ಅನಿವಾಸಿ
*~*~*~*
ನಾಸ್ತಿಕ ಯಾರು? ಹೇಗೆ?
ಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಬೇಕಾಗಿಲ್ಲ.
ಡಾಕಿನ್ಸರ ಪುಸ್ತಕಗಳನ್ನು ಆಧರಿಸಿದ ಡಾಕ್ಯುಮೆಂಟರಿಯ ಡಿವಿಡಿಗಳ ಬಾಕ್ಸ್ ಸೆಟ್ ಒಂದನ್ನು ಕೊಂಡಾಗ ಅದರ ಒಂದು ಡಿವಿಡಿಯ ಮೇಲೆ "facts about atheism" ಈ ಕೆಳಕಂಡಂತೆ ಇದೆ.
ನಾಸ್ತಿಕತೆಯ ಬಗ್ಗೆ ಕೆಲವು ಸಂಗತಿಗಳು
- ನಾಸ್ತಿಕತೆ ಅನ್ನೋದು ದೇವರು ಮತ್ತು ಅಲೌಕಿಕ ಶಕ್ತಿಗಳ ಮೇಲಿನ ನಂಬಿಕೆಯ ತಿರಸ್ಕಾರ
- ನಾಸ್ತಿಕರು ಲೋಕದ ಇರುವಿಕೆಯನ್ನು ವಿವರಿಸಲು ದೇವರನ್ನು ಬಳಸುವುದಿಲ್ಲ
- ನಾಸ್ತಿಕರ ಪ್ರಕಾರ ಬದುಕಿನಲ್ಲಿ ದೇವರ ಮತ್ತು ಪವಿತ್ರಗ್ರಂಥಗಳ ನೆರವಿಲ್ಲದೆ ನೈತಿಕ ನಿಯಮಗಳನ್ನು ರೂಪಿಸಿಕೊಳ್ಳಬಹುದು
- ಹಲವು ಸಲ ನಾಸ್ತಿಕರೂ ಕೂಡ ಧರ್ಮೀಯರು ಪಾಲಿಸುವ ನೈತಿಕ ನಿಯಮಗಳನ್ನೇ ಪಾಲಿಸುತ್ತಾರೆ, ಆದರೆ ಒಳಿತು ಮತ್ತು ಕೆಡಕನ್ನು ದೈವತ್ವದ ನೆರವಿಲ್ಲದೆ ನಿರ್ಧರಿಸಿಕೊಂಡಿರುತ್ತಾರೆ.
- ನಾಸ್ತಿಕರಾಗಿಯೂ ಧಾರ್ಮಿಕರಾಗಿರಲು ಸಾಧ್ಯವಿದೆ (ಬೌದ್ಧ ಧರ್ಮ ಇದಕ್ಕೊಂದು ಉದಾಹರಣೆ)

- anivaasi ರವರ ಬ್ಲಾಗ್
- Login or register to post comments
- 1148 hits
- Email this blog





RSS:
ಪ್ರತಿಕ್ರಿಯೆಗಳು
ಉ: ನಾಸ್ತಿಕ ಯಾರು? ಹೇಗೆ?
ಬವುದ್ದ ದರುಮದವರು ಬುದ್ದನೇ ದೇವರು ಅಂತ ನಂಬಲ್ವ? ಅವಂನೇ ಪೂಜೆ ಮಾಡಲ್ವ?
=====================================
ಮಾಯ್ಸ!
ಉ: ನಾಸ್ತಿಕ ಯಾರು? ಹೇಗೆ?
ನನ್ನ ಅಲ್ಪ ತಿಳುವಳಿಕೆ ಪ್ರಕಾರ... ಎಲ್ಲ ಬೌದ್ಧರೂ ಬುದ್ಧನನ್ನು ದೇವರೆಂದು ತಿಳಿದಿಲ್ಲ.
ಹೀನಯಾನದವರು ಬುದ್ಧನನ್ನು ದೇವರೆಂದು ಮೂರ್ತಿ ರೂಪದಲ್ಲಿ ಪೂಜಿಸುತ್ತಾರೆ.
ಮಹಾಯಾನದವರಿಗೆ ಬುದ್ಧನನ್ನು ಮೂರ್ತಿರೂಪಕ್ಕೆ ಇಳಿಸಲು ಇಷ್ಟವಿಲ್ಲ or ಅವರಿಗೆ ಬುದ್ಧ ದೇವರಲ್ಲ.
ವಜ್ರಯಾನದವರು ಶಾಕ್ತ ಪರಂಪರೆಗೆ ತುಂಬ ಹತ್ತಿರ ಇರುವ ಬೌದ್ಧರು. ಇವರಿಗೆ ನಮ್ಮಂತೆಯೇ ಒಬ್ಬ ಅಮೂರ್ತ ದೇವರು ಇರಬೇಕು?!. ಇನ್ನೊ ಹೆಚ್ಚಿನ ಬೌಧ್ಧ ಮಾರ್ಗಗಳಿವೆ ಅಂತ ಕೇಳಿದ್ದೇನೆ. ಹೆಚ್ಚಿಗೆ ಗೊತ್ತಿದ್ದವರು ಸೇರಿಸಿ.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಒಂದು ಕಾಲದಲ್ಲಿ ವೇದಗಳನ್ನು ಒಪ್ಪದವರನ್ನು ನಾಸ್ತಿಕರು ಅಂತ ಕರೆದರು. ಹಾಗಾಗಿ ಆಗ ಬೌದ್ಧರು , ಜೈನರು ನಾಸ್ತಿಕರಾದರು. ವೇದಗಳನ್ನು ಒಪ್ಪಿದವರು ಆಸ್ತಿಕರಾಗಿದ್ದರು.
ಈಗ ನಾಸ್ತಿಕತೆ- ಆಸ್ತಿಕತೆ ಅರ್ಥ ಬೇರೆಯೇ ಇದೆ.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಸವಿತೃ-
ನಿಮ್ಮ ಮಾತಿನ ಹಿಂದಿನ ಇಂಗಿತ ನನಗೆ ಗೊತ್ತಾಗಲಿಲ್ಲ. ಹೇಳಿದ್ದಷ್ಟೇ ಆದರೆ ಸರಿ ಇರಬಹುದು ಅಂದುಕೋತೀನಿ.
ಉ: ನಾಸ್ತಿಕ ಯಾರು? ಹೇಗೆ?
ಮೇಲೆ ಬರೆದದ್ದಕ್ಕಿಂತ ಹೆಚ್ಚಿನ ವಿಶೇಷವಿಲ್ಲ ಅನಿವಾಸಿಗಳೇ...
ನಾಸ್ತಿಕ ಅನ್ನೋ concept ಕಾಲ ಕಾಲ ಕ್ಕೆ ಬದಲಾಗುತ್ತ್ತ ಬಂದಿದೆ.
ಶರಣರಲ್ಲಿ ನಾಸ್ತಿಕ ನನ್ನು ಭವಿ ಅಂತ ಕರೀತಾರೆ. ಭವಿ ಅನ್ನೋ ಕಾನ್ಸೆಪ್ಟ್ / ಕಲ್ಪನೆ ಚನ್ನಾಗಿದೆ. ಆಸಕ್ತಿ / ಸಮಯವಿದ್ದರೆ ಓದಿ.
ಇಸ್ಲಾಮಿನಲ್ಲಿ ಕಾಫಿರ್ ಅಂತಾರೆ. ಅವ್ರ ಕಾನ್ಸೆಪ್ಟ್ / ಕಲ್ಪನೆಯೆ ಬೇರೆ.
ಹಾಗೆಯೇ ವೇದಕಾಲದಲ್ಲಿ ವೇದಗಳನ್ನು ಒಪ್ಪದವರು / ವಿರೋಧಿಸಿದವರು ನಾಸ್ತಿಕರು ಅಂತ ಕರೆಸಿಕೊಳ್ತಾ ಇದ್ದರು.
ಈ ನಾಸ್ತಿಕ ಅನ್ನೋ ಕಾನ್ಸೆಪ್ಟ್ / ಕಲ್ಪನೆ ಒಂದೊಂದು ಮತ/ಧರ್ಮಕ್ಕೂ ಬೇರೆ ಬೇರೆ ರೀತಿಯಾಗಿದೆ ಅಂತ ಅಷ್ಟೆ ನಾನು ಹೇಳಕ್ಕೆ ಹೊರಟಿದ್ದು.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ನಿಮ್ಮ ವಿವರಣೆಗೆ ಥ್ಯಾಂಕ್ಸ್...
ನಾಸ್ತಿಕರನ್ನು ಧರ್ಮಗಳು ವಿವರಿಸುವುದು ಹಾಗೇ ಹೌದು.
ಭವಿಯನ್ನು ಭಕ್ತನನ್ನಾಗಿಸುವ ತುಡಿತ ಇಲ್ಲಿ. ಕಾಫಿರರ ಬಗ್ಗೆ ಅಸಹನೆ ಅಲ್ಲಿ. ಇನ್ನು ಅಂದು ವೇದಕಾಲದಲ್ಲಿ ಚಾರ್ವಾಕರನ್ನು ತುಚ್ಛವಾಗಿ ಕಂಡಿದ್ದು.
ತುಂಬಾ ಬೇರೆ ಬೇರೆ ಕಲ್ಪನೆ ಅಂತ ಅನಿಸಿದರೂ - ಮೂಲದಲ್ಲಿ ತುಂಬಾ negative ಆಗಿ, ಬದಲಿಸಬೇಕಾದ ಮನಸ್ಥಿತಿಯನ್ನಾಗಿಯೇ ನೋಡಿದ್ದು ಅಂತ ನನ್ನ ಅನಿಸಿಕೆ. ಅದರಲ್ಲಿ ಸೋಜಿಗವೇನಿಲ್ಲವಾದರೂ ಈಗಲೂ "ನಾಸ್ತಿಕತೆಯನ್ನು" ಧರ್ಮದ ಕಣ್ಣುಗಳ ಮೂಲಕವೇ ವಿವರಿಸುವ ಬಗೆ ನೋಡಿ ಸೋಜಿಗವಾಯಿತು, ೨೧ನೇ ಶತಮಾನದಲ್ಲೂ
ಉ: ನಾಸ್ತಿಕ ಯಾರು? ಹೇಗೆ?
ಚಾರ್ವಾಕರು ವಾಯುವಿನ ಅಸ್ತಿತ್ವವನ್ನು ತಿರಸ್ಕರಿಸಿದರಂತೆ. ಇದು ವೈದಿಕರಿಗೂ, ಚಾರ್ವಾಕರಿಗೂ ಇದ್ದ ಒಂದು ಸೈದ್ಧಾಂತಿಕ ವಿರೋಧವಂತೆ. ಇದರ ಬಗ್ಗೆ ಯಾರಿಗಾದರೂ ಹೆಚ್ಚಿನ ಮಾಹಿತಿ ತಿಳಿದಿದೆಯೇ ?
ಉ: ನಾಸ್ತಿಕ ಯಾರು? ಹೇಗೆ?
ಎಲ್ಲರೂ ಮನ್ನಿಸಿ. ಚಾರ್ವಾಕರು ತಿರಸ್ಕರಿಸಿದ್ದು ಆಕಾಶವನ್ನಂತೆ, ವಾಯುವನ್ನಲ್ಲ.
ಉ: ನಾಸ್ತಿಕ ಯಾರು? ಹೇಗೆ?
ನಿಮ್ಮ ಮೊದಲ ಪ್ರತಿಕ್ರಿಯೆಯನ್ನು ನೋಡಿ ವಿಚಿತ್ರವೆನ್ನಿಸಿತ್ತು. ನನ್ನ ನಂಬಿಕೆಯ ಪ್ರಕಾರ ಚಾರ್ವಕರು ನಾಸ್ತಿಕ ರಿರಬಹುದು. ಆದರೆ ವೈಚಾರಿಕರಲ್ಲದವರಲ್ಲ.
ಪಂಚಭೂತಗಳಲ್ಲಿ ಅವರು ಆಕಾಶ ತತ್ವವನ್ನು ನಿರಾಕರಿಸಿದ್ದಿರಬಹುದು. ಪೃಥ್ವಿ ಅಪ್ಪು, ತೇಜಸ್, ವಾಯು ಗಳು ನಮ್ಮ ಬುದ್ಧಿಗೆ ನಿಲುಕ ಬಹುದಂತವು. ಆಕಾಶ (space?!) ತತ್ವ ( ಕೆಲವರು ಇದನ್ನು ಆತ್ಮಕ್ಕೆ ಸಮೀಕರಿಸಿ ಹೇಳುತ್ತಾರೆ) ನೀವು ವಿವರಿಸುತ್ತ ಹೋದರೆ ಹಲವರಲ್ಲಿ ಅನೇಕ ಸಂದೇಹಗಳು ಉಂಟಾಗಬಹುದು. ಇಲ್ಲದೆ ಇರುವುದು ಒಂದು ತತ್ವವೇ ಅಂತ?!
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
>>ಈಗಲೂ "ನಾಸ್ತಿಕತೆಯನ್ನು" ಧರ್ಮದ ಕಣ್ಣುಗಳ ಮೂಲಕವೇ ವಿವರಿಸುವ ಬಗೆ ನೋಡಿ ಸೋಜಿಗವಾಯಿತು, ೨೧ನೇ ಶತಮಾನದಲ್ಲೂ
ನಾಸ್ತಿಕ ಪದದ ಅಸ್ತಿತ್ವ ಆಸ್ತಿಕ ಪದದಿಂದಲೇ ಅಲ್ವೆ?
) ಹೋಗುವುದು ಸಹಜ. ದೇವರ ಸುತ್ತಲೇ ಅಲ್ವೆ ಈ ಧರ್ಮ-ಧಾರ್ಮಿಕತೆ ಸುತ್ತುತ್ತ ಇರೋದು?
ಇನ್ನು ಆಸ್ತಿಕತ್ವದ ಬಗ್ಗೆ ಮಾತಾಡಲು ಶುರು ಮಾಡಿದರೆ ನಾವು ದೇವರ ಹತ್ತಿರ( ?!
೧೨ ನೆ ಶತಮಾನ ಆಗ್ಲಿ, ೨೧ನೆ ಶತಮಾನ ಆಗಲೀ ನಾಸ್ತಿಕತೆ ಬಗ್ಗೆ ಮಾತಾಡುವಾಗ ಧರ್ಮದ ಕಣ್ಣುಗಳ ಮೂಲಕ ಮಾಡುವುದು ನನ್ನಂತ ಜನಸಾಮಾನ್ಯರಿಗೆ ಸಹಜ.
ನೀವು ಬರೆದಿರುವ point ಗಳನ್ನೇ ನೋಡಿ.. ಅವೂ ಸಹಾ ದೇವರು/ಧರ್ಮದ ಸುತ್ತಲೇ ಸುರ್ತ್ತುತ್ತ ಇವೆ!.
ಕೊಸರು...
ಹಾಗೆ... ಅಲ್ಲಮನ ಆಸ್ತಿಕ/ನಾಸ್ತಿಕತ್ವಗಳ ಬಗ್ಗೆ ಒಳನೋಟ ಧರ್ಮ/ಆಚರಣೆ/ದೇವರನ್ನೂ ದಾಟಿ ಹೋಗುತ್ತದೆ.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಸವಿತೃರವರೆ,
ನೀವು ಕುಚೋದ್ಯ ಮಾಡುತ್ತಿಲ್ಲ ಅಂದುಕೊಂಡು ಬರೆಯುತ್ತಿದ್ದೇನೆ.
ಒಂದು ವಿಷಯದ ಬಗ್ಗೆ ಎ ಮತ್ತು ಬಿ ಚರ್ಚಿಸುತ್ತಿದ್ದಾರೆಂದುಕೊಳ್ಳಿ. ಇಬ್ಬರೂ ಎತ್ತಿಕೊಂಡ ವಿಷಯದ ಬಗ್ಗೆಯೇ ಮಾತಾಡುತ್ತಿರುತ್ತಾರೆ. ಹಾಗಾಗಿಯೇ ನಾಸ್ತಿಕರನ್ನು ದೇವರ ಅಸ್ತಿತ್ವ ಮತ್ತು ಧರ್ಮದ ಆಧಾರದ ಮೇಲೆ ವಿವರಿಸುವುದು/ವಿವರಿಸಿಕೊಳ್ಳುವುದು. ಹಾಗೆಂದ ಮಾತ್ರಕ್ಕೆ 'ಎ' ಅನ್ನು 'ಬಿ' ಕಣ್ಣಿನ ಮೂಲಕ ವಿವರಿಸಬೇಕೆಂದೇನೂ ಇಲ್ಲ. ವಿವರಿಸ ಹೊರಟರೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಇದನ್ನೇ ನೀವು ಮಾಡಿದ್ದು ಎಂದು ನನ್ನ ಅನಿಸಿಕೆ ಮತ್ತು ನೀವೇ ಮೊದಲಿಗರಲ್ಲ ಎಂದೂ ಗೊತ್ತು. ಅದು ನಿಮ್ಮ ಪ್ರತಿಕ್ರಿಯೆಯಿಂದಲೇ ಸ್ಪಷ್ಟ.
ಈ ಸೂಕ್ಷ್ಮ ನಿಮಗೆ ತಿಳಿಯದ್ದೇನಲ್ಲ ಎಂಬ ನಂಬಿಕೆಯಿಂದಲೇ ಕುಚೋದ್ಯ ಮಾಡುತ್ತಿದ್ದೀರಿ ಎಂದು ಅನುಮಾನಿಸಿದ್ದು.
ಉ: ನಾಸ್ತಿಕ ಯಾರು? ಹೇಗೆ?
>ನೀವು ಕುಚೋದ್ಯ ಮಾಡುತ್ತಿಲ್ಲ ಅಂದುಕೊಂಡು ಬರೆಯುತ್ತಿದ್ದೇನೆ
ಛೆ ಛೆ .. ಕುಚೋದ್ಯ ನನ್ನ ಉದ್ದೇಶವಲ್ಲ.ಅಂತ ಅನುಮಾನ ಇನ್ನು ಮುಂದಕ್ಕೂ ಸಹಾ ಬೇಡ. ಹಾಗೆಏನಾದ್ರೂ ಕಂಡಿದ್ರೆ ಹೊಟ್ಟೆಗೆ ಹಾಕಿಕೊಳ್ಳಿ! ( ತಲೆಗೆ ಹಚ್ಚಿಕೊಲ್ಲಬೇಡಿ.)
ಅಂದಹಾಗೆ ಒಂದು ಸಣ್ಣ ಅನುಮಾನ! ...rational thought ಗೂ ನಾಸ್ತಿಕತೆಗೂ ಏನು ಸಂಬಂಧ?.
ನಾಸ್ತಿಕತೆ ಅಂದ್ರೆ ವೈಚಾರಿಕತೆ ಅಂತ ನನಗೆ ಅನ್ನಿಸಲ್ಲ.
>ಹಾಗೆಂದ ಮಾತ್ರಕ್ಕೆ 'ಎ' ಅನ್ನು 'ಬಿ' ಕಣ್ಣಿನ ಮೂಲಕ ವಿವರಿಸಬೇಕೆಂದೇನೂ ಇಲ್ಲ.
ಆದ್ರೆ ಹಾಗೆ ವಿವರಿಸುವುದು ಸಹಜ. ನಾಸ್ತಿಕತೆ ಮತ್ತು ವೈಚರಿಕತೆಯ ನಡುವೆ ವ್ಯತ್ಯಾಸ ಇದೆ ಅನ್ನೋದಾದ್ರೆ ಈ ಮಾತನ್ನು ಈ ಸಂದರ್ಭಕ್ಕೆ ಅನ್ವಯಿಸಿಕೊಂಡು ಒಪ್ಪಬಹುದು.
ಒಂದು observation ನಲ್ಲಿ observer ಕೂಡ ತುಂಬ ಮುಖ್ಯ ( observer is also the part of the observation) ... ಇಲ್ಲಿ observer ಅಂದ್ರೆ ಕಾಣುವ ಕಣ್ಣುಗಳು/ ಮನಸ್ತಿತಿ?!
ಕೊಸರು :
ಹಿಂದೊಮ್ಮೆ ನಾನು ವೇದಾನ್ತವನ್ನು ( ಅದ್ವೈತ) ಮಾಡರ್ನ್ ಫಿಸಿಕ್ಸ್ ಭಾಷೆಯಲ್ಲಿ ವಿವರಿಸಕ್ಕೆ ಏನೆಲ್ಲ ಪ್ರಯತ್ನ ಮಾಡುತಾ ಇದ್ದೆ. ಈಗ ಆ ಭ್ರಮೆ ನನ್ನಲ್ಲಿ ಉಳಿದಿಲ್ಲ.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ನಿಮ್ಮ ಕೊಸರಿಗೆ...
ನಮಗೆ "ಕೆಟ್ಟ ಮೇಲೆ ಬುದ್ದಿ ಬರೋದು" ಎಂಬ ಗಾದೆ ನೆನೆಪಲ್ಲಿ ಇರಬೇಕು!
ನಾನ್ ಪಕ್ಕ ಅದ್ವಯ್ತಿ.. ಆಗಿದ್ದೆ.. ಆದ್ರೆ ಯಾವಾಗ ಆತ್ಮ ಅನ್ನೋದೇ ಇಲ್ಲ ಅಂತ ಅರಿತವಾಯ್ತೋ.. ಆಗ..
=====================================
ಮಾಯ್ಸ!
ಉ: ನಾಸ್ತಿಕ ಯಾರು? ಹೇಗೆ?
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಸವಿತೃರವರೆ,
ನಾಸ್ತಿಕತೆಗೆ rational thought ತಳಹದಿಯಾಗಬಹುದು (ಅಥವಾ ಶ್ರೀನಿಧಿ ಕೊಟ್ಟ ಲಿಂಕಿನಲ್ಲಿರುವಂತೆ, rational atheist ನವರಿಗೆ)
ಇನ್ನು ಅಬ್ಸರ್ವರ್/ಅಬ್ಸರ್ವಡ್ ಇಲ್ಲಿಗೆ ಹೊಂದುವುದಿಲ್ಲ ಅಂತ ಅನಿಸುತ್ತದೆ.
ನನ್ನ ಬ್ಲಾಗನ್ನು ಮತ್ತು ಇಲ್ಲಿಯ ಪ್ರತಿಕ್ರಿಯೆಗಳನ್ನು ನೋಡಿದರೆ, ನಾವೆಲ್ಲಾ ಎಷ್ಟು ಅಕೆಡೆಮಿಕ್ ಆಗಿ ಯೋಚಿಸ್ತೀವಿ ಅಂತ ಅನಿಸ್ತಿದೆ.
ಉ: ನಾಸ್ತಿಕ ಯಾರು? ಹೇಗೆ?
>>ನನ್ನ ಬ್ಲಾಗನ್ನು ಮತ್ತು ಇಲ್ಲಿಯ ಪ್ರತಿಕ್ರಿಯೆಗಳನ್ನು ನೋಡಿದರೆ, ನಾವೆಲ್ಲಾ ಎಷ್ಟು ಅಕೆಡೆಮಿಕ್ ಆಗಿ ಯೋಚಿಸ್ತೀವಿ ಅಂತ ಅನಿಸ್ತಿದೆ
ಇಲ್ಲಿ ನಿಮ್ಮ ಬ್ಲಾಗಿನ ಟೈಟಲ್ ನಾಸ್ತಿಕತೆಗೆ ಸಂಬಂಧಿಸಿದ್ದು. ನಾಸ್ತಿಕತೆಗೆ rational thought ತಳಹದಿಯಾಗಬಹುದಾದರೂ ಅವು ಬೇರೆ ಬೇರೆ ಕಾನ್ಸೆಪ್ಟ್ ಗಳು. ಹಾಗಾಗಿ ಈ ರೀತಿಯ ಪ್ರತಿಕ್ರಿಯೆಗಳು. ನನಗೆ ಯಾವ ರೀತಿಯ ಸೋಜಿಗವೂ ಆಗಲಿಲ್ಲ.
ನೀವು ವೈಚಾರಿಕತೆ / rational thinking ಬಗ್ಗೆ ಬರೆದು ನೋಡಿ ಆಗ ಬರುವ ಪ್ರತಿಕ್ರಿಯೆಗಳು ಪೂರ್ತಿ ಬೇರೆಯೇ ಆಗಿರುತ್ತವೆ.
>ಇನ್ನು ಅಬ್ಸರ್ವರ್/ಅಬ್ಸರ್ವಡ್ ಇಲ್ಲಿಗೆ ಹೊಂದುವುದಿಲ್ಲ ಅಂತ ಅನಿಸುತ್ತದೆ
ಹ ಹ... ನೇರವಾಗಿ ಹೊಂದುವುದಿಲ್ಲ , ನಿಜ. ... ಆದರೆ ಅದರ ನೆರಳನ್ನು ಕಾಣಬಹುದು ಅಷ್ಟೆ.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಅಲ್ಲಲ್ಲ, rational thought ಇರಲಿ, ನಾಸ್ತಿಕತೆಯನ್ನೇ ವಾಸ್ತವದ ನೆಲೆಯಲ್ಲಿ ನೋಡುವುದರ ಬಗ್ಗೆ ಮತ್ತು ಮುಖ್ಯವಾಗಿ ನೈತಿಕ ನೆಲೆಯಲ್ಲಿ ನೋಡುವ ಬಗ್ಗೆ ಯೋಚಿಸುತ್ತಿದ್ದೆ...
ಇರಲಿ ಬಿಡಿ
ಉ: ನಾಸ್ತಿಕ ಯಾರು? ಹೇಗೆ?
ಇಸ್ಲಾಮಿನಲ್ಲಿ ನಾಸ್ತಿಕರನ್ನು ’ಕಾಫಿರ್ ’ ಎನ್ನುತ್ತಾರೆಯೇ? ಆರ್ ಯು ಶೂರ್?
ಅವರು ಮೂರ್ತಿ ಪೂಜಕರನ್ನು ಕಾಫಿರರು ಎನ್ನುತ್ತಾರೆ ಅಂದುಕೊಂಡಿದ್ದೆ.
ಉ: ನಾಸ್ತಿಕ ಯಾರು? ಹೇಗೆ?
ಇಸ್ಲಾಮ್ ನಂಬದವರು ಕಾಪಿರುಗಳು. ಇದರಲ್ಲಿ ಮೂರ್ತಿ ಪೂಜೆ ಮಾಡುವವರು ಕಾಪಿರರೆ ಯಾಕಂದ್ರೆ ಇಸ್ಲಾಮಿನಲ್ಲಿ ಅದಕ್ಕೆ ಎಡೆಯಿಲ್ಲ/ಅವಕಾಶವಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಾಸ್ತಿಕ ಯಾರು? ಹೇಗೆ?
ಕಾಫಿರ್ ಅಂದ್ರೆ ಅವಿಶ್ವಾಸಿ!
ಇಲ್ಲಿ ವಿಶ್ವಾಸ 'ಅದೇ (ಅವೇ 99
)' ಹೆಸರಿನ ನಿರಾಕಾರ ರೂಪದ 'ಒಂದೇ'ದೇವರಲ್ಲಿ.
ಬೇರೆ ನಮ್ಬಿಕೆಗಳೆಲ್ಲವೂ ವರ್ಜ್ಯ! ಹಾಗಾಗಿ ಇತರ ಧರ್ಮದ ಪರಮ ಧಾರ್ಮಿಕರೂ ಕಾಫಿರರೆ! ಮೂರ್ತಿಪೂಜಕರುಊ ಕಾಫಿರ ವರ್ಗದ ಒಂದು ಭಾಗ.
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಸವಿತ್ರು,
ಬರೀ ಬಸವಣ್ಣನವರು ಹೇಳಿರುವ್ದುದು 'ಭವಿ' ಅಂತ, ಇದನ್ನ ಶರಣರು ಹೇಳಿರುವುದು ಅಂತ ಜೆನರಲಯ್ಸ್ ಮಾಡುವುದು ತಪ್ಪಾಗುತ್ತದೆ ಅಂತ ನನ್ನ ಅನಿಸಿಕೆ. ಮಾದರಿ: ಅಲ್ಲಮಪ್ರಬುಗಳು ಬಕುತ/ಬವಿ ಅಂತ ಬೇರೆತನ ಮಾಡಿಲ್ಲಿ ಅಂತ ನನ್ನ ತಿಳುವಳಿಕೆ ಹೇಳುತ್ತಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಾಸ್ತಿಕ ಯಾರು? ಹೇಗೆ?
ವೈಭವ
ಅಂದಿನ ಜನ ಸಾಮನ್ಯರಲ್ಲಿನ ಭವಿ ಅನ್ನೋ ಕಲ್ಪನೆ ಈಗಿನ ನಾಸ್ತಿಕ ಅನ್ನೋ ಮಟ್ಟದ್ದು.
ಆದ್ರೆ ಅಲ್ಲಮ , ಚೆನ್ನ ಬಸವಣ್ಣ ಮತ್ತಿತರ ಶರಣರು ( ಬಸವಣ್ಣನ ವಚನಗಳು ನನ್ನ ಕಣ್ಣಿಗೆ ಬಿದ್ದಿಲ್ಲ) ಅದಕ್ಕೆ ಬೇರೆಯೇ ಅರ್ಥ ಕಲ್ಪಿಸಿದ್ಧಾರೆ.
ಅಲ್ಲಮನೂ ಧಾರಾಳವಾಗಿ ಈ ಪದವನ್ನು ಬಳಸಿದ್ದಾನೆ. ಆದ್ರೆ ಬೇರೆ ಅರ್ಥದಲ್ಲಿ!
ಸವಿತೃ
ಉ: ನಾಸ್ತಿಕ ಯಾರು? ಹೇಗೆ?
ಮಹೇಶರೆ,
ನಾನು ಅದನ್ನು ಅರ್ಥಮಾಡಿಕೊಂಡದ್ದು - ಬೌದ್ಧ ಧರ್ಮದ ಮೂಲದಲ್ಲಿ ನಾಸ್ತಿಕತೆ (ಬಹುಶಃ ದೇವರ ಬಗ್ಗೆ intentional ನಿರ್ಲಕ್ಷ್ಯ) ಇದೆ ಎಂಬುದಾಗಿ.
ಉ: ನಾಸ್ತಿಕ ಯಾರು? ಹೇಗೆ?
ಅನಿವಾಸಿಯವರೆ,
ನಾಸ್ತಿಕತೆ - ಅದರಲ್ಲೂ ಡಾಕಿನ್ಸ್ ಅವರ ನಾಸ್ತಿಕತೆ
scientific proof ಇಲ್ಲದ ಎಲ್ಲಾ ರೀತಿಯ ನಂಬಿಕೆಗಳನ್ನು ಸುಳ್ಳೆನ್ನುತಾರೆ. (ಇದು ಅತೀ ಸುಲಭದ ವಿವರಣೆ)
ಬೌದ್ಧ ಧರ್ಮ (ಹೀನಯಾನ-ಮಹಾಯಾನ-ವಜ್ರಯಾನ ಎಲ್ಲವೂ) ಪುನರ್ಜನ್ಮ-ಮುಕ್ತಿ ಇವುಗಳಲ್ಲಿ ನಂಬಿಕೆ ತೋರುತ್ತದೆ. ದೇವರಿಲ್ಲ ಎಂದರೂ, ಶೂನ್ಯದ ಅನುಭವವೇ ಆತ್ಮದ ಕೊನೆಯ ಹಂತ ಎನ್ನುತ್ತವೆ. ಇದಕ್ಕಾಗಿಯೇ ಇವು ಶೂನ್ಯವಾದ. ನಾಸ್ತಿಕರ ಪ್ರಕಾರ ಈ ಎಲ್ಲಾ ಸಿದ್ಧಾಂತಗಳು ಸುಳ್ಳು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನಾಸ್ತಿಕ ಯಾರು? ಹೇಗೆ?
ಶ್ರೀನಿಧಿ-
ನಿಮ್ಮ ಪ್ರತಿಕ್ರಿಯೆ ಎರಡು ಕಾರಣಕ್ಕೆ ತುಂಬಾ ಮುಖ್ಯ ಅನಿಸುತ್ತಿದೆ. ಮೊದಲನೆಯದಾಗಿ ನೇರವಾಗಿ ರಿಚರ್ಡ್ ಡಾಕಿನ್ಸ್ "ನಾಸ್ತಿಕವಾದ"ದ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ. ಹಾಗೊಂದು ಇದೆ ಎಂದು ನನಗೆ ಅನಿಸುವುದಿಲ್ಲ. ಬೇರೆ ಬೇರೆಯವರು, ಬೇರೆ ಬೇರೆ ನುಡಿಗಟ್ಟುಗಳನ್ನು ಬಳಸಿದ್ದರೂ ಕೂಡ, ತುಂಬಾ ಹಳೆಯ ನಾಸ್ತಿಕವಾದಿಗಳಿಂದ ಹಿಡಿದು ಇಂದಿನವರೆಲ್ಲರ ವಾದದ ಹುರುಳಿನಲ್ಲಿ ಅಂತಹ ವ್ಯತ್ಯಾಸವಿಲ್ಲ. ಇರುವ ವ್ಯತ್ಯಾಸ, ಅಂದಂದಿನ ವೈಜ್ಞಾನಿಕ ಅರಿವಿನ ಮಟ್ಟಕ್ಕೆ ಬೆಸೆದುಕೊಂಡಿದೆ ಎಂಬುದನ್ನು ಗಮನಿಸಬಹುದು.
ಎರಡನೆಯದಾಗಿ, ಡಾಕಿನ್ಸ್‌ನದು "ತುಂಬಾ ಸುಲಭದ ವಿವರಣೆ" ಎಂಬ ತಿರಸ್ಕಾರ. ವಿವರಣೆ ಕಷ್ಟವಾಗಿರಬೇಕಿತ್ತು ಎಂದು ನಿಮ್ಮ ಅನಿಸಿಕೆ ಅಲ್ಲ ಎಂದು ಬಗೆಯುತ್ತೇನೆ. ನೀವು ಹೇಳ ಹೊರಟಿದ್ದು ತುಂಬಾ ಸರಳ ಎಂಬ ಅರ್ಥದಲ್ಲಿ ಎಂದು ತಿಳಿಯುತ್ತೇನೆ.
ಸೈಂಟಿಫಿಕ್ ಪ್ರೂಫಿನ ಮೇಲೆ ಆಧಾರಿಸಿಕೊಂಡದ್ದನ್ನು "ತುಂಬಾ ಸರಳ" ಎಂದು ಹೇಳುವ ಮಾತಲ್ಲಿ - ವೈಜ್ಞಾನಿಕ ಕೆಲಸ, ನಿಲುವು ಮತ್ತು ಅವು ತಂದುಕೊಟ್ಟ ಸವಲತ್ತುಗಳನ್ನು ತುಚ್ಛವಾಗಿ ನೋಡುವ ಗರ್ವ ಕಾಣುತ್ತದೆ. ಏಕೆಂದರೆ ಸೈಂಟಿಫಿಕ್ ಪ್ರೂಫ್ ಎಂಬುದು ಸುಲಭವೂ ಅಲ್ಲ, ಸರಳವೂ ಅಲ್ಲ. ಅಷ್ಟೇ ಯಾಕೆ ಸ್ಥಾವರವೂ ಅಲ್ಲ. ಅದನ್ನು ಆಧರಿಸಿ ಏನನ್ನಾದರೂ ಒಪ್ಪುವುದು ಅಥವಾ ತಿರಸ್ಕರಿಸುವುದು "ಸರಳ" ಎಂದು ನಿಮಗೆ ಏಕೆ ಅನಿಸಿತು ಎಂದು ಆತಂಕವಾಗುತ್ತದೆ. (ಆತಂಕ ಯಾಕೆ ಎಂಬುದು ಇಲ್ಲಿ ಪ್ರಸ್ತುತವಲ್ಲ, ಆದರೆ ನಿಜ)
ಉ: ನಾಸ್ತಿಕ ಯಾರು? ಹೇಗೆ?
ನೀವೇಕೆ ಎಲ್ಲದಕ್ಕೂ ಆತಂಕ ಪಡುತ್ತೀರೋ ತಿಳೀವಲ್ದು. ನನಗೆ ಅನೇಕ ಆಕ್ಷೇಪಣೆಗಳಿವೆ.
1. ಎಲ್ಲಾ ರೀತಿಯ ನಾಸ್ತಿಕರನ್ನೂ ಒಂದೇ ಎಂದು ಗುಂಪು ಮಾಡುತ್ತಿದ್ದೀರ. ಇದು ತಪ್ಪು. ನಾಸ್ತಿಕರಲ್ಲೂ ಬೇರೆ-ಬೇರೆ ಅಭಿಪ್ರಾಯಗಳಿವೆ
http://www.bbc.co.uk/religion/religions/atheism/types/
http://uberkuh.com/node/341
2. ನಾನು ಡಾಕಿನ್ಸ್ನದು ಸುಲಭದ ವಿವರಣೆ ಎಂದಿಲ್ಲ. ಡಾಕಿನ್ಸ್ ಓದದವರಿಗೆ ಚಿಕ್ಕದಾಗಿ ಸುಲಭ ಎಂದೆನಿಸುವ ನನ್ನ ವಿವರಣೆ. ನೀವು ಡಾಕಿನ್ಸ್ ನಿಲುವನ್ನು ಬೌದ್ಧ ಧರ್ಮದೊಂದಿಗೆ ಜೋಡಿಸಿದ್ದ್ದರಿಂದ ನನ್ನ ವಿವರಣೆ ಅಗತ್ಯ ಎನ್ನಿಸಿತು.
3. ನನಗೆ ಸೈಂಟಿಫಿಕ್ ವಿಚಾರಗಳ ಬಗೆಗೆ ಅಸಡ್ಡೆ ಎಂದು ಯಾವ ರೀತಿಯಲ್ಲಿ ನಿರ್ಧರಿಸಿದಿರಿ? ನನಗೇನೋ ಇದು ನಿಮ್ಮ ಪೂರ್ವಾಗ್ರಹ ಎನ್ನಿಸುತ್ತದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನಾಸ್ತಿಕ ಯಾರು? ಹೇಗೆ?
ಎಲ್ಲದಕ್ಕೂ ಆತಂಕ ಪಟ್ಟುಕೊಂಡು ಕೂರೋಕೆ ಆಗತ್ತೇನ್ರಿ? ಇಲ್ಲೊಂದು ಕಾರಣ ಇತ್ತು...ಬಿಡಿ.
ಸರಿ, ಅವೆಲ್ಲಾ ನಾಸ್ತಿಕರಾಗುವುದಕ್ಕೆ ಹಲವು ಕಾರಣಗಳ ಪಟ್ಟಿ ಇದ್ದ ಹಾಗಿದೆ. ಹೇಗೆ ನಮ್ಮ ಧರ್ಮ ನಾವು ನಿರ್ಧರಿಸಿಕೊಳ್ಳಬಹುದೋ ಹಾಗೇ ನಾಸ್ತಿಕವಾದವನ್ನೂ ಆಯ್ದುಕೊಳ್ಳಬಹುದೇನೋ. ಅವೆಲ್ಲಾ "ನಾಸ್ತಿಕವಾದ" ಎಂಬ ಒಂದು ಕೊಡೆಯಡಿ ಇದೆ ಎಂಬುದು ನನ್ನ ಮಾತಿನ ಹಿಂದಿನ ಭಾವ.
ಇನ್ನು, "ಸುಲಭದ ವಿವರಣೆ" ಡಾಕಿನ್ಸ್ ಬಗ್ಗೆ ನಿಮ್ಮ ಟೀಕೆ ಅಂದು ಕೊಂಡು ಅಷ್ಟೆಲ್ಲಾ ಹೇಳಿದೆ. ಅಲ್ಲವೆಂದರೆ, ತಪ್ಪು ನನ್ನದೇ. ನೀವು ಹೇಳಿದ ಮೇಲೆ ತಿಳಿಯಾಯಿತು. ನನ್ನೆಲ್ಲಾ ಮಾತುಗಳೂ ಅದರಿಂದಲೇ ಮೂಡಿದ್ದು.
ನಿಮ್ಮ ಪ್ರತಿಕ್ರಿಯೆಗೆ, ಮತ್ತು ನನ್ನ ತಪ್ಪರಿಕೆ ತಿದ್ದಿದ್ದಕ್ಕೆ ಥ್ಯಾಂಕ್ಸ್...
ಉ: ನಾಸ್ತಿಕ ಯಾರು? ಹೇಗೆ?
ಅನಿವಾಸಿಗಳೆ,
ಒಳ್ಳೆ ಕೇಳ್ಮೆ ಎತ್ತಿದ್ದೀರಿ.
ಇಲ್ಲಿ ನಾಸ್ತಿಕತನವಾಗಲಿ, ಆಸ್ತಿಕತನವಾಗಲಿ ಮೇಲು/ಕೀಳು ಮಾಡಲಾಗುವುದಿಲ್ಲ. ಅವಕ್ಕೆ ಅವುಗಳದೇ ಆದ ಬಳಕೆಗಳು ಮತ್ತು ಮೊಟಕುಗಳು(limitations) ಇವೆ ಅಂತ ನನ್ನ ಅನಿಸಿಕೆ. ನನಗೆ ಆಸ್ತಿಕತನದಿಂದಾಗುವ ಬಳಕೆಗಳೆಲ್ಲ ಬೇಕು ಹಾಗೆ ನಾಸ್ತಿಕತನದ ನಿಲುವುಗಳು ಕೂಡ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಾಸ್ತಿಕ ಯಾರು? ಹೇಗೆ?
ವೈಭವರೆ,
ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ, "ಅಸ್ತಿತ್ವವಾದದ ಬಳಕೆ" ಅಂದರೆ ಏನು ಮತ್ತು ಅದು ಏನನ್ನು ಒಳಗೊಂಡಿದೆ ಎಂಬುದು ಬೇಕು/ಬೇಡಕ್ಕಿಂತ ಮುಖ್ಯ ಅಲ್ಲವೆ?
ಉ: ನಾಸ್ತಿಕ ಯಾರು? ಹೇಗೆ?
"..."ಅಸ್ತಿತ್ವವಾದದ ಬಳಕೆ" ಅಂದರೆ .."
ಆಸ್ತಿಕತನದಿಂದ ಅಲ್ಲವೆ ಈಟೊಂದು ಹಳೆಗನ್ನಡದಲ್ಲಿ ಕಬ್ಬಗಳು, ಶರಣರ ವಚನಗಳು, ದಾಸರ ಪದಗಳು ಬಂದಿರುವುದು. ಆಟೊಂದು ಗುಡಿ ಗೋಪುರ, ಕೆತ್ತನೆ-ಕುಸುರಿಕಲೆಗಳು ಹೊಮ್ಮಿರುವುದು. ಹಾಗಂತ ಆಸ್ತಿಕತನದಿಂದ ಒಳ್ಳೇದೆ ಆಗಿದೆ ಅಂತ ಹೇಳಕ್ಕಾಗಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಾಸ್ತಿಕ ಯಾರು? ಹೇಗೆ?
ನಾಸ್ತಿಕತೆಯ ಬಗ್ಗೆ ತುಂಬಾ ಹಿಂದೆ ಬರೆದಿದ್ದೆ... ಆಸಕ್ತಿಯಿರುಬ್ವವರು ಗಮನಿಸಬಹುದು....
http://uniquesupri.wordpress.com/2008/01/02/“ಥ್ಯಾಂಕ್-ಗಾಡ್-ನಾನು-ನಾಸ್ತ/
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ನಾಸ್ತಿಕ ಯಾರು? ಹೇಗೆ?
ಋಗ್ವೇದದ ನಾಸದೀಯ ಸೂಕ್ತವು ಮೊನೋತೀಸ್ಟ್ ತಲೆಯೋ ಅಥವಾ ಏತೀಸ್ಟೋ ? ಈ ವಿಚಾರವಾಗಿ ಓದುತ್ತಾ ಹೋಗಿದ್ದಾಗ, ಈ ಕೆಳಗಿನ ಒಂದು ಲಿಂಕ್ ಮನಸೆಳೆಯಿತು.
Progress of Atheism in India - A Historical Perspective
ನೋಡಿದಾಗ ತಿಳಿಯಿತು. http://www.positiveatheism.org/ ಅಂತ ಸೈಟೇ ಇದೆ!!!! ಹಂಸಾನಂದಿಯವರು, ನಾಸದೀಯ ಸೂಕ್ತದ ಕನ್ನಡ ಅವತರಣಿಕೆಯನ್ನು ಹಿಂದೆ ಬರೆದಿದ್ದರು.