ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಮೋರನ ನಿಜ ಮೋರೆ

December 5, 2007 - 4:48pm — anivaasi

ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. "ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ" ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ "ಬೌಲಿಂಗ್ ಫಾರ್‍ ಕಾಲಂಬೈನ್" ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು.

ನಾನು ಈ ಮೈಕಲ್ ಮೋರನ ತೊಂಬತ್ತರ ದಶಕದ ಟಿವಿ ಸೀರಿಯಲ್ ನೋಡಿ ಖುಷಿಸಿದ್ದು ನೆನಪಾಯಿತು. "ಮೈಕಲ್ ಮೋರ್‍ ಶೋ" ಎಂದೇ ಅದರ ಹೆಸರು. ವಾರ ವಾರವೂ ಸಾಮಾಜಿಕ ಅನ್ಯಾಯಗಳ ವಿರುದ್ಧ ದೊಡ್ಡ ಕಂಪನಿಗಳ ಎದುರು ನಿಲ್ಲುತ್ತಿದ್ದ. ಹಲವಾರು ನಾಟಕೀಯ ಪ್ರಸಂಗಗಳ ಮೂಲಕ ಆ ಕಂಪನಿಗೆ ತನ್ನ ತಪ್ಪನ್ನು ಎದುರುಗೊಳ್ಳುವಂತೆ ಮಾಡುತ್ತಿದ್ದ.

"ಬೌಲಿಂಗ್ ಫಾರ್‍ ಕಾಲಂಬೈನ್" ನನಗೆ ಅಷ್ಟೇನೂ ಇಷ್ಟವಾಗದ ಚಿತ್ರ. ಉದ್ರಿಕ್ತ ರಾಜಕೀಯ ಚರ್ಚೆಯ ಬಗ್ಗೆ ನನಗೆ ಯಾವಾಗಲೂ ಅನುಮಾನ. ಒಂದು ಕಾರಣ ಅದಾದರೆ, ಮತ್ತೊಂದು ಕಾರಣ ಚಾಮ್‌ಸ್ಕಿ ಮತ್ತು ಇನ್ನಿತರರನ್ನು ಓದಿದ್ದ ನನಗೆ ಅವನು ಹೊಸದೇನೂ ಹೇಳಿದಂತೆ ಅನಿಸಿರಲಿಲ್ಲ. "ಡಾಕ್ಯುಮೆಂಟರಿಗಳನ್ನು ಜನಪ್ರಿಯಗೊಳಿಸಿದ, ಅದೂ ಅಮೇರಿಕಾದಲ್ಲಿ" ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದನ್ನು ಹೀಗೆ ಮಾಡಬೇಕೆ ಎಂದು ಆಗ ಚಿಂತಿಸಿದ್ದೆ. ಅದೇ ಕಾರಣಕ್ಕೆ ಅವನ ಉಳಿದ ಯಾವುದೇ ಡಾಕ್ಯುಮೆಂಟರಿ ನೋಡಬೇಕು ಅನಿಸಿರಲಿಲ್ಲ. ಕ್ಯಾನ್‌ನಲ್ಲಿ ಪಾಮ್‌ ಡಿ'ಓರ್‍ ಪ್ರಶಸ್ತಿ ಪಡೆದ 'ಫಾರನ್‌ಹೈಟ್ 9/11' ಕೂಡ ನೋಡಬೇಕನಿಸಿಲ್ಲ.ಇರಲಿ.

ಮೊನ್ನೆ "ಮ್ಯಾನುಫಾಕ್ಚರಿಂಗ್ ಡಿಸ್ಸೆಂಟ್" ಎಂಬ ಸಾಕ್ಷ್ಯಚಿತ್ರ ನೋಡಿದೆ. (ಚಾಮ್‌ಸ್ಕಿಯ "ಮ್ಯಾನುಫಾಕ್ಚರಿಂಗ್ ಕನ್ಸೆಂಟ್" ನಿಮಗೆ ನೆನಪಾಗಬಹುದು) ಒಂದು ರೀತಿಯಲ್ಲಿ ಈ ಸಾಕ್ಷ್ಯ ಚಿತ್ರ ನನ್ನನ್ನು ಚಿಂತೆಗೆ ಹಚ್ಚಿತು . ರಾಜಕೀಯ ಚರ್ಚೆ, ನಿರೂಪಣೆ, ವಿವರಣೆ (ಒಟ್ಟಾರೆ ಎಲ್ಲ ಡಿಸ್ಕೋರ್ಸ್) ಗಳ ಬಗ್ಗೆ ಮತ್ತೊಮ್ಮೆ ಚಿಂತಿಸುವಂತೆ ಮಾಡಿತು. ಇನ್ನೊಂದು ನೆಲೆಯಲ್ಲಿ ರಾಜಕೀಯದ ಬಗೆಗಿನ ನನ್ನ ಮೂಲ ನಿಲುವಿಗೆ ಬಲ ಸಿಕ್ಕಿದ ಸಮಾಧಾನವೂ ಆಯಿತು.

"ಮ್ಯಾನುಫಾಕ್ಚರಿಂಗ್ ಡಿಸ್ಸೆಂಟ್"ನ್ನು ಮಾಡಿದ ಮಹಿಳೆ ಕ್ಯಾನಡಾದ ಡೆಬ್ಬಿ ಮೆಲ್ನಿಕ್‌ ಮತ್ತು ಆಕೆಯ ಸಂಗಾತಿ ರಿಕ್ ಕೇನ್. ಚಿತ್ರದ ಒಟ್ಟಾರೆ ತಿರುಳು ಇಷ್ಟು. ಮೈಕಲ್ ಮೋರನನ್ನು, ಅವನ ಕೆಲಸದ ಕ್ರಮವನ್ನು ವಿವರಿಸುವುದು ಮತ್ತು ತೆರೆದಿಡುವುದು. ಅವನು ಹುಟ್ಟಿದ ಮಿಷಿಗನ್‌ನ ಫ್ಲಿಂಟ್ ಎಂಬ ಊರಿಗೆ ಹೋಗಿ ಅವನ ಗೆಳೆಯರನ್ನು ಮಾತಾಡಿಸಿವುದರಿಂದ ಇವರ ಚಿತ್ರ ಶುರುವಾಗುತ್ತದೆ. ಅಲ್ಲಿ ಮೈಕಲ್ ಮೋರ್‍ ಮಾಡಿದ "ರಾಜರ್‍ ಅಂಡ್ ಮಿ" ಎಂಬ ಸಾಕ್ಷ್ಯ ಚಿತ್ರದಲ್ಲಿ ಹೇಳಿರುವ ಸುಳ್ಳುಗಳನ್ನು, ಹೇಳದೇ ಬಿಟ್ಟ ಮುಖ್ಯ ಅಂಶಗಳನ್ನು, ತಿರುಚಿಟ್ಟ ವಾಸ್ತವಗಳನ್ನು ಒಂದಾದ ಮೇಲೆ ಒಂದಾಗಿ ತೆರೆದಿಟ್ಟಿದ್ದಾಳೆ. ಅವನಿಗಿಂತ ಮುಂಚೆಯೇ ಅಲ್ಲಿಯ ಜನರಲ್ ಮೋಟರ್‍ಸ್‌ನ ವಿರುದ್ಧ ಚಳುವಳಿ ನಡೆಸಿದವರನ್ನು ಆ ಚಿತ್ರದಲ್ಲಿ ತಂದೇ ಇಲ್ಲ. ಎಲ್ಲ ತನ್ನಿಂದಾಯಿತು ಎಂಬಂತೆ ಚಿತ್ರಿಸಿದ್ದಾನಂತೆ - ಹೀಗೆ ಮುಂದುವರಿಯುತ್ತದೆ.

ವಾಕ್‌ಸ್ವಾತಂತ್ಯ್ರದ ಬಗ್ಗೆ ತುಂಬಾ ಮಾತಾಡುವ ಮೈಕಲ್ ಮೋರ್‍ ತನ್ನ ಸಭೆಗಳಿಗೆ ಈ ಸಾಕ್ಷ್ಯಚಿತ್ರದ ತಂಡವನ್ನು ಬರದಂತೆ ನೋಡಿಕೊಂಡಿದ್ದ. ಕಡೆಯಲ್ಲಿ ಅವರನ್ನು ತನ್ನ ಒಂದು ಸಭೆಯಿಂದ ಹೊರತಳ್ಳಿಸಿದ್ದು ಅವನ ಪ್ರಾಮಣಿಕತೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ. ಮುಂದೆಯೂ ಈ ಸಾಕ್ಷ್ಯ ಚಿತ್ರ ಅವನ ಚಿತ್ರದ ಹತ್ತಾರು ನಿದರ್ಶನಗಳೊಂದಿಗೆ ಅವನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾ ಹೋಗುತ್ತದೆ. ಮೈಕಲ್ ಮೋರ್‍ ಮಾಡಿಕೊಂಡ ನೂರಾರು ಮಿಲಿಯನ್‌ ಡಾಲರ್‍ಗಳನ್ನು ಒಂದು ಫೌಂಡೇಶನ್ ಮೂಲಕ ಶೇರ್‍ಗಳಲ್ಲಿ - ಅದರಲ್ಲೂ ಅವನು ಸದಾ ಹೀಗಳೆದ, ಇರಾಕ್ ಸಮರದ ಮೂಲಕ ದುಡ್ಡು ಮಾಡಿದ ಹಾಲಿಬರ್ಟನ್ ಸಂಸ್ಥೆಯಲ್ಲೂ ಇಟ್ಟಿದ್ದಾನಂತೆ. ಇದು ಕಡೆಯಲ್ಲಿ ಗೊತ್ತಾದಾಗ ಅದು ಹುಬ್ಬೇರಿಸುವಂತ ವಿಷಯವಾಗುವುದೇ ಇಲ್ಲ!

ಹೊಸ ತಲೆಮಾರಿನ ಎಡ ಪಂಥೀಯರಿಗೆ ಇವನು ಆರಾಧ್ಯನಾಗಿಬಿಟ್ಟಿದ್ದ. ಹಾಗಾಗಿ ಅಮೇರಿಕಕ್ಕೆ ತಾನು ತುಂಬಾ ಮುಖ್ಯ ಅಂದುಕೊಂಡು ಬಿಟ್ಟ. ತನ್ನ "ಫ್ಯಾರನ್‌ಹೈಟ್ 9/11" ಚಿತ್ರದ ಮೂಲಕ ಬುಷನ್ನು ಸೋಲಿಸಬಲ್ಲೆ ಎಂದು ಇವನು ನಿಜವಾಗಿಯೂ ನಂಬಿದ್ದನಂತೆ. ಆದರೆ ಇವನಿಂದ ಬುಷ್‌ಗೆ ಸಹಾಯವಾಗಿರಬಹುದು ಎಂಬ ಮಾತೂ ಇದೆ. ಅದಿರಲಿ, ಬುಷ್‌ನ ಸುಳ್ಳುಗಳನ್ನು ನಂಬಿದ ಅಮೇರಿಕಾದ ಜನತೆ ಮೈಕಲ್ ಮೋರ್‌ನನ್ನೂ ಸಂಭ್ರಮಿಸಿದ್ದು ಏನನ್ನು ಹೇಳುತ್ತದೆ? ಎಷ್ಟೇ ಪ್ರಭಾವಿಯಾದರೂ ರಾಜಕೀಯ ಬದಲಾವಣೆ ಒಬ್ಬನಿಂದ ಆದೀತೆ? ಬುಷ್ ಕೂಡ ಅಮೇರಿಕೆಯ ಚರಿತ್ರೆಯಲ್ಲಿ ವಿಶಿಷ್ಟನಾಗಿಲ್ಲದೇ ಇರಬಹುದು ಅಲ್ಲವೆ? ಈ ಪ್ರಶ್ನೆಗಳ ಬಗ್ಗೆ ಯೋಚಿಸಿದಾಗ, ಯಾವುದೇ ರಾಜಕೀಯ ಆಚರಣೆಯೂ ಬದಲಾವಣೆಯೂ, ಸಮುದಾಯದ ಬೇರುಗಳಲ್ಲೇ ಸಾಕಾರಗೊಳ್ಳಬೇಕು. ಅದಿಲ್ಲದೆ ಹೊರಗಿಂದ, ಮೇಲಿಂದ, ತರಲು ಆಗದು ಎಂಬ ನನ್ನ ಮೂಲ ನಿಲುವು ಒಂದು ರೀತಿಯಲ್ಲಿ ಗಟ್ಟಿಯಾಯಿತು.

ಇದು ಅಮೇರಿಕಾದಲ್ಲಾಗಬಹುದು, ಭಾರತದಲ್ಲಾಗಬಹುದು ಅಥವಾ ಇನ್ನಾವುದೇ ದೇಶದಲ್ಲಾಗಬಹುದು.

~.~
  • anivaasi ರವರ ಬ್ಲಾಗ್
  • Login or register to post comments
  • 323 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 6, 2007 - 12:29am — hpn

ಉ: ಮೋರನ ನಿಜ ಮೋರೆ

hpn's picture

ಮೈಕೆಲ್ ಮೂರ್ ಕುರಿತ ಈ ಡಾಕ್ಯುಮೆಂಟರಿ ಒಮ್ಮೆ ನೋಡಬೇಕು ಹಾಗಾದರೆ. ಆದರೂ ಸದುದ್ದೇಶದಿಂದ ಕೈಗೆತ್ತಿಕೊಂಡ ಪ್ರಾಜೆಕ್ಟುಗಳನ್ನು ಹಾಗೂ ಅವ ಬೀರಿದ ಪ್ರಭಾವವನ್ನು ಮೆಚ್ಚುವಂಥಾದ್ದು.

ಅವ ಮಾಡಿರುವ ಕೆಲಸಕ್ಕೆ ಅವನ ವಿರುದ್ಧದ ಲಾಬಿ ಕೂಡ ಇರುತ್ತೆ ಎಂಬುದನ್ನ ನಾವುಗಳು ಮರೆಯಬಾರದು Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 6, 2007 - 7:48am — anivaasi

ಉ: ಮೋರನ ನಿಜ ಮೋರೆ

anivaasi's picture

ಹರಿ-
ಪ್ರತಿಕ್ರಿಯೆಗೆ ಥ್ಯಾಂಕ್ಸ್.
"ಸದುದ್ದೇಶದಿಂದ ಕೈಗೆತ್ತಿಕೊಂಡ ಪ್ರಾಜೆಕ್ಟ್" : ಒಬ್ಬ ಕಲಾವಿದನ ಉದ್ದೇಶ ಗೊತ್ತಾಗುವುದಿಲ್ಲ, ಗ್ರಹಿಸಬಹುದಷ್ಟೇ; ಅದರಷ್ಟೇ ಮುಖ್ಯ - ಉದ್ದೇಶ ಪೂರೈಸಲು ಕೈಗೊಂಡ ದಾರಿಯಲ್ಲಿ ಪ್ರಾಮಾಣಿಕವಾಗಿ ನಡೆಯುವುದು ಅಲ್ಲವೇ? ಅದು ಇಲ್ಲಿ ಪ್ರಶ್ನೆಯಾಗುತ್ತದೆ! ಒಂದು ಕಾಲ್ಪನಿಕ ಚಿತ್ರ ನೋಡುವಾಗ ನೀವು ನಿಜದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಾಕ್ಷ್ಯ ಚಿತ್ರದಲ್ಲಿ ಚಿತ್ರಕಾರನ ಮೇಲೆ ಆ ವಿಶ್ವಾಸವಿಲ್ಲ ಅಂದರೆ ತುಂಬ ಕಷ್ಟ. ಅಥವಾ ಆ ವಿಶ್ವಾಸ-ದ್ರೋಹವಾದರೂ ಕಷ್ಟ. ಯೋಚಿಸಿ ನೋಡಿ.

ಇನ್ನು ಅವನ ವಿರುದ್ಧದ ಲಾಬಿ ಇರುತ್ತದೆ ಎನ್ನುವುದು ನಿಜ. ಆದರೆ ಈ ಚಿತ್ರವನ್ನು ಮಾಡಿದವರು ಮೊದಲಿಗೆ ಅವನಿಂದ ಪ್ರಭಾವಿತರಾದವರು, ಮೋಹಿತರಾದವರು. ತಮ್ಮನ್ನು ಲೆಫ್ಟ್-ವಿಂಗ್ ಎಂದೇ ಗುರುತಿಸಿಕೊಂಡವರು!

ನನ್ನ ಬರಹದಲ್ಲಿ ಚಿತ್ರಕಾರರ ಬಗ್ಗೆ ಹೆಚ್ಚು ಹೇಳಲಾಗಿಲ್ಲ. ಆಕೆಯ ಜತೆಗೆ ಒಂದು ಇಂಟರ್ವ್ಯೂ ಇಲ್ಲಿದೆ ಓದಿ ನೋಡಿ.
http://www.telegraph.co.uk/arts/main.jhtml?xml=/arts/2007/04/15/svmoore1...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 6, 2007 - 9:35pm — hpn

ಉ: ಮೋರನ ನಿಜ ಮೋರೆ

hpn's picture

ಪ್ರಾಮಾಣಿಕತೆಯೆಂಬುದು ಯಾರಿಗೆ, ಯಾವುದಕ್ಕೆ ಎಂಬ ಆಲೋಚನೆ ಬರದೆ ಇರುವುದಿಲ್ಲ. ತನ್ನ ಅಥವ ಯೋಜನೆಯ ಉದ್ದೇಶ ಪೂರೈಸಿಕೊಳ್ಳಲು ಕೆಲವೊಮ್ಮೆ ಕಲಾವಿದ ಗೆರೆ ದಾಟಿದಾಗ ನಮಗೆಲ್ಲ ಒಂದಲ್ಲ ಒಂದು ದಿನ ಗೊತ್ತಾಗದೇ ಇರುವುದಿಲ್ಲ ಅಲ್ವೆ? ಇವೆಲ್ಲದರ ನಡುವೆ gcಯವರು ತಿಳಿಸಿರುವಂತೆ ಅವನು "ಅಮೆರಿಕದ ಬಂದೂಕು ಸಂಸ್ಕೃತಿಯ ಪರಿಣಾಮಗಳು, ಯುದ್ಧದಾಸೆ, ಆರೋಗ್ಯ ವ್ಯವಸ್ಥೆಯ ವೈಫಲ್ಯ" ಇತ್ಯಾದಿಗಳ ಬಗ್ಗೆ ಬೆಳಕಂತೂ ಚೆಲ್ಲಿದ್ದಾನೆ. ಈ ಕಾರ್ಯ ನನಗೆ ಪ್ರಶಂಸನೀಯ ಅನ್ಸತ್ತೆ. ಹೀಗೆ ಮಾಡುವಾಗ ಅವನೊಂದಷ್ಟು ದುಡ್ಡು ಮಾಡಿಕೊಂಡಿದ್ದರೆ ಅದು ವೆಲ್ ಡಿಸರ್ವ್ಡ್ ಅಂತಾನೂ ಅನ್ಸತ್ತೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 7, 2007 - 8:11am — anivaasi

ಉ: ಮೋರನ ನಿಜ ಮೋರೆ

anivaasi's picture

ಹರಿ,
ಪ್ರಾಮಾಣಿಕತೆ ತಾನು ಕೈಗೆತ್ತಿಕೊಂಡ ವಸ್ತುವಿನ ಬಗ್ಗೆ. ತನ್ನ ನಿಲುವನ್ನು ಕಿರುಚಿ ಹೇಳಲು ಸುಳ್ಳು ಹೇಳಿರಬಹುದು ಎಂದರೂ ಆತಂಕವಿಲ್ಲವೇ? Smiling ಇರಲಿ, ಅವನು ಬೆಳಕು ಚೆಲ್ಲಿರುವುದು ಹೊಸತಲ್ಲ. ಆದರೆ ಅದನ್ನು ಅಮೇರಿಕದವರಿಗೆ ಉಣಿಸಿದ ರೀತಿ ಹೊಸದು ಅಷ್ಟೆ! ( ಬಹುಶಃ ಕೆನಡಾ ಮತ್ತು ಆಸ್ಟ್ರೇಲಿಯದಲ್ಲಿ ಡಾಕ್ಯುಮೆಂಟರಿಗಳ ಉದ್ದ ಪರಂಪರೆ ಇರುವುದರಿಂದ ನನಗೆ ಹೀಗನಿಸುತ್ತಿರಬಹುದು)
ಅವನು ಮಾಡಿಕೊಂಡ ದುಡ್ಡು ವೆಲ್ ಡಿಸರ್ವ್ಡ್ ಅನ್ನುವ ಬಗ್ಗೆ ಯೋಚಿಸುತ್ತಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 6, 2007 - 2:48pm — gc

ಉ: ಮೋರನ ನಿಜ ಮೋರೆ

gc's picture

ಮೈಕಲ್ ಮೂರ್ ಹೇಳಿದ್ದೆಲ್ಲ ಮಾಡಿದ್ದೆಲ್ಲ ನಂಬುವುದು ಕಷ್ಟ. ತನ್ನನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ಚಿತ್ರಗಳನ್ನು ನಿರ್ಮಿಸಿ ಸಾಕಷ್ಟು ಯಶಸ್ಸು ಕಂಡ ಇವನ ವಿರುದ್ದ ಲಾಬಿಗಳು ಮತ್ತು ಹೊಟ್ಟೆಕಿಚ್ಚಿರುವ ಜನ ಅವನ ಚಾರಿತ್ರ್ಯ ವಧೆ ಮಾಡಹೊರಟಿರುವುದು ಹೊಸತೇನಲ್ಲ. ಈತನಿಗೆ ತನ್ನ ಚಿತ್ರಗಳು ಭಾರಿ ಪ್ರಭಾವ ಬೀರುತ್ತವೆ ಅನ್ನೋ ಅಹಂ ಇದೆ ಅನ್ನುವುದು ನಿಜ. ಒಡಕುಂಟು ಮಾಡುವ ಇವನ ವ್ಯಕ್ತಿತ್ವದ ಸುತ್ತ ವಿವಾದಗಳು ಹಬ್ಬುತ್ತವೆ. ೨೦ರ ಹರೆಯದ ಅನನುಭವಿ ಎಡ ಪಂಥೀಯರಿಗೆ ಈತನ ಬಗ್ಗೆ ಮೆಚ್ಚುಗೆಯಿದ್ದರೂ ಬಹುತೇಕ ಅನುಭವಿ ಡೆಮೊಕ್ರಾಟಿಕ್ ರಾಜಕಾರಣಿಗಳು ಈತನಿಂದ ದೂರವಿರುತ್ತಾರೆ. ಆದ್ದರಿಂದ ರಾಜಕೀಯ ರಂಗದಲ್ಲಿ ಇವನೊಬ್ಬ ಪ್ರಭಾವಶಾಲಿ ಅನ್ನೋದು ಕಷ್ಟ. "ಮ್ಯಾನುಫಾಕ್ಚರಿಂಗ್ ಡಿಸ್ಸೆಂಟ್" ಭಾರತಕ್ಕೆ ಬರುತ್ತೋ ಇಲ್ವೋ ಗೊತ್ತಿಲ್ಲ. ಬಂದ್ರೆ ನೋಡ್ತೀನಿ. IMDbಯಲ್ಲಿ ಬಂದಿರುವ ಪರ-ವಿರುದ್ಧ ಪ್ರತಿಕ್ರಿಯೆಗಳನ್ನು ನೋಡಿದ್ರೆ ಈ ಚಿತ್ರ ನಿರ್ಮಿಸಿರುವವರು ಚಾರಿತ್ರ್ಯವಧೆ ಮಾಡ್ತಾ ಇದಾರೆ ಅನ್ನಿಸುತ್ತೆ. ಕಟ್ಟಾ ಏಡಪಂಥೀಯ The Guardian ಪ್ರಕಾರ "..cry baby stuff ... parasitic sub-genre of anti-Moore documentaries.." ವಿಷಯಕ್ಕೆ ಬಾರದೆ ಸದಾ ad-hominem attack ಮಾಡುವ ಅಮೇರಿಕದ ಬಲಪಂಥೀಯರಿಂದ ಈ ಚಿತ್ರದ ಹೊಗಳಾಟಿಕೆ. ಈ ಪಂಥವಾದದ ಕೆಸರಾಟದಲ್ಲಿ ಮುಚ್ಚಿ ಹೋಗೋದು ಮೂರ್ ಬೆಳಕು ಚೆಲ್ಲಲೆತ್ನಿಸಿದ ಅಮೆರಿಕದ ಬಂದೂಕು ಸಂಸ್ಕೃತಿಯ ಪರಿಣಾಮಗಳು (ನಿನ್ನೆ ಅಮೆರಿಕದ ಮಾಲ್ ಒಂದರಲ್ಲಿ ೮ ಜನರ ಸಾಮೂಹಿಕ ಹತ್ಯೆಯಾಗಿದೆ), ಯುದ್ಧದಾಸೆ, ಆರೋಗ್ಯ ವ್ಯವಸ್ಥೆಯ ವೈಫಲ್ಯ ಇತ್ಯಾದಿಗಳ ಬಗೆಗಿನ ನೈಜ ಚರ್ಚೆಗಳು.

ಅನಿವಾಸಿಗಳೆ, ನೀವು ಹೇಳಿದ "ಯಾವುದೇ ರಾಜಕೀಯ ಆಚರಣೆಯೂ ಬದಲಾವಣೆಯೂ, ಸಮುದಾಯದ ಬೇರುಗಳಲ್ಲೇ ಸಾಕಾರಗೊಳ್ಳಬೇಕು. ಅದಿಲ್ಲದೆ ಹೊರಗಿಂದ, ಮೇಲಿಂದ, ತರಲು ಆಗದು ಎಂಬ ನನ್ನ ಮೂಲ ನಿಲುವು ಒಂದು ರೀತಿಯಲ್ಲಿ ಗಟ್ಟಿಯಾಯಿತು" ಎಂಬ ಮಾತು ಒಪ್ಪುವಂತದು. ಅನೇಕ ವಿಶ್ವಮಾನವರು ನಮ್ಮಲ್ಲಿ ಬಂದು ಹೋದರೂ ಮೇಲಿಂದ ಬದಲಾವಣೆ ತರುವ ಅವರ ಯತ್ನಗಳು ವಿಫಲಗೊಂಡಿವೆ. ನುಡಿದಂತೆ ನಡೆಯದ ನಾವಾಗಲಿ ಮತ್ತು ನಮ್ಮ ನಾಯಕರಿಗಾಗಲಿ ರಾಜಕೀಯ/ಸಾಮಾಜಿಕ ಬದಲಾವಣೆಗಳನ್ನು ತರಲು ಸಾಧ್ಯವೇ ಅನ್ನೋ ಪ್ರಶ್ನೆ ಕಾಡೋದು ಸಹಜ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 7, 2007 - 8:11am — anivaasi

ಉ: ಮೋರನ ನಿಜ ಮೋರೆ

anivaasi's picture

gc ಯವರೇ,
ನೀವು ಹೇಳಿದ ರಿವ್ಯೂ ಓದಿದಾಗ ಅದೇ Gaurdian ನಲ್ಲಿ ಇದು ಸಿಕ್ಕಿತು. ಹೆಚ್ಚು ಗಂಭೀರವಾಗಿ, ಸಮತೊಲದಿಂದ ಬರೆದ ಬರಹ.
http://film.guardian.co.uk/features/featurepages/0,,2154451,00.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅವನು ಇವನು ನೀಲುಗಳು
  • ನೀಳ್ಗತೆ
  • ಮುಕ್ತಾಯ
  • ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?
  • ನಾಳೆ ನೀವೂ ಮಾಯ.............
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯಾಹೂ! ಕ್ರಿಕೆಟ್
  • ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vinayak.mdesai
    ಉ: ಸ್ವಲ್ಪನಗಿ
    October 13, 2008 - 12:42pm
  • veena
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:40pm
  • mahesha
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:40pm
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:34pm
  • mahesha
    ಉ: ಬಸವನ ಹುಳು...
    October 13, 2008 - 12:31pm
  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:30pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:23pm
  • gurubaliga
    ಉ: Attitude
    October 13, 2008 - 12:21pm
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator