subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

ಗೂಡೊಳಗೆ
ಏಕಾಂತದ ಸಂಗದಲ್ಲಿ ಅವಳಂಗದ
ಅನಂಗವಾಸನೆ ಹಾಗು ಸೋಂಕಿನೊತ್ತಲ್ಲೇ
ಮುಳುಗಿ ಮೈ
ಮರೆತು ಎಚ್ಚರ

ವಾಗಿದ್ದು
ಅವಳೊದ್ದು ಹೋಗುತ್ತ ಕತ್ತು ಕೊಂಕಿಸಿದಾಗ-
‘ಕವಿಯಾದರೇನು, ಗಂಡುಮನವೇ ಇಷ್ಟು’ ಎಂದು
ಮೆದುಳಿಗೆಳೆದ ಬರೆ
ಗೆಲ್ಲಾ ಮದ್ದು ಹೇಳಲು ಮೇಷ್ಟರಿಗೇನು
ಗೊತ್ತಿತ್ತು ಈ
ವ್ಯಾಕರಣದ ಜಿಗುಟು.

[ಇದಕ್ಕೆ ಸ್ಪೂರ್ತಿಯಾದ ಧರ್ಮಕೀರ್ತಿಯ ಮೂಲ ಸಂಸ್ಕೃತ ಸುಭಾಷಿತದ ಎರಡು ಭಿನ್ನ ಪಾಠವನ್ನು ಹಾಗು ನನಗೆ ಸಹಾಯವಾದ ಮೂರು ಭಿನ್ನ ಇಂಗ್ಲೀಷ್ ಅನುವಾದವನ್ನು http://anivaasi.word... ನಲ್ಲಿ ನೋಡಬಹುದು]

Your rating: None Average: 4.6 (5 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮನದಾಟ

ಮಾಯ್ಸ೨'s picture

:D

ಉ: ಮನದಾಟ

anivaasi's picture

:D

ಉ: ಮನದಾಟ

savithru's picture

ಅನಂಗ ವಾಸನೆ! :)

ಗಂಡು ಮನದಂತೆ ಹೆಣ್ಣು ಮನವೂ ಇದೆ... ಅದೂ ಇಷ್ಟೇ ತುಂಟತನದ್ದೇ! ;)

ಒನ್ತರಾ ಚೆನ್ನಾಗಿದೆ.

ಉ: ಮನದಾಟ

savithru's picture

ಅನಂಗ ವಾಸನೆ! :)

ಗಂಡು ಮನದಂತೆ ಹೆಣ್ಣು ಮನವೂ ಇದೆ... ಅದೂ ಇಷ್ಟೇ ತುಂಟತನದ್ದೇ! ;)

ಮೂಲವಾಗಿ ಪುಲ್ಲಿಂಗವಾಗಿಯೋ .. ಸ್ತ್ರೀಲಿಂಗವಾಗಿಯೋ ಇರುವ ಮನವನ್ನು ನಪುಂಸಕ ಲಿಂಗವಾಗಿ ಬದಲಾಯಿಸುವ ಕ್ರಿಯೆಗಳೆ ನಮ್ಮ ಆದ್ಧ್ಯಾತ್ಮ ಜಗತ್ತಿನಲ್ಲಿ ಹೆಚ್ಚು! :) .

ಮನಕ್ಕೊಂದು ಲಿಂಗವಿದ್ದರೇನೆ ಚೆನ್ನವಲ್ಲ್ವೇ?!

ನಿಮ್ಮ ಬರಹ ಒನ್ತರಾ ಚೆನ್ನಾಗಿದೆ.

ಉ: ಮನದಾಟ

anivaasi's picture

ಸವಿತೃ-
>>ಮನಕ್ಕೊಂದು ಲಿಂಗವಿದ್ದರೇನೆ ಚೆನ್ನವಲ್ಲ್ವೇ?!
ಅದು ನಿರ್ಲಿಂಗಿಯಾಗಿದ್ದು ಜೀವಿಯ ಲಿಂಗ ಪಡಕೊಳ್ಳಬೇಕು ಎಂದು ನನ್ನ ಅನಿಸಿಕೆ. ಅದನ್ನು ವ್ಯಾಕರಣಗಾರರಿಗೆ ಹೇಳುವವರಾರು? :)

ಉ: ಮನದಾಟ

hamsanandi's picture

ಅನಿವಾಸಿಯವರೆ, ಚೆನ್ನಾಗಿದೆ :) ನಿಮ್ಮೀ ಬರಹದಿಂದ ಪ್ರಭಾವಿತನಾಗಿ ನಾನೂ ನನ್ನದೂ ಒಂದು ಅನುವಾದವನ್ನು ಮಾಡಿ ಹಾಕಿರುವೆ, ನಿಮ್ಮ ಕೃಪೆಯ ಜೊತೆಗೆ.

http://www.sampada.n...

ಉ: ಮನದಾಟ

anivaasi's picture

ಹಂಸಾನಂದಿ,
ನಿಮ್ಮ ಅನುವಾದ ಚೆನ್ನಾಗಿದೆ. ಆದರೆ ನನ್ನದು ಪರಿಣಾಮಕಾರಿಯಾಗಿದೆ :D ... ಹೇಗೆನ್ನುತ್ತೀರ? ನನ್ನ ಪೋಸ್ಟು ಫ್ಲಾಗ್ ಆಗಿದೆ! ಎಂತಹ ಸುಭಾಷಿತವನ್ನೂ ಫ್ಲಾಗ್ ಆಗದ ಹಾಗೆ ಅನುವಾದಿಸುವ ಕಲೆ ನಿಮಗೆ ಸಿದ್ಧಿಸಿದೆ ಅನ್ನೋಣವೆ? :) ಪಾಪ, ಇನ್ನು ನಿರ್ವಾಹಕರು ಇದನ್ನೂ ಕಿತ್ತು ಹಾಕಬೇಕಾಗತ್ತೇನೋ :(

ನಿಮ್ಮ ಆಸಕ್ತಿಗೆ ಥ್ಯಾಂಕ್ಸ್.

ಉ: ಮನದಾಟ

Vyasraj's picture

flag ಮಾಡಿದ್ ಎಲ್ಲಾ ಕಮೆಂಟ್/ಲೇಖನ ಕಿತ್ತಿ ಹಾಕ್ಬಾರ್ದು ... flag ಮಾಡೊದಂಥದ್ದು ಏನೂ ಇಲ್ಲಾ ...

<<ಎಂತಹ ಸುಭಾಷಿತವನ್ನೂ ಫ್ಲಾಗ್ ಆಗದ ಹಾಗೆ ಅನುವಾದಿಸುವ ಕಲೆ ನಿಮಗೆ ಸಿದ್ಧಿಸಿದೆ ಅನ್ನೋಣವೆ?>>
ಹ್ಹ ಹ್ಹ ... :)

ಉ: ಮನದಾಟ

hamsanandi's picture

ಹ್ಹೆ ಹ್ಹೆ :) ಅದೇನೋ ಗೊತ್ತಿಲ್ಲ ರೀ! ಅಥವಾ ಫ್ಲಾಗ್ ಆಗತ್ತೆ ಅನ್ಸೋ ಸುಭಾಷಿತವನ್ನ ನಾನು ಅನುವಾದ ಮಾಡೋದೇ ಇಲ್ವೋ!

ಉ: ಮನದಾಟ

anivaasi's picture

self-censorship!? :)

ವ್ಯಾಸರಾಜರೆ, ನಿಮ್ಮ ಬೆಂಬಲಕ್ಕೆ ಥ್ಯಾಂಕ್ಸ್.

ಉ: ಮನದಾಟ

shaamala's picture

ಚೆನ್ನಾಗಿದೆ, ಯಾಕೆ ಫ್ಲಾಗ್ ಆಯ್ತೋ?

ಶಾಮಲ

ಉ: ಮನದಾಟ

anivaasi's picture

ಶಾಮಲ,
ಏನಾದರೂ ಇರಲಿ, ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

ಉ: ಮನದಾಟ

ಮಾಯ್ಸ೨'s picture

ಈ ಕವನವನ್ನೂ Flag ಮಾಡಿದ್ದಾರೆ.. ಆಹಾ!!

ಉ: ಮನದಾಟ

anivaasi's picture

:) :(

ಉ: ಮನದಾಟ

ಮಾಯ್ಸ೨'s picture

ಎಲ್ಲಿ ಹೋದ್ರೂ irrational rational ತೀರ್ಪುಕೊಡುವವರು...? :)

ಉ: ಮನದಾಟ

gurubaliga's picture

ಇದನ್ನೊಂದು ಅನುವಾದ ಅಂತ ಓದಿಲ್ಲ. ಅಲ್ಲಿಗೆ ಇದೊಂದು ಚತುರ ರಚನೆಯೂ ಹೌದು. ನನಗಿಷ್ಟವಾದ ಸಾಲುಗಳು.
ಏಕಾಂತದ ಸಂಗದಲ್ಲಿ ಅವಳಂಗದ
ಅನಂಗವಾಸನೆ ಹಾಗು ಸೋಂಕಿನೊತ್ತಲ್ಲೇ

ನನ್ನ ಕಮೆಂಟಿಗೂ ಒಂದು ಬಾವುಟ ಬರಲಿ. :)

ಉ: ಮನದಾಟ

anivaasi's picture

ಗುರು ಬಾಳಿಗರೆ,
ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಈ ಸುಭಾಷಿತದ ಇಂಗ್ಲಿಷ್ ರೂಪಗಳನ್ನು ನೋಡಿ - ತುಂಬಾ ಭಿನ್ನವಾಗಿದೆ.

ಪರರ ಸಾಲಿಗೆ ಬಾವುಟ ಬೇಕೆಂದು ಕೇಳುವಂತಿಲ್ಲ! :)

ಉ: ಮನದಾಟ

manjunath s reddy's picture

:)