May 14, 2011 - 3:52am
ತೆಂಕಣಾಕಾಶದ ಉತ್ತರ ದಿಕ್ಕಲ್ಲಿ ಈಗ ಕಾಣುತ್ತಿರುವ ನಾಕು ತಾರೆಯರ ಕೂಟದ ಚಿತ್ರಗಳು ಇವು.
ಜೂಪಿಟರ್, ವೀನಸ್, ಮೆರ್ಕುರಿ ಹಾಗು ಮಾರ್ಸ್ ಕೂಟ ನಡೆಸಿರುವ ತಾರೆಯರು. ಈವತ್ತು ಬೆಳಿಗ್ಗೆ ಸುಮಾರು ೫.೩೦ರ ಹೊತ್ತಿಗೆ ಅದನ್ನು ಸೆರೆಹಿಡಿಯುವ ನನ್ನ ಪ್ರಯತ್ನವಿದು
.
ಮೂರೂ ಚಿತ್ರ ರೈಲ್ವೇ ನಿಲ್ದಾಣದ ನಾಕು ಮಹಡಿ ಕಾರ್ ಪಾರ್ಕಿನ ಮೇಲಿಂದ ತೆಗೆದದ್ದು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:






ಪ್ರತಿಕ್ರಿಯೆಗಳು
ಉ: ನಾಕು ತಾರೆಯರು
ಮರ್ಕ್ಯುರಿ (ಬುಧ)ವನ್ನು ಕಂಡಿದ್ದು ನಿಜಕ್ಕೂ ಆಶ್ಚರ್ಯ! ಏಕೆಂದರೆ ಬುಧವನ್ನು ನೋಡಲು ಸಾಮಾನ್ಯವಾಗಿ ಸಾಧ್ಯವೇ ಇಲ್ಲ. ಉಳಿದ ಗ್ರಹಗಳನ್ನೆಲ್ಲಾ ನೋಡಬಹುದಾದರೂ ಬುಧದ ಮತ್ತು ಸೂರ್ಯನ ಆಗಮನ/ನಿರ್ಗಮನ ಬಹುತೇಕ ಏಕಕಾಲದಲ್ಲೇ ಆಗುತ್ತದೆ.
ಉ: ನಾಕು ತಾರೆಯರು
ಹಂಸಾನಂದಿಯವರು ಬೇರೊಂದೆಡೆ ತಿದ್ದಿದಂತೆ - ಅದು "ತಾರೆಯರು" ಅಲ್ಲ - ಗ್ರಹಗಳು ಆಗಬೇಕಿತ್ತು...
ಉ: ನಾಕು ತಾರೆಯರು
ಈ ನಾಲ್ಕು ಗ್ರಹಗಳು ಚುಕ್ಕಿಗಳಾಗಿ ಕಾಣಿಸುತ್ತಿವೆಯಲ್ಲಾ, ಚುಕ್ಕಿಗಳು ಚಿಕ್ಕೆಗಳಂತೇ ಇವೆ. :-)
ಈ ನಾಲ್ಕು ಚುಕ್ಕಿಗಳನ್ನು ಸೇರಿಸಿ ಗೆರೆ ಎಳೆದರೆ ಏನು ಮೂಡೀತೆಂದು ಪ್ರಶ್ನೆ ಹಾಕಿದರೆ ಸಂಪದಿಗರಿಂದ ಬರುವ ಉತ್ತರ ರಂಜನೀಯವಾಗಿರಬಹುದು!
ನನಗಂತೂ ಸೊಟ್ಟ ವೈನ್ ಗ್ಲಾಸ್ ಕಾಣುತ್ತಿದ್ದು, ಎಲ್ಲಾ ಚೆಲ್ಲಿ ಹೋಗುತ್ತಿದೆಯಲ್ಲಾ ಎಂಬ ದುಃಖ!
ಉ: ನಾಕು ತಾರೆಯರು
ಹಹಹ... ಚೆಲ್ಲುವಲ್ಲಿ ಬಾಯಿಟ್ಟರೆ ಎಲ್ಲಾ ಸರಿಹೋಗುತ್ತದೆ!! :)
ಉ: ನಾಕು ತಾರೆಯರು
good idea! :-)!