ಅನಿವಾಸಿ
*~*~*~*
ಕೆಲಸ ಬಿಟ್ಟೆ
ಹೋದವಾರ ಕೆಲಸ ಬಿಟ್ಟುಬಿಟ್ಟೆ. ಈ ವರ್ಷ ಮತ್ತೊಂದು ಚಿತ್ರ ಮಾಡಬೇಕು ಅಂತ ಆಸೆ.
ಅದಕ್ಕಾಗಿ ಚಿತ್ರಕತೆಯ ತಯಾರಿ ನಡೆದಿದೆ. ಮೊದಲ ಕರಡಿನ ಕೆಲಸ ಮುಗಿಯಿತು.
ಮಾರ್ಚ ಕಡೆಯ ವಾರದ ಹೊತ್ತಿಗೆ ಎರಡನೇ ಕರಡನ್ನು ಮಾಡುವ ಕೆಲಸ ಕೈಗೆತ್ತಿಕೊಳ್ಳಬೇಕು.
ಅದನ್ನು ಶೂಟ್ ಮಾಡುವ ಮುನ್ನ ಎನ್ನೆರಡು ಕರಡಾಬಹುದು.
ಕೊನೆಯ ಕರಡಂತೂ ಎಡಿಟಿಂಗ್ ಅಲ್ಲವೆ?
ಈ ವರ್ಷದ ಉತ್ತರಾರ್ಧದಲ್ಲಿ ಶೂಟ್ ಮಾಡಬೇಕೆಂದು ಹವಣಿಕೆ.
ಈ ಮಧ್ಯೆ ಬೆಂಗಳೂರಿಗೆ ತೆರಳಿ ಮುಖಾಮುಖಿಯ ಬಗ್ಗೆ ಒಂದಷ್ಟು ಕೆಲಸ ಮಾಡಬೇಕು.
ಈಗಿನ ಕತೆಯ ಬಗ್ಗೆ ಒಂದಷ್ಟು ಚರ್ಚೆಗಂತೂ ಮೋಸವಿಲ್ಲ. ಅಲ್ಲದೆ, ಎಲ್ಲಕ್ಕೂ ಕಾಲ ಕೂಡಿ ಬರಬೇಕು
ಈಗ ರಾಜಾರಾವ್‌ರವರ ಕಾಂತಾಪುರ ಓದಲು ಶುರುಮಾಡಿದ್ದೇನೆ.
ಯಾಕೆ ಈ ಮುಂಚೆ ಓದಲಿಲ್ಲ ಎಂದು ಗೊಣಗಿಕೊಳ್ಳುತ್ತೇನೆ.
ಇಂಗ್ಲೀಷ್ ಕಾದಂಬರಿಯಾದರೂ ಕನ್ನಡದಲ್ಲೇ ಓದಿದ ಹಾಗಾಗುತ್ತದೆ!
ಅಲ್ಲಿ ಬರುವ ಪಾತ್ರಗಳ ಹೆಸರೂ ಚೆನ್ನಾಗಿದೆ, "waterfall venkamma" "nose-scratching nanjamma"

- anivaasi ರವರ ಬ್ಲಾಗ್
- Login or register to post comments
- 646 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಕೆಲಸ ಬಿಟ್ಟೆ
ಮುಖಾಮುಖಿಯ ನಿರ್ದೇಶಕರು ನೀವು ಅಂತ ತಿಳಿದು ಖುಷಿಯಾಯಿತು. ಚಿತ್ರ ತುಂಬಾ ಚೆನ್ನಾಗಿದೆ ಅಂತ ಕೇಳಿದ್ದೆ. ಪ್ರಶಸ್ತಿ ಬಂದಿದ್ದಕ್ಕೆ ಶುಭಾಶಯಗಳು. ಆದರೆ ಇನ್ನೂ ಯಾಕೆ ಆ ಚಿತ್ರವನ್ನು ಬಿಡುಗಡೆ ಮಾಡಿಲ್ಲ ಎಂಬುದಷ್ಟೇ ನನ್ನ ಪ್ರಶ್ನೆ. ದಯವಿಟ್ಟು ಆದಷ್ಟು ಬೇಗ ಬಿಡುಗಡೆ ಮಾಡಿ. ನನ್ನಂತಹ ಸದಭಿರುಚಿಯ ಜನರಾದರೂ ಕೆಲವರು ನೋಡಿಕೊಳ್ಳುತ್ತೇವೆ.
-ಸುಶ್ರುತ ದೊಡ್ಡೇರಿ
ಕೆಲಸ ಬಿಟ್ಟದ್ದೋ ಕೆಲಸಕ್ಕೆ ಸೇರಿಕೊಂಡದ್ದೋ?
ನನಗಂತೂ ನೀವು ಚೆಂದವಾದ ಹೊಸತೊಂದು ಕೆಲಸಕ್ಕೆ ಸೇರಿಕೊಂಡಂತೆ ಕಾಣುತ್ತಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಕೆಲಸ ಬಿಟ್ಟದ್ದೋ ಕೆಲಸಕ್ಕೆ ಸೇರಿಕೊಂಡದ್ದೋ?
ಸುಶ್ರುತರೆ, ನಿಮ್ಮ ವಿಶ್ವಾಸಕ್ಕೆ ಮತ್ತು ಅಭಿನಂದನೆಗಳಿಗೆ ಧನ್ಯವಾದಗಳು. ಬಿಡುಗಡೆ ಮಾಡಬೇಕೆಂದೇ ನನ್ನ ಒತ್ತಾಸೆ ಕೂಡ. ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ದೂರದಲ್ಲಿರುವುದರಿಂದ ಕೆಲಸ ನಿಧಾನವಾಗುತ್ತಿದೆ. ಕೆಲಸ ಬಿಟ್ಟೊಡನೆ ಮೊದಲ ಕೆಲಸ ಅದೇ ಎಂಬ ಯೋಚನೆ ಇತ್ತು. ಬೆಂಗಳೂರಿಗೂ ಅದೇ ಕಾರಣಕ್ಕೆ ಬರಬೇಕಾಗಿದೆ. ಬಿಡುಗಡೆ ಸದ್ಯದಲ್ಲೇ ಆಗಲಿದೆ. ಆಗ ನಿಮಗೆಲ್ಲರಿಗೂ ಹೇಳದೇ ಇರುತ್ತೇನೆಯೆ?
ನಾಡಿಗರೆ-ನಿಮ್ಮ ಉತ್ತೇಜನಕ್ಕೆ ಧನ್ಯವಾದಗಳು. ಇಷ್ಟವಾದ ಒಂದು ಹಿಡಿಯಲು ಏನೆಲ್ಲಾ ಬಿಡಬೇಕಾಗುತ್ತದೆ ಎಂದು ನಿಮಗೆ ಚೆನ್ನಾಗಿ ಗೊತ್ತಿರಬೇಕು!
ಈ ಮಧ್ಯೆ ನನ್ನ ಮುಂದಿನ ಚಿತ್ರದ ತಯಾರಿಕೆಯ ತೊಂದರೆ ತಕರಾರು, ಸೋಲು ಗೆಲುವುಗಳನ್ನು, ಕಷ್ಟ-ಸುಖಗಳನ್ನು ಬ್ಲಾಗ್ ಮಾಡುತ್ತಾ ಹೋಗಬೇಕೆಂದು ಅನಿಸುತ್ತಿದೆ.