ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸ್ನೇಲ್ಪುರಾಣ

basavana_hulu_02

ಬಸವನ ಹುಳ
ಕ್ಕೆ
ಸ್ನೇಲ್‌ ಪೇಸು
ಎಂಜಲು ಮೈ

ಚಿಪ್ಪಲ್ಲಿ ಸುತ್ತಕೊಂಡು
ಮಳೆ ಬಂತೋ ಹೊರಗೆ ಸುರಕೊಂಡು
ಮೂಸಿ ಮೂಸಿ
ಮುಂದಿನ ಮಳೆವರೆಗೂ ಬೇಕಾಗೋಷ್ಟು
ಎಲೆನೂ ಮಣ್ಣಿನ ವಾಸನೇನೂ
ಒಳಗೆ ತುಂಬ್ಕೊಂಡು ಒಳಗೆ ಹೋದರೆ
ಚಳೀಲಾಗಲಿ, ಬೇಸಿಗೆಲಾಗಲೀ
ಮತ್ತೆ ಧ್ಯಾನ
ದಂತಹ ನಿದ್ದೆ
ಎದ್ದಾಗ ಮುಂಚಿನಂಗೆ
ಮತ್ತೆ ಹಸಿವೆ.

basavana_hulu_02

 

ಅಣ್ಣಾನೆ ಅಕ್ಕಾನೂ ಆಗಿರೋ
ತಂಗೀನೇ ತಮ್ಮಾನೂ ಆಗಿರೋ
ಎದೆ ಗೂಡಿಲ್ದೆ ನೀರಲ್ಲೀಜೋ
ಚಿಪ್ಪಿಲ್ಲದೇ ಎಂಜಲುಮೈಯೇ ಮೈಯಾಗಿರೋ
ವರಿಗೆಲ್ಲಾ
ಈ ಚಿಪ್ಪು ಕಂಡರೆ ಹೊಟ್ಟೆಕಿಚ್ಚು
ಆದರೆ ಎಲ್ಲಾವೂ

ಕತ್ತಿ ಅಲುಗಿನ ಮೇಲೆ ತೆವಳೀನೂ
ಉಳಿಕೋತಾವೆ

ಯಾರ ಕೈಲಿ ಆಗತ್ತೇಳಿ ಅಂತಹ
ಮೈಯಿಟ್ಕೊಂಡು
ಎಂಜಲು ಇಲ್ದೇ ಹೋದ್ರೆ

Your rating: None Average: 3.7 (6 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸ್ನೇಲ್ಪುರಾಣ

ಮಾಯ್ಸ೨'s picture

ಇಲ್ಲಿ ಶ್ಲೇಷವನ್ನು? ಪತ್ತೆ ಹಚ್ಚು ಹೆಣಗಾಡಿದೆ... ನಾನು ತಿಳಿದುದು ಸರಿಯೇ ಎಂಬ ಪ್ರಶ್ನೆ ಇದೆ.!

ತಲೆಗೆ ಒಳ್ಳೇ ಕೆಲಸ ಕೊಟ್ತು.

ನನ್ನಿ ಚನ್ನಾಗಿದೆ

ಉ: ಸ್ನೇಲ್ಪುರಾಣ

anivaasi's picture

ಇಲ್ರಪ್ಪಾ, ಶ್ಲೇಷೆಯೇನೂ ಇಲ್ಲ. ಇದೊಂದು ಸೈನ್ಸ್ ಪದ್ಯ(!?) ಇನ್ನ ಮೇಲೆ ಹಿಂಗೆ ಬರಿದರೆ ಹೆಂಗೆ ಅನ್ಕೋತಾ ಇದೀನಿ. ನೋಡುವ.