ಮಿಡತೆ ಸಂತೆ ಕತೆ
ಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.
ಒಂಟಿ ಮಿಡತೆ ಕೋಟಿ
ಕೋಟಿಯಾಗಿ ಹಿಂಡು ಕಟ್ಟಿ
ಕೊಂಡು ಎಬ್ಬಿಸೋ ಈ ಗುಲ್ಲಿನ
ಹಿಂದಿನ ಸಾಂಗತ್ಯದ ಗುಟ್ಟು-
ಹಿಂದ್ಬರೋ ಮಿಡತೆ ಬಿಟ್ಕೊಂಡ ಬಾಯಿಗೆ
ತನ್ನಂಡು ಸಿಕ್ಕದಂಗೆ ಬಿರಬಿರನೆ ಓಡ್ತಿರೋದೇ!
ಉಸ್ಸಪ್ಪಾಂತ ಅಡ್ಡಗಾಲು ಹಾಕಿಬಿಟ್ಟರೆ ಮುಗೀತು-
ಹಿಂಡವ್ವೆಲ್ಲಾ ಸೇರ್ಕೊಂಡು
ಆ ಮಿಡತೇನ ಹಿಡಿದು ಮುಂದಿಟ್ಕೊಂಡು
ಕತ್ಕಡದು,
ಕಾಲ್ಮುರಿದು,
ಕಣ್ಕಿತ್ತು
ಒಂದೊಂದಂಗಾನೇ ತಿಂದು ತೇಗಿ
ಕ್ಯಾನಿಬಲ್ ವಿಧಿ ಪೂರೈಸಿ
ಅಮಲಿಳಿದಾಗ ಬೈರಾಗಿ
ನೇ ಪಾಪ ಮಿಡತೆ ಒಂಟಿ
ಯಾಗಿ ಅಂಡಲೆಯೋದೆ ಕೆಲಸ
ಮತ್ತೆ ಬಂದು ಯಾರಾದರೂ
ಕಾಲ್ಸವರೋ ತನಕ.
ಚಿತ್ರಗಳು : www.usfws.org ಹಾಗು www.newscientist.com
- anivaasi's blog
- Login or register to post comments
- 533 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಮಿಡತೆ ಸಂತೆ ಕತೆ
ಸೂಪರ್, ವಿಷಯವೂ, ಕವನವೂ.
ಇದು ಒಂಥರಾ ಕತೆಯೇ ಸರಿ.
ಉ: ಮಿಡತೆ ಸಂತೆ ಕತೆ
ಗುರು ಬಾಳಿಗರೆ,
ಇದು ವಿಜ್ಞಾನದ ಹೊಸ ಸಂಶೋಧನೆ/ಕಾಣ್ಕೆ. ಕಾಲು ಸವರುವುದೂ, ಸೆರಟೊನನ್ ಉಕ್ಕುವುದೂ ಇತ್ಯಾದಿ.
ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಉ: ಮಿಡತೆ ಸಂತೆ ಕತೆ
ನಿಮ್ಮ ಕವನವೂ ಓದಿದಷ್ಟೂ ಮದವೇರಿಸುತ್ತಿದೆ. ಮತ್ತೆ ಮತ್ತೆ ಓದುತ್ತಿದ್ದೇನೆ. :)
ಉ: ಮಿಡತೆ ಸಂತೆ ಕತೆ
ಮತ್ತೆ ಬೈರಾಗಿಯಾದರೆ ಸಾಕು! :)
ಎಲ್ಲರಿಗೂ,
ಅಂದ ಹಾಗೆ, ಟ್ಯಾಗ್‌ನಲ್ಲಿ seratonin ಎಂದು ತಪ್ಪಾಗಿ ಹಾಕಿಬಿಟ್ಟಿದ್ದೆ. ಈಗ serotonin ಎಂದು ತಿದ್ದಿದ್ದೇನೆ.
ತಪ್ಪನ್ನು ಮನ್ನಿಸಿ.
ಉ: ಮಿಡತೆ ಸಂತೆ ಕತೆ
ಹಂಗಾದ್ರೆ ಗಿಡ ಮರ ಬೆಳೆಯಲ್ಲ ನಾಶವಾಗೋದು ಆ ಮಿಡತೆಹಿಂಡು ಕಾಲ್ ಕೆರೆಯೋದರಿಂದಲೇ ಹೊರತು ಭಕ್ಷಣೆಯಿಂದಲ್ಲ ಅಂತಾಯ್ತು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಮಿಡತೆ ಸಂತೆ ಕತೆ
ಮರಿಜೋಸೆಫ್‌ರೆ,
ಅಲ್ಲ ಅದು ಭಕ್ಷಣೆಯಿಂದಲೇ- ಆದರೆ ಅದಕ್ಕೆ ಮುನ್ನ ಅವು ಒಟ್ಟಾಗುವುದಕ್ಕೆ ಮತ್ತು ದಾಳಿಗೆ ಕಾರಣಗಳ ಬಗ್ಗೆ ಹೊಸ ಕಾಣ್ಕೆ/ಸಂಶೋಧನೆ ಇದು.
ವಿವರಗಳು ಇಲ್ಲಿವೆ-
http://www.abc.net.a...
http://news.bbc.co.u...
ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಉ: ಮಿಡತೆ ಸಂತೆ ಕತೆ
ಸೆರಟೊನನ್ = ಮದ?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಮಿಡತೆ ಸಂತೆ ಕತೆ
ಮೇಲೆ ಕೊಟ್ಟ ಲಿಂಕಲ್ಲಿ ಈ ಕೆಳಗಿನವು ಇದೆ ನೋಡಿ -
ಹಾಗೆ ಇದೂ ನೋಡಿ -
On a locust's back leg are a specific set of hairs and nerves that, when stimulated, send a message to the insect's central nervous system, triggering the release of serotonin.
The serotonin sets in motion behavioural and physical changes, leading to the formation of huge, devastating swarms that devour everything in their path.
ನಮ್ಮ ಭಾವಗಳ ಏರುಪೇರಿಗೆ ಕೆಲವು ರಾಸಾಯನಿಕಗಳೂ ಕಾರಣ ಅನ್ನುವುದು ಕೆಲವರಿಗೆ ಒಪ್ಪಿಗೆ ಆಗುವುದಿಲ್ಲ :)
ನಿಮ್ಮ ಆಸಕ್ತಿಗೆ ಥ್ಯಾಂಕ್ಸ್.
ಉ: ಮಿಡತೆ ಸಂತೆ ಕತೆ
ವಾವ್! ಸಕತ್... :) ಮಿಡತೆ ಬಗ್ಗೆ ಚೆನ್ನಾಗಿ ಹೇಳಿದ್ದೀರಿ.
ಉ: ಮಿಡತೆ ಸಂತೆ ಕತೆ
ಥ್ಯಾಂಕ್ಸ್ ಓಂ ಶಿವಪ್ರಕಾಶ್,
ಮಿಡತೆಗಳ ಕಾಲಿಗೂ ತಲೆಗೂ ಇರೋ ಸಂಬಂಧ ನೋಡಿ!! :)
ಉ: ಮಿಡತೆ ಸಂತೆ ಕತೆ
ವಾವ್ .... ವಿಜ್ಞಾನವನ್ನ ಕವನದ ರೂಪದಲ್ಲಿ ಛೊಲೊ ಹೇಳಿರಿ ...
ಉ: ಮಿಡತೆ ಸಂತೆ ಕತೆ
ಥ್ಯಾಂಕ್ಸ್ರಿ ವ್ಯಾಸರಾಜರೆ :)
ಉ: ಮಿಡತೆ ಸಂತೆ ಕತೆ
ಕೀಟಶಾಸ್ತ್ರ ಕವನ ಸಕ್ಕತ್
>>ಕಣ್ಕಿತ್ತು
ಮನುಷ್ಯರ ಕಣ್ ಕಿತ್ತ ಉದಾಹರಣೇನೂ ಇದೆ..
ಹೆಚ್ಚಿನ ಮಾಹಿತಿ ಕನ್ನಡದಲ್ಲಿ ತಿಳಿದುಕೊಳ್ಳುವ ಆಸಕ್ತಿಯಿದ್ದವರು ತೇಜಸ್ವಿಯವರ "ನಡೆದಾಡುವ ಕಡ್ಡಿ, ಹಾರುವ ಎಲೆ" ( ಹಾರುವ ಎಲೆ, ನಡೆದಾಡುವ ಕಡ್ಡಿ)ಯಲ್ಲಿ ವಿವರವಾಗಿ ತಿಳಿಯಬಹುದು.
ಉ: ಮಿಡತೆ ಸಂತೆ ಕತೆ
ಪಾಲಚಂದ್ರರೆ,
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.
ತೇಜಸ್ವಿಯವರ ಹೊತ್ತಿಗೆ ನಾನು ಓದಿಲ್ಲ. ಒಂದು ಅನುಮಾನ. ಇಲ್ಲಿ ಮಿಡತೆಯದು ಕ್ಯಾನಿಬಲ್ ನಡವಳಿಕೆ. ಮನುಷ್ಯರ ಕಣ್ಣು ಕಿತ್ತದ್ದು ಅದರ ನಡೆವಳಿಕೆಯ ಒಂದು ಭಾಗವಂತಲೋ, ಅಥವಾ ಅಚಾನಕ್ಕಾಗಿ ನಡೆದದ್ದೋ - ತಿಳಿಸುತ್ತೀರ?
ಉ: ಮಿಡತೆ ಸಂತೆ ಕತೆ
ನಿಮ್ಮ ಅನುಮಾನ ಸರಿ ಅನಿವಾಸಿಯವರೇ. ಇಲ್ಲಿ ನೀವು ತಿಳಿಸಿದ್ದು ಕ್ಯಾನಿಬಲ್ ನಡವಳಿಗೆ, ಆ ಹೊತ್ತಿಗೆಯಲ್ಲಿ "ಭಯಾನಕ ಮಿಡತೆಗಳು" ಎಂಬ ಅಧ್ಯಾಯದಲ್ಲಿ ಸಾಮಾನ್ಯ ಮಿಡತೆ ಹಾರ್ಮೋನುಗಳ, ಬಿಸಿಲಿನ ತಾಪದ ವ್ಯತ್ಯಯದಿಂದಾಗಿ ಪಿಡುಗಿನ ಮಿಡತೆಯಾಗಿ (ವಲಸೆ ಹೋಗಿ, ಹಸುರನ್ನು ಸಂಪೂರ್ಣ ಧ್ವಂಸ ಮಾಡುವ) ಪರಿವರ್ತನೆ ಹೊಂದುವುದನ್ನು ತಿಳಿಸಿದ್ದಾರೆ. ಸಾಮಾನ್ಯ ಮಿಡತೆ ಪಿಡುಗಿನ ಮಿಡತೆಯಾಗಿ ಪರಿವರ್ತನೆ ಹೊಂದುವುದು ಅದರ ನಡವಳಿಕೆಯ ಒಂದು ಭಾಗ. ನಿರುಪದ್ರವಿ ಮಿಡತೆ ಏಕೆ ಪಿಡುಗಿನ ಮಿಡತೆಯಾಗಿ ಪರಿವರ್ತನೆ ಹೊಂದುತ್ತದೆ ಎಂಬುದು ಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ.
ಮನುಷ್ಯರ ಕಣ್ಣು ಕಿತ್ತದ್ದು ಇಲ್ಲಿ ಆಕಸ್ಮಿಕ. ಹೊಲದಲ್ಲಿ ಮಲಗಿಸಿದ ಮಗುವಿನ ಮೇಲೆ ಎರಗಿದ ಮಿಡತೆ, ಮಗುವಿನ ಕಣ್ಣು ಕಚ್ಚಿದ ಉದಾಹರಣೆ ಅದು.
ಉ: ಮಿಡತೆ ಸಂತೆ ಕತೆ
ಸಕ್ಕತ್ತಾಗಿ ಹೇಳಿದ್ದೀರಿ, ಮಿಡತೆ ಹೊಸ ಕತೆ.
ಉ: ಮಿಡತೆ ಸಂತೆ ಕತೆ
ಮಿಡತೆ ಹೊಸ ಕತೆಯ ಸೋಜಿಗ ಇಷ್ಟವಾಗಿ ಮಚ್ಚಿದ್ದಕ್ಕೆ ಥ್ಯಾಂಕ್ಸ್, ಹರ್ಷ.
ಉ: ಮಿಡತೆ ಸಂತೆ ಕತೆ
ಜಿ ಟಿ ನಾರಾಯಣರಾವ್, ನಾಗೇಶ್ ಹೆಗಡೆ, ಪೂರ್ಣಚಂದ್ರ ತೇಜಸ್ವಿ ಅವರ ಲೇಖನಗಳನ್ನು ಓದಿದ್ದೇನೆ.
ಆದರೆ ವೈಜ್ಞಾನಿಕ ಮಾಹಿತಿಯನ್ನು ಹೀಗೆ ಕವನದಲ್ಲೂ ಕೊಡಬಹುದಾದ ಪ್ರಯತ್ನಕ್ಕೆ ನನ್ನ ಮೆಚ್ಚುಗೆ.
ರೇಜಿಗೆಯ ಕವನಗಳ ಮಧ್ಯೆ ಇದೊಂದು ಆಶಾದಾಯಕ ಪ್ರಯತ್ನ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಮಿಡತೆ ಸಂತೆ ಕತೆ
ಮರಿಜೋಸೆಫ್,
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.
ಇದೇ ಬಗೆಯ ಪದ್ಯ ಸ್ನೈಲ್ಪುರಾಣ, ಬಸವನ ಹುಳುವಿನ ಬಗ್ಗೆ ಸಮಯವಾದಾಗ ಓದಿ...
http://www.sampada.n...