ಅನಿವಾಸಿ
*~*~*~*
ಮಂಪರಿನಲ್ಲಿ ಘಾಟಿ

ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ ಇಳಿಯುವುದು ಹಲವು ಸಲ ಸಿಕ್ಕುತ್ತಿರಲಿಲ್ಲ. ಆದರೆ, ಈ ಸಲ ಹಾಗಾಗಲಿಲ್ಲ. ಜೆಟ್‌ಲಾಗಿನ ಅವಾಂತರದಲ್ಲಿ ಎಚ್ಚರವಿತ್ತು. ಮನಸ್ಸಿನಲ್ಲಿ ನೆನಪುಗಳು ಬೆಚ್ಚಗೆ ಅರಳುತ್ತಿದ್ದವು. ಸಣ್ಣ ಮಗುವಿನ ಹಾಗೇ ಇವನ್ನೆಲ್ಲಾ ನೋಡುತ್ತಿದ್ದೇನೆ, ಅದೇ ಮಂಪರಿನಲ್ಲಿ, ಘಾಟಿಯ ಬರುವಿಕೆಯ ಕುತೂಹಲದಲ್ಲಿ ಅನಿಸುತ್ತಿತ್ತು!
ಬಸ್ಸು ಯಾಕೋ ತುಂಬಾ ತಡವಾಗಿ ಚಾರ್ಮಾಡಿ ಘಾಟಿ ತಲುಪಿತ್ತು. ಮುಂಜಾವದ ಬೆಳಕಲ್ಲಿ ಕಾತರದ ಮನಸ್ಸನ್ನು ಚೇಡಿಸುವಂತೆ ಮೆಲ್ಲನೆ ದೂರದ ಗುಡ್ಡ ಬೆಟ್ಟ ಮೋಡ ಎಲ್ಲ ಕಾಣತೊಡಗಿತು.
ಸರಕ್ಕನೆ ಇಳಿಯಬೇಕಾದ ಘಾಟಿಯ ಇಳಿಜಾರಿನಲ್ಲಿ ಏಕಾಏಕಿ ನಿಂತುಬಿಟ್ಟ ಬಸ್ಸು. ಮುಂದೆ ಹತ್ತಾರು ಬಸ್ಸು ಲಾರಿ ವಾಹನಗಳ ಸಾಲು. ತುಂಬಾ ಇಕ್ಕಟ್ಟಾದ ದಾರಿಯಲ್ಲಿ ಮುಂದಿಂದ ಬರುವ ವಾಹನಗಳನ್ನು ಸಂಬಾಳಿಸಿಕೊಂಡು ಹೋಗಬೇಕು. ಕೆಲವು ತಿರುವುಗಳಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತುಬಿಡುತಿತ್ತು.
ಶಿರಾಡಿ ಘಾಟಿ ಮುಚ್ಚಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಎರಡರಷ್ಷು ಗಾಡಿಗಳು. ನಿಂತ ಬಸ್ಸಿಂದ ಇಳಿದು ಅಡ್ಡಾಡುತ್ತಾ, ಸರ್ಕಾರವನ್ನು ಬಯ್ಯುತ್ತಾ ಕಾಲದೂಡುತ್ತಿದ್ದ ಮಂದಿ. ಹೀಗೆ ಮೆಲ್ಲನೆ ತೆವಳಿ ಇಳಿಯುವಾಗ ನಾಕೈದು ಗಂಟೆ ಕಳೆದು ಬಿಟ್ಟಿತ್ತು. ಬೆಳಕು ಚೆನ್ನಾಗಿಯೇ ಹರಿದಿತ್ತು.
ಅರೆ ಮಂಪರಿನಲ್ಲಿ ಘಾಟಿ ಇಳಿಯುವ ಕಾರ್ಯಕ್ರಮವನ್ನು ಇಷ್ಟವಿಲ್ಲದಿದ್ದರೂ ಮತ್ತೊಂದು ದಿನಕ್ಕೆ ಮುಂದೂಡಬೇಕಾಯಿತು.

- anivaasi ರವರ ಬ್ಲಾಗ್
- Login or register to post comments
- 323 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಂಪರಿನಲ್ಲಿ ಘಾಟಿ
ಮೂಡುಬಿದಿರೆ ಅಂದೊಡನೆ ನೆನಪಿಗೆ ಬರುವ ಸಾವಿರ ಕಂಬದ ಬಸದಿ ಚಿತ್ರ ಹಾಕಿದ್ದರೆ ಚೆನ್ನಾಗಿತ್ತು.
ಆದರೂ ಎಲ್ಲವನ್ನು ಬರೆವಣಿಗೆಗೆ ಇಳಿಸುವ ನಿಮ್ಮ ಅಲುವಾಟ/ಅಬ್ಯಾಸ ಸಕ್ಕತ್.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಮಂಪರಿನಲ್ಲಿ ಘಾಟಿ
ಸಾವಿರ ಕಂಬದ ಬಸದಿ ಒಳಗೆ ಚಿತ್ರ ತೆಗೆಯಲು ಬಿಡಲ್ಲ... ಹೊರಗೆ ಸುತ್ತ ಮುತ್ತ ಒಂದೆರಡು ಚಿತ್ರ ತೆಗೆದೆ.. ಯಾವಾಗಲಾದರೂ ಹಾಕ್ತೀನಿ... ಆದರೆ ಇಲ್ಲಿ ಘಾಟಿ ಚಿತ್ರ ಸಾಕು ಅನ್ನಿಸಿತು
ಉ: ಮಂಪರಿನಲ್ಲಿ ಘಾಟಿ
ಹಲವಾರು ವರ್ಷಗಳ ಹಿಂದೆ ಹೋಗಿ ಬರುತ್ತಿದ್ದ ದಾರಿ ಚಾರ್ಮಾಡಿ ಘಾಟ್.
ಶಿರಾಡಿ ಘಾಟ್ ರಿಪೇರಿ ಇನ್ನೆಷ್ಟು ವರ್ಷಗಳಾಗುವುದೋ.
ಈಗ ಕೆಲವೊಮ್ಮೆ ರಾತ್ರಿ ಮಂಗಳೂರಿಂದ ಹೊರಟವರು ಮಾರನೇ ಮಧ್ಯಾಹ್ನ ೨ ಗಂಟೆಗೆ ಬೆಂಗಳೂರು ತಲಪುವರು.
ಏನೇ ಆಗಲಿ ಮಂಗಳೂರಿನ ಜನ ಶಾಂತಿಪ್ರಿಯರು.ಮಂಗಳೂರು-ಬೆಂಗಳೂರು ರೈಲ್ -ರೈಲ್ ಬಿಟ್ಟರೂ-ಬೇಜಾರಿಲ್ಲ.
ಶಿರಾಡಿಘಾಟ್ ಹಾಳಾಯಿತೋ,ಚಾರ್ಮಾಡಿಯಿಂದಬರುವರು.ಅದೂ ಹಾಳಾದರೆ ಕೇರಳಕ್ಕಾಗಿಯಾದ್ರೂ ಬಂದಾರು.
ಮಂಗಳೂರನ್ನು ಕೇರಳಕ್ಕೆ ಸೇರಿಸಿದರೂ ಬೇಸರಿಸುವುದಿಲ್ಲ.ಸರಕಾರವನ್ನು ಬೈದು,ಹೊಂದಿಕೊಂಡು ಹೋಗುವರು.
ಏನೇ ಇರಲಿ.ಚಾರ್ಮಾಡಿ ಚಿತ್ರ ಚೆನ್ನಾಗಿದೆ.
ಇರೋದ್ರೊಳಗೆ ಒಮ್ಮೆ ನೋಡಿ ಚಾರ್ಮಾಡಿ ಘಾಟಿ.
ಏನಂತೀರಿ..