ಈಗಿನಂತೆ 6 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನೀತಿವಂತರು ದೇವರ ವಿವರಕ್ಕಾಗಿ ಕಾಯುವುದು ಮಿಸ್ ಕಾಲನ್ನು ನಿರೀಕ್ಷಿಸಿದಂತೆ:ಗಾದೆಗೊಂದು ಗುದ್ದು ಭಾಗ ೬
anilkumar's picture
ಎಚ್.ಎ. ಅನಿಲ್ ಕುಮಾರ್
22
May
2010
ಪುಟ

(೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ.

(೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 868
ಮತ್ತೆ ಕಾಡಿದ ರಷೋಮನ್
Harsha Kugwe's picture
Harsha Kumar Kugwe
17
Mar
2012
ಬ್ಲಾಗ್ ಬರಹ

 ಕಳೆದ ಮಾರ್ಚ್ ೨ ರಂದು ನಡೆದ  ಬೆಂಗಳೂರಿನಲ್ಲಿ ನಡೆದ ವಕೀಲರು - ಪತ್ರಕರ್ತರು - ಪೊಲೀಸರ ನಡುವಿನ ವೃತ್ತಿಗಲಭೆ ನಿಧಾನಕ್ಕೆ ಜನಮಾನಸದಿಂದ ದೂರಾಗತೊಡಗಿದೆ. ಅಂದು ಮೂರೂ...

ಪ್ರತಿಕ್ರಿಯೆಗಳು: 5
ಹಿಟ್ಸ್ : 181
ಮಿನುಗೆಲೆ ಮಿನುಗೆಲೆ ಮಿಣುಕು ಹುಳ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
18
Apr
2011
ಬ್ಲಾಗ್ ಬರಹ

ಮಳೆಗಾಲದ ಒಂದು ರಾತ್ರಿ. ಮಳೆಯ ಕಾರ್ಮೋಡಗಳಿದ್ದರೂ, ಮಳೆ ಆಗ ತಾನೆ ನಿಂತಿತ್ತು. ತಂಗಾಳಿ ಬೀಸುತ್ತಿತ್ತು. ಕಾಡಿನ ಕಿಬ್ಬದಿಯಾದ್ದರಿಂದ ಸುತ್ತಲೂ ಕತ್ತಲು. ಅನತಿ ದೂರದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 525
ಆಗುಂಬೆಯ ಸಂಜೆಯೂ..... 'ಹ್ಹಿ ಹ್ಹಿ' ಯು.....
rajeshnaik111's picture
01
Oct
2006
ಬ್ಲಾಗ್ ಬರಹ

ಆದಿತ್ಯವಾರಗಳಂದು ಯಾವುದೇ ಚಾರಣ ಇರದಿದ್ದರೆ ಸಂಜೆ ಆಗುಂಬೆಗೆ ಹೋಗುವುದು ರೂಢಿಯಾಗಿಬಿಟ್ಟಿದೆ. ಮಧ್ಯಾಹ್ನ ೩ಕ್ಕೆ ಉಡುಪಿಯಿಂದ ಹೊರಟು, ಸೋಮೇಶ್ವರದಲ್ಲಿ ಬಿಸಿ ಬಿಸಿ ನೀರ್ ದೋಸೆ...

ಪ್ರತಿಕ್ರಿಯೆಗಳು: 2
ಹಿಟ್ಸ್ : 2,485
ಕಂಪ್ಯೂಟರ್ ‍ ಪಾಠ -೨ . - ಕಂಪ್ಯೂಟರ್ ರಚನೆ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
14
Sep
2006
ಬ್ಲಾಗ್ ಬರಹ
ಯಾವುದೇ ವಸ್ತುವು ಪರಮಾಣು ಮತ್ತು ಅಣುಗಳಿಂದ ಆಗಿರುವಂತೆ ಕಂಪ್ಯೂಟರ್ ಬಿಟ್ ಮತ್ತು ಬೈಟ್‍ಗಳಿಂದ ಆಗಿದೆ . ಬಿಟ್ ಎಂದರೆ binary digit . ಬಿಟ್ ಎನ್ನುವದು ಕಾಂತೀಯ(magnetic)...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,702
ಬೀchi ಜೋಕುಗಳು (೧೦): ಹಾಸ್ಯ ಬ್ರಹ್ಮರ ಇನ್ನೂ ಕೆಲವು ಜೋಕುಗಳು
makara's picture
ಶ್ರೀಧರ್ ಬಂಡ್ರಿ
07
Nov
2011
ಲೇಖನ

                        ...

ಪ್ರತಿಕ್ರಿಯೆಗಳು: 16
ಹಿಟ್ಸ್ : 472
ಕ್ಷುಲ್ಲಕ ಕಾರಣ, ಅಮಾಯಕರ ಸಾವು
abdul's picture
ಅಬ್ದುಲ್ ಲತೀಫ್ ಸಯ್ಯದ್
21
Jul
2011
ಲೇಖನ
ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ...
ಪ್ರತಿಕ್ರಿಯೆಗಳು: 15
ಹಿಟ್ಸ್ : 751
ನರಕಕ್ಕೊಂದು ಸುಲಭದ ದಾರಿ
hamsanandi's picture
ಹಂಸಾನಂದಿ
08
Jun
2010
ಬ್ಲಾಗ್ ಬರಹ

ಮರಗಳ ಕಡಿದು ಪಶುಗಳ ಕೊಂದು
ನೆತ್ತರ ಕೆಸರನು ಮಾಡಿದವರಿಗೂ
ಸ್ವರ್ಗದ ಬಾಗಿಲು ತೆರೆದಿಹುದಾದರೆ
ಮತ್ತಾರು ನರಕಕೆ ಹೋಗುವರು?

...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,049
ನೆನಪಿನ ಚಿತ್ರಕಲಾ ಶಾಲೆ: ಭಾಗ ೫-ಗುರುತ್ವದ ಆಕರ್ಷಣೆ ಮೀರಿ
anilkumar's picture
ಎಚ್.ಎ. ಅನಿಲ್ ಕುಮಾರ್
28
Jul
2011
ಲೇಖನ

                          ಗುರುತ್ವದ ಆಕರ್ಷಣೆ...

ಪ್ರತಿಕ್ರಿಯೆಗಳು: 1
ಹಿಟ್ಸ್ : 299
ಚಾ, ಕಾಪಿ, ಪೆಪ್ಸಿ, ಕೋಲಾ : ಕಾಲು, ಬಾಲ, ಮೂಲ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
16
Dec
2009
ಪುಟ

  ’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್‌’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(...

ಪ್ರತಿಕ್ರಿಯೆಗಳು: 6
ಹಿಟ್ಸ್ : 1,531

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬರ್ಗ್‌ಮನ್‌ನ 'ವಿಂಟರ್‍ ಲೈಟ್'

ಬರ್ಗ್‌ಮನ್‌ನ 'ವಿಂಟರ್‍ ಲೈಟ್'

ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.

ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್‌ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.

ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.

ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಅರ್ಧ ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.

ಆ ಅರ್ಧ ಗಂಟೆಯಲ್ಲಿ ಗೆಳತಿಯ ಪತ್ರ ಓದುತ್ತಾನೆ. ನಂತರ ಬಂದ ಸೈನಿಕನಿಗೆ ಸಾಂತ್ವನ ಹೇಳಬೇಕಾದವನು ತನ್ನ ಒಳಗನ್ನು ಅವನ ಮುಂದೆ ಸುರಿದುಕೊಳ್ಳುತ್ತಾನೆ. ಮದುವೆಯಾಗೆಂದು ಈ ಹಿಂದೆ ಪೀಡಿಸುತ್ತಿದ್ದ ಗೆಳತಿ ಅವಳ ಶಾಲೆಯ ಕೋಣೆಯಲ್ಲಿ ಪಾದ್ರಿಗೆ ಮುಖಾಮುಖಿಯಾಗುತ್ತಾಳೆ. ಪಾದ್ರಿ ಅವಳನ್ನು ತಾನೇಕೆ ಮದುವೆಯಾಗಲಾರೆ ಎಂದು ಹೇಳಿಕೊಳ್ಳುತ್ತಾನೆ. ಅವಳ ಸ್ವಭಾವವನ್ನು ಎತ್ತಾಡಿ ಹಳಿಯುತ್ತಾನೆ. ಅಷ್ಟರಲ್ಲಿ ಸೈನಿಕ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪಾದ್ರಿಯೇ ಹೋಗಿ ಸೈನಿಕನ ಬಸುರಿ ಹೆಂಡತಿಗೆ ಅವಳ ಗಂಡ ಜೀವ ತೆಗೆದುಕೊಂಡ ಸುದ್ದಿ ಮುಟ್ಟಿಸುತ್ತಾನೆ.

ಪಾದ್ರಿಯ ಗೆಳತಿ ಅವನನ್ನು ಮತ್ತೊಂದು ಚರ್ಚಿಗೆ ಕರೆದುಕೊಂಡು ಹೋಗುತ್ತಾಳೆ. ಒಂದು ರೈಲ್ವೆ ಕ್ರಾಸಿಂಗಿನಲ್ಲಿ ಒಂದು ಕ್ಷಣ ಕಾಯುವಾಗ ತಾನು ಪಾದ್ರಿಯಾಗಬೇಕೆಂದು ತನ್ನ ತಂದೆಯ ಕನಸಾಗಿತ್ತು ಎನ್ನುತ್ತಾನೆ. ಹೆಣದ ಪೆಟ್ಟಿಗೆಗಳಂಥ ಗೂಡ್ಸ್ ಗಾಡಿ ಹಾದು ಹೋಗುತ್ತದೆ.

ಗೂನು ಬೆನ್ನಿನ, ನೋವಿನಿಂದ ನರಳುತ್ತಿರುವ ಪಾದ್ರಿಯ ಸಹಾಯಕ ಜೀಸಸ್ಸಿನ ನರಳಾಟದ ಬಗ್ಗೆ ತನ್ನ ವ್ಯಾಖ್ಯೆಯನ್ನು ಕೊಡುತ್ತಾನೆ. ತಾನು ಅನುಭವಿಸುತ್ತಿರುವ ವೇದನೆಯ ಮುಂದೆ ಜೀಸಸನ ಹಿಂಸೆ ಹೆಚ್ಚೇನೂ ಅಲ್ಲ ಎಂದು ನಮ್ರತೆಯಿಂದ ಹೇಳುತ್ತಾನೆ. ಆದರೆ, ಕಡೆ ಗಳಿಗೆಯಲ್ಲಿ ಜೀಸಸ್ಸಿಗೆ ತನ್ನ ದೇವರ ಬಗ್ಗೆ ಹುಟ್ಟಿದ ಅನುಮಾನ ತಂದಿರಬಹುದಾದ ನೋವು ದೈಹಿಕ ನೋವು ಹಿಂಸೆಗಿಂತ ಅತ್ಯಂತ ತೀವ್ರವಲ್ಲವೆ ಎಂದು ಕೇಳುತ್ತಾನೆ.

ಪಾದ್ರಿ ಮತ್ತೆ ಸ್ಥಿಮಿತ ಕಂಡುಕೊಂಡವನಂತೆ ಭದ್ರ ಧ್ವನಿಯಲ್ಲಿ ಚರ್ಚ್ ಸೇವೆ ಶುರುಮಾಡುತ್ತಾನೆ. ಅವನ ಗೆಳತಿ ಅವನ ಪ್ರವಚನ ಕೇಳಲು ಹಿಂದಿನ ಸಾಲಲ್ಲಿ ಕೂತಿದ್ದಾಳೆ.

ಬರ್ಗ್‌ಮನ್‌ನ ವಿಂಟರ್‌ಲೈಟ್ ಚಿತ್ರ ಆ ಹಳ್ಳಿಯಲ್ಲಿ ತಟಸ್ಥವಾಗಿ ಹರಿಯುವ ನದಿಯಂತೆ ಹರಿದು ಕೊನೆಗೊಳ್ಳುತ್ತದೆ.
No votes yet
1623 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
anivaasi's picture
06
Aug
2007
2:32

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'ಒಂದಷ್ಟು ಚಿತ್ರಗಳನ್ನೂ ಈಗ ಜೋಡಿಸಿದ್ದೇನೆ. ಅಂದ ಹಾಗೆ, ಈ ಚಿತ್ರವನ್ನು ಮಾಡಿದಾಗ 'Bergman makes a movie' ಎಂಬ ಡಾಕ್ಯುಮೆಂಟರಿಯೂ ಇದೆ. ಚಿತ್ರಕತೆಯನ್ನು ರಚಿಸುವಲ್ಲಿಂದ ಹಿಡಿದು ಚಿತ್ರ ಬಿಡುಗಡೆಯಾಗಿ ಅದರ ವಿಮರ್ಶೆಗಳವರೆಗಿನ ಬರ್ಗ್‌ಮನ್‌ನ ಜತೆ ಮಾತುಕತೆ ಇದೆ.
muralihr's picture
06
Aug
2007
2:01

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'ನಿಮ್ಮ ಜೊತೆ ಒ೦ದು ಸಿನಿಮಾ ನೋಡೊಕ್ಕೆ ಆಸೆ ಯಿದೆ. ಬೆ೦ಗಳೂರಿಗೆ ಬ೦ದಾಗ ಯಾವ್ ದಾದ್ರೂ ಒಳ್ಳೇ(?) ಸಿನಿಮಾ ನೋಡೋಣ. ಮು.
anivaasi's picture
07
Aug
2007
5:39

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'ಮುರಳಿ, ನಿಮ್ಮ ಆತ್ಮೀಯತೆಗೆ ಥ್ಯಾಂಕ್ಸ್. ಖಂಡಿತ ನೋಡೋಣ - ಇಷ್ಟವಾಗುವಂಥ ಸಿನೆಮಾವನ್ನು.
Abhaya Simha's picture
06
Aug
2007
9:20

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್''ವಿನ್ಟರ್ ಲೈಟ್'' ನಾನು ನೋಡಿದ ಮೊದಲ ಬರ್ಗ್ಮನ್ ಚಿತ್ರ. ಭಾರೀ ಪರಿಣಾಮಕಾರಿ ಆಗಿತ್ತು. ಅದರ ಕುರಿತ ಸುಂದರ ಬರವಣಿಗೆಗೆ ಧನ್ಯವಾದಗಳು ಸರ್. ಚಿತ್ರದುದ್ದಕ್ಕೂ ಇದ್ದ Coldness ಇನ್ನೂ ಮರೆಯಲಾರೆ. ದೃಶ್ಯ ಸಂಯೋಜನೆಯಿಂದ ಹಿಡಿದು, ಮಾತಿನ ಧಾಟಿ ಪ್ರತಿಯೊಂದರಲ್ಲೂ ಅದು ಚೆನ್ನಾಗಿ ಮೂಡಿಬಂದಿತ್ತು. ಬರ್ಗ್ಮನ್ ಬಗ್ಗೆ ಹುಚ್ಚು ಹಿಡಿಸಿದ ಚಿತ್ರ ಇದಾಗಿತ್ತು ನನ್ನ ಪಾಲಿಗೆ. ವಿಷಯಾಂತರಕ್ಕೆ ಕ್ಷಮೆ ಇರಲಿ, ಆದರೆ ಇಲ್ಲಿ ಹೇಳಲೇ ಬೇಕೆನಿಸಿದ್ದಕ್ಕೆ ಬರೆದುಕೊಳ್ಳುತ್ತಿದ್ದೆನೆ. ಇತ್ತೀಚೆಗೆ ಖ್ಯಾತ ಸೀತಾರಾಂರ ಮೀರಾ ಮಾಧವ ರಾಘವ ಚಿತ್ರ ನೋಡಿದೆ. ಇನ್ನೂ ಅನೇಕ ಕನ್ನಡ ಚಿತ್ರಗಳನ್ನು ನೋಡಿದೆ. ನಾವ್ಯಾಕೆ ಹೀಗೆ ಎನ್ನುವ ಬಗ್ಗೆ ನನಗೆ ಮತ್ತೆ ಮತ್ತೆ ಪ್ರಶ್ನೆ ಎದುರಾಗುತ್ತದೆ. ಮುಂಗಾರು ಮಳೆ ಚಿತ್ರ ೨೨೦ ದಿನ ಓಡುವುದು ಯಾಕೆ ನಮ್ಮಲ್ಲಿ? ಬುದ್ದಿವಂತರಿಗೆ ಕೊರತೆಯಿಲ್ಲದ ನಮ್ಮಲ್ಲಿ ಉತ್ತಮ ಚಿತ್ರಗಳಿಗೇಕೆ ಕೊರತೆ? ನಾವು ಎಲ್ಲಿ ತಪ್ಪುತ್ತಿದ್ದೇವೆ ಎಂದು ಒಂದು ಗಂಭೀರ ಅಧ್ಯಯನ ಮಾಡುವುದು ಅಗತ್ಯ ಎಂದು ನನಗೆ ಮತ್ತೆ ಮತ್ತೆ ಅನಿಸುತ್ತಿದೆ. Abhaya Simha www.rlp.in
anivaasi's picture
07
Aug
2007
5:44

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'ಅಭಯ ಸಿಂಹ, ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್. ವಿಂಟರ್‍ ಲೈಟ್ ಚಿತ್ರವನ್ನು ಸ್ವೀಡಿಷ್ ಜನ ಮೊದಲು ತೆರೆ ಕಂಡಾಗ ಹೇಗೆ ತೆಗೆದುಕೊಂಡರೋ ಗೊತ್ತಿಲ್ಲ. ಇಂಡಿಯಾದ ಸಿನೆಮಾ ಜಗತ್ತಿನಲ್ಲಿ ಸತ್ಯಜಿತ್ ರಾಯ್ ಕೂಡ ಒಂದು ರೀತಿಯ ಅಬರೇಷನ್ ಇರಬಹುದಾ ಎಂದು ಒಮ್ಮೊಮ್ಮೆ ದಿಗಿಲಾಗುತ್ತದೆ. ಒಂದು ಜನಾಂಗದ ಸಿನೆಮಾ ಆ ಜನಾಂಗದ ಉಳಿದೆಲ್ಲಾ ಬದುಕಿನ ವಿವರಗಳಿಗೂ ಕೊಂಡಿ ಹಾಕಿಕೊಂಡಿರುತ್ತದೆ ಅನ್ನುವುದಂತೂ ನಿಜ. ಸಿನೆಮಾವನ್ನು ಗಂಭೀರವಾಗಿ ತೆಗೊಳ್ಳುವ ಮನೋಭಾವದ ಕೊರತೆಯಿರುವಾಗ, ಅದನ್ನು ಗಂಭೀರವಾಗಿ ಚರ್ಚಿಸುವ ಕೊರತೆಯಿರುವಾಗ, ಗಂಭೀರವಾಗಿ ಚಿತ್ರ ಮಾಡುವವರ ಕೊರತೆ ತುಂಬಾ ಸಹಜ. ಗಂಭೀರ ಚಿತ್ರ-> ಗಂಭೀರ ಚರ್ಚೆ-> ಸಿನೆಮಾ ಬಗ್ಗೆ ಗಂಭೀರ ಮನೋಭಾವ ಎಂದು ಮತ್ತೊಂದು ದಿಕ್ಕಿನಲ್ಲೂ ನೋಡುವವರಿದ್ದಾರೆ. ಬಹುಶಃ ಎರಡು ರೀತಿಯಲ್ಲೂ ಒಂದಿಷ್ಟು ಸತ್ಯಾಂಶ ಇದ್ದೀತು. ಆದರೂ ನಮ್ಮ ಯುವಕರಿಗೆ, ನಡುವಯಸ್ಸಿನವರಿಗೆ ಮತ್ತು ಹಿರಿಯರಿಗೂ ಕೂಡ ಕೌಮಾರ್ಯದವರಿಗಾಗಿ ಮಾಡಿದ ಚಿತ್ರಗಳಷ್ಟೇ ನೋಡಲು ಸಿಕ್ಕುವುದು ವಿಪರ್ಯಾಸವಲ್ಲವೆ? ಉಳಿದಂತೆ ಚರ್ಚೆ, ವಿಮರ್ಶೆ ಮತ್ತು ಇನ್ನಿತರ ಸಿನೆಮಾ ಸಂಬಂಧಿತ ಚಟುವಟಿಕೆ ಕೂಡ ಈ ರೀತಿಯ ಚಿತ್ರಗಳ ಸುತ್ತ ಸುತ್ತುವ ವ್ಯವಸ್ಥೆ ಏರ್ಪಟ್ಟಿರುವುದು ಕೂಡ ಗಮನಿಸಿ. ಮುಂಗಾರು ಮಳೆ ಬಗ್ಗೆಗಿನ ನನ್ನ ಯೋಚನೆಗಳು ಸಂಪದದಲ್ಲಿ ಒಂದು ಗಂಭೀರ ಚರ್ಚೆಗೆ ಬಾಗಿಲು ತೆರೆಯಬಹುದು ಅಂದಕೊಂಡಿದ್ದೆ. ಆದರೆ ಅದರ ಪ್ರತಿಕ್ರಿಯೆಗಳು ಮತ್ತಾವುದೋ ದಿಕ್ಕಿನತ್ತ ಬೆರಳು ತೋರಿದವು. ಅಧ್ಯಯನದ ಬಗ್ಗೆ ಹೇಳುವುದಾದರೆ: ನಾನು ಓದಿದ 'Cinema and Urban Poor in South India' ಎಂಬ Sara Dickey ಎಂಬಾಕೆಯ ಪುಸ್ತಕ ಜನಪ್ರಿಯ ಚಿತ್ರ ಮತ್ತು ಅದರ ಪ್ರೇಕ್ಷಕರ ನಡುವಿನ ನಂಟನ್ನು ಅಧ್ಯಯನಪೂರ್ಣವಾಗಿ ಚರ್ಚಿಸುತ್ತದೆ. ಜನಪ್ರಿಯ ಚಿತ್ರಗಳು ಪ್ರೇಕ್ಷಕರ ಜತೆ ನಡೆಸುವ ಸಂವಾದದ ಬಗ್ಗೆ ಒಳನೋಟಗಳನ್ನು ಕೊಡುತ್ತದೆ. ೧೯೯೦ರ ಆಸುಪಾಸು ಮದುರೈ ನಗರದಲ್ಲಿ ನಡೆಸಿದ ಆಧ್ಯಯನವಾದರೂ ಅದರಲ್ಲಿರುವ ಹೊಳಹುಗಳು ಬೇರೆ ಭಾಷೆಗಳಿಗೂ ಅನ್ವಯಿಸುತ್ತದೆ ಮತ್ತು ಇಂದಿಗೂ ಆ ಸಂವಾದದ ಚಹರೆಗಳು ಹೆಚ್ಚಾಗಿ ಬದಲಾಗಿಲ್ಲ ಅನಿಸುತ್ತದೆ. ಅದರಲ್ಲಿ ಚರ್ಚಿತವಾಗಿರುವ ತಮಿಳು ಚಿತ್ರಗಳು, ಅದರ ಪ್ರೇಕ್ಷಕರು, ವಿಮರ್ಶಕರು, ನಿರ್ದೇಶಕರು ಎಲ್ಲರೊಡೆಗಿನ ಮಾತುಕತೆ ಈವತ್ತಿನ ಉಳಿದ ಭಾಷೆಯ ಚಿತ್ರೋದ್ಯಮದ ಬಗ್ಗೆಗೂ ಬೆಳಕು ಚೆಲ್ಲುವಂಥದು.
hpn's picture
09
Aug
2007
9:26

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'ಇತ್ತೀಚೆಗೆ ಈ ಚಿತ್ರ ನೋಡಿದೆ. ಚಿತ್ರ ನೋಡಿದ ನಂತರ ಮತ್ತೆ ನಿಮ್ಮ ಲೇಖನ ಓದಿದೆ. ಚಿತ್ರದ ಬಗ್ಗೆ ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆಯೆಂದನಿಸಿತು. ಪಾದ್ರಿ ಮತ್ತು ಪಾದ್ರಿಯ ಸಹಾಯಕನ ನಡುವೆ ನಡೆಯುವ ಮಾತು ಬಹಳ ಅರ್ಥಪೂರ್ಣವಾಗಿದೆ. ದೇವರ ಇರುವಿಕೆಯ ಬಗೆಗಿನ ವಿಶ್ವಾಸದ ಕುರಿತು ಆಲೋಚೆನೆಗೆ ಎಡೆ ಮಾಡಿಡುತ್ತದೆ :) -- ನನ್ನ ಬ್ಲಾಗ್: ಪರಿವೇಶಣ | PariveshaNa
hpn's picture
09
Aug
2007
9:33

ಉ: ಬರ್ಗ್‌ಮನ್‌ನ 'ವಿಂಟರ್‍ ಲೈಟ್'ಹೇಳುವುದ ಮರೆತೆ... ಚಿತ್ರದುದ್ದಕ್ಕೂ ಪ್ರತಿಯೊಂದೂ ಫ್ರೇಮ್ ಫೊಟೋಗ್ರಾಫಿಕ್ ಆಗಿದೆ, ಬಹಳ ಒಳ್ಳೆಯ ಕ್ಯಾಮೆರಾವರ್ಕ್ - ಅದರಲ್ಲಿ ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಚಿತ್ರ ನೋಡಿದ ಮೇಲೆ ನನಗನ್ನಿಸಿತು. ಅವುಗಳಲ್ಲಿ ನೀವು ತೆಗೆದಿರುವ ಸ್ಕ್ರೀನ್ ಕ್ಯಾಪ್ಚರ್ ಗಳು ಕ್ಲಾಸಿಕ್. ಉತ್ತಮ ಆಯ್ಕೆ. -- ನನ್ನ ಬ್ಲಾಗ್: ಪರಿವೇಶಣ | PariveshaNa