ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಿಟಿಯ ಮೇಲಣ ಗುಳ್ಳೆ

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.

ಒಂದು ದಿನ ಒಬ್ಬ ದೊಡ್ಡ ದೊಡ್ಡ ಸೋಪ್ನೀರಿನ ಗುಳ್ಳೆ ಮಾಡಿ ಹಾರಿ ಬಿಡುತ್ತಾ ಬಸ್ಕ್ ಮಾಡುತ್ತಿದ್ದ.

 

 

 

 

 

 

 

 

 

 

ಒಂದು ದೊಡ್ಡ ಪ್ಲಾಸ್ಟಿಕ್ ಮರಿಗೆಯಲ್ಲಿ ಸೋಪ್ನೀರು ಇಟ್ಟುಕೊಂಡು, ಕೈಯಲ್ಲಿ ಒಂದು ದೊಡ್ಡ ಕಬ್ಬಿಣದ ಬಳೆ ಹಿಡಿದು ಅದರಿಂದ ನೀರೆತ್ತಿ ಗಾಳಿಯಲ್ಲಿ ದೊಡ್ಡ ಗುಳ್ಳೆ ಮಾಡಿ ತೂರಿ ಬಿಡುತ್ತಿದ್ದ.

ಸಣ್ಣದೊಡ್ಡವರೆನ್ನದೆ ಎಲ್ಲರೂ ಮಕ್ಕಳಂತೆ ಕಣ್ಣರಳಿಸಿ ಆ ಗುಳ್ಳೆಗಳನ್ನೇ ಕಣ್ಮರೆಯಾಗುವವರೆಗೂ ನೋಡುತ್ತಿದ್ದರು.

ಆ ಗುಳ್ಳೆಯೋ ತೇಲಿಕೊಂಡು ಜನರ ನಡುವಲ್ಲೇ ಹಾಯುವಾಗ ಗುಂಡಾಗಿ ಉಳಿಯುತ್ತಿರಲಿಲ್ಲ. ಜೀವ ಬಂದಿದೆಯೋ ಎಂಬಂತೆ ಬಳಕುತ್ತ ಹೆಬ್ಬಾವಿನ ಹಾಗೆ ಹರಿದಾಡುತ್ತಿತ್ತು.

ಎತ್ತೆತ್ತಲಿಂದಲೋ ಅದರಿಂದ ಹಾಯುತ್ತಿದ್ದ ಬೆಳಕನ್ನು ಒಡೆಒಡೆದು ಬಣ್ಣಬಣ್ಣದ ತಿರುಳನ್ನು ಪಡೆದುಕೊಳ್ಳುತ್ತಿತ್ತು.

ಅದರೊಳಗಿಂದ ಗಟ್ಟಿಮುಟ್ಟಾಗಿ ನಿಂತಿದ್ದ ಕಟ್ಟಡಗಳೂ ನಾಚಿಕೆಯಿಂದ ಬಳಕುವಂತೆ ತೋರುತ್ತಿತ್ತು.

ಯಾರದೋ ಕೈತಗುಲಿಯೋ, ಜೋರಾಗಿ ಹಾದು ಹೋದ ಕಾರು ಬಸ್ಸಿನ ಗಾಳಿಸುಳಿಯಿಂದಲೋ ಠಪ್ಪನೆ ಒಡೆದು ಒಂದು ನಾಕು ಹನಿ ನೀರಷ್ಟೆ ನೆಲಕ್ಕೆ ಉದುರುತ್ತಿತ್ತು...

 

 

 

 

 

 

 

 

 

 

ತಲೆಯನ್ನು ಯಾವುದೋ ವಿಷಯದಲ್ಲಿ ನೆಟ್ಟು ನಡೆವಂತೆ ಕಾಣುವ ಮಂದಿಯ ಮನಸ್ಸಲ್ಲಿ ಹರಿದಾಡುವ ಭಾವನೆಗಳಂತೆ, ಇದ್ದಕ್ಕಿದ್ದಂತೆ ಹುಟ್ಟಿ ಮಾಯವಾಗುವಂತೆ - ಇದು ತೋರುತ್ತಿತ್ತು...

ಎಂದೋ ಕಟ್ಟಿದ ಈ ನಗರದ ಕಟ್ಟಡವೆಲ್ಲಾ ಜಂಬದಿಂದ ನಿಂತಿರುವುದನ್ನು ಕುಹಕ ಮಾಡುತ್ತಿದೆಯೇನೋ ಎಂಬಂತೆಯೂ ಕಾಣುತ್ತಿತ್ತು...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಿಟಿಯ ಮೇಲಣ ಗುಳ್ಳೆ

mahesha's picture

ಎಂತ ಊರಪ್ಪ..!!

ಉ: ಸಿಟಿಯ ಮೇಲಣ ಗುಳ್ಳೆ

ಮನಹ್ಪಠಲ's picture

ಯಪ್ಪಾ!!ಎಶ್ಟು ಸ್ವಚ್ಚಾವಾಗಿದೆಯಪ್ಪಾ ಸಿಡ್ನೀ!!!! ನಮ್ಮಲ್ಲೊ ರಾಮ ರಾಮ!!! ವಾಕರಿಕೆ ಬರುತ್ತೆ.

ಉ: ಸಿಟಿಯ ಮೇಲಣ ಗುಳ್ಳೆ

muralihr's picture

ನಮ್ಮ್ ದೇಶ ಅ೦ತರ೦ಗದ ಶುದ್ಧತೆಗೆ ಒತ್ತು ಕೊಟ್ಟಿರೋ ದೇಶವಲ್ಲವೇ ? ನ೦ಗೇ ತೀರಾ ಕ್ಲೀನ್ ಆಗಿರೋ ದೇಶವಾದ ಅಮೇರಿಕಾ ಸ೦ಸ್ಕ್ರುತಿಯನ್ನು +ಅದೇ ರೀತಿ ಕಾರ್ಪೋರೇಟ್ ಗಳನ್ನು ನೋಡೀ ಈ ಕ್ಲೀನ್ ಆಗಿರ ಬೇಕೆ೦ಬ ತತ್ತ್ವದ ಬಗ್ಗೆ ಸಾಕಶ್ಟು ಅನುಮಾನಗಳಿದೆ.

ಈವತ್ತು ಒ೦ದು ಸ್ಲಮ್ ಗೆ ಹೋಗಿದ್ದೆ , ಅಲ್ಲಿ ಕರೆ೦ಟ್ ಹೋದಾಗ ಜಗಲಿ ಮೇಲೆ ಕೂತ್ಕೊ೦ಡು ಕುಶಿಯಿ೦ದಾ ಮಾತಾಡ್ತಾ ಯಿದ್ದರು.
ತು೦ಬಾ "ಕ್ಲೀನ್ " ಆಗಿತ್ತು . ಎಷ್ಟೋ ದಿನಗಳ ನ೦ತರ ಅ೦ತಹ ಜಾಗ ನೋಡಿದ್ದು... ಅಲ್ಲಿ ನೀನು ಏಕಾ೦ಗಿ ಅಲ್ಲಾ...
ನಮ್ಮ ರೋಡ್ ಪೂರ್ತಿ ಕ್ಲೀನ್ ಆದರೆ ಅಲ್ಲಿ ಮನುಷ್ಯರೇ ಕಾಣಲ್ಲಾ.

ಉ: ಸಿಟಿಯ ಮೇಲಣ ಗುಳ್ಳೆ

anivaasi's picture

ಮುರುಳಿ,
ಹೇಗಿದ್ದೀರ?
ನನಗೆ ಈ "ಅಂತರಂಗದ ಶುದ್ಧತೆಯ" ಬಗ್ಗೆಯೂ ಅನುಮಾನವಿದೆ. ಅದನ್ನಾದರೂ ಸಾಧಿಸಿದ್ದೇವೆಯೆ ಅಂತ ನನ್ನ ಹುಡುಕಾಟ. ನಿಮ್ಮ ಸುತ್ತಮುತ್ತಲ ವ್ಯವಹಾರ ಆಗುಹೋಗು ನೋಡಿ ಇದಕ್ಕೆ ಉತ್ತರ ಕಂಡುಕೊಳ್ಳಬೇಕು.

ಇನ್ನು "ಹೊರಗಿನ ಕ್ಲೀನ್" ಎಂಬುದು ಕೂಡ ಮಧ್ಯಮ ವರ್ಗದ ಒಂದು ವ್ಯಸನ ಅನಿಸುತ್ತದೆ. ಹಾಗಂತ ಆರೋಗ್ಯಕ್ಕೆ ಧಕ್ಕೆಯಾಗದ ಶುದ್ಧತೆ/ಸ್ವಚ್ಛತೆ ಬೇಕೇಬೇಕು (ನಿಮ್ಮ ಸ್ಲಮ್ಮಿನ ಬಗೆಗಿನ ನಿಲುವು ರಮ್ಯ ಅನಿಸಿತು!). ಆದರೆ, ಈ "ಕ್ಲೀನ್" ಎಂಬ ಬ್ಯಾನರಿನ ಅಡಿ ಅಸ್ಪೃಶ್ಯತೆ/ಮುಟ್ಟಲಾಗದ್ದರ ಪರವಾಗಿ ವಾದಿಸುವ ಮಂದಿ ಕೂಡ ಕಂಡಿದ್ದೇನೆ.

ಇನ್ನು ನನಗೆ ಕೆಲವು ಸಲ ಬಿಟ್ಟರೆ ಇಲ್ಲಿ ಏಕಾಂಗಿ ಅನಿಸಿಲ್ಲ. ಆ "ಕೆಲವು ಸಲ" ಬೆಂಗಳೂರಲ್ಲೂ ಏಕಾಂಗಿ ಅನಿಸುತ್ತದೆ! :)

ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್...

ಉ: ಸಿಟಿಯ ಮೇಲಣ ಗುಳ್ಳೆ

Sunil Jayaprakash's picture

ಯು ಸೀ ಮ್ಯಾನ್, ಅವನನ್ ನೋಡಿದ್ರೆ ಇವನಿಗೆ ಅನುಮಾನ, ಇವನನ್ ನೋಡಿದ್ರೆ ಅವನಿಗೆ ಅನುಮಾನ. ಒಂದ್ವೇಳೆ, ಇವನಿಗೆ ಅನಮಾನ ಹೋದ್ರು, ಅವನಿಗೆ ಹೇಳಲ್ಲ. ಏಕೆಂದ್ರೆ ಅವ್ನನ್ ಕಂಡ್ರೆ ಇವ್ನಿಗೆ ಆಗಲ್ಲ, ಇವ್ನನ್ ಕಂಡ್ರೆ ಅವ್ನಿಗ್ ಆಗಲ್ಲ. ಯಾರನ್ ಕಂಡ್ರೂ ಯಾರ್ಗೂ ಆಗಲ್ಲ. ಒಟ್ನಲ್ಲಿ ನೀವ್ಯಾರೂ ಉದ್ಧಾರ ಆಗಲ್ಲ. ಐ ಡೋನ್ಟ್ ಲೈಕ್ ಇಟ್, ಕಾಂತ!!! :)

ಉ: ಸಿಟಿಯ ಮೇಲಣ ಗುಳ್ಳೆ

muralihr's picture

super

ಉ: ಸಿಟಿಯ ಮೇಲಣ ಗುಳ್ಳೆ

muralihr's picture

Electronics city corporate ಕಸವನ್ನು ತ೦ದು ನಮ್ಮ ಮಡಿವಾಳ ಕೆರೆಯಲ್ಲಿ ಎಸೆಯುತ್ತಾರೆ. ಈ ಕಾರ್ಪೋರೆಟ್ ಗಳನ್ನು ನೋಡಲು
ನೀವು Electronics city ಹೋದರೆ "ಅಬ್ಬಾ " ಎಷ್ಟು ಕ್ಲೀನ್ ಅ೦ತೀರಾ.ಅದೇ ರೀತಿ ಅಮೇರಿಕಾ ದವರು ತಮ್ಮ ಕಸವನ್ನು
ಭಾರತದಲ್ಲಿ ಎಸೆಯುತ್ತಾರೆ. ಅಮೇರಿಕಾ ಅದೆಷ್ಟೇ ಕ್ಲೀನ್ ಇದ್ದರು ಮಾಡ್ತಾಯಿರೋದು ಗಲೀಜು ಕೆಲ್ಸಾ ತಾನೇ ?

http://timesofindia....

ಇದು ಪಕ್ಕದ ಮನೆಯ ಖಾಲಿ ಸೈಟ್ ನಲ್ಲಿ ಕಸ ಎಸೆಯುವ ಕ್ರಿಯೆಯಷ್ಟೇ ಕೀಳು ತಾನೇ?
ಈ ಕಸ ತೊಲಗಿಸುವ ಸಿದ್ದಾ೦ತದ ಬಗ್ಗೆ ಮತ್ತು ತಮ್ಮ ಜಾಗವನ್ನು (ಆ ಜಾಗದ ಜನರನ್ನು ಮತ್ತು ಪರಿಸರವನ್ನು ಕಿತ್ತು ) ಕ್ಲೀನ್ ಮಾಡುವ
ಸಿದ್ದಾ೦ತದ ಬಗ್ಗೆ ನನಗೆ ಅನುಮಾನವಿದೆ ಅ೦ದದ್ದು.

ಉ: ಸಿಟಿಯ ಮೇಲಣ ಗುಳ್ಳೆ

mahesha's picture

ತಲೆಹರಟೆ!

ಉ: ಸಿಟಿಯ ಮೇಲಣ ಗುಳ್ಳೆ

ಮನಹ್ಪಠಲ's picture

;)

ಉ: ಸಿಟಿಯ ಮೇಲಣ ಗುಳ್ಳೆ

anivaasi's picture

ಮಹೇಶರೆ/ಮನಹ್ಪಠಲರೆ,
ನೀವು ಹೇಳಿದ್ದು ಸರಿ. ಆದರೆ. ನನಗೆ ಸ್ವಚ್ಛತೆಯಾಚೆ ಇರುವ ಒಂದು ಊರಿನ ಸ್ವೇಚ್ಛಾಚಾರದ ಕಡೆ ಗಮನ. ತಮಗೆ/ಇನ್ನೊಬ್ಬರಿಗೆ ತೊಂದರೆಯಾಗದ ಸ್ವೇಚ್ಛಾಚಾರ ಬಲು ಸೊಗಸು... :)