ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ನಾನು ಹೂ?

August 21, 2007 - 6:43pm — anivaasi

ನಾನು ಯಾರಾಗಿದ್ದೀನಿ?
ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.
ಫಸ್ಟ್, ಪರ್ಸನಲ್‌ ಆಗಿ ನೋಡಿದರೆ; ನೆನ್ನೆನೋ, ಟೆನ್ ವರ್ಷದ ಮುಂಚೆನೋ ಹೇಗಿದ್ದೆ, ಹೇಗೆ ತಿಂಕ್ ಮಾಡ್ತಿದ್ದೆ, ಈಗ ಹೇಗೆ ತಿಂಕ್ ಮಾಡ್ತೀನಿ ಅಂತ ಫೈಂಡೌಟ್ ಮಾಡಿಕೊಂಡರೆ ಸೆವೆರಲ್ ವಿಷಯಗಳು ಗೊತ್ತಾಗಿ ಬಿಡಬಹುದು.
ಇನ್ನು ನಮ್ಮ ಕಮ್ಯುನಿಟಿನಲ್ಲಿ ನಾನು ಯಾರಾಗಿದ್ದೆ. ನನ್ನ ಜನರ ಜತೆ ಯಾವ ಥರ ರಿಲೇಟ್ ಮಾಡ್ಕೋತಾ ಇದ್ದೆ. ಅವರ ಹ್ಯಾಪಿನೆಸ್ಸು ವರೀಸು ಹೇಗೆ ತಿಳಿಕೋತಾ ಇದ್ದೆ, ಈಗ ಹೇಗೆ ತಿಳ್ಕೋತಾ ಇದ್ದೀನಿ ಇದು ಇಂಪಾರ್ಟೆಂಟು.
ನೆಕ್ಸ್‌ಟು-ನಮ್ಮ ಸಮಾಜದಲ್ಲಿ ನಾನು ಯಾರಾಗಿದ್ದೆ. ನಮ್ಮ ಸಮಾಜದ ಪೀಪಲ್ಸ್‌ನಲ್ಲಿ ಯಾರು ನನಗೆ ಕರೆಕ್ಟ್ ಅನ್ಸತ್ತೆ. ಯಾರು ಹೋಪ್‌ಲೆಸ್ ಅನ್ಸತ್ತೆ. ಹೀಗೇ ಬಿಫೋರೂ ಅನ್ನಿಸ್ತಾ ಇತ್ತ? ಆರ್‍, ಈಗ ಡಿಫರೆಂಟ್ ಆಗಿ ಅನ್ಸತ್ತ? ಅಂತ ನೋಡಿಕೋಬೌದು.
ಫಿನಿಷ್ ಅನ್ಕೊಂಡರ?
ಇನ್ನೊಂದೆರಡು ಸ್ಟೆಪ್ಸ್ ಇದೆ.
ನಮ್ಮ ಕಂಟ್ರಿನಲ್ಲಿ ನಾನು ಯಾರಾಗಿದ್ದೆ, ಈವಾಗ ಯಾರಾಗಿದ್ದೀನಿ? ನಮ್ಮ ನೇಷನ್‌ನ ಯಾವ ಲೇಯರ್‌ಗೆ ನಾನು ಸೇರ್‍ತಿದ್ದೆ, ಈವಾಗ ಯಾವ ಲೇಯರ್‌ಗೆ ಅಡ್ಚಸ್ಟ್ ಆಗ್ತೀನಿ? ಇದನ್ನ ನೋಡಿಕೊಂಡರೂ ಪ್ರಾಫಿಟ್ ಇದೆ.
ಫೈನಲ್ಲಾಗಿ, ವರ್ಲ್‌ಡ್‌ನ ಎಲ್ಲ ಜನರನ್ನು ಕೌಂಟಿಗೆ ತಗೊಂಡರೆ ನಾನು ಎಲ್ಲಿ ಏನು ಯಾರಾಗಿದ್ದೀನಿ? ಇದೂ ವೆರಿ ವೆರಿ ಇಂಪಾರ್ಟೆಂಟ್.
ಹೀಗೆಲ್ಲಾ ಫೈಂಡೌಟ್ ಮಾಡಿಕೊಳ್ಳೊಕೆ ಹೋದರೆ ಕನ್ಫ್ಯೂಸ್ ಆಗತ್ತೆ ಅಂತ ವರಿ ಮಾಡಿಕೊಬೇಡಿ. ಏನೂ ಆಗಲ್ಲ. ಸ್ಟೆಪ್-ಬೈ-ಸ್ಟೆಪ್ ಹೋಗಬೇಕು ಅಷ್ಟೆ.

ನಾನು ಹೂ ಆಗಿದ್ದೀನಿ? ಒಳ್ಳೆ ಕ್ವೆಸ್ಚೆನ್ ಅಲ್ವ?

~.~
  • anivaasi ರವರ ಬ್ಲಾಗ್
  • Login or register to post comments
  • 472 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 21, 2007 - 7:35pm — Rohith

ಉ: ನಾನು ಹೂ?

Rohith's picture

ನಮಸ್ಕಾರ ಸ್ವಾಮಿ ನಿಮಗೆ, ನನ್ನ ದೊಡ್ಡ ನಮಸ್ಕಾರಗಳು!

ನೀವು ಕನ್ನಡದಲ್ಲಿ ಬರೆದಿದ್ದೀರೋ ಅಥವ ಕನ್ನಡ ಲಿಪಿಯಲ್ಲಿ ಆಂಗ್ಲದಲ್ಲಿ ಬರೆದಿದ್ದೀರೊ? ಅದು ಹಾಗೆ ಇರಲಿ, ನೀವು ಕೊನೆಗೆ ಏನು ಹೇಳಬೇಕೂ ಅಂತ ಇದನ್ನು ಬರೆದಿರಿ? Smiling ನನ್ಗೆ ಗೊತ್ತಾಗ್ದೆ ಕೇಳ್ತಾ ಇದೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2007 - 7:43pm — mahesha

ಉ: ನಾನು ಹೂ?

mahesha's picture

ಸುಸಂಸ್ಕೃತ ಲೇಖನಗಳಂತೆ ಇದು ಅನಿವಾಸಿಯವರ ಸುಇಂಗ್ಲೀಷ್ ಆರ್ಟಿಕಲ್ಲು!!

ತುಂಬಾ ಥ್ಯಾಂಕ್ಯ..

ಹೀಗೆ ಕಂಟಿನ್ಯೂ ಮಾಡಿ, ಬ್ಯೂಟಿಪುಲ್ಲಾಗಿ ಆರ್ಟಿಕಲ್ ಬರೆತೀರ!

ಈ ಟೈಮ್ಗೆ ಸೂಟಾಗೋ ಹಾಗೆ ಕನ್ನಡದ ಡೆವೆಲೆಪ್ಮೆಂಟ್ ಅಂದ್ರೆ ಈ ವೇ ಇರಬೇಕು! Smiling

ನೈಸ್ ಆರ್ಟಿಕಲ್!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 12:21am — chitra

ಉ: ನಾನು ಹೂ?

chitra's picture

ಅನಿವಾಸಿಗಳ ನೇಟಿವ್ ಪ್ಲೇಸ್ ಬ್ಯಾಂಗಲೋರೇ ಇರಬೇಕು ಅಂತ ಮೈ ಡೌಟು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 1:02am — hpn

ಉ: ನಾನು ಹೂ?

hpn's picture

ಆ ಕಂಟ್ರೀಲಿ ಕನ್ನಡದ ಬಗ್ಗೆ ಥಿಂಕ್ ಮಾಡಿ ಟೆರ್ರಿಬ್ಲಿ ಬೋರ್ ಹೊಡೆದಿರಬೇಕು. ಎಕ್ಸ್ಟ್ರೀಮ್ಲಿ ಪ್ಯೂರ್ ಕನ್ನಡ ವರ್ಡ್ಸ್ ಓದಿ ಕೂಡ ಡಲ್ ಅನಿಸಿರಬೇಕು. ಹೀಗಾಗಿ ಅನಿವಾಸಿಗಳು ಇಂಗ್ಲಿಷ್ ಸ್ಟಡ್ಡೆಡ್ ಕನ್ನಡವನ್ನ ಹೀಗೆ ಹೆವಿಯಾಗಿ ಹರಿಸಿದ್ದಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 10:43am — Sunil Jayaprakash

ಉ: ನಾನು ಹೂ?

Sunil Jayaprakash's picture

ಅನಿವಾಸಿಗಳ ಬರಹ ಓದಿ ನನಗೆ ನಗು ತಡೆಯಲಾಗುತ್ತಿಲ್ಲ. ನನ್ನಿ ಅನಿವಾಸಿಗಳೆ. ಆಸ್ ಯೂಶುವಲ್, ಅವರ್ ಡಿಯರೆಸ್ಟ್ ಅನಿವಾಸಿಗಳಿಂದ ಅನದರ್ ಎಲಿಗೆಂಟ್ ರೈಟಿಂಗ್. ಬಟ್, ದಿಸ್ ಟೈಮ್ ಅವರು ಏಕೋ ಯಾವುದರದ್ದೋ ಫೈಂಡ್ಔಟಿನಲ್ಲಿದ್ದಾರೆ. ಅವರು ಸಮ್ ಹ್ಯಾಂಗ್ ಓವರ್ನಿಂದ ಇನ್ನೂ ಆಚೆ ಬಂದಿಲ್ಲ ಅನ್ಸುತ್ತೆ. ಆರ್, ದ ಥಿಂಗ್ ಈಸ್, ಕೃಷ್ಣನ ತೂಕವನ್ನು ನಾಚಿಸಿದ ರುಕ್ಮಿಣಿಯ ಜಡೆಯಲ್ಲಿದ್ದ ಮಲ್ಲಿಗೆಯ ಒಂದು ಹೂವು ಅನಿವಾಸಿಗಳಿಗೆ ನೆನಪಾಗಿರಬೇಕು Smiling Laughing out loud

ಅಂದ ಹಾಗೆ, ಮೇಲಿನ ಬರಹದಲ್ಲಿ (ಹಾಗು ಕಾಮೆಂಟುಗಳಲ್ಲಿ) ಎಲ್ಲೆಲ್ಲಿ ಇಂಗ್ಲೀಷ್ ಪದಗಳಿವೆಯೋ, ಅವಕ್ಕೆಲ್ಲ ಕೊನೆಯಲ್ಲಿ (ಉ) ಸೇರಿಸಿ ಓದಿ Smiling ಸಖತ್ ಮಜಾ ಬರತ್ತೆ. "ಆಸು ಯೂಶುವಲ್ಲು, ಅವರು ಡಿಯರೆಸ್ಟು...ಅನದರ್ರು..ಎಲಿಗೆಂಟು...ರೈಟಿಂಗು..ಬಟ್ಟು..ದಿಸ್ಸು..ಟೈಮು..ಸಮ್ಮು..ಹ್ಯಾಂಗು.." Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 5:11pm — shreekant.mishrikoti

ಉ: ನಾನು ಹೂ?

shreekant.mishrikoti's picture

ಸುನೀಲರೆ ,

ಕೃಷ್ಣನ ತೂಕವನ್ನು ನಾಚಿಸಿದ ರುಕ್ಮಿಣಿಯ ಜಡೆಯಲ್ಲಿದ್ದ ಮಲ್ಲಿಗೆಯ ಒಂದು ಹೂವು - ಏನಿದು ಸ್ವಲ್ಪ ಹೇಳ್ತೀರಾ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 2:56pm — savithru

ಉ: ನಾನು ಹೂ?

savithru's picture

ಇಟ್ ಇದು, ದಟ್ ಅದು, ಬಟ್ ಆದರೆ
ವ್ಹಾಟ್ ಏನು? ಟೆಲ್ಲ್ ಹೇಳು!

ಸಣ್ ಹುಡುಗ್ರಾಗಿದಾಗ ಹಿನ್ಗ್ ಹೇಳ್ತಾ ಇದ್ವು.

ಯಾಕೊ ನೆನಪಾಯಿತು!!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 3:06pm — ಶ್ರೀನಿವಾಸ ವೀ. ಬ೦ಗೋಡಿ

ಉ: ನಾನು ಹೂ?

ಶ್ರೀನಿವಾಸ ವೀ. ಬ೦ಗೋಡಿ's picture

ವಾಟೇನು ಬಟ್ಟಾದರೆ ಟೆಲ್ಹೇಳು ಸನ್ಮಗನೆ
ನಮಗೆ ಈ ಥರ ಕೇಳ್ತಿದ್ರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2007 - 3:06pm — anivaasi

ಉ: ನಾನು ಹೂ?

anivaasi's picture

ರೋಹಿತ್,
ಕನ್ಫ್ಯೂಸ್ ಆಗಿದ್ದರೆ ಅದು ನಿಮ್ಮ ಫಾಲ್ಟ್ ಅಲ್ಲ. ಇದು ನಾನು ಮೆನಿ ಡೇಸ್ ಇಂದ ಬರೀಬೇಕಂತ ಅನ್ಕೊಂಡಿದ್ದ ಒಂದು ಪೀಸು. ಬರೆಯೋವಾಗ ಫಾರ್ಮ್ ಅಂಡ್ ಕಂಟೆಂಟ್ ಬಗ್ಗೆ ಒಂದು ಎಕ್ಸೆಪೆರಿಮೆಂಟ್ ಮಾಡೋ ಐಡಿಯಾ ಬಂದು ಹೀಗೆ ಬರೆದೆ. ಬ್ಯಾಲೆನ್ಸ್ ಆಗಿ ಬಂದಿಲ್ಲ ಅಂತ ಎಲ್ಲರ ರಿಯಾಕ್ಷನ್ ನೋಡಿ ಅನ್ನಿಸ್ತಾ ಇದೆ. ಕಂಟೆಂಟ್‌ಗಿಂತ ಫಾರ್ಮೇ ಮುಂದಾಗಿಬಿಟ್ಟಿದೆ. ಬಟ್, ಹೇಳಬೇಕಂತ ಇರೋದು ಕರೆಕ್ಟಾಗಿ ಗೊತ್ತಾಗತ್ತಲ್ಲ... ಎಬೌಟ್ ನಾವು ಯಾರು ಆಗಿದೀವಿ ಅನ್ನೋದು...
ಸುನೀಲ್,
ರುಕ್ಮಿಣಿ ಜಡೆ ಮಲ್ಲಿಗೆ ಫ್ಲವರ್‍, ಕೃಷ್ಣನ ವೇಟು ಇವು ನನ್ನ ಮೈಂಡಲ್ಲಿರಲಿಲ್ಲ! Smiling

ರಿಯಾಕ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ್... ಯಾವುದೋ ವರ್ಕಲ್ಲಿ ಸಿಕ್ಕಾಪಟ್ಟೆ ಟೆಂಶನ್ ಇತ್ತು. ಎಸ್ಕೇಪ್ ಆಗೋಕೆ ಬರೆದೆ. ನನಗೆ ನಗಿಸೋ ಹಾಗೆ ಬರೆಯೋಕೆ ಬರಲ್ಲ, ಬಟ್, ಬರದಿದ್ದು ನಗು ಬರಿಸಿದ್ದರೆ ಗುಡ್... ಬರವಣಿಗೆ ನೋಡಿ ನಗು ಬರದಿದ್ದರೆ ಐ ಅಮ್ ಹ್ಯಾಪಿ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನು ನಾನಾಗಬೇಕು
  • ನಮ್ಮಲ್ಲಿಲ್ಲದ ’ನಮ್ಮದು’
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !
  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ಹಾಗೇ ಸುಮ್ ಸುಮ್ನೆ.... :)
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator