23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಂತೆಯ ಕಂತು-೨

December 9, 2009 - 4:50am
anivaasi

http://paaducastu.wordpress.com/2009/12/08/ep2/

ನೀವೆಲ್ಲಾ ಕಾತರದಿಂದ ಕಾಯುತ್ತಿರುವ ಕನ್ನಡ ಪಾಡುಕಾಸ್ಟಿನ ಎರಡನೇ ಕಂತು ಇಲ್ಲಿದೆ :)

~ ಕಾಲೇಜು ಹುಡುಗರ ಮೇಲೆ ಕಾಂಗರೂಗಳ ಹಲ್ಲೆ!

~ ಕ್ರಿಕೆಟಿನ ಹೊಸ ಕತೆ ನೆನಪಿಸಿದ ಹಳೆ ಕತೆ!

~ ಕಾಣೆಯಾದ ಮಂತ್ರಿ ಹಾಗು ರಾಜಕೀಯ ಪುರಾಣ!

ಮಾತಾಟ/conversing: ಪರಮೇಶ್/paramesh ಹಾಗು ಸುದರ್ಶನ್/sudarshan

ರೆಕರ್ಡಿಂಗ್-recording /ನಿರ್ಮಾಣ-producer : ಸಾರಂಗ/saranga

ಕೇವಲ ಇಪ್ಪತ್ತೇ ನಿಮಿಷ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kpbolumbu on

ಮಾತಾಟ = ಅದೇನೋ 'ಅದ್ಭುತವಾಗಿದೆ' ಅನ್ತಾರಲ್ಲ - ಹಂಗನ್ನಬೇಕು, ಅಷ್ಟೇಯ. ಮೊದಲು 'ಮಾತಲ್ಲಿ', ಈಗ 'ಮಾತಾಟ'. ಕನ್ನಡ ಭಾಷೆಯ ಬೞಕೆಯ ಪರಿ ರಿಡಿಕ್ಯುಲಸ್ ಆಗಿದೆ. ನಿಮ್ಮ ಪಾಡುಕಾಸ್ಟಿನ ಎರಡು ಕನ್ತುಗಳಲ್ಲೂ ಇದೇ ರೀತಿಯಲ್ಲಿ ಕಮೆಣ್ಟ್ ಮಾಡಿದ್ದೇನೆ, ಆದರೆ ಪಾಣ್ಡಿತ್ಯ ಮೆಱೆಯಿಸುವುದು ನನ್ನ ಉದ್ದೇಶವಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on

ಕೃಷ್ಣಪ್ರಕಾಶ ಬೋಳಂಬು,
ನಮಸ್ಕಾರ.

>>ಭಾಷೆಯ ಬೞಕೆಯ ಪರಿ ರಿಡಿಕ್ಯುಲಸ್ ಆಗಿದೆ
ನಿಮಗೆ ಹಾಗೆ ಕಂಡಿದೆ. ಸರಿ. ಆದರೆ ಯಾಕೆಂದು ತಿಳಿಸುವಿರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on

ಅನಿವಾಆಸಿ,

<<<ಯಾಕೆಂದು ತಿಳಿಸುವಿರಾ?>>>
ಮಾತಲ್ಲಿ, ಮಾತಾಟ....ಸಾಲದೇ?

೧. ಪಾಡುಕಾಸ್ಟು.....
ಪಾಡು ಮತ್ತು ಕಾಸ್ಟು, ಎರಡರ ನಡುವೆ ಎನನ್ಸಿಯೇಟಿವ್ ಎಲ್ಲಿನ್ದ ಬನ್ತು?

೨. ಕನ್ನಡ ಓದಲು ಬಾರದವರಿಗಾಗಿ ಇಂಗ್ಲೀಷಿನಲ್ಲಿ ....

<<<ಮಾತಾಟ/conversing: ಪರಮೇಶ್/paramesh ಹಾಗು ಸುದರ್ಶನ್/sudarshan>>>
ಆದರೆ ಕನ್ನಡ ಬಾರದವರು 'ಪಾಡುಕಾಸ್ಟು'[ಜಾಲತಾಣವನ್ನು] ನೋಡುತ್ತಾರಾ?

೩. ಅವಹೇಳನ:
<<<ಕರಾವಳಿ ಕರ್ನಾಟಕದ ಕೋಳಿ...ಉದಯವಾಣಿ.....>>>

೪. ಕಮ್ಯೂನಿಸ್ಟ್ ಪಾರ್ಟಿಯ ಕುಱಿತ ಟೀಕೆಯೂ ಇದೆ, ಆದರೆ ಹಿನ್ದೆ ನೀವೇ ಕಮ್ಯೂನಿಸ್ಟ್ ವಿಚಾರಧಾರೆಯ ಬೆಂಬಲಿಸಿ ಮಾತನಾಡಿದ್ದಿರಿ. ಇರ್ನಾಲಗೆಯ ಮಾತುಗಳು...?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on

ಕೃಷ್ಣಪ್ರಕಾಶ ಬೊಳುಂಬು,

>> ಮಾತಲ್ಲಿ, ಮಾತಾಟ....ಸಾಲದೇ?
ಸಾಲದು.

>> ಎನನ್ಸಿಯೇಟಿವ್ ಎಲ್ಲಿನ್ದ ಬನ್ತು?
ಏಕೆ/ಹೇಗೆ ಬಂತು ಎಂದು ಕೇಳುತ್ತಿದ್ದೀರ? (ಎಲ್ಲಿಂದ ಬಂತು ಎಂದು ಹೇಳುವುದು ತುಸು ತೊಡಕು :) )

>>ಆದರೆ ಕನ್ನಡ ಬಾರದವರು 'ಪಾಡುಕಾಸ್ಟು'[ಜಾಲತಾಣವನ್ನು] ನೋಡುತ್ತಾರಾ?
ಪಾಡುಕಾಸ್ಟು ಕೇಳಿದರೆ ಸಾಕಲ್ಲ!

೩ ಮತ್ತು ೪ : ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on

೩ ಮತ್ತು ೪ : ಕಮೆಣ್ಟುಗಳ ಒಪ್ಪಿದ್ದೀರಿ, ನೀವು ಆ ಬಗೆಗೆ ರಿಡಿಕ್ಯುಲಸ್ ಆಗಿದ್ದಿರೆನ್ದು ಒಪ್ಪಿದಿರಿ.

<<<ಪಾಡುಕಾಸ್ಟು ಕೇಳಿದರೆ ಸಾಕಲ್ಲ!>>>
ತಾಣವನ್ನೇ ನೋಡದವರು ಡೌನ್‍ಲೋಡ್ ಮಾಡಿಕೊಣ್ಡು ಕೇಳುವರೇ?

<<< ಮಾತಲ್ಲಿ, ಮಾತಾಟ....ಸಾಲದು>>>
ಬೇಕಾದಷ್ಟು ರಿಡಿಕ್ಯುಲಸ್ ಆಗಿದೆ. ಏನೇನು ಮಾತಾಟಗಳಿವೆಯೆನ್ದು ತಿಳಿಯಲು ಪ್ರತಿಸಲವೂ ಡೌನ್‍ಲೋಡ್ ಮಾಡಿಕೊಣ್ಡು ಓದುವರೆನ್ದುಕೊಳ್ಳದಿರಿ. ನನ್ನ ಮಟ್ಟಿಗನ್ತೂ ಇದೇ ಕೊನೆ.

<<<ಏಕೆ/ಹೇಗೆ ಬಂತು ಎಂದು ಕೇಳುತ್ತಿದ್ದೀರ? >>>
ಒಪೆರ ಹೌಸಿನಿನ್ದಲೋ, ಹಾವ ಕಸಬರಿಕೆ ಹೊೞೆಯಿನ್ದಲೋ - ಎನ್ನುವುದಲ್ಲ ಪ್ರಶ್ನೆ. ಇಂಗ್ಲೀಷ್ ಪದಗಳಿಗಲ್ಲಾ ಉ ಸೇರಿಸಿದರೆ ಕನ್ನಡವಾಗುತ್ತದೆನ್ದು ಅನನ್ತಮೂರ್ತಿಗಳು ಹೇಳಿರುವುದು ನಿಜವಾದರೂ ನಾನು ಒಪ್ಪೆನು. ಒರೆವ ಭಾಷೆ ಮತ್ತು ಬರೆವ ಭಾಷೆ ಒದಕ್ಕಿನ್ತ ಇನ್ನೊನ್ದು ಭಿನ್ನವಲ್ಲ. ಕಾಱು, ಬಸ್ಸು - ಮುನ್ತಾದ ಶಬ್ದಗಳಿಗೆ ಕೊನೆಯಲ್ಲಿ ಸೇರಿಸುವ ಉ; ಅದೇ ಎನನ್ಸಿಯೇಟಿವ್. ನಾನು ಉಚ್ಚಾರಣ ಮನೋಧರ್ಮ ಎನ್ನುತ್ತೇನೆ, 'ಮಾತಿನ ಮೋಡಿ' ಎನ್ದೂ ಕರೆಯಬಹುದು. ಹಾಗಾಗಿ ಮಾತಿನಲ್ಲಿ ಎನನ್ಸಿಯೇಟಿವ್ ಇದ್ದರೆ ಮಾತ್ರ ಉ ಸೇರಿಸಬೇಕಲ್ಲದೆ ಎಲ್ಲಾ ಇಂಗ್ಲೀಷ್ ಪದಗಳಿಗೆ ಉ ಸೇರಿಸಿದರೆ ಕನ್ನಡವಾಗದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on

>>೩ ಮತ್ತು ೪ : ಕಮೆಣ್ಟುಗಳ ಒಪ್ಪಿದ್ದೀರಿ, ನೀವು ಆ ಬಗೆಗೆ ರಿಡಿಕ್ಯುಲಸ್ ಆಗಿದ್ದಿರೆನ್ದು ಒಪ್ಪಿದಿರಿ.
ಇದು ನಿಮ್ಮ ಸಮಾಧಾನಕ್ಕೆ ನೀವು ಹೇಳಿಕೊಳ್ಳುತ್ತಿರುವುದಷ್ಟೆ. ನಿಮ್ಮ ಅಭಿಪ್ರಾಯ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಷ್ಟೆ. ಒಪ್ಪಿದೆ ಎಂದಿಲ್ಲ. ಅದರ ನಡುವಿನ ವ್ಯತ್ಯಾಸ ನಿಮಗೆ ತಿಳಿದಂತಿಲ್ಲ.

ಇನ್ನುಳಿದ ನಿಮ್ಮ ವಾದ ಸರಣಿ ನನಗಂತೂ ರಿಡಿಕ್ಯುಲಸ್ ಆಗಿ ಕಾಣುತ್ತಿದೆ.

>>ನನ್ನ ಮಟ್ಟಿಗನ್ತೂ ಇದೇ ಕೊನೆ.
ನಿಮಗೆ ಮರುನುಡಿಯುವ ಬಗ್ಗೆ ನನ್ನದೂ ಕೂಡ ಇದೇ ಕೊನೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on

<<<ನನ್ನದೂ ಕೂಡ ಇದೇ ಕೊನೆ! >>>
ಇರಲಿ ಬಿಡಿ, ಮುನ್ದಿನದಕ್ಕೆ ಉತ್ತರಿಸಬೇಡಿ. ಇಂಗ್ಲೀಷ್ ಪದಗಳ ಬೞಕೆ ತಪ್ಪೆನ್ನುತ್ತಿಲ್ಲ. ಕೊಟೇಷನಾಗಿ ಇಂಗ್ಲೀಷ್ ವಾಕ್ಯಗಳನ್ನೂ ಬೞಸಬಹುದು. ಆದರೆ ಯಾವುದಾದರೊನ್ದು ಭಾಷೆಗೆ ನಿಷ್ಠವಾಗಿದ್ದರೆ ಚನ್ನು.

ಮೂರೇ ತುಣುಕುಗಳು:

೧. "ಕ್ರಿಕೆಟ್ ಇಸ ಗೇಮ್ ಆಫ್ ಜೆಣ್ಟಲ್‍ಮನ್ಸ್ ಅನ್ತಾರೆ..."
೨. "ಫಿಸಿಕಲ್ಲಿ ಅಟ್ಯಾಕ್ ಮಾಡೋದಿದೆಯಲ್ಲಾ, ಇಟೀಸ್ ನಾಟ್ ಕ್ರಿಕೆಟ್ ಅನ್ತ...."
೩. "ಪಟೌಡಿ ತಗೊಣ್ಡಿದ್ದ್ ಸ್ಟಾಣ್ಡ್ ಬಗ್ಗೆ ಎಲ್ಲೂ ಬರೋದೇ ಇಲ್ಲ, ಪಾಯಿಣ್ಟ್"

ವ್ಯಾಕರಣ ಭಾಷೆಯಲ್ಲಿ ಬೇಕಾಗದು, ಅದು ಬರೇ 'ಪಾಣ್ಡಿತ್ಯ ಪ್ರ-ದರ್ಶನಕ್ಕಾಗಿ ಮಾತ್ರ' ಎನ್ದುಕೊಳ್ಳುವವರೇ ಹೆಚ್ಚು. :( ಎನನ್ಸಿಯೇಟಿವ್ ಎಂಬುದು ನನ್ನ ಸಂಶೋಧನೆಯೇನೂ ಅಲ್ಲ. ಕನ್ನಡ[ಮತ್ತು ಇತರ ಭಾಷೆಗಳ] ವ್ಯಾಕರಣದಲ್ಲಿ ಇರುವ ವಿಷಯವೇ ಇದು. ಮೊದಲ ವಾಕ್ಯವ ಗಮನಿಸಿದಾಗ 'ಇದು ಏನು', 'ಯಾವ ಭಾಷೆ' - ಮುನ್ತಾದ ಪ್ರಶ್ನೆಗಳು ಮೂಡಿದುವು. ಶೋ-ಆಫ್ ಶೈಲಿಯ ಕಂಗ್ಲೀಷ್ ಬೞಸುತ್ತ[ಕಂಗ್ಲೀಷ್ ಬೞಕೆಯನ್ನೂ ಒನ್ದು ನಿರ್ದಿಷ್ಟ ವಿಧಾನಕ್ಕಳವಡಿಸಬಹುದು] ಭಾಷೆಯ ಬೆಳೆಯಿಸಬೇಕೆನ್ನುವುದು ನಡೆಯುವ ಮಾತಲ್ಲ. ಲಂಕೇಶ್ ಪತ್ರಿಕೆಯ ಉದಾಹರಣ ಬೇರೆ ತೆಗೆದುಕೊಣ್ಡಿದ್ದೀರಿ.[ಅದು ಭಾಷೆಯ ಬೆಳೆಯಿಸುವ ಪತ್ರಿಕೆಯಾಗಿದ್ದರೂ ಇರಬಹುದು.]
ನಾನು ಹಿನ್ದಿನ ಕಮೆಣ್ಟಿನಲ್ಲಿ ಬೞಸಿರುವ ಪದಗಳ ಕುಱಿತ ಟಿಪ್ಪಣಿ ಬೇಕಾಗಿದ್ದರೆ -
http://www.thefreedi...
http://en.wikipedia....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on

"ಪಾಡು ಕ್ಯಾಸ್ಟು" ಪದ ಕನ್ನಡದ ಪದ ಅಂತ ನನಗಂತೂ ಅನ್ನುಸ್ತಾ ಇಲ್ಲ. ಕನ್ನಡದ ಗ್ಲಾಮರ್ / ಗಂಧ "ಪಾಡುಕಾಸ್ಟು" ಗೆ ಇಲ್ಲ.

"ಮಾತಾಟ" ಪದ ಬಳಕೆಯಲ್ಲಿ ನನಗೆ ತಪ್ಪೇನೂ ಕಾಣಲಿಲ್ಲ. "ಮಾತಾಡು" ಪದ ಹೆಚ್ಚು ಬಳಕೆಯಲ್ಲಿದ್ದರೂ, "ಮಾತಾಟ" ಹೆಚ್ಚು ಕೇಳಿರದಿದ್ದ ಕಾರಣದಿಂದ ಸಹಜ ಅನ್ನಿಸಲಿಲ್ಲ ಅಷ್ಟೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on

ಸವಿತೃ,
<<< ಕನ್ನಡದ ಗ್ಲಾಮರ್ / ಗಂಧ "ಪಾಡುಕಾಸ್ಟು" ಗೆ ಇಲ್ಲ. >>>
ಅನುಮಾನವೇ ಬೇಡ.
<<<"ಮಾತಾಟ" ಹೆಚ್ಚು ಕೇಳಿರದಿದ್ದ ಕಾರಣದಿಂದ ಸಹಜ ಅನ್ನಿಸಲಿಲ್ಲ ಅಷ್ಟೇ.>>>
ಅವಹೇಳನದ ದನಿ ಕ್ಯಾಸ್ಟಿನುದ್ದಕ್ಕೂ ಇರುವನ್ತೆ ಅಲ್ಲೂ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on

ಸವಿತೃ-
>>ಕನ್ನಡದ ಗ್ಲಾಮರ್ / ಗಂಧ "ಪಾಡುಕಾಸ್ಟು" ಗೆ ಇಲ್ಲ.
ಇದು ನಿಮ್ಮ ಅನಿಸಿಕೆ ಮತ್ತು ಅದರ ಬಗ್ಗೆ ನನಗೆ ಗೌರವವಿದೆ. ಆದರೆ, ಗ್ಲಾಮರ್‍/ಗಂಧವನ್ನು ಡಿಫೈನ್ ಮಾಡುವುದು ಕಷ್ಟದ ಕೆಲಸ. ಒಬ್ಬರಿಗೆ ಸಹಜವಾದ್ದು ಇನ್ನೊಬ್ಬರಿಗೆ ಅಸಹಜ ಅನಿಸುವುದು, ಮತ್ತೊಬ್ಬರಿಗೆ ಅಸಹನೀಯ ಅನಿಸುವುದು, ಮತ್ತೂ ಒಬ್ಬರಿಗೆ ಪ್ರಿಯವಾಗುವುದು - ಇವೆಲ್ಲ ಹೊಸದೇನಲ್ಲ. ನಾವಂತೂ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕು. ಕೆಲವು ಉಳಿಯುತ್ತವೆ ಕೆಲವು ಅಳಿಯುತ್ತವೆ. ಉಳಿಯಲೇ ಬೇಕೆಂಬ ಹಟ/ಗರಜೇನೂ ಇಲ್ಲ. ಆದರೆ, ಕೋಲಿಡಿದು ತಪ್ಪೆಂದು ಗದರುವ "ಪಂಡಿತ"ರ ಮಾತನ್ನು ನುಡಿಯ ವಾರಸುದಾರರು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದರಿಂದಲೇ ನುಡಿಗಳು ಚಲನಶೀಲವಾಗಿರುತ್ತವೆ ಎಂದು ನನ್ನ ಅನಿಸಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on

ಒಬ್ಬರಿಗೆ ಸಹಜವಾದುದು ಇನ್ನೊಬ್ಬರಿಗೆ ಅಸಹಜವೆನ್ನಿಸಬಹುದು, ಮತ್ತೊಬ್ಬರಿಗೆ ಅಸಹನೀಯವೆನ್ನಿಸಬಹುದಾದುದು ಮಗದೊಬ್ಬರಿಗೆ ಪ್ರಿಯವಾಗಬಹುದು. ಈ ವಾಕ್ಯವನ್ನು ಮಾರ್ಪಾಡುಗಳೊನ್ದಿಗೆ ನನ್ನ ಪ್ರೊಫೈಲಿಗೆ ಸೇರಿಸಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on

ಒಳ್ಳೆಯ ಪ್ರಯತ್ನ.
ಈ ಪಾಡ್ ಕಾಸ್ಟಿನಲ್ಲಿ ಒಬ್ಬರ ಧ್ವನಿಯು ಸ್ಪಷ್ಟವಾಗಿದೆ, ಇನ್ನೊಬ್ಬರದು ‘ಗೊರ ಗೊರ’ ಎನ್ನುವಂತೆ ಕೇಳುತ್ತದೆ. ಉಸಿರು ಎಳೆದುಕೊಳ್ಳುವ ಸದ್ದು ಕಿರಿಕಿರಿಯುಂಟು ಮಾಡುತ್ತೆ. ಮುಂದಿನ ಪಾಡುಕಾಸ್ಟಿನಲ್ಲಿ ಸಾಧ್ಯವಾದರೆ ಸರಿಪಡಿಸಿ.
ಕಂಟೆಂಟ್ ಸಕತ್ತಾಗಿದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anivaasi on

ಸುಪ್ರೀತ್-
ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಥ್ಯಾಂಕ್ಸ್.

ನಿಮಗೆ ಕಿರಿಕಿರಿಯುಂಟು ಮಾಡಿದ ದನಿ ಪರಮೇಶ್‌ರದು. ಅವರ ಗಂಟಲಿಗೆ/ದನಿಪೆಟ್ಟಿಗೆಗೆ ಪೆಟ್ಟಾಗಿ ಮಾತಾಡಲು ಅವರಿಗೆ ತೊಂದರೆಯಾಗಿದೆ. ಈಗ ಇಷ್ಟು ಮಾತಾಡುವಂತಾಗಿರುವುದು, ಪಾಡುಕಾಸ್ಟನ್ನು ಮಾಡಲಾಗುತ್ತಿರುವುದು ನಮಗೆ ಇನ್ನೊಂದು ಬಗೆಯ ಸಂತಸವನ್ನೂ ಕೊಟ್ಟಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on

ಹೋ, ಸರಿ. ಪರಮೇಶರ ಧ್ವನಿ ಆದಷ್ಟು ಬೇಗ ಸುಧಾರಿಸಲಿ.
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Minni on

ಅನಿವಾಸಿಯ ಪರಮೇಶರಿಗೆ:
ಇದನ್ನು ಓದಿ. ನಿಮಗೂ rhymes, singing ಹೆಲ್ಪ್ ಆಗಬಹುದೇನೋ.
http://www.wired.com...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Paramesh H on

ಸುಪ್ರಿತ್ ಮತ್ತು ಮಿನ್ನಿ
ನಿಮ್ಮ concern ಗೆ ತು೦ಬ thanks.
ಕೆಲವು ವರ್ಷದ ಹಿ೦ದೆ ನನಗೆ major heart attack ಹಾಗಿ.
ನ೦ತರ emergengy intubation (ಉಸಿರಾಟಕ್ಕೆ ಹಾಕಿದ pipe) , ನನ್ನ ಗ೦ಟಲಿನ ದನಿ ಪೆಟ್ಟಿಗೆಗೆ ಹಾನಿಯಹಿತು.

ಮಿನ್ನಿ ಯವರೆ ನಿಮ್ಮ link ನೋಡಿದೆ very intresting, thanks
ನಮ್ಮ "ಪಾಡು ಕಾಸ್ಟು" ಕೇಳುತ್ತಿರೀ,,,feel free to leave your comments

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಾಯ್ಸ೨ on

ನೋಡಿ ಇವರೇ..

ಇನ್ನೊಂದು "ಕೇವಲ ಇಪ್ಪತ್ತೇ ನಿಮಿಷ!" ಅಲ್ಲ "ಕೇವಲ ಇಪ್ಪತ್ತೇ ನಿಮಿಷಗಳು!" :D

ಪಾಡುಕಾಸ್ಟು ಹೋಗಿ ಪಾಡು..ಕಶ್ಟ ಅನ್ನಿಸ್ತಿದೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.