ಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ
ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾದಿ
ಇದ್ದಿದ್ದಲ್ಲೇ ಅವತರಿಸುತ್ತಾರೆ.
ಆದರೆ,
ಕಲ್ಲುಬಂಡೆಗಳಿಗೆ ಎಡೆಮಾಡಿಕೊಟ್ಟು
ಅವನ್ನು ತಬ್ಬುವಂತೆ ಕಂಡರೂ
ಬಳಸಿ ಹರಿವ ನದಿಯ ಹಾಗೆ
ಜನಪದ
ವಿದ್ಯೆ, ಆರೋಗ್ಯ ಹಾಗು ಅವಕಾಶಗಳ
ಹಂಬಲವನ್ನು ಎದೆಯಲ್ಲಿ ಕಾಪಾಡಿಕೊಂಡು
ಮಟ್ಟವನ್ನು ಹುಡುಕುತ್ತಾ ಹರಿಯುತ್ತಲೇ ಇರುತ್ತದೆ.
ಈ ನನ್ನ ಮಾತು ವೇದವಾಕ್ಯದಂತೆ ಕಂಡರೆ
ದಯವಿಟ್ಟು ಮನ್ನಿಸಿ, ಅದು ನನ್ನ ಉದ್ದೇಶವಲ್ಲ.







RSS:
ಪ್ರತಿಕ್ರಿಯೆಗಳು
ಉ: ನೀರು ತಬ್ಬುವ ಬಂಡೆ
ಅಯ್ಯೋ, ಏನ್ರೀ ಅನಿವಾಸಿ, ಅಲ್ಲ, ಅಷ್ಟೆಲ್ಲ ಬಾಯ್ತುಂಬ "ನೀಲು", "ನೀಲು" ಅನ್ನುತ್ತಿದ್ದವರು ಈಗ ಮತ್ತೆ ಅದದೇ "ಆಕ್ರಮಣ, ಮೂಲಭೂತವಾದ, ಜನಪದ, ವೇದ" ಎನ್ನುತ್ತಾ "ಅದದೇ ಸಂವೇದನೆಯ ಚೌಕಟ್ಟಿನ" ಜಾಡಿಗೆ ಜೋತುಬಿದ್ದಿರಲ್ಲಾ!!!!!
ಯಾಕೋ ನಮ್ಮ ಅನಿವಾಸಿಗಳು, "ಉದ್ದುದ್ದು ಬರೆದರೆ ಗದ್ಯ, ಅಡ್ಡಡ್ಡ ಬರೆದರೆ ಪದ್ಯ" ಎಂಬುದನ್ನು ನಿಜಮಾಡಲು ಹೊರಟಿರುವಂತಿದೆ
ಉ: ನೀರು ತಬ್ಬುವ ಬಂಡೆ
ಅಯ್ಯೋ ಸುನೀಲ್, ನಾನೇನೂ ನೀಲುವಿನ ಗುತ್ತಿಗೆ ಹಿಡಿದಿಲ್ಲ. ಅಥವಾ ಯಾವುದೂ ನನಗೆ ಔಟ್ ಆಫ್ ಬೌಂಡ್ಸ್ ಅಂದುಕೊಂಡಿಲ್ಲ. "ಅದದೇ ಸಂವೇದನೆಯ ಚೌಕಟ್ಟು"ನ್ನು ನೀವು ಮೀರಿಬಿಟ್ಟಿರುವ ಹಾಗೆ ಕಾಣುತ್ತದೆ
ಆದರೆ, ಆಗಾಗ ಅದಕ್ಕೆ ಮರಳದಿದ್ದರೆ, ಮತ್ತೆ ಮತ್ತೆ ಅಳೆದುಕೊಳ್ಳದಿದ್ದರೆ ಹೇಗೆ? ಅದು ಜೋತು ಬೀಳುವುದು ಅಂತ ನಿಮಗನಿಸಿದ್ದು ಅಚ್ಚರಿಯಾಯಿತು.
ಇತ್ತೀಚಿನ ಸಂಪದದ ಕೆಲವು ಮಾತುಕತೆಗಳನ್ನು ನೋಡಿಯೂ ಕೂಡ.
ಅಂದ ಹಾಗೆ ಇದು ಗದ್ಯವೂ ಅಲ್ಲ, ಪದ್ಯವೂ ಅಲ್ಲ. ಯಾವುದನ್ನು ನಿಜಮಾಡುವ ಗುತ್ತಿಗೆ ಕೂಡ ಹಿಡಿದಿಲ್ಲ.
ಉ: ನೀರು ತಬ್ಬುವ ಬಂಡೆ
ಪ್ರಕಾಶ್ ಬೆಳವಾಡಿ ನಿರ್ದೇಶಿನದ ಯು.ಆರ್.ಅನಂತಮೂರ್ತಿಯವರ ಕಾದಂಬರಿ ಆಧಾರಿತ ನಾಟಕ, "ಅವಸ್ಥೆ"ಯಲ್ಲಿ ಈ ರೀತಿಯ ಡೈಲಾಗ್ ಬರತ್ತೆ, "ನೀವಿನ್ನೂ ಫ್ಯೂಡಲ್ಲಾಗಿದ್ದೀರ"
ನನಗೆ ನಿಮ್ಮ ಬ್ಲಾಗ್, ಕಾಮೆಂಟುಗಳನ್ನ ಓದೋದು ಸಕ್ಕತ್ ಖುಷಿ ನೀಡತ್ತೆ, ಅನಿವಾಸಿ.
ಉ: ನೀರು ತಬ್ಬುವ ಬಂಡೆ
ಅದೇ ಕಾದಂಬರಿಯನ್ನು ಕೃಷ್ಣ ಮಾಸಡಿಯವರು ಚಿತ್ರವನ್ನೂ ಮಾಡಿದ್ದರೆ. ಅದಿರಲಿ ಆ ಮಾತು ಯಾಕೆ ಬಂತೋ?
ನಿಮಗೆ ನನ್ನ ಬ್ಲಾಗ್, ಕಾಮೆಂಟು ಖುಷಿ ಕೊಡೋದು ನಾನೂ ಪ್ಯೂಡಲ್ಲಾದ್ದರಂದಲೇ?!!! ಅದು ಹೇಗೋ?
ಉ: ನೀರು ತಬ್ಬುವ ಬಂಡೆ
ಯಾಕೆ ಬಂತು ಅಂದ್ರೆಏಏಏ...ಆ ನಾಟಕದಲ್ಲಿಯೂ ಹೀಗೇ ಆಗತ್ತೆ. ನಾಟಕದ ಮುಖ್ಯ ಪಾತ್ರಧಾರಿಯಾದ ಗೌಡ ಒಮ್ಮೆ ಹಳೆಯ ಸಂವೇದನೆಗೆ ಮರಳುತ್ತಾನೆ. ಆಗ ಅವನ ಹಳೆಪ್ರಿಯತಮೆ, ಹುಸಿಮುನಿಸು (ಅದು ದಿಟಕೋಪವಿದ್ದರೂ ಇರಬಹುದು) ತೋರ್ಪಡಿಸಿ, "ನೀವಿನ್ನೂ ಫ್ಯೂಡಲ್ಲಾಗಿದ್ದೀರಾ" ಅಂತ ಸಿಗರೇಟು ಇನ್ನೂ ಮುಗಿಯದಿರುವಾಗಲೇ ಬೈದು ಹೊರಟುಹೋಗುತ್ತಾಳೆ.
ಇರಲಿ, ಈ ಪದ್ಯವನ್ನು ಓದಿದಾಗಿನಿಂದ ನನ್ನಲ್ಲಿ ಇದರ ಬಗ್ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವೊಂದು ತಲೆದೋರಿದೆ. ಅದನ್ನು ಮತ್ತೊಂದು ಕಾಮೆಂಟಿನ ಮೂಲಕ ಹಂಚಿಕೊಳ್ಳುತ್ತೇನೆ.
ಉ: ನೀರು ತಬ್ಬುವ ಬಂಡೆ
ಮರಳಲೇಬೇಕು ಸಂವೇದನೆಯ ಚೌಕಟ್ಟಿಗೆ. ಇಲ್ಲವಾದರೆ ಆಯಾ ಸಂವೇದನೆಯೇ ಇಲ್ಲವಾಗುವ ಕಾಲ ಸನಿಹ.
ಆದರೆ ಬಹುಮುಖ್ಯವಾದದ್ದು ಆ ಸಂವೇದನೆಯ ಚೌಕಟ್ಟಿನಲ್ಲಿರುವವರು ಆಚೆ ಬಂದು ಇಲ್ಲಿಯ ಜಗತ್ತನ್ನೊಮ್ಮೆ ನೋಡಿ, ಇಲ್ಲಿ ಮಿಂದು ಮರಳುವುದು! (ಅಥವ ಮರಳುತ್ತಿರುವುದು)
ಯಾವುದೇ ಬದಿಯಲ್ಲಿ ಕುಳಿತು ಆಚೀಚೆ ನೋಡದಿದ್ದರೆ ಗುತ್ತಿಗೆ ಹಿಡಿದಂತೆ, ಜೋತು ಬಿದ್ದಂತೆ. ಸಂವೇದನೆ ನಾಶವಾದರೆ ಅದು ಹೊರಬರದ ಹೆಗಲುಗಳ ಮೇಲೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನೀರು ತಬ್ಬುವ ಬಂಡೆ
ಹೌದು ನೀವು ಹೇಳುವುದು ಸರಿ. ಈಗಿನ ಕವಿಗಳಿಗೆ ಲೈನ್ ಬ್ರೇಕ್ ಮಾಡಿದರೆ ಕವನ ಇಲ್ಲದಿದ್ದರೆ ಗದ್ಯ ಅಂದುಕೊಂಡು ಬರೀತಾರೆ. ಕೊನೆಗೆ ಅದು ಆ ಕಡೆ ಗದ್ಯಾನು ಅಲ್ಲ - ಈ ಕಡೆ ಕವನಾನು ಅಲ್ಲ. ಒಳ್ಳೆ ಉದಾಹರಣೆ ಇದು.
ಉ: ನೀರು ತಬ್ಬುವ ಬಂಡೆ
ತಿಲಿಗೋಲ(?)ರವರೆ,
ಪ್ರತಿಕ್ರಿಯೆಗೆ ತ್ಯಾಂಕ್ಸ್... ಆದರೆ ಈ ಬರಹಕ್ಕೆ ನಿಮ್ಮ ಪ್ರತಿಕ್ರಿಯೇ ಏನು ಅಂತ ಬರೇ ಊಹಿಸಿಕೊಳ್ಳುತ್ತೇನೆ.
ಉ: ನೀರು ತಬ್ಬುವ ಬಂಡೆ
ತಿಳಿಗೊಳ
______
ಬೊಳುಂಬು
ಉ: ನೀರು ತಬ್ಬುವ ಬಂಡೆ
ಗದ್ಯವೋ , ಪದ್ಯವೋ , ಈ ಪದ್ಯದ ವಿಚಾರವೂ ನಿಮ್ಮ ಇತರ ನೀಲುಗಳ ಹಾಗೆ ಚೆನ್ನಾಗಿದೆ .
ವಿಚಾರ ಒಪ್ಪತಕ್ಕದ್ದೇ ಆಗಿದೆ. ಮೊದಲ ಪ್ಯಾರಾಕ್ಕಿಂತ ಎರಡನೇಯದು , ಅದಕ್ಕಿಂತ ಮೂರನೇಯದು ಶೈಲಿಯಲ್ಲಿ ಚೆನ್ನಾಗಿದೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ನೀರು ತಬ್ಬುವ ಬಂಡೆ
ನೀವೆನ್ನುವಂತೆ ಆಕ್ರಮಿಸುವವು ಬಂಡೆಗಳು...ಅಂತಾದರೆ ನಿಶ್ಚಲವಾದ ಬಂಡೆಗಳು ಆಕ್ರಮಿಸುತ್ತವೆ. ನೀರು ಹರಿಯುತ್ತದೆ ಮತ್ತು ಮಟ್ಟವನ್ನು ಹುಡುಕುತ್ತ ಹರಿಯುತ್ತದೆ. ನಾನು ತಿಳಿದಂತೆ ನೀರು ತಗ್ಗನ್ನು ಹುಡುಕುತ್ತ ಹರಿಯುತ್ತದೆ. ಮಟ್ಟದಲ್ಲಿದ್ದರೆ ನೀರು ಹರಿಯುವುದಿಲ್ಲ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ನೀರು ತಬ್ಬುವ ಬಂಡೆ
ಬೊಳುಂಬು, ಬಂಡೆಗಳು ಆಕ್ರಮಿಸುತ್ತಿವೆ ಎಂದು ಅನಿವಾಸಿಯವರು ಬರೆದ ಸಾಲುಗಳಲ್ಲಿ ಎಲ್ಲೂ ಇದ್ದಂತಿಲ್ಲ. ನೀರು ಬಂಡೆಗಳಿಗೆ ಎಡೆ ಮಾಡಿಕೊಟ್ಟು ಬಳಸಿ ಹರಿಯುತ್ತದೆ ಎಂದು ಹೇಳಿರುವಂತಿದೆ. (ಅದೇ ನೀರು ಬಂಡೆಗಳನ್ನು ನಿಧಾನವಾಗಿ ಕೊರೆಯುತ್ತಲೂ ಹೋಗುತ್ತದೆ.)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನೀರು ತಬ್ಬುವ ಬಂಡೆ
'ಈ ಆಕ್ರಮಣದ ಯುಗದಲ್ಲಿ' ಎಂದು ಮೊದಲಿಗೇ ಹೇಳುತ್ತಾರೆ. ಇದ್ದಿದ್ದಲ್ಲೇ ಅವತರಿಸುವವರನ್ನು ಕಲ್ಲುಬಂಡೆಗಳಿಗೆ ಹೋಲಿಸುತ್ತಾರೆ. ಅಂದರೆ ಅವತರಿಸುವವರೇ ಅಲ್ಲವೇ ಆಕ್ರಮಣಕಾರರು?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ನೀರು ತಬ್ಬುವ ಬಂಡೆ
ಚನ್ನಾಗಿದೆ..
ಆದ್ರೆ.......... ಹೊಳೆ ಹರಿಯಲೇ ಬಿಡದೇ ಬಂಡೆ ಅಡ್ಡ ನಿಂತರೇ, ಹೊಳೆಯೂ ತನ್ನ ನೀರ ಹರಿತದಿಂದ ಕೊರೆದು ದಾರಿ ಮಾಡಿಕೊಳ್ಳುವುದು.
ತಂತಮ್ಮ ದಾರಿ ಸಿಗದಿದ್ರೆ, ಅದನ್ನು ಮಾಡಿಕೊಂಡಾದ್ರು ಮುನ್ನುಗಬೇಕು. ಇಲ್ಲದೇ ಇದ್ರೆ... ಹರಿಯಬೇಕಿದ್ದ ಹೊಳೆ, ಬತ್ತಿಹೋಗುವ ಹಳ್ಳವಾಗಬೋದು.
ಉ: ನೀರು ತಬ್ಬುವ ಬಂಡೆ
ಈ ಆಕ್ರಮಣದ ಯುಗದಲ್ಲಿ ತಾನು ಮಾತ್ರ ಯಾವ ಗುತ್ತಿಗೆಯೂ ಹಿಡಿದಿಲ್ಲ ಎಂದು ರಾಜಾರೋಷವಾಗಿ ಮೊದಲ ಪ್ಯಾರ ಸಾರುತ್ತದೆಯಾದರೂ, ಕಲ್ಲುಬಂಡೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ನದಿಯು ಜನಪದ, ವಿದ್ಯೆ, ಆರೋಗ್ಯ ಹಾಗು ಅವಕಾಶಗಳ ಹಂಬಲವನ್ನು(ಅದೂ ಒಂದು ರೀತಿಯ ಕನಸೇ) ಇಟ್ಟುಕೊಳ್ಳುವ ಎರಡನೆಯ ಪ್ಯಾರಾ (ಉಂಡುಪವಾಸಿ, ಬಳಸಿ ಬ್ರಹ್ಮಚಾರಿ, ಸವಿದು ಸನ್ಯಾಸಿಯ ಹಾಗೆ) ಅದೇ ಮಾರ್ಕೆಟ್ಟಿನ ಮೂಲಭೂತವಾದಿತನವನ್ನೇ ಎತ್ತಿ ನಿಲ್ಲಿಸುತ್ತದೆ.
"ಧಾರ್ಮಿಕ, ಭಾಷಾ, ಮಾರ್ಕೆಟ್, ಜನಪ್ರಿಯತೆಯ ಗುತ್ತಿಗೆ", ಈ ಜಗತ್ತಿಗೆ ಎಷ್ಟು ಅಪಾಯವೋ ಹಾಗೆಯೇ, "ಈ ಜಗತ್ತು ಚೆನ್ನಾಗಿಲ್ಲ, ತಾನು ಮಾತ್ರವೇ ಚೆನ್ನಾಗಿರೋದು", ಎಂಬ ನಿಲುವೂ ಕೂಡ ಅತ್ಯುಗ್ರ ಮೂಲಭೂತವಾದಿಯ ಅತ್ಯಂತ ಅಪಾಯಕಾರಿ ಮನಸ್ಥಿತಿ.
ನನ್ನಿಗಳೇ, ಹರಿವ ನೀರು, ಕೇವಲ ತನ್ನ ಮಟ್ಟವನ್ನು ಹುಡುಕುವುದಿಲ್ಲ. ಅದು
೧. ತನ್ನ ಸುತ್ತಲಿರುವ ಕಲ್ಲುಬಂಡೆಗಳಲ್ಲಿ ಕಲೆಯನ್ನು ರೂಪಿಸುತ್ತದೆ. ಆದರೆ ಮೇಲಿನ ಪದ್ಯದ ಎರಡನೆಯ ಪ್ಯಾರಾ ಅವುಗಳಲ್ಲಿ ಬರೀ ಕಪಟ ಪ್ರೀತಿ ತೋರ್ಪಡಿಸಿ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತದೆ.
೨. ತನ್ನ ಹರಿವಿನುದ್ದಕ್ಕೂ ತನ್ನ ಒಡಲಲ್ಲಿರುವ ಸಕಲ ಜೀವಿಗಳಿಗೂ ಉಣಬಡಿಸಿ, ಅವುಗಳನ್ನೂ ಪೋಷಿಸುತ್ತದೆ. ಸಿಂಬಯಾಸಿಸ್. ಹಾಗೆಯೇ ನಾವು ಕೂಡ ಜನಪದ, ವಿದ್ಯೆ, ನುಡಿ, ಕಲೆ ಇವುಗಳನ್ನು ಬರೀ ಬಳಸುವುದಷ್ಟೇ ಅಲ್ಲ ಗುರು, ಅವುಗಳನ್ನು ಬೆಳೆಸಲೂ ಬೇಕು. ಜನ ಬರೀ ತಮ್ಮ ಸ್ವಾರ್ಥಕ್ಕೆ ಅವುಗಳನ್ನು ಬಳಸುತ್ತಾ, ಬೆಳೆಸುವ ಇತರರನ್ನು "ಗುತ್ತಿಗೆ ಹಿಡಿದಿರುವವರು" ಅಂತ ಕರೆಯುವುದು ಅತ್ಯಂತ ಸಂಕುಚಿತ ಸಮಾಜದ, ಮುಚ್ಚುಮನಸ್ಥಿತಿಯ ಪ್ರತೀಕ. ಇದು ಬೆಳದಿಂಗಳ ಬಾಲೆಯ ೩ನೇ ಹಂತ.
೩. ತನ್ನ ಹರಿವಿಗೆ ಹೊರತಾದ ಕೃಷಿ, ಮೀನುಗಾರಿಕೆ ಮುಂತಾದವನ್ನೂ ಪೋಷಿಸುತ್ತದೆ. ಹಾಗೆಯೇ, ನಾವುಗಳು ನಮ್ಮ ಸಮಾಜದ ನುಡಿ, ಕಲೆಗಳನ್ನಷ್ಟೇ ಅಲ್ಲದೆ ಬೇರೆ ಸಮಾಜ, ಸಂಸ್ಕೃತಿಯನ್ನೂ ಗೌರವಿಸಬೇಕು ಎಂದರ್ಥ. ಆದರೆ ಇದನ್ನು ಅರ್ಥಮಾಡಿಕೊಳ್ಳದೆ ಬಾಯಿಮಾತಿಗೆ ಮಾತ್ರ "ಬೇರೆಯವರು ಗುತ್ತಿಗೆ ಪಡಿದಿದ್ದಾರೆ", ಎಂದು ಹೇಳುತ್ತಾ, ಕೇವಲ "ತನ್ನ" ಜನಪದ, ವಿದ್ಯೆ, ಆರೋಗ್ಯ ಹಾಗು ಅವಕಾಶಗಳ ಹಂಬಲವನ್ನು ಇಟ್ಟುಕೊಂಡು ಹರಿಯುವ ಮನಸ್ಥಿತಿಯೇ ಮುಂದೆ ಅತ್ಯುಗ್ರ ಮೂಲಭೂತವಾದಿಯಾಗಿ ಮತ್ತೊಂದು ರೀತಿಯ "ಧಾರ್ಮಿಕ, ಭಾಷಾ, ಮಾರ್ಕೆಟ್, ಜನಪ್ರಿಯತೆಯ ಗುತ್ತಿಗೆಯನ್ನು" ಬೇರೊಂದು ಹಾದಿಯ ಮೂಲಕ ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.
ನನ್ನ ಮಾತು, "ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ", ಎನ್ನುವಂತೆ ಕಂಡರೆ, ಮನ್ನಿಸಿ. ವಿಮರ್ಶೆ ನನ್ನ ಉದ್ದೇಶವಲ್ಲ.
ಉ: ನೀರು ತಬ್ಬುವ ಬಂಡೆ
ಹರಿ,
ಚೆನ್ನಾಗಿದೆ!
ಮರಳುತ್ತೇವೆ ಕೂಡ. ಯಾಕೆಂದರೆ ಮರಳುವ ಕ್ರಿಯೆ ಪುನರಾವರ್ತನೆಯಂತೆ ಕಂಡರೂ ಕೂಡ, ಮರಳುವ ಮನಸ್ಥಿತಿಗಳು ಹೊಸದಾಗಿರುವುದು ಮುಖ್ಯ.
ಮಿಶ್ರಿಕೋಟಿಯವರೆ,
ನಿಮ್ಮ ಮೆಚ್ಚುಗೆಗೆ, ಒಪ್ಪಿತಕ್ಕೆ ಥ್ಯಾಂಕ್ಸ್.
ಬೋಳಂಬುರವರೆ,
ಬರಹದ ಒಳರಚನೆಗೆ ಗಮನಕೊಟ್ಟಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಕಾಮೆಂಟು ಓದಿದ ಮೇಲೆ ಅದು ಉಪಮೆಯಾಗುವುದಕ್ಕಿಂತ ಒಂದು ಪ್ರತಿಮೆಯಾಗಿದ್ದರೆ ಶಕ್ತಿಶಾಲಿಯಾಗುತ್ತಿತ್ತು ಎಂದು ಈಗ ಅನಿಸುತ್ತಿದೆ.
ಮಹೇಶರೆ,
ನೀವು ಹೇಳುವುದು ನಿಜ. "ಮುನ್ನುಗ್ಗಬೇಕು"
ಸುನೀಲರೆ,
ನಿಮ್ಮ ಕಾಮೆಂಟು ನಿಮಗೇ ಅತಿ ಬುದ್ಧಿವಂತಿಕೆಯದು ಅನಿಸಿದ ಮೇಲೆ ನಾನು ಹೇಳುವುದು ಏನೂ ಉಳಿದಿಲ್ಲ. ಆದರೂ ನಿಮ್ಮ "ಸೈದ್ಧಾಂತಿಕ ಭಿನ್ನಾಭಿಪ್ರಾಯ" ಏನು ಎಂದು ಹುಡುಕುತ್ತಿದ್ದೇನೆ.