ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅವನು ಇವನು ನೀಲುಗಳು

ಕೇಳಿದ್ದು ಹೇಳಿದ್ದು

"ಬಾಗಿಲು ತಟ್ಟಿದ ಸದ್ದಾಯಿತು" ಅಂದ ಅವನು.
"ಸದ್ದು ಬಾಗಿಲ ತಟ್ಟಿತು" ಅಂದ ಇವನು.
ಅವನು ಅರ್ಥವಾಗದೆ ಹುಬ್ಬುಗಂಟಿಕ್ಕಿ ದುರುಗುಟ್ಟಿದ
ಇವನು ಅವನ ಹಣೆಯ ನೆರಿಗೆ ಅರ್ಥವಾದರೂ ಸುಮ್ಮನಿದ್ದ.

 

ಆಯ್ಕೆ

ಅವನು ನವಿಲು
ಇವನು ಕೋಗಿಲೆ

ಅವನು ಹಾಡಿದ
ಇವನು ಕುಣಿದ

"ಹೆಳವನ ಹೆಗಲ ಮೇಲೆ" ಕೂತವಳಂತೆ ದಿಟ್ಟಿಸಿದೆ.

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅವನು ಇವನು ನೀಲುಗಳು

Jayalaxmi.Patil's picture

ತುಂಬಾ ಚೆನ್ನಾಗಿವೆ.
ಜಯಲಕ್ಷ್ಮೀ.ಪಾಟೀಲ್.

ಉ: ಅವನು ಇವನು ನೀಲುಗಳು

anivaasi's picture

ಜಯಲಕ್ಷ್ಮಿಯವರೇ,
ಚೆನ್ನಿದೆ ಅಂದಿದ್ದಕ್ಕೆ ಥ್ಯಾಂಕ್ಸ್!

ಉ: ಅವನು ಇವನು ನೀಲುಗಳು

mahesha's picture

ನನಗೆ ಅರ್ತ ಆಗಿಲ್ಲ..

ತುಸು ಹೇಳಿ.. ನನ್ನಿ

ಉ: ಅವನು ಇವನು ನೀಲುಗಳು

srinivasps's picture

ನನಗೂ ಏನು ಅರ್ಥ ಆಗ್ಲಿಲ್ಲ ..! :(

ಉ: ಅವನು ಇವನು ನೀಲುಗಳು

anivaasi's picture

ಮೊದಲ ನೀಲುವಿಗೆ ವಿವರಣೆ:
ಪದ್ಯ ಮಕ್ಕಳ ಹಾಗೆ, ಕೆಲವು ಸಲ ಓಡಿಬಂದು ಮಟ್ಟೆಯ ಮೇಲೆ ಕೂರತ್ತಾವೆ, ಇನ್ನು ಕೆಲವೊಮ್ಮೆ ಎಷ್ಟು ಕರೆದರೂ ಮೊಂಡಾಟ ಮಾಡುತ್ತವೆ. ಹಾಗೆಯೇ ಮಕ್ಕಳು ಪದ್ಯದ ಹಾಗೆ ಕೆಲವೊಮ್ಮೆ ಕುಲುಕುಲು ನಗುತ್ತಾವೆ, ಉಳಿದೊಮ್ಮೆ ಗಂಭೀರವಾಗಿ ದಿಟ್ಟಿಸುತ್ತಾವೆ. ಆದರೆ ಈ ನೀಲು ಪದ್ಯದ ಬಗ್ಗೆ ಅಲ್ಲ.
ಎರಡನೇ ನೀಲುವಿಗೆ ವಿವರಣೆ:
ನಾಯಕಿ ನೋಡುತ್ತಿದ್ದಾಳೆ - ಹಾಡುವ ನವಿಲನ್ನು , ಕುಣಿಯುವ ಕೋಗಿಲೆಯನ್ನು...
ಅಡಿಗರ ಒಂದು ಪದ್ಯ ಕೊನೆಗೊಳ್ಳುವುದು "ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ - ದಾರಿ ಸಾಗುವುದೆಂತು ನೋಡಬೇಕು"

ಓಕೆ - ಸಬ್ಮಿಟ್ ಬಟನ್ ಒತ್ತುತ್ತೇನೆ...

ಉ: ಅವನು ಇವನು ನೀಲುಗಳು

mahesha's picture

ಅಸಾಮಾನ್ಯ ಧನ್ಯವಾದ

ಪ್ರಶ್ನಿಸಿದಕ್ಕೆ ಕ್ಷಮಿಸಿರಿ.

ಉ: ಅವನು ಇವನು ನೀಲುಗಳು

Jayalaxmi.Patil's picture

ಮಹೇಶ,ನಿಮ್ಮ ನಿಮ್ಮ ಮಾತಿಗೆ ನಕ್ಕು ನಕ್ಕು ಸಾಕಾಯ್ತು ನನಗೆ. ( ಕ್ಷಮಿಸಿ ಅನಿವಾಸಿಯವರೆ ಮಹೇಶ ಅವರ ತುಂಟ ಉತ್ತರಕ್ಕೆ ನಗು ಬಂದಿದ್ದು, ಅವರ ಪ್ರಶ್ನೆಗೆ ನೀವು ಉತ್ತರಿಸಿದ್ದಕ್ಕಾಗಿ ಅಲ್ಲ.)
ಮಹೇಶ್ ನಿಧಾನವಾಗಿ ಆ ಎರಡೂ ಚಿಟುಕು(ನೀಲು)ಗಳನ್ನು ಓದಿ.ಅರ್ಥವಾಗದಂಥದ್ದು ಏನೂ ಇಲ್ಲ.
ಜಯಲಕ್ಷ್ಮೀ.ಪಾಟೀಲ್.