ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಸತ್ಯಕ್ಕೆ ಲಿಂಕ್

February 10, 2008 - 4:06pm — anivaasi

ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ.

ಡೌನ್‌ಲೋಡ್ ಲಿಂಕ್ ನೋಡಿದರೆ ಯಾಕೋ ಡೌಟ್ ಬಂತು. ಈ ಡಬ್ಲ್ಯುಡಬ್ಲ್ಯುಡಬ್ಲ್ಯು ಇಂದ ಶುರು ಆಗೋ ಹೆಸರು ಇಲ್ಲದಿದ್ದರೆ ನನಗೆ ಸ್ವಲ್ಪ ಗುಮಾನಿ. ನಿಮ್ಮ ಬ್ಯಾಂಕಿನ ದುಡ್ಡು ದೋಚೋಕೆ ಬರೇ ನಂಬರುಗಳು ಇರೋ ಲಿಂಕ್ ಕಳಿಸ್ತಾರಲ್ಲ ಹಂಗೆ. ನನ್ನ ಬ್ಯಾಂಕ್ ಅಕೌಂಟು ಕಂಠಪೂರ್ತಿ ಸಾಲಾನೆ ಇರೋದರಿಂದ ಆ ಭಯ ಇಲ್ಲ ಅಂತಿಟ್ಕೊಳ್ಳಿ. ದುಡ್ಡು ದೋಚೋಕೆ ಬಂದೋರೇ ದುಡ್ಡು ಕಟ್ಟಬೇಕಾಗಿ ಬರುತ್ತಷ್ಟೆ. ಅದಕ್ಕೆ ನಿರಾಳ. ಆದರೂ ಬೇರೇ ಏನೇನೋ ಕದೀತಾರಂತಲ್ಲ. ಅದಕ್ಕೆ ಚಿಂತೆ.

ಲಿಂಕ್ ಚಿಟಕಿಸಿ ಎಷ್ಟೊತ್ತು ಕಾದರೂ ಏನೂ ಆಗಲಿಲ್ಲ. ಕಾದೆ. ಏನಾದರೂ ಆಗ್ತಿರಬೇಕು ಅಂತ ಕಂಪ್ಯೂಟರ್‌ ಡಬ್ಬಕ್ಕೆ ಕಿವಿ ಕೊಟ್ಟು ಕೇಳಿದೆ. ಗುಯ್ ಅಂತ ಸದ್ದು ಅಷ್ಟೆ. ನನ್ನ ಗೆಳೆಯನ ಮೇಲೆ ಡೌಟ್ ಬಂತು. ಅವನು ಯಾವುದೋ ಸಾಫ್ಟ್‌ವೇರ್‍ ಫ್ಯಾಕ್ಟರಿನಲ್ಲಿ ಕೆಲಸ ಮಾಡೋದು. ಇಂಥ ಸಾವಿರಾರು ಲಿಂಕ್ ತಯಾರು ಮಾಡ್ತಾರಂತೆ. ಎಲ್ಲಾನೂ ಸತ್ಯಕ್ಕೆ ಕೊಂಡಿ ಕೊಡತ್ತಂತೆ. ಹೀಗಂತ ಅವನು ಹೇಳಿದ್ದೆಲ್ಲಾ ನೆನಪಿಗೆ ಬಂತು. ಇನ್ನೊಂದು ಚೂರು ಕಾದು ಅವನಿಗೆ ಪೋನ್ ಮಾಡೋಣ ಅಂತ ಕಣ್ಣು ಪಿಳಿಪಿಳಿ ಬಿಡ್ತಾ ಕೂತೆ. ಇದು ಒಳ್ಳೇ ಘನವಾದ ಲಿಂಕೇ ಇರಬೇಕು ಅಂತ ಅನ್ನಿಸಿತು. ಆದರೂ ಎಷ್ಟೊತ್ತು ಅಂತ ಕಾಯೋದು ನೀವೇ ಹೇಳಿ. ಫೋನ್‌ ಕೈಗೆತ್ತಿಕೊಂಡೆ.

ಅಳ್ಳೆದೆ ಆಚಾರಿ ಕಣಯ್ಯ ನೀನು ಅಂತಾನೇ ಶುರುಮಾಡಿದ. ಏನು ಅನ್ಕೊಂಡಿದ್ಯ. ಕುಟುಕಿದ ತಕ್ಷಣ ಡೌನ್‌ಲೋಡ್ ಆಗಕ್ಕೆ ಇದೇನು ನಿನ್ನ ಸುಳ್ಳಿನ ಕಂತೆ ಅಂದುಕೊಂಡ್ಯ? ಸಹನೆ ಇಲ್ಲದೋರಿಗೆಲ್ಲ ನಮ್ಮ ಲಿಂಕ್ ವರ್ಕ್ ಆಗಲ್ಲ. ಅಷ್ಟು ಕಷ್ಟ ಆದರೆ ಬಿಟ್ಟುಬಿಡು. ನಿನ್ನ ಸುಳ್ಳುಗಳು ನಿನಗೆ ಇದ್ದೇ ಇದೆಯಲ್ಲ ಅಂತ ಫೋನ್ ಕುಕ್ಕಿದ. ನನಗೂ ರೇಗಿತು. ಹೌದು ನನಗೆ ಯಾಕೆ ಈ ಹುಚ್ಚು ಅಂದ್ಕೊಂಡು ಚಿಟಕಿಸಿದ ಕೂಡಲೆ ಚಕ್ ಚಕ್ ಅಂತ ನುಗ್ಗಿಬರೋ ಕೊಂಡಿಗಳಿಗೆ ಮರಳಿದೆ.

ಇದಾಗಿ ಎಷ್ಟೋ ದಿನ ಕಳೆದಿದೆ. ಆದರೂ ಅವನು ಹೇಳಿದ ಒಂದು ವಿಷಯ ನನ್ನ ತಲೇಲಿ ಕೊರೀತಾನೆ ಇದೆ. ಊಟ ಮಾಡದ ಮಕ್ಕಳನ್ನ ಅಮ್ಮ ಅಪ್ಪಂದಿರು, ಅಜ್ಜಿ ಅಜ್ಜಂದಿರು ಕಂಪ್ಯೂಟರ್‍ ಮುಂದೆ ಕೂರಿಸಿಕೋತಾರಂತೆ. ಇಂತಾ ಲಿಂಕ್‌ಗಳನ್ನೆಲ್ಲಾ ತೋರಿಸ್ತಾ ತುತ್ತು ಹಾಕಿದರೆ ಮಕ್ಕಳು ಬೇಗ ಊಟ ಮಾಡ್ತಾರಂತೆ. ಅಂಗಳಕ್ಕೆ ಹೋಗೋದೇ ಬೇಡವಂತೆ.

ನನಗೇನಾಗಿದೆ ಅಂದುಕೊಂಡೆ.

~.~
  • anivaasi ರವರ ಬ್ಲಾಗ್
  • Login or register to post comments
  • 373 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 10, 2008 - 4:38pm — ಸಂಗನಗೌಡ

ಉ: ಸತ್ಯಕ್ಕೆ ಲಿಂಕ್

ಸಂಗನಗೌಡ's picture

ಸುಳ್ಳಿನ ತಲೆ ಮೇಲೆ ಹೊಡೆದಂತೆ ಸತ್ಯಾನಾ? Laughing out loud ಚೆನ್ನಾಗಿದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 11, 2008 - 3:30pm — mahesha

ಉ: ಸತ್ಯಕ್ಕೆ ಲಿಂಕ್

mahesha's picture

ಎಪ್ಪೋ..

ತಮಗೇನಾಗಿದೆ?

ಸತ್ಯ ಅಂತ ಇದ್ಯ? ಅದು ಹೇಗಿದೆ ಅಂತ ಗೊತ್ತ?

ಗೊತ್ತಿಲ್ದಿದ್ರೆ ಅದು ಡವನ್ಲೋಡ್ ಆದುದು ಹೇಗೆ ತಿಳಿತಯ್ತೆ?... ಇನ್ನೊಮ್ಮೆ ನಿಮ್ಮ ಕಂಪ್ಯೂಟರ್‍ನ ನೆನೆಪುಗಾರನನ್ನು ತಡಬಡ ಹುಡಕಿ ಅದು ನಿಮ್ಮಲೇ ಏಲ್ಲೋ ಅವಿತು ಕುಂತಿರಬೇಕು.. ಇಲ್ವೇ ನಿಮ್ಮ ಮುಂದಿದ್ರು ಮಾರುಕೋಲದಲ್ಲಿ ತನ್ನತನ ತೋರಿಸದಂತೆ ಕಾಣಿಸ್ತಿರಬೇಕು..

ಏನೇ ಆದ್ರು.. ನನಗೆ ನಿಮ್ಮ ಬಗ್ಗೆ ಹೆರ್ದಕೆ ಆಯ್ತಿದೆ...

ದಿಟದ ದುಕ್ಕಿಂತ, ಸುಳ್ಳಿನ ಸೊಗಸೇ ಸೂಪರ್‍!!

ಬಾಳೊಂದು ಸುಳ್ಳಿನ ಕಂತೆ( ಸಿನಿಮ ಹಾಡಿನ ನೀತಿ; ಶಂಕರರ ಮಾಯಾಮೋಹಮಯ ಲೋಕ )!! ಮಾಯೆ ಮೋಹದಲ್ಲೇ ಇರೋದು ನಾವು.. ಅದರಾಚೆ ರುಚಿಯಿಲ್ಲ, ಸೊಗಸಿಲ್ಲ, ಎಲ್ಲ ಸಪ್ಪೆ ಸಪ್ಪೆ... ಬೇಕಾ ಅದು? Smiling

ಈ ಬರಹ ಅಂತೂ ಸೂಪರ್‍... ಬರೆದೋರು ತಲೆ ಇನ್ನೂ ಸೂಪರ್‍! Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೊನೆಗೂ ಕ್ಷಮೆ ಕೇಳಿದ ಕೇರಳದ ಮುಖ್ಯ ಮಂತ್ರಿ ಆಚ್ಯುತಾನಂದನ್
  • ಒಂದು ಚಿಕ್ಕ ಕಥೆ (ಆದರೆ ತುಂಬಾ ಅರ್ಥ ಪೂರ್ಣ ಖಂಡಿತವಾಗಿಯೂ ಓದಲೇಬೇಕು ಅಂತ ಕರಾರು ಇಲ್ಲ....)
  • ನನ್ನ ಮುಖಚಿತ್ರ
  • ಬಿಗ್ bang
  • ಸರ್ ಕಾಫೀ/ಟೀ???
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ಹಂಸನಾದ
    January 10, 2009 - 8:43am
  • manjunath s reddy
    ಉ: ಹೀಗೊಂದು ಘಟನೆ
    January 10, 2009 - 8:32am
  • manjunath s reddy
    ಉ: ನಾವು ಅದೆಷ್ಟು ಬಡವರು!
    January 10, 2009 - 8:25am
  • manjunath s reddy
    ಉ: ಯಾವುದು ಬೇಕು?
    January 10, 2009 - 8:20am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:11am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:07am
  • JAYADEV
    ಉ: ಯಾವುದು ಬೇಕು?
    January 10, 2009 - 8:05am
  • JAYADEV
    ಉ: ಮನೆಗೆ ಬಂದದ್ದು: ಕಾಫ್ಕಾ ಕಥೆ
    January 10, 2009 - 8:03am
  • anivaasi
    ಉ: ನಾವು ಅದೆಷ್ಟು ಬಡವರು!
    January 10, 2009 - 8:01am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 190 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator