ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ವಲಸೆ

August 13, 2007 - 2:35am — anivaasi

ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ - ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.

ಎರಡನೇದು - ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು "ನೀನು ಈ ದೇಶದಲ್ಲೇ ಹುಟ್ಟಿದ್ದ?" ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್‌ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. "ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ" ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.

ಉತ್ತರ ಮಾತ್ರ ವಿಪರೀತ ಬೋರಿಂಗ್ ಅಂದೆ ಆಲ್ಲವ? ಏನಾದರೂ ಮಾಡಿ ಆಸಕ್ತಿ ಹುಟ್ಟಿಸಬೇಕು ಅಂತ ಶುರು ಮಾಡ್ತೀನಿ:
"ನಾನು ಎಲ್ಲಿ ಹುಟ್ಟಿದ್ದೋ ಗೊತ್ತಿಲ್ಲ. ಹಸುಳೆ ಆಗಿದ್ದಾಗ ಯಾರೋ ಧೂರ್ತ ರಾಜನ ಕಾಟ ತಡೆಯೋಕೆ ಆಗದೆ ನನ್ನ ಅಪ್ಪ-ಅಮ್ಮ ರಾತ್ರೋ ರಾತ್ರಿ ಪುಟ್ಟ ದೋಣೀಲಿ ತಪ್ಪಿಸಿಕೊಂಡರಂತೆ. ಅದು ಬಿರುಗಾಳಿಗೆ ಸಿಕ್ಕಿ ಮುಳುಗೋ ಹಾಗೆ ಆಗಿತ್ತಂತೆ. ಆವಾಗ ದೂರದಲ್ಲಿ ಒಂದು ಸುಭಿಕ್ಷ ದೇಶ ಕಾಣಿಸ್ತಂತೆ. ಆದರೆ ಹತ್ತಿರ ಹೋಗುತ್ತಲೂ, ಆ ದೇಶದ ದೊಡ್ಡ ಹಡಗು ನಮ್ಮ ದೋಣೀನ ಕಾಪಾಡೋದು ಬಿಟ್ಟು, ಅವರ ರಾಜನ ಅಪ್ಪಣೆ ಮೇರೆಗೆ, ದೊಡ್ಡ ಕೋಲಿಂದ 'ಬರಬೇಡಿ ಹೋಗಿ' ಅಂತ ದೂರಕ್ಕೆ ತಳ್ಳಿದರಂತೆ. ಆ ದೇಶದ ಹಡಗು ಅತ್ತಲಾಗಿ ಹೋಗುತ್ತಲೂ ನಮ್ಮ ದೋಣಿ ಮುಳುಗಿ ಹೋಯ್ತಂತೆ. ಅದಕ್ಕೆ ನನ್ನ ಅಪ್ಪ-ಅಮ್ಮನ ಮುಖ ನಾನು ನೋಡೇ ಇಲ್ಲ. ನಾನು ಸೊಳ್ಳೆ ಪರದೆ ಗಂಟಿನ ಮೇಲೆ ತೇಲಿಕೊಂಡು ಆ ಸುಭಿಕ್ಷ ನಾಡಿನ ಚಿನ್ನದಂಥ ಕಡಲತಡೀಲಿ ಯಾರದೋ ಕೈಗೆ ಸಿಕ್ಕನಂತೆ. ಅವರು ಮೊದಲು ಯಾವುದೋ ಪ್ರಾಣಿ ಅಂತ ನನ್ನನ್ನ ಮುಟ್ಟೋಕೂ ಹೆದರಿಕೊಂಡು ಆಮೇಲೆ ಮನಸ್ಸು ಬದಲಾಯಿಸಿ ಮನೆ ಒಳಗೆ ಇಟ್ಟಕೊಂಡು ಪ್ರೀತಿಯಿಂದ ಸಾಕಿದರಂತೆ. ಒಂದು ಚೂರು ದೊಡ್ಡೋನಾಗತಲೂ ಕಟ್ಟಿಹಾಕೋ ಅವರ ಪ್ರೀತಿಯಿಂದ ತಪ್ಪಿಸಿಕೊಂಡು ಮತ್ತೆ ನನ್ನ ನಾಡಿಗೆ ಓಡಿ ಹೋಗಿ ದೊಡ್ಡೋನಾದ ಮೇಲೆ ಈಗಷ್ಟೆ ಬಂದು ಇಲ್ಲಿ ಇಳಿದೆ."

ನನ್ನ ತಲೆ ಸಾವಿರ ಹೋಳಾಗದೆ ಇರೋದು ಆಶ್ಚರ್ಯ ಅಲ್ಲ ಅಲ್ಲವೆ?

~.~
  • anivaasi ರವರ ಬ್ಲಾಗ್
  • Login or register to post comments
  • 369 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 13, 2007 - 10:59am — Sunil Jayaprakash

ಉ: ವಲಸೆ

Sunil Jayaprakash's picture

ಆಶ್ಚರ್ಯ ಆಗಲಿಲ್ಲ Laughing out loud ಏಕೆಂದರೆ, ನೀವು ದೊಡ್ಡೋನಾದ ಮೇಲೆ ಬಂದದ್ದು ಸಂಪದಕ್ಕೆ Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2007 - 11:10am — mahesha

ಉ: ವಲಸೆ

mahesha's picture

ಅನಿವಾಸಿರೇ!

ಚಂನಾಗಿದೆ! Smiling ನಂನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2007 - 11:31am — ವೈಭವ

ಉ: ವಲಸೆ

ವೈಭವ's picture

ಇದು ಓದುವಾಗ ನನಗೆ 'ಜೊನಾತನ್' ಕತೆ ನೆನಪಾಯಿತು. ( ಇತ್ತೀಚೆಗೆ ಟಿವಿ೯ ರಲ್ಲಿ ಬಿತ್ತರಗೊಂಡಿತ್ತು)

ಈ ಜೊನಾತನ್ ೫ ಏಡಿನವನಿದ್ದಾಗ ಹುಬ್ಬಳ್ಳಿಯಿಂದ ರೈಲಿನಲ್ಲಿ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದು, ಇಲ್ಲಿನ 'ದಿಕ್ಕಿಲ್ಲದವರ ಮನೆ' ಸೇರಿ, ಅಲ್ಲಿಂದ ಯಾವುದೋ ಸ್ವಿಸ್ ಜೋಡಿ ಇವನನ್ನು ದತ್ತು ತೆಗೆದುಕೊಂಡಿ ಹೋಗಿ ಸಾಕಿದರಂತೆ. ಅವನು ದೊಡ್ಡವನಾದ ಮೇಲೆ ತನ್ನ ಹೆತ್ತ ಅಪ್ಪ-ಅಮ್ಮ ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದನಂತೆ. ಇಂಡಿಯಾದ ಯಾವುದೇ ನುಡಿ/ಭಾಶೆ ಗೊತ್ತಿಲ್ಲದ ಇವನಿಗೆ ಬೆಂಗಳೂರಿಗೆ ಬಂದಾದ ಮೇಲೆ ಅವನಿಗೆ ಕನ್ನಡದ 'ಒಂದು ಎರಡು ಮೂರು' ನೆನಪಾಗಿ ಹೇಳುತ್ತಿದ್ದನಂತೆ. ಇದರ ಮೇಲೆ ಪೊಲೀಸರು ಹುಡುಕಾಟ ನಡೆಸಿ ಕೊನೆಗೂ ಅವನ ಅಮ್ಮನನ್ನು ಹುಡುಕಿಕೊಟ್ಟರಂತೆ.

ತಾಯ್ನುಡಿಯಿಂದ ಮಗನಿಗೆ ಸಿಕ್ಕ ತಾಯಿ. Smiling ಅಂತ ಸಿನಿಮಾ ಮಾಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 14, 2007 - 3:39am — keshav

ಉ: ವಲಸೆ

keshav's picture

ಅನಿವಾಸಿ,
ನಿಮ್ಮ ಉತ್ತರ ಸಾವಿರಾರು ಪ್ರಶ್ನೆಗಳನ್ನು ಹುಟ್ಟಿಸಿದೆ ನನ್ನಲ್ಲಿ, ತುಂಬ ಚೆನ್ನಾಗಿ ಬರೆದಿದ್ದೀರಾ.
ಮಗು ಪ್ರಶ್ನೆ ಕೇಳುತ್ತಿದ್ದರೆ ಖುಷಿಯಾಗುತ್ತದೆ, ಅದೇ ಮಗು ಬೆಳೆದು ಎಲ್ಲ ಗೊತ್ತಿರುವಂತೆ ಮಾತಾಡಲು ಶುರು ಮಾಡುತ್ತಿದ್ದಂತೆ ಬೋರು ಹೊಡೆಯುತ್ತದೆ.
ಹೊಸ ವಿಚಾರ ಹೊಸ ಪ್ರಶ್ನೆ
ಕೇಶವ

Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2007 - 2:32am — anivaasi

ಉ: ವಲಸೆ

anivaasi's picture

ಎಲ್ಲರಿಗೂ ಥ್ಯಾಂಕ್ಸ್...
ಸುನೀಲರೆ, ನಿಮ್ಮ ಕಾಮೆಂಟಿನ ಒಳಸುಳಿ ಗೊತ್ತಾಗಲಿಲ್ಲ!? Smiling
ಕೇಶವರೆ, ಪ್ರಶ್ನೆ ಹುಟ್ಟಿಸಿದ ಉತ್ತರಗಳು, ಚೆನ್ನಾಗಿದೆ...
ಬಹುಶಃ ಇದು ಲೋಕದ ಎಲ್ಲ ವಲಸಿಗರ ಅನುಭವವಿರಬಹುದು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 15, 2007 - 2:41am — hpn

ಉ: ವಲಸೆ

hpn's picture

ಸುನೀಲ ಬರೆದದ್ದು ನನಗೂ ಅರ್ಥವಾಗಲಿಲ್ಲ Smiling

ಬಹುಶಃ ಆಫೀಸಿಗೆ ಪಂಚೆ ಉಟ್ಟಿಕೊಂಡು ಹೋಗೋ ಬರದಲ್ಲಿ ಸುನೀಲ ಏನೇನೋ ಟೈಪ್ ಮಾಡಿ ಕಾಲ್ಕಿತ್ತಿರಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2007 - 11:50am — Sunil Jayaprakash

ಉ: ವಲಸೆ

Sunil Jayaprakash's picture

ಹೋಗೋ ಬರದಲ್ಲಿ

ಸ್ವಾತಂತ್ರ್ಯದಿನವಾದರೂ ಬಿಜಿ ಕೆಲಸದಿಂದ ಬಿಡುಗಡೆ ಪಡೆದು, ಬೇಗ ಬೇಗ ಕೀಲಿ ಕುಟ್ಟಿ ತಪ್ಪಿಸಿಕೊಳ್ಳುವ ಭರದಲ್ಲಿ, "ಭರವನ್ನು ಬರ" ಮಾಡಿಬಿಟ್ಟೆಯಾ, ಅಯ್ಯೋ ಹರಿಯೇ Laughing out loud. ಅಂದಹಾಗೆ, ಆಫೀಸಿನಲ್ಲಿ ಪಂಚೆ ಉಟ್ಕೊಂಡು ಕೆಲಸ ಮಾಡುತ್ತಾ ಹಾಯಾಗಿ Sticking out tongue ಓಡಾಡಿಕೊಂಡಿರುವದರಲ್ಲಿ ಅದೇನೋ "ಏನೋ ಒಂಥರಾ" ಮಜಾ ನಿಜಕ್ಕೂ ಇದೆ....ಆದರೆ ಟ್ರಾಫಿಕ್ಕಿನಲ್ಲಿ ಪಂಚೆ ಉಟ್ಕೊಂಡು ಗಾಡಿ ಓಡಿಸುವ ಕಷ್ಟ ಊಹಿಸಿಕೊಂಡರೆ Smiling

ಸುನೀಲರೆ, ನಿಮ್ಮ ಕಾಮೆಂಟಿನ ಒಳಸುಳಿ ಗೊತ್ತಾಗಲಿಲ್ಲ!?

ಅಯ್ಯೋ, ಬಿಡಿ ಅನಿವಾಸಿಗಳೆ, ನೀವು ಬರೆಯುವ ನಿಗ್-ನಿಗೂಢವಾದ ಎಷ್ಟೋ ಒಳ್ಳೆಯ ಬರಹಗಳಿಗಿಂತ ನನ್ನ ಕಾಮೆಂಟ್ ಯಾವ ಸೀಮೆಯದ್ದು. Sticking out tongue. ಉಪೇಂದ್ರನ ತರಹ, "ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ" ಅಂತ ನಾನು ಕಾಮೆಂಟಿಗೆ ಹಾಕಕ್ಕಾಗುತ್ತದೆಯೇ Puzzled

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 9:20am — anivaasi

ಉ: ವಲಸೆ

anivaasi's picture

ಸುನಿಲ್,
ಕತ್-ಕತ್ತಲೆ ಅನ್ನೋ ಹಾಗೆ ನಿಗ್-ನಿಗೂಢ - ಚೆನ್ನಾಗಿದೆ.
ಆದರೆ, ಹೀಗೆ ನಯವಂತಿಕೆ ಇಂದ ತಿವಿಯುತ್ತೀರಿ ಅಂತ ನನಗೆ ಮೊದಲೇ ಯಾಕೆ ಅನ್ನಿಸಿತೋ!? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಶ್ನೆ - ಉತ್ತರ
  • ಒಂದು ಚಿಕ್ಕ ಪ್ರಶ್ನೆ
  • ಬೈಟೊ ಕಾಫಿ !!! - ೧
  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ಯಾಹೂ! Answers ನಲ್ಲಿ ಕನ್ನಡ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator