ. ಒಂದು - ಕವಿಕಾಯಚೂಡಾಮಣಿ ಯಾವುದೇ ಪುರಾಣವನ್ನಾಗಲಿ, ಹಿಂದಿನ ಕವಿಯ ಬಗ್ಗೆಯಾಗಲಿ ಅಥವಾ ಕಾವ್ಯದ ಪುರ್ನಸೃಷ್ಠಿಯಾಗಲಿ ಅಲ್ಲ. ಎರಡದನೆಯದಾಗಿ - ಕವಿಕಾಯಚೂಡಾಮಣಿ ಕನ್ನಡದಲ್ಲಿದ್ದರೂ ಕೂಡ ಕನ್ನಡ ನಾಡು ನುಡಿ ಬಗ್ಗೆ ಒಂದು ಚೂರೂ ಪ್ರಸ್ತಾಪ ಮಾಡುವುದಿಲ್ಲ.
ಹಾಗಾದರೆ, ಕವಿಕಾಯಚೂಡಾಮಣಿ ಯಾವುದರ ಬಗ್ಗೆ ಚಿಂತಿಸುತ್ತದೆ ಎಂದು ನಿಮಗೆ ಸಹಜವಾಗಿಯೇ ಕುತೂಹಲವಾಗಬಹುದು. ಅದರ ಬಗ್ಗೆಯೂ ವಿವಾದವಿದೆ. ಕೃತಿಯ ಹೆಸರಿನಲ್ಲಿರುವ "ಕವಿಕಾಯ" ಪದವನ್ನು ಹೇಗೆ ಅರ್ಥೈಸುವದೆಂಬುದೇ ಆ ವಿವಾದ. ಏಕೆಂದರೆ ನೇರವಾಗಿ "ಕವಿಯ ಕಾಯ" ಎಂದು ವಿವರಣೆ ಕೊಡಬಹುದಾದರೂ ಅದರಿಂದ ವಿದ್ವಾಂಸರಿಗೆ ಸಮಾಧಾನವಿಲ್ಲ. ಇಲ್ಲಿ ಕವಿಯ ಕಾಯ ಅನ್ನುವುದಕ್ಕಿಂತ ಕವಿಯ ಕಾವ್ಯದ ಕಾಯ ಅಂದರೆ ಕಾವ್ಯದ ಸ್ವರೂಪದ ಬಗ್ಗೆ ಚಿಂತನೆಯಿದೆ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಆದರೆ ಈ ವಾದಕ್ಕೆ ಪುಷ್ಟಿಕೊಡುವಂಥ ಯಾವುದೇ ಸಾಲುಗಳೂ ಕವಿಕಾಯಚೂಡಾಮಣಿಯಲ್ಲಿ ಇಲ್ಲದಿರುವುದರಿಂದ, ಈ ಕೃತಿ ನಿಜವಾಗಿಯೂ ಕಾವ್ಯದ ಬಗ್ಗೆ ಆಗಿರದೆ, ಕವಿಯ ದೇಹವನ್ನು ಕುರಿತದ್ದು ಎಂದು ಹೇಳಬಹುದು. ಈ ಕೆಳಗಿನ ಸಾಲುಗಳನ್ನು ಸ್ವಲ್ಪ ಗಮನಿಸಿ-

೧) ನೀರಲ್ತುಪಾನಕದಿಂಮತ್ತಿನವಸರಕುಪಕಾರಮಕ್ಕು
೨) ಪುಗೆವುಗುಳುವಾಗರಿವಕ್ಕುಅಕಟಕಟಾಪೊಡೆದಧರಸಂಕಟ
೩) ಚಳಿಕಾಲದೋಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಕವಿಗೆ

ಕಡೆಯ ಸಾಲಿನಲ್ಲಿರುವ "ಒರೆಕವಿ" ಎಂಬ ತುಂಬಾ ವಿಶಿಷ್ಟವಾದ ಪ್ರಯೋಗ ಗಮನಿಸಿ. ಒರೆ ಎಂದರೆ ಪದ, ನುಡಿ ಎಂಬ ಅರ್ಥವಿದೆ. ಅಂದರೆ ನುಡಿಯ ಕವಿ ಎಂದಾಯಿತು. ಹಾಗಾದರೆ ನುಡಿಯಲ್ಲದೆ, ಪದವಲ್ಲದೆ ಬೇರೆ ಪದಾರ್ಥಗಳಲ್ಲೂ ಕವಿತ್ವವನ್ನು ತೋರಬಹುದು ಎಂಬ ಸೂಚ್ಯಭಾವ ಈ ಪ್ರಯೋಗದಲ್ಲಿರುವುದು ವಿಶೇಷವಲ್ಲವೆ? ಇದಕ್ಕೂ ವಿದ್ವಾಂಸರು ಹೆಚ್ಚು ಗಮನ ಕೊಡದೆ ಅದೊಂದು ಸಡಿಲ ಪ್ರಯೋಗ ಎಂದು ಪಕ್ಕಕ್ಕೆ ತಳ್ಳಿಬಿಟ್ಟಿರುವಂತಿದೆ. ಕವಿಕಾಯಚೂಡಾಮಣಿ ಕಾವ್ಯದ ಸ್ವರೂಪದ ಬಗ್ಗೆ ಅಲ್ಲದಿದ್ದರೂ ಕವಿಯ ಭೌತಿಕ ದೇಹದ ಬಗ್ಗೆ ಅಪಾರ ಕಾಳಜಿ ಮತ್ತು ಚಿಂತನೆಯನ್ನು ನಡೆಸುತ್ತದೆ. ವಿದ್ವಾಂಸರು ಕೃತಿಯಲ್ಲಿನ ಚಿಂತನ ಮತ್ತು ಅರ್ಥವನ್ನು "ಕಾವ್ಯ ಸ್ವರೂಪದ ಬಗ್ಗೆ" ಎಂದು ತಿರುಗಿಸುವಲ್ಲಿ ಸಫಲರಾಗಿಲ್ಲದ್ದರಿಂದ, ಕವಿಯ ಭೌತಿಕ ದೇಹವನ್ನು ವಿದ್ವಾಂಸರು ತುಚ್ಛವಾಗಿ ಕಾಣುವ ಪ್ರತೀತಿಯಿರುವುದರಿಂದ ಕವಿಕಾಯಚೂಡಾಮಣಿ ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಗೊಳ್ಳದೆ ಉಳಿದುಬಿಟ್ಟಿರುವುದು ತುಂಬಾ ವಿಷಾದಕಾರಿ.
ಕವಿಕಾಯಚೂಡಾಮಣಿಯ ಭಾಗಗಳು ಕಳೆದು ಹೋದುದಕ್ಕೆ ಅವರು ಹೇಳಿದ ತುಂಬಾ ಕುತೂಹಲಕಾರಿಯಾದ ಕತೆ: ಪ್ರತಿ ಸಿಕ್ಕಿರುವುದು ಒಂದು ಕುರುಡು ಅಜ್ಜಿಯ ಹತ್ತಿರ ಎಂದು ಹೇಳಿದೆನಷ್ಟೆ. ಕಳೆದು ಹೋದ ಭಾಗದ ಬಗ್ಗೆ ಕಿವಿಯೂ ಕೇಳದ ಅಜ್ಜಿಯನ್ನು ಕೂಗಿ ಕೂಗಿ ಕೇಳಿದಾಗ ಅವಳು ಹೇಳಿದ್ದಿಷ್ಟು. ಒಂದು ದಿನ ಸೂರ್ಯ ನೆತ್ತಿಯ ಮೇಲೆ ಉರಿಯುತ್ತಿದ್ದ ನಡು ಹಗಲಂತೆ. ತನ್ನ ಮನೆಯ ಬೇಲಿಯಾಚೆ ನಿಂತಿದ್ದ ಕತ್ತೆಯೊಂದನ್ನು ತನ್ನ ನೆಚ್ಚಿನ ಹಸು ಅಂದುಕೊಂಡಳಂತೆ. ಹುಲ್ಲು ಅಂದುಕೊಂಡು ಕವಿಕಾಯಚೂಡಾಮಣಿಯ ಹಾಳೆಗಳನ್ನು ಅದಕ್ಕೆ ಹರಿದು ತಿನ್ನಿಸಿಬಿಟ್ಟಳಂತೆ. ಅಂದಿನಿಂದ ಆ ಕತ್ತೆ ದಿನವೂ ನಡುಹಗಲು ಆ ಬೇಲಿ ಪಕ್ಕದಲ್ಲಿ ಬಂದು ನಿಂತು ಒದರುತ್ತದೆಯಂತೆ. ಆದರೆ ಅಟ್ಟದಲ್ಲಿದ್ದ ಕವಿಕಾಯಚೂಡಾಮಣಿ ಹುಲ್ಲಿನ ಮೆದೆಗೆ ಹೇಗೆ ಬಂತು ಎಂಬುದು ಇನ್ನೂ ಬಿಡಿಸಲಾಗದ ರಹಸ್ಯವಾಗಿ ಉಳಿದಿದೆಯಂತೆ.
ಇಷ್ಟು ಹೇಳಿ ಅರಳಿ ಪುಟ್ಟಣ್ಣ ನನ್ನತ್ತ ಕಣ್ಣು ಮಿಟುಕಿಸಿ ತುಂಟನಗೆ ನಕ್ಕದ್ದು ಯಾಕೋ ಮನಸ್ಸಿನಲ್ಲಿ ಬಲವಾಗಿ ಬೇರೂರಿ ಬಿಟ್ಟಿದೆ. ಅವರೀಗ ತೀರಿಕೊಂಡಿರುವುದರಿಂದ ಈ ವಿಷಯದಲ್ಲಿ ಹೆಚ್ಚು ವಿವರಗಳು ಗೊತ್ತುಮಾಡಿಕೊಳ್ಳುವುದು ಸಾಧ್ಯವಿಲ್ಲವಾಗಿದೆ.

  • ಭ್ರಮಾವಿಲಾಸ
~.~
  • anivaasi ರವರ ಬ್ಲಾಗ್
  • Login or register to post comments
  • 486 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 3, 2007 - 8:51pm — mahesha

ಉ: ಕವಿಕಾಯಚೂಡಾಮಣಿ - ಒಂದು ನೆನಪು

mahesha's picture

ಇದು ದಿಟವೇನ್ರೀ? ಬಱುಡೆ ತೆರ ಕಾಣುತ್ತೆ?

೧) ನೀರಲ್ತುಪಾನಕದಿಂಮತ್ತಿನವಸರಕುಪಕಾರಮಕ್ಕು
೨) ಪುಗೆವುಗುಳುವಾಗರಿವಕ್ಕುಅಕಟಕಟಾಪೊಡೆದಧರಸಂಕಟ
೩) ಚಳಿಕಾಲದೋಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಕವಿಗೆ

ಇಲ್ಲಿ ನೀವು ಒರೆಗಳ ನಡುವೆ ಜಾಗ ಬಿಡಬೇಕು. ಇಲ್ಲದೇ ಹೋದರೆ ತಪ್ಪು, ಓದಲು ಹಾವಳಿ.

೧ ನೀರಲ್ತು ಪಾನಕದಿಂ ಮತ್ತಿನವಸರಕುಪಕಾರಮಕ್ಕು
೨ ಪುಗೆಯು(ವು?)ಗುಳುವಾಗರಿವಕ್ಕು! ಅಕಟಕಟಾ! ಪೊಡೆದಧರಸಂಕಟ
೩ ಚಳಿ(ಕಾ?)ಗಾಲದೊಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಗ(ಕ?)ವಿಗೆ

ಈ ಬಿಡಿಸು ಸರಿಯೇ?

೧ ನೀರು ಅಲ್ತು ಪಾನಕದಿಂ ಮತ್ತಿನ ಅವಸರಕ್ಕೆ ಉಪಕಾರಂ ಅಕ್ಕು
೨ ಪುಗೆ ಉಗುಳುವಾಗ ಅರಿವಕ್ಕು! ಅಕಟಕಟಾ ಪೊಡೆದ ಅಧರಸಂಕಟ
೩ ಚಳಿಗಾಲದೊಳ್ ಕಾಲ್ ಪೊಡೆದು(ಹೊಡೆದು) ಅಪಕಾಲಪ್ರಾಪ್ತವಾಗಲಿ ಒರೆಗವಿಗೆ.

೧ ನೀರಲ್ಲ ಪಾನಕದಿಂದ ಮತ್ತಿನ ಹೊತ್ತಿಗೆ ನೆರವಾಗುವುದು.
೨. ಹೊಗೆ ಸೇದಿ ಬಿಡುವಾಗ ಅರಿವಾಗುತ್ತದೆ. ಅಯ್ಯಯ್ಯೋ ಒಡೆದತುಟಿಗಳ ಸಂಕಟ
೩. ಚಳಿಗಾಲದಲ್ಲಿ ಕಾಲುಗಳು ಹೊಡೆದು ಸಾವು ಬರಲಿ ಸೊಲ್ಲುಗಳ ಕವಿಗೆ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 3, 2007 - 8:53pm — mahesha

ಉ: ಕವಿಕಾಯಚೂಡಾಮಣಿ - ಒಂದು ನೆನಪು

mahesha's picture

ಅನಿವಾಸಿ ( ನಿವಾಸ ಇಲ್ಲದವರು Smiling: ಜೋಕು )

ಈ ಬರೆಪು ಬಹಳ ಚೆನ್ನಾಗಿದೆ.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 3:40am — anivaasi

ಉ: ಕವಿಕಾಯಚೂಡಾಮಣಿ - ಒಂದು ನೆನಪು

anivaasi's picture

ಅಥವಾ ನಿವಾಸದಲ್ಲಿಲ್ಲದವರು, ಅಥವಾ ನಿವಾಸ ಬಿಟ್ಟವರು, ಅಥವಾ ನಿವಾಸ ಬೇಡವಾದವರು ... ಇವೆಲ್ಲಾ ಸ್ವಯಂಕೃತ. ನೀವು ಹೇಳಿದ್ದು passive ಅರ್ಥ! Smiling

ನನಗೆ ಹಳೆಗನ್ನಡ ಅರ್ಥವಾಗುವುದಿಲ್ಲ. ನೀವು ಸಾಲಿನ ಅರ್ಥಗಳನ್ನು ಬಿಡಿಸಿಕೊಟ್ಟಿದ್ದಕ್ಕೆ ವಂದನೆಗಳು. ನೀವು ಕೊಟ್ಟ ಅರ್ಥಗಳನ್ನು ನೋಡಿದರೆ ನನ್ನ ಮಾವ ಅರಳೇ, ಅಲ್ಲ ಅರಳಿ ಪುಟ್ಟಣ್ಣ ಹೇಳಿದ ಇನ್ನೊಂದು ಮಾತು ಹೇಳಲು ಮರೆತುಬಿಟ್ಟೆ. ಕೃತಿಯ ಹೆಸರು "ಕವಿಕಾಮಚೂಡಾಮಣಿ"ಯೂ ಇರಬಹುದು ಅಂದಿದ್ದರು! ಕನ್ನಡ ವಿದ್ವಾಂಸರು ಈ ಕೃತಿಯ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಅದೂ ಒಂದು ಕಾರಣವಿರಬಹುದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 10:11am — Sunil Jayaprakash

ಉ: ಕವಿಕಾಯಚೂಡಾಮಣಿ - ಒಂದು ನೆನಪು

Sunil Jayaprakash's picture

"ಕವಿಕಾಮಚೂಡಾಮಣಿ"ಯೂ ಇರಬಹುದು ಅಂದಿದ್ದರು! ಕನ್ನಡ ವಿದ್ವಾಂಸರು ಈ ಕೃತಿಯ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಅದೂ ಒಂದು ಕಾರಣವಿರಬಹುದು.

ಬಲ್ ಇದ್ದೀರಾ ಕಣ್ರೀ ನೀವು Eye-wink ಅಂದ ಹಾಗೆ, ನಮ್ಮ ಊಮಾವ "ಅದು ಕವಿಕಾಯ, ಕವಿಕಾಮ ಅಲ್ಲ, ಕವಿಕಾವಚೂಡಾಮಣಿ, ಅಂದರೆ ಕವಿಗಳ ಕಾವನು, ಅದರಲ್ಲೂ ಕನ್ನಡ ಕವಿಗಳ ರಕ್ಷಕನು. ಅದಕ್ಕೆ ಅದರ ಬಗ್ಗೆ ವಿದ್ವಾಂಸರು ಅಸಡ್ಡೆ ತೋರಿರಬೇಕು" ಎನ್ನೋದೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 3:50am — anivaasi

ಉ: ಕವಿಕಾಯಚೂಡಾಮಣಿ - ಒಂದು ನೆನಪು

anivaasi's picture

ನಿಮ್ಮ "ಊ ಮಾವ" ಹೇಳಿದ್ದಕ್ಕೆ ಆಧಾರಗಳು ದೊರೆತಿವೆಯೆ? ಕನ್ನಡದ ಬಗ್ಗೆ ಪ್ರಸ್ತಾಪವಿಲ್ಲ ಎಂದು ಕೇಳಿದ್ದೆ. Smiling
ಅಂತೂ ವಿದ್ವಾಂಸರಿಗಿಂತಾ ಮಾವಂದರಿಗೇ ಕವಿಕಾಯ(ಮ)ಚೂಡಾಮಣಿಯ ಬಗ್ಗೆ ಹೆಚ್ಚು ತಿಳವಳಿಕೆ ಇರುವಂತಿದೆ Smiling
ವಂದನೆಗಳು.

* ನೆನ್ನೆಯೇ ನಿಮ್ಮ ಪ್ರತಿಕ್ರಿಯ ಓದಿದೆ ಉತ್ತರಿಸುವಷ್ಟರಲ್ಲಿ ಮತ್ತೇನೋ ಅಡ್ಡಬಂತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 10:24am — mahesha

ಉ: ಕವಿಕಾಯಚೂಡಾಮಣಿ - ಒಂದು ನೆನಪು

mahesha's picture

ಅನಿವಾಸಿಯರೇ

ಈ ಹೊತ್ತಗೆ ದೊರೆಯುವುದೇ? ಯಾರು ಹೊರದಂದವರು? ಇವನ್ನು ಹೇಳಿ...

ನಿಮ್ಮ ಬಳಿ ಈ ಹೊತ್ತಗೆ ಇದೆಯೇ?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 6:52pm — anivaasi

ಉ: ಕವಿಕಾಯಚೂಡಾಮಣಿ - ಒಂದು ನೆನಪು

anivaasi's picture

ಮಹೇಶರೇ,
ಈ ಹೊತ್ತಗೆ ದೊರೆಯುವುದೇ?/ಯಾರು ಹೊರದಂದವರು? = ಗೊತ್ತಿಲ್ಲ
ನಿಮ್ಮ ಬಳಿ ಈ ಹೊತ್ತಗೆ ಇದೆಯೇ? = ಇಲ್ಲ.
ಹೆಚ್ಚಿಗೆ ಇನ್ನೇನು ಹೇಳಲಿ?! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 3, 2007 - 9:29pm — ASHOKKUMAR

ಉ: ಕವಿಕಾಯಚೂಡಾಮಣಿ - ಒಂದು ನೆನಪು

ASHOKKUMAR's picture

>>ಚಳಿ(ಕಾ?)ಗಾಲದೊಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಗ(ಕ?)ವಿಗೆ

ಚಳಿಗಾಲದಲ್ಲಿ ಕಾಲುಗಳು ಒಡೆಯುವುದರ ಬಗ್ಗೆ ಪ್ರಸ್ತಾಪವಲ್ಲವೇ(dryness)?
ಚಳಿಗಾಲದೊಳ್ ಕಾಲು ಒಡೆದು ಅಪಕಾಲ ಪ್ರಾಪ್ತವಾಗಲು ಒರೆ ಕವಿಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 11:49am — mahesha

ಉ: ಕವಿಕಾಯಚೂಡಾಮಣಿ - ಒಂದು ನೆನಪು

mahesha's picture

ಅಕ್ಕು = ಆಗಬೇಕು ಅಂತ ಅಲ್ವಾ?
ಆಗಡ = ಆಗಬೇಡ ಅಂತ ಅಲ್ವಾ?

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 12:00pm — ASHOKKUMAR

ಉ: ಕವಿಕಾಯಚೂಡಾಮಣಿ - ಒಂದು ನೆನಪು

ASHOKKUMAR's picture

ಆಗಡ- ಅಗಬೇಕಾದ್ದಿಲ್ಲ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 4, 2007 - 10:23am — Sunil Jayaprakash

ಉ: ಕವಿಕಾಯಚೂಡಾಮಣಿ - ಒಂದು ನೆನಪು

Sunil Jayaprakash's picture

ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧ

ಇದನ್ನು ಹೇಳಿದಾಗ, ನಮ್ಮ ದೊಡ್ಡಮ್ಮ, ಹಿನ್ನೆಪ್ಪಾಗಿ(nostalgic ಆಗಿ) ಬಿದ್ದು ಬಿದ್ದು ನಕ್ಕರು. ಈಗ ನಾವುಗಳು ಕಂಡ ಕಂಡವರನ್ನು ಅಂಕಲ್ ಆಂಟಿ ಎನ್ನುವ, ಹಾಗೆ ಅವರುಗಳು ಹಿಂದೆ ಮನೆಗೆ ಯಾರು ಬಂದರೂ, ಮಾವ (ತುಂಬಾ ಚಿಕ್ಕವರಾದರೆ ಮಾಮ), ಅತ್ತೆ ಅಂತ ಹೇಳ್ತಾ ಇದ್ರಂತೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 5, 2007 - 3:52am — anivaasi

ಉ: ಕವಿಕಾಯಚೂಡಾಮಣಿ - ಒಂದು ನೆನಪು

anivaasi's picture

ನಿಮ್ಮ ದೊಡ್ಡಮ್ಮ ನಕ್ಕಿದ್ದು ನನ್ನ ಮುಖದಲ್ಲೂ ನಗು ಅರಳಿಸಿತು. ಒಂದು ರೀತಿಯ "ಸಾರ್ಥಕ" ಭಾವ!
ಅವರಿಗೆ ನನ್ನ ವಂದನೆ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಕುವೆಂಪು ಕವಿಯೇ ಅಲ್ಲ"
  • ಕವಿ
  • ಇಂದಿನ ಸುದ್ದಿ...!
  • ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?
  • ಝೆನ್ ಕಥೆ ೩೩: ಸಾವಧಾನ!
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator