ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಸೂರ್ಯ ಕಾಲು

September 11, 2007 - 5:28pm — anivaasi

ನಡೀವಾಗ ಯಾರಾದರೂ ಜತೆಗೆ ಬೇಕು.
ಬೇರೇ ಬೇರೇ ಸೂರ್ಯನ ಬೆಳಕಿಗೆ ಮೈಕಾಯಿಸಿಕೊಂಡಿದ್ದರೂ ಪರವಾಗಿಲ್ಲ. ಜತೆಗಿರಬೇಕು. ಜತೆಗಿರೋ ಮನಸ್ಸಿದ್ದರೂ ಸುಲಭ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ನಮೂನೆ ಕಾಲು. ಆನೆ ಕಾಲು, ಕುದುರೆ ಕಾಲು, ಇಲಿ ಕಾಲು. ಕೆಲವರಿಗೆ ಹಕ್ಕಿ ಕಾಲು. ಇನ್ನು ಕೆಲವರಿಗೆ ಕಾಲಿಲ್ಲದೇನೂ ಹೋಗತೀನಿ ಅನ್ನೋ ಹಾವಿನ ಛಲವೇ ಕಾಲು.
ತುಂಬಾ ದೂರದ ದಾರಿ;
ಏರು ಪೇರು;
ಹಳ್ಳ ಕೊಳ್ಳ;
ಬೆಟ್ಟ ಕಣಿವೆ;
ಟ್ರಾಫಿಕ್ಕು ಹೊಗೆ;
ತುಂಬಾ ಗೋಜಲಿನ ದಾರಿ;
ಸುಸ್ತಾದರೆ ಏನು ಮಾಡೋದು? ಕೇಳೋದು ಏನು ಬಂತು? ಜೇಬಿಂದ ಒಂದು ಮರ ತೆಗೆದು ನೆಟ್ಟುಕೊಂಡು, ಅದರ ನೆರಳಲ್ಲಿ ಕೂರೋದು. ಸೂರ್ಯನ ಝಳ ಜಾಸ್ತಿ ಆಯ್ತ? ಅವನನ್ನ ಸಮುದ್ರದಲ್ಲಿ ಮುಳುಗಿಸೋದು. ಜೋಳಿಗೆಯಿಂದ ಒಂದು ತುಂಡು ಚಂದ್ರನ್ನ ತೆಗೆದು ಮೋಡದ ಹಿಂದೆ ನೇತು ಹಾಕೋದು.
ರಸಿಕತೆ ಉಕ್ಕಿದರೆ ಇದ್ದೇ ಇದೆ;
ಹಾಡು ಪಾಡು;
ಜಗಳ ಪ್ರೀತಿ;
ಫೋಟೋ ಫಿಲ್ಮು;
ಕತೆ ಕಾವ್ಯ;
ರಸಿಕತೆ ಉಕ್ಕಿದರೆ ತಪ್ಪದೆ.
ಸೂರ್ಯ ಯಾವುದಾದರೇನು? ಕಾಲು ಯಾವುದಾದರೇನು?
ಜೇಬಲ್ಲಿ ಮರ ಇರಬೇಕು.
ಜೋಳಿಗೇಲಿ ಚಂದ್ರ ಇರಬೇಕು.
ನಡೀವಾಗ ಯಾರಾದರೂ ಜತೆ ಇರಬೇಕು.

~.~
  • anivaasi ರವರ ಬ್ಲಾಗ್
  • Login or register to post comments
  • 457 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 12, 2007 - 1:20am — keshav

ಉ: ಸೂರ್ಯ ಕಾಲು

keshav's picture

ತುಂಬ ಖುಷಿ ಕೊಟ್ಟ ಬರಹ. ಹೊಸ ಹುರುಪು ಬಂತು.
ಕೇಶವ
Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 2:23am — anivaasi

ಉ: ಸೂರ್ಯ ಕಾಲು

anivaasi's picture

ನನ್ನ ಸ್ವಗತ ಮತ್ತೊಬ್ಬರಿಗೆ ಹುರುಪು ತಂದಿದ್ದು ಅನಿರೀಕ್ಷಿತ ಆನಂದ! Smiling
ಆಗಾಗ ನಮಗೆ ನಾವೇ ಹೀಗೆ ಹೇಳಿಕೊಳ್ಳಬೇಕಾಗತ್ತೆ ಅಲ್ಲವೆ?
ಥ್ಯಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 11:36am — Sunil Jayaprakash

ಉ: ಸೂರ್ಯ ಕಾಲು

Sunil Jayaprakash's picture

ನಾನೂ ಒಮ್ಮೆ ಹೀಗೆಯೇ ಒಬ್ಬನೇ ಹೋಗುತ್ತಿದ್ದೆ. ಆಗ ನನಗೆ ತುಂಬಾ ದೊಡ್ಡಗಡ್ಡಬಿಟ್ಟವರೊಬ್ಬರು ಸಿಕ್ಕಿದರು. ಅಂದಿನಿಂದ ಮನಸ್ಸು ಮಾಡಿದೆ. ನಾನು ಒಂಟಿಯಾಗಿ ಎಲ್ಲಿಯೂ ಹೋಗುತ್ತಿಲ್ಲ. ಎಲ್ಲಿಯೇ ಹೋದರೂ ಬಾಚಣಿಗೆ ಎಂಬ ಗೆಳೆಯನನ್ನೂ ಕರೆದುಕೊಂಡು ಹೋಗುತ್ತೀನಿ.

ಜೇಬಿಂದ ಒಂದು ಮರ ತೆಗೆದು ನೆಟ್ಟುಕೊಂಡು, ಅದರ ನೆರಳಲ್ಲಿ ಕೂರೋದು. ಸೂರ್ಯನ ಝಳ ಜಾಸ್ತಿ ಆಯ್ತ? ಅವನನ್ನ ಸಮುದ್ರದಲ್ಲಿ ಮುಳುಗಿಸೋದು. ಜೋಳಿಗೆಯಿಂದ ಒಂದು ತುಂಡು ಚಂದ್ರನ್ನ ತೆಗೆದು ಮೋಡದ ಹಿಂದೆ ನೇತು ಹಾಕೋದು.

ಈ ಮಾತು ನನಗೆ ಈ ಹಾಡನ್ನು ನೆನಪಿಸಿತು. "ಕೋಡಗನ ಕೋಳಿ ನುಂಗಿತ್ತಾ, ನೋಡವ್ವಾ ತಂಗಿ."

ಅಂದಹಾಗೆ ಅನಿವಾಸಿಗಳೆ, ನಡೀವಾಗೇನೋ ಯಾರಾದ್ರು ಜೊತೆಗಿರಬೇಕು, ಓಡುವಾಗ ಏನಿರಬೇಕು ?
ನಿದ್ದೆ : ಕನಸು :: ಎದ್ದೆ : ಕಣಸು ಅಂತ ರೇಶಿಯೋ ಪ್ರಪೋರ್ಶನ್ ಹಾಕಬಹುದಲ್ವೇ ?

ಎದ್ದೆ(ನಾ) - ಎದೆ, ಛಲ,
ಹಾಗೆಯೇ ಸೂರ್ಯ ಪ್ರಕಾಶ ಅಂತ ಹೇಳತ್ತೆ ಈ ನಿಘಂಟು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 4:26am — anivaasi

ಉ: ಸೂರ್ಯ ಕಾಲು

anivaasi's picture

ಬಾಚಣಿಗೆ ಗೆಳೆಯರೆ,
ಸೂರ್ಯ, ಚಂದ್ರ, ಮರ, ನೆರಳು, ಜೇಬು, ಜೋಳಿಗೆ: ಆಧ್ಯಾತ್ಮದ ಹಾಡು ನೆನಪಿಸ್ತ?!
~~ ಓಡುವಾಗ ಏನಿರಬೇಕು?
ಓಡುವಾಗ ಏನಿದ್ರೆ ಚಂದ ಅಂತ ನೀವು ಬರೀರಿ... Smiling
ಇಲ್ಲಿ ಕನ್ನಡದ "ಎದೆ = ಸೂರ್ಯ ಪ್ರಕಾಶ" ನನ್ನ ಕಣ್ಣಿಗೆ ಬೀಳಲಿಲ್ಲ!
869 Ta. eṉṟu

869 Ta. eṉṟu sun; eṉṟ ūr̤ sunshine, sun, summer. ? To. eṟ sun, in song unit; eṟ oṭ ṇelp ground cool in the sun [during the rainy season] (interpretation doubtful, but a parallel unit has n&odieresisside;ṟ 'sun', for which see 2910). Te. eṇḍa sunshine, sun, heat of the sun; eṇḍu to be heated by exposure to the sun, dry up, evaporate; eṇḍugulu grain exposed to the sun for being dried. Nk. (Ch.) edde sunshine. Pa. nendi, (NE.) nenḍi heat of the sun. Go. (A. D. MuE. Ma. S.) eddi, (G. M. Ko.) ed id.; (SR.) yaddi hot, sunlight; (Tr. Ph.) addī, (W.) adī, (Ch. MuW.) addi heat of the sun (Voc. 342). Cf. 829 Ta. el and 861 Ta. eṟi. DED(S) 738.

ಥ್ಯಾಂಕ್ಸ್ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 11:39am — ವೈಭವ

ಉ: ಸೂರ್ಯ ಕಾಲು

ವೈಭವ's picture

ಸಕ್ಕತ್ !!!!
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 1:36pm — Khavi

ಉ: ಸೂರ್ಯ ಕಾಲು

Khavi's picture

ಅನಿವಾಸಿಗಳೆ,
ತುಂಬಾ ಚೆನ್ನಾಗಿದೆ ನಿಮ್ಮ ಬರಹ..

ವೈಭವರೆ..

ಕನ್ನಡಕ್ಕೆ ಆಗಲೆ ಇದೆ... ಕನ್ನಡದೇ ಆದ ಸೊಬಗು, ಸೊಗಡು, ನಡಾವಳಿ ಅಲ್ಲವೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 4:32am — anivaasi

ಉ: ಸೂರ್ಯ ಕಾಲು

anivaasi's picture

ಥ್ಯಾಂಕ್ಸು ವೈಭವರಿಗೆ.
ಖವಿಯವರೆ - ವೈಭವರ "ಬೇಕು" -- "ಅಡಗಿರುವುದು ಗೊತ್ತಾಗಬೇಕು" ಅಂತ ನನಗೆ ತೋರತ್ತೆ. ಥ್ಯಾಂಕ್ಸ್ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 8:23am — ವೈಭವ

ಉ: ಸೂರ್ಯ ಕಾಲು

ವೈಭವ's picture

ಅನಿವಾಸಿಗಳೆ,

ನನ್ನಿ Smiling
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 29, 2007 - 9:32pm — mahesha

ಉ: ಸೂರ್ಯ ಕಾಲು

mahesha's picture

ಬೊಂಬಾಟ್....

ತಲೆ ಅಂದ್ರೆ ಇದಪ್ಪ.. ನಾನು ಹೊಗಳಿದ್ರೆ, ಚಿಳ್ಳೆಪಿಳ್ಳೆಗಳು ಹೊಗಳಿದಂತೆ ನಿಮಗೆ.. ಅದಕ್ಕೆ ಇಲ್ಲಿ ಹೊಗಳಲ್ಲ.. Smiling

"ಜೇಬಲ್ಲಿ ಮರ ಇರಬೇಕು.
ಜೋಳಿಗೇಲಿ ಚಂದ್ರ ಇರಬೇಕು.
ನಡೀವಾಗ ಯಾರಾದರೂ ಜತೆ ಇರಬೇಕು."

ಕಿಸೆಯಲ್ಲಿ ಮಡಗಿಕೊಳ್ಳೊಂತ ಮರ, ಚಂದ್ರ ಎಲ್ಲಿ ಸಿಗ್ತದ? ಒಂದೆರಡು ಕಳ್ಸಿ.. Smiling

ನಿಮ್ಮ ಬಳಿಯಂತೂ ತುಂಬುಗುಡಾಣ ಇವೆ, ಈ ಕಿಸೆಯ ಮರ, ಚಂದ್ರಗಳು.. Smiling, ಅದೃಸ್ಟವಂತ್ರೂ ನೀವು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 30, 2007 - 7:30am — anivaasi

ಉ: ಸೂರ್ಯ ಕಾಲು

anivaasi's picture

ರೀ ಮಹೇಶರೆ,
ಚಿಳ್ಳೆಪಿಳ್ಳೆಗಳು ಯಾರೂ ಇಲ್ಲ ಕಣ್ರಿ... ಒಳ್ಳೆ ಕತೆ ನಿಮ್ಮದು. Smiling

ನಿಮ್ಮ ಕಿಸೆವೊಳಗೆ ಇನ್ನೂ ಸರಿಯಾಗಿ ಹುಡುಕಿಕೊಳ್ಳಿ ನೀವು... ಸಿಕ್ಕೇ ಸಿಗ್ತದೆ. ಮರ, ಚಂದ್ರ ಅಲ್ಲದಿದ್ದರೂ ಅಚ್ಚರಿ ಹುಟ್ಟಿಸೋಂತಾದ್ದು ಇದ್ದೇ ಇರುತವೆ.

ಅದೃಸ್ಟ ಯಾರ ಸ್ವತ್ತೂ ಅಲ್ಲ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಈಗೀಗ ನನ್ನ ಕಾಲು ನೆಲದ ಮೇಲಿಲ್ಲ'
  • ಕುಂತಿ ಬೆಟ್ಟ: ಕಾಲು ಹಾದಿ, ಬೆಟ್ಟ ಹತ್ತುವ ಇನ್ನೊದು ಬದಿ
  • ಮಂಕುತಿಮ್ಮನ ಕಗ್ಗ
  • ‘ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ, ಡಾ.ಪ್ರಮೋದ್ ಕರಣ್ ಸೇಥಿ, ವಿಧಿವಶರಾದರು !
  • ಹನಿಗವನಗಳು
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator