ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

August 14, 2007 - 6:38pm — anivaasi

 

ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂಡಿಯಾದವರು ಸೇರತಾರೆ. ದಿನವಿಡೀ ಹಾಡು ಕುಣಿತ ಊಟ ತಿಂಡಿ ಜಾತ್ರೆ. ಇದರ ನಡುವೆ ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನ ಕರೆಸಿ ಬೆನ್ನು ತಟ್ಟಿಸಿಕೊಳ್ಳೋ ಬೇಜವಾಬ್ದಾರಿತನ ನಮ್ಮ ಸೂಟುಧಾರಿ ಇಂಡಿಯನ್ "ಎಂಟರ್‌ಪ್ರೆನರ್ಸ್‌"ಗಳಿಗೆ. ಹಲ್ಲುಗಿಂಜಿಕೊಂಡು ಅವರ ಜತೆ "ಸಭ್ಯತೆಯ ಲಂಚ್" ಬೇರೆ.

ಅವರೆಲ್ಲಾ ಭಾಷಣದ ಬೊಗಳೆ ಮುಗಿಸಿ "ಸಭ್ಯತೆಯ ಲಂಚ್"ಗೆ ತೊಲಗತ್ತಲೂ, ಕನ್ನಡದವರು ನಾವು ಕೆಲವರು "ಈ ಮಣ್ಣು ನಮ್ಮದು, ಈ ಗಾಳಿ ನಮ್ಮದು" ಅನ್ನೋ ದೊಡ್ಡರಂಗೇಗೌಡರ ಹಾಡು ಹಾಡಿದೆವು. (ಯಾವ ಮಣ್ಣು-ಯಾವ ಗಾಳಿ ಅಂತ ಗೊಂದಲ ಇದೆ ಬಿಡಿ!)

ಆಮೇಲೆ ಕನ್ನಡದ ಪುಟ್ಟ ಪುಟ್ಟ ಮಕ್ಕಳು ಹುರುಪಿನಿಂದ "ಚಲುವಯ್ಯ ಚಲವೋ" ಹಾಡಿಗೆ ಕುಣಿದರು.

ಅಲ್ಲದೆ, ತಮಿಳರು, ತೆಲುಗರು, ಹಿಂದಿಯವರು, ಪಂಜಾಬಿಗಳು, ಮಲಯಾಳಿಗಳು, ಮರಾಟಿಗರು, ಬಂಗಾಳಿಗಳು, ಎಲ್ರೂ ಅವರ ಅವರ ಹಾಡು ಹಾಕಿಕೊಂಡು/ಹೇಳಿಕೊಂಡು ಕುಣಿದರು.

 

 

 

ಇನ್ನೊಂದು ಕಡೆ ನಾವು ಸಿಕ್ಕ ಸಿಕ್ಕ ಕನ್ನಡದವರಿಗೆಲ್ಲಾ ಜೋಕುಮಾರಸ್ವಾಮಿ ಮತ್ತೆ ಆಡ್ತಾ ಇದ್ದೀವಿ ಬನ್ನಿ ಅಂತ ಹೇಳ್ಕೊಂಡು ತಿರುಗತಾ ಇದ್ದಿವಿ. ಆವಾಗ ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹವಾರ್ಡ್‌ ಅನ್ನೋ ಧೂರ್ತನ್ನ ಅವನ ಕ್ಷೇತ್ರದಲ್ಲೇ ಸೋಲಿಸೋ ಹಾಗೆ ಕಾಣೋ, ತನ್ನ ಟಿವಿ ಪ್ರೆಸೆಂಟರ್‍ ಕೆಲಸ ಬಿಟ್ಟು ಎಲೆಕ್ಷನ್‌ಗೆ ನಿಂತಿರೋ ದಿಟ್ಟ ಹೆಂಗಸು ಮಾಕ್ಸೀನ್ ಮೆಕ್ಯೂ ಬಂದು ನಮ್ಮ ಜತೆ ಮಾತಾಡಿದಳು. ಅವಳ ಬಗ್ಗೆ ನಮಗೆ ಸ್ವಲ್ಪ ಜಾಸ್ತೀನೆ ಪ್ರೀತಿ. ಮುಂದೆ ಅವಳಿಗೆ ಆ ಪ್ರೀತಿಯ ಭಾರ ಹೊರಕ್ಕಾಗದೇ ಇರಬಹುದು ಅನ್ನೋ ಎಚ್ಚರಿಕೇನೂ ಇದೆ. ಜೋಕುಮಾರಸ್ವಾಮಿ ನಾಟಕಕ್ಕೆ "ನೀನೂ ಬಾ, ನಿನ್ನ ಸಂಗಾತಿಗಳಿಗೂ ಹೇಳು" ಅಂತ ಚೀಟಿ ಕೊಟ್ಟು ಕರೆದವು. ಅವಳ ಹಿಂದೆ ಟೀವಿ ಕ್ಯಾಮೆರಾಗಳು ಇದ್ದವು. ಅವಳು ಯಾವುದಾದರೂ ಹಾಡು ಹೇಳಿ ಅಂದಳು. ತಕ್ಕೊ ಅಂತ "ಶರಣು ಹೇಳೇವ್ರಿ" ಹಾಡನ್ನು ಹಾಡಿದವು. ಅದು ಆವತ್ತು ಸಂಜೆ ಟೀವಿ ನ್ಯೂಸಲ್ಲೆಲ್ಲಾ ಬಂದದ್ದು ನೀವು ಇಲ್ಲಿ ನೋಡಬಹುದು.
Sydney Morning Herald ನಲ್ಲಿ

ಸಂಜೆ ಟಿವಿ ಸುದ್ದಿಯಲ್ಲಿ

 

 

~.~
  • anivaasi ರವರ ಬ್ಲಾಗ್
  • Login or register to post comments
  • 783 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 17, 2007 - 4:33pm — ಶ್ಯಾಮ ಕಶ್ಯಪ

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

ಶ್ಯಾಮ ಕಶ್ಯಪ's picture

ನಿಮ್ಮ ಸ್ವಾತಂತ್ರ್ಯೋತ್ಸವ ನೋಡಿ ನಾವು ಅಮೇರಿಕದಲ್ಲಿ ನಮ್ಮ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ನೆನಪು ಬಂತು. "ದೇಶವನ್ನೇ ಬಿಟ್ಟುಬಂದಾಗಿದೆ, ಇನ್ನು ಅಲ್ಲಿಯ ಸ್ವಾತಂತ್ರ್ಯ ಕಟ್ಟುಕೊಂಡು ಎನಾಗಬೇಕಾಗಿದೆ" ಎಂದು ಹಲವರಿಗೆ ಅನ್ನಿಸುತ್ತಿದ್ದರೂ ಭಾರತೀಯ ಸಮುದಾಯ ಎಲ್ಲಾದ್ರೂ ಆಡಿಕೊಂಡುಬಿಟ್ರೆ ಅಂತ ಒತ್ತಾಯಕ್ಕಾದ್ರೂ ಬಂದು ಮುಖ ತೋರಿಸಿ ಹೋಗ್ತಾರೆ. ಜೊತೆಗೆ ಒಂದು ಪಾಟ್‍ಲಕ್ ಅಥವ ತಿನ್ನಕ್ಕೆ ಏನಾದ್ರೂ ಇಟ್ರೆ ಎಲ್ಲ ಚೆನ್ನಾಗಿ ತಿಂದು ಹೋಗ್ತಿದ್ರು.

ಆದರೆ ತಮ್ಮ ಮಕ್ಕಳಿಗೆ ಮಾತ್ರ ಭಾರತೀಯತೆಯನ್ನು ಗಂಟಲಿಗೆ ತುರುಕದೇ ತಂದೆ ತಾಯಿಗಳು ಬಿಡುತ್ತಿರಲಿಲ್ಲ. ಪ್ರತೀ ವರ್ಷ ಈ ಚಿಣ್ಣರಿಂದ ಆಗಸ್ಟ್ ಹದಿನೈದಕ್ಕೆ ರಾಷ್ಟ್ರಗೀತೆ, ಒಂದೆರೆಡು ದೇಶಭಕ್ತಿ ಗೀತೆ, ನಾಲ್ಕಾರು ಡಾನ್ಸ್ ಗ್ಯಾರಂಟಿ.ಅವರ ಮಕ್ಕಳಿಗೆ ಅಮೇರಿಕನ್ ರಾಷ್ಟ್ರಗೀತೆ ಸಲೀಸು. ಜನ ಗಣ ಮನ ಹೇಳಿಸಲು ಒಂದು ತಿಂಗಳ ತಾಲೀಮು ಬೇಕು.

ನನಗೆ ಇವೆಲ್ಲ ತೀರಾ ವಿಚಿತ್ರ ಅನ್ನಿಸುತ್ತಿತ್ತು. ನಿಮ್ಮ ಲೇಖನ ನೋಡಿ ಮತ್ತೆ ಇವೆಲ್ಲ ನೆನಪಾಯ್ತು.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2007 - 3:29am — anivaasi

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

anivaasi's picture

ಶ್ಯಾಮ,
ಈ ರೀತಿಯ ಹಬ್ಬ ಜಾತ್ರೆಗಳು ವಲಸಿಗ ಸಮುದಾಯ ತನ್ನ ಚಹರೆಯನ್ನು ಕಾಪಾಡಿಕೊಳ್ಳುವ ಒಂದು ಸಾಧನ ಎಂದು ನನ್ನೆಣಿಕೆ. ಅದು ಎಷ್ಟು ಸಮಂಜಸವಾಗಿದೆ, ಅರ್ಥಪೂರ್ಣವಾಗಿದೆ ಎಂಬುದು ಯೋಚಿಸಬೇಕಾದ್ದು. ಆದರೆ, ಇಂಥದ್ದನ್ನು ಎಲ್ಲ ವಲಸಿಗರೂ ಮಾಡಿಕೊಂಡು ಬಂದಿರುವುದು, ಅವರ ಒಂದು ಮುಖ್ಯ ಲಕ್ಷಣವೇನೋ ಎಂದು ಅನಿಸುತ್ತದೆ.
ಇನ್ನು ಗಂಟಲಲ್ಲಿ ತುರುಕುವುದನ್ನು ನಾನೂ ನೋಡಿದ್ದೇನೆ. ಅದು ಎಷ್ಟು ಕೆಲಸಮಾಡುತ್ತದೋ ಗೊತ್ತಿಲ್ಲ. ಸಹಜವಾಗಿ, ಪ್ರಾಮಾಣಿಕವಾಗಿ ಬದುಕಿದರೆ ಮಕ್ಕಳು ಅದರಿಂದ ಕಲಿಯುತ್ತಾರೆ ಅಲ್ಲವೆ? ನಾವಲ್ಲದ್ದನ್ನು, ಒಳಗೆ ಇಲ್ಲದ್ದನ್ನು ಮಾಡಿದ ಕೂಡಲೆ ಅದನ್ನು ತಿಳಿದುಕೊಂಡು ಮಕ್ಕಳು ಒಳಗೊಳಗೇ ಪಕಪಕ ನಗುತ್ತಾರೆ ಎಂದು ನನ್ನ ಗುಮಾನಿ Smiling
ಪ್ರತಿಕ್ರಿಯೆಗೆ ಥ್ಯಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2007 - 10:15pm — hamsanandi

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

hamsanandi's picture

ಅನಿವಾಸಿಯವರೆ,

ಚೆನ್ನಾಗಿದೆ. ಈ ಸಲ ನಮ್ಮೂರಲ್ಲಿ ನಡೆಯುವ ಜಾತ್ರೆಗೆ ಹೋಗಲಾಗಲಿಲ್ಲ. ನಿಮ್ಮ ವರದಿ ಓದಿ ನಾನೂ ಅಲ್ಲೇ ಇದ್ದಂತೆನಿಸಿತು.

ಸುಮಾರು ಎಲ್ಲ ’ಅನಿವಾಸಿ’ಗಳ ಅನುಭವವೂ ಇದೇನೆ ಎನ್ನಿಸುತ್ತೆ - ಮಕ್ಕಳಿಗೆ multilple identity ಗಳನ್ನು ಬೆಳೆಸುವ ಹುನ್ನಾರದಲ್ಲಿ ಎಷ್ಟು ಯಶಸ್ಸು ಸಿಗುತ್ತೋ ಕಾಲವೇ ಹೇಳಬೇಕಷ್ಟೇ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 8:11pm — ಸಂಗನಗೌಡ

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

ಸಂಗನಗೌಡ's picture

ಹೊರಗಿನವರಿಗೆ ಎಲ್ಲ ಇಂಡಿಯನ್ನೂ ಒಂದೇ, ಇದು ಕನ್ನಡ ಅಂತ ಅವಳಿಗೆ ಗೊತ್ತು ಮಾಡಿದಿರಾ ನೀವು??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2007 - 3:34am — anivaasi

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

anivaasi's picture

ಸಂಗನಗೌಡರೆ,
ಕನ್ನಡ ಅಂತ ಹೇಳಿದ್ದಷ್ಟೇ ಅಲ್ಲ, ಅವಳ ಹತ್ತಿರ ಇಂಗ್ಲೀಷಲ್ಲಿ ಬರೆಸಿದ "ಜೋಕುಮಾರಸ್ವಾಮಿ" ಪದ ಓದಿಸಿದೆವು ಕೂಡ.
ಅಂದ ಹಾಗೆ, ನಾನು ಇಂಡಿಯಾದವನು ಅಂದರೆ ನೀವು ಹೇಳಿದ ಹಾಗೆ "ಎಲ್ಲಾ ಒಂದೇ" ಆಗುತ್ತದೆ ಅಂತ, "ಸೌತ್ ಇಂಡಿಯಾ" ಅಂತಲೇ ಮಾತು ಶುರುಮಾಡಿ ಕರ್ನಾಟಕ ಅಂತೀನಿ. ಬೆಂಗಳೂರು ಅಂದ ಕೂಡಲೆ ಗೊತ್ತಾಯ್ತು ಅಂತ ತಲೆ ತೂಗ್ತಾರೆ! 8-10 ವರ್ಷದ ಕೆಳಗೆ ಬೆಂಗಳೂರು ಎಲ್ಲಿದೆ ಅಂತ ಹೇಳಬೇಕಾಗಿತ್ತು, ಈಗ ಅದರ ಅಗತ್ಯ ಇಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 8:35pm — mahesha

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

mahesha's picture

ಸದ್ಯ ದೇವ ನಮ್ಮ ಕನ್ನಡದ ಹಾಡು ಹಾಡಕ್ಕೆ ನಮ್ಮ ಅನಿವಾಸಿ ಇದ್ರೂ.! ಕನ್ನಡದೊರು ಇದ್ದೀವಿ ಅಂತ ಒಂದು participation ಬಲು ಮುಕ್ಯ...
ನಮ್ಮ ಕನ್ನಡದ ಪರವಾಗಿ ನಿಂತು ಪಾಲುಗೊಂಡಿದ್ದಕ್ಕೆ ನಂನಿ..!

ಆ ಪೇಪರಿನ ಪೋಟೋದಾಗೆ ನೀವು ಇದ್ದೀರೇನು?

ಆಸ್ಟ್ರೇಲಿಯದಲ್ಲಿ ಕನ್ನಡದ ಚಟುವಟಿಕೆ ಚನ್ನಾಗಿದೆ ಅಂತ ಆಯ್ತು. ನ್ಯೂಜೀಲ್ಯಾಂಡಲ್ಲು ಕನ್ನಡ ಕೂಟ ಅಯ್ತಂತೆ.

ಅನಿವಾಸಿಗಳೇ.. ಈ ಸರತಿ ನಿಮ್ಮ ಜೋಕುಮಾಸ್ವಾಮಿ ನಾಟಕವನ್ನು ವಿಡಿಯೋ ತೆಗೆದು ಮಿಂಬಲೆ(web)ಗೆ ಏರಿಸಿ, ಇಳಿಸಿ ನೋಡ್ತೀನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2007 - 3:40am — anivaasi

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

anivaasi's picture

ಮಹೇಶ,
ನಾನು ಇಲ್ಲದೇನೂ ಕನ್ನಡದ ಹಾಡು ಕುಣಿತ ಸಿಡ್ನಿಯಲ್ಲಿ ತುಂಬಾ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ ಬಿಡಿ. ನಾವು ಕೆಲವರು ಈಗ ಗಂಭೀರವಾಗಿ ನಾಟಕ, ಪದ್ಯ ಅಂತ ಓಡಾಡ್ತಾ ಇದ್ದೀವಿ. ಫೋಟೋದಲ್ಲೂ ಇದ್ದೀನಿ ಸುದ್ದಿ ವಿಡಿಯೋದಲ್ಲೂ ಇದ್ದೀನಿ... Smiling ಟೋಪಿ ಹಾಕ್ಕೊಂಡಿಲ್ಲ ನಾನು.
ವಿಡಿಯೋ ಮಾಡಾಣ, ಆದರೆ ಇನ್ನೊಂದು ಸಲ ಮಾಡಿದರೆ, ಬಂದು ನೋಡ್ತೀನಿ ಅಂದಿದ್ರಲ್ಲ... ಮರೆತು ಬಿಟ್ರ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2007 - 8:32am — mahesha

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

mahesha's picture

ಬರೋಣ..

ಆದ್ರೆ ಈಗ ಇನ್ನೆರಡು ತಿಂಗಳು ಈ ಊರು ಬಿಟ್ಟು ಕದಲೋದು ತುಸು ಎಡರೇ...
ಒಂದು ದೊಡ್ಡ ಹೆಜ್ಜೆಯಲ್ಲಿ ಇದ್ದೀನಿ!

ನಂಗೆ ದಿಟವಾಗಲು ಬಂದು ನೋಡೋ ಬಯಕೆಯಂತೂ ಇದೆ.

ಬರಕ್ಕಾಗಲ್ಲ ಅಂತ ಬೇಸರ!

ನಂಗ ಹತ್ರ ಆಸ್ಟ್ರೇಲಿಯದ ವಿಸಾ ಕೂಡ ಇಲ್ಲ. ಮೊದಲು ಒಂದು ವಿಸೆಗೆ ಅರ್ಜಿ ಹಾಕಬೇಕು!! :)[ ಇದನ್ನು ಮಾಡ್ತಿದ್ದೀನಿ Smiling ]

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2007 - 8:48pm — muralihr

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

muralihr's picture

ಬಲು ಚೆನ್ನಾಗಿದೆ ನಿಮ್ಮ ಹಬ್ಬಾ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2007 - 3:42am — anivaasi

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

anivaasi's picture

"ಬಲು ಚೆನ್ನಾಗಿದೆ" - ಹೆಂಗಾರೂ ತಿಳಿಕೋಬಹುದು Smiling
ಥ್ಯಾಂಕ್ಸ್ ಮುರುಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 19, 2007 - 8:43am — ASHOKKUMAR

ಉ: ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

ASHOKKUMAR's picture

ಇದು ಅನಿವಾಸಿಗಳ ಲೇಖನ ಎಂದು ನನ್ನ ಊಹೆ.ಹೌದೇ?
http://68.178.224.54/udayavani/special.asp?contentid=443271&lang=2
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
  • ಕಿಂಡಿ-೧
  • ಮೊದಲ ಅನುಭವ
  • ಕೈ ಕೊಟ್ಟ ಸಖಿ
  • ಏಪೆಕ್ ಪ್ರೊಟೆಸ್ಟ್
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator