ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಕನಸಿನ ಹಗಲು ಕಾಟ

November 24, 2007 - 12:33pm — anivaasi

ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ.

ಈಗ ನೋಡಿ ಇಲ್ಲಿ ಬೆಳಿಗ್ಗೆ ಕೆಲಸದವರ ಜತೆ ಕಾಫಿ ಕುಡಿಯುವಾಗ ಪಕ್ಕದಲ್ಲೇ ಕೂತು ನಗತ್ತೆ. ಏನೆಂದು ಪರಿಚಯಿಸಲಿ? ಹುಚ್ಚ ಎಂದುಕೊಳ್ಳುವುದಿಲ್ಲವೆ? ಅಥವಾ ಅದು ಇಲ್ಲವೇ ಇಲ್ಲ ಎಂಬಂತೆ ನಟಿಸಲೇ? ನನಗೆ ಗೊತ್ತಿಲ್ಲ ಯಾರ ಕನಸೋ ಇದು ಎಂಬಂತೆ ಇರಬಹುದು. ಆದರೆ, ನನ್ನ ಮಗುವನ್ನೇ ನಾನು ನನ್ನದಲ್ಲ ಎಂದಂತಲ್ಲವೆ ಅದು?

ನಾಳೆ ನಾನು ಕಣ್ಣಿನ ಡಾಕ್ಟರ್‍ ಬಳಿ ಹೋಗಬೇಕು. ಆಗ ಇದು ನನ್ನ ಜತೆ ಬಂದರೆ ಏನು ಮಾಡುವುದು? ಹುಚ್ಚರ ಡಾಕ್ಟರ್‍ ಹತ್ತಿರ ಹೋಗುವ ಬದಲು ಇಲ್ಲಿ ಬಂದಿದ್ದೀಯ ಅಂತ ಅವರು ಕೇಳಿಬಿಟ್ಟರೆ? ನನಗಂತೂ ಕಪಾಳಕ್ಕೆ ಹೊಡೆಯುವಂಥ ಸಿಟ್ಟು ಬಂದೀತು. ಅಲ್ಲದೆ ಅದನ್ನು ನನ್ನ ಕೆಲಸಗಳ ನಡುವೆ, ಪರಿಚಯದವರ ನಡುವೆ ಸಂಭಾಳಿಸುವಷ್ಟರಲ್ಲಿ ಸಾಕು ಸಾಕಾಗುತ್ತದೆ. ನಿಜ ಹೇಳಬೇಕೆಂದರೆ, ಮಧ್ಯಾಹ್ನದ ಹೊತ್ತಿಗೇ ನಿದ್ದೆ ಬರುವಷ್ಟು ಸುಸ್ತಾಗುತ್ತೇನೆ.

ಈಗ ನಾನು ಕೇಳುತ್ತಿರುವುದು ಇಷ್ಟು. ಇಲ್ಲಿ ಉಳಿದವರಿಗೆ ಯಾರಿಗಾದರೂ ಈ ರೀತಿಯ ತೊಂದರೆ ಆಗಿದೆಯ? ಆಗ ಏನು ಮಾಡುತ್ತೀರಿ? ಕಾಟ ಕೊಡದ ಹಾಗೆ ಈ ಕನಸುಗಳನ್ನು ಎಲ್ಲಿಗಾದರೂ ಬಿಟ್ಟು ಬರಲು ಸಾಧ್ಯವ? ಮಕ್ಕಳನ್ನು ನೋಡಿಕೊಳ್ಳಲು ಇರುವಂತ ಯಾವುದಾದರೂ ಜಾಗ ಕನಸುಗಳನ್ನು ಬಿಡಲು ಇದೆಯೆ? ಮತ್ತೆ ಸಂಜೆ ಮನೆಗೆ ಹೋಗುವಾಗ ತಪ್ಪದೆ ಕರೆದೊಯ್ಯುತ್ತೇನೆ.

ಅವಿಲ್ಲದಿದ್ದರೆ ನನಗೆ ನಿದ್ದೆ ಬರುವುದಿಲ್ಲ...

~.~
  • anivaasi ರವರ ಬ್ಲಾಗ್
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 25, 2007 - 5:53pm — Vasanth Kaje

ಉ: ಕನಸಿನ ಹಗಲು ಕಾಟ

Vasanth Kaje's picture

ಅನಿವಾಸಿಯವರೇ,
ಒಳ್ಳೆಯ ಕಲ್ಪನೆ (ನಿಜ ಹೇಳಬೇಕೆಂದರೆ ವಾಸ್ತವ). ಈ ಸಮಸ್ಯೆ ನನಗೂ ಇದೆ ಬಿಡಿ. ಬಹುಶ: ಎಲ್ಲರಿಗೂ ಇದೆ.

ಅಲ್ಲದ ಸಮಯದಲ್ಲಿ ಬರುವ ಕನಸುಗಳು ಸಮಯ ಹಾಳು ಕೂಡ ಮಾಡಬಲ್ಲವು. ಕಲಾಂ ಹೇಳುತ್ತಾರೆ, ’Today is the tomorrow you were dreaming about yesterday'. ಮತ್ತೆ ಅದನ್ನು ನಾಳೆಯ ಬಗ್ಗೆ ಕನಸು ಕಟ್ಟಲು ಹಾಳುಮಾಡದೆ, ಕಟ್ಟಿದ ಕನಸನ್ನು ಸಾಕಾರಗೊಳಿಸಲು ಉಪಯೋಗಿಸುವುದು ಒಳ್ಳೆಯದು.

ಹೇಳುವುದು ಸುಲಭ, ಮಾಡುವುದು ಕಷ್ಟ Sad

ಚೆನ್ನಾಗಿ ಬರೆದಿದ್ದೀರಿ.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 26, 2007 - 11:18am — naasomeswara

ಉ: ಕನಸಿನ ಹಗಲು ಕಾಟ

naasomeswara's picture

ಅನಿವಾಸಿಯವರೆ,

ನಿದ್ರೆಯಲ್ಲಿ ಎರಡು ಭಾಗ. ಅಕ್ಷಿ ತೀವ್ರಚಲನಾನಿದ್ರೆ (ರಾಪಿಡ್ ಐ ಮೂವ್‍ಮೆಂಟ್ ಸ್ಲೀಪ್) ಹಾಗೂ ಅಕ್ಷಿ ತೀವ್ರಚಲನಾ ರಹಿತ ನಿದ್ರೆ (ನಾನ್-ರಾಪಿಡ್ ಐ ಮೂವ್‍ಮೆಂಟ್ ಸ್ಲೀಪ್). ಕನಸುಗಳು ಅಕ್ಷಿ ತೀವ್ರ ಚಲನಾನಿದ್ರೆಯಲ್ಲಿ ಮಾತ್ರ ಬೀಳುತ್ತವೆ. ಹಗಲಲ್ಲೂ ಇಂತಹ ವಿಭಜನೆ ನೀವೇ ಮಾಡಿಕೊಳ್ಳಿ. ಏಕಾಂತ ಮತ್ತು ಜನಾಂತ. ಏಕಾಂತದಲ್ಲಿ ಕನಸುಗಳಿಗೆ ಕಾಟ ಕೊಡಲು ಅನುಮತಿ ನೀಡಿ. ಜನಾಂತದಲ್ಲಿ ಬಾಯಿ ಮುಚ್ಚಿಕೊಂಡು ತೆಪ್ಪಗಿರಲು ಹೇಳಿ! (ಕೆಲವು ಸಲ ನನ್ನ ಆಣತಿಯನ್ನು ಮೀರಿ ಜನಾಂತದಲ್ಲೂ ಕಿರಿಕಿರಿ ಮಾಡುತ್ತವೆ ಈ ಕನಸುಗಳು!)
- ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 11:56am — ವೈಭವ

ಉ: ಕನಸಿನ ಹಗಲು ಕಾಟ

ವೈಭವ's picture

"...ಕನಸುಗಳು ಅಕ್ಷಿ ತೀವ್ರ ಚಲನಾನಿದ್ರೆಯಲ್ಲಿ ಮಾತ್ರ ಬೀಳುತ್ತವೆ..."

ನಾವು ಕನ್ನಡದಲ್ಲಿ ಕನಸುಗಳನ್ನು 'ಬೀಳಿ'ಸಿಕೊಳ್ಳುತ್ತೇವೆ ಮತ್ತು ಕನಸನ್ನು 'ಕಾಣು'ತ್ತೇವೆ ಕೂಡ.

ಕಾಣುವ ಕನಸುಗಳಿಗೂ ಬೀಳುವ ಕನಸುಗಳಿಗೂ ಏನು ಬೇರೆತನ? ನಾವು ಒಮ್ಮೆ 'ಕನಸು ಬೀಳುವುದು' ಎನ್ನುತ್ತೇವೆ ಮತ್ತು ಕೆಲವೊಮ್ಮೆ 'ಕನಸು ಕಂಡೆ' ಎನ್ನುತ್ತೇವೆ. Smiling

ಕಾಣುವ ಕನಸುಗಳು ನಾವು ನಮ್ಮ ಬದುಕಿನಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಇಂತ ಕನಸುಗಳನ್ನು 'ಕಾಣು'ತ್ತಿರುತ್ತೇವೆ. ಆದರೆ ಆ 'ಬೀಳುವ' ಕನಸುಗಳು ಯಕಾಯಕಿ ಬೀಳುತ್ತಿರುತ್ತವೆ. Smiling ಯಾರದರೂ ನನಗೆ ಈ ದಿನ ಇಂತ ಕನಸು ಬೀಳುತ್ತದೆ ಎಂದರೆ ಅವರಿಗೆ ನಾನು ಅಡ್ಡಬೀಳುತ್ತೇನೆ. Smiling ಬೀಳುವ ಕನಸುಗಳಲ್ಲಿ 'ಊ' (randomness) ಹೆಚ್ಚು.

ಒಟ್ಟಿನಲ್ಲಿ ಕಾಣುವ ಕನಸೋ ಬೀಳುವ ಕನಸೋ ನಮಗೆ ಎರಡೂ ಬೇಕು. ಇದರಿಂದ ನಾವು ನಮ್ಮ ಬದುಕಿನ ಎಡರು-ತೊಡರುಗಳನ್ನು ಮರೆಯುತ್ತೇವೆ. ( ಅತ್ವ ಮರೆತೆವು ಅನ್ನೋ ಬ್ರಮೆಯಲ್ಲಾದರೂ ಇರುತ್ತೇವೆ)

ಇನ್ನು ಬೇಂದ್ರೆಯವರು 'ಕಣಸು' (ವಿಶನ್) ಬದುಕಿಗೆ ಬೇಕು ಎನ್ನುತ್ತಾರೆ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 28, 2007 - 2:46pm — naasomeswara

ಉ: ಕನಸಿನ ಹಗಲು ಕಾಟ

naasomeswara's picture

ನಮ್ಮ ಬಗ್ಗೆ ನಾವು ಮಾತನಾಡುವಾಗ ನಾವು ಕನಸನ್ನು `ಕಾಣುತ್ತೇವೆ`. ಇನ್ನೂಬ್ಬರ ಬಗ್ಗೆ ಮಾತನಾಡುವಾಗ ಅವರಿಗೆ ಕನಸು `ಬೀಳುತ್ತದೆ`. ಉದಾ: ರಾತ್ರಿ ಯಾಕೋ ಅಷ್ಟು ಜೋರಾಗಿ ಕಿರುಚಿಕೊಂಡೆ? ಕೆಟ್ಟಾ ಕನಸು-ಗಿನಸು ಏನಾದ್ರು ಬಿತ್ತಾ? Smiling

- ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 2:41pm — shreekant.mishrikoti

ಉ: ಕನಸಿನ ಹಗಲು ಕಾಟ

shreekant.mishrikoti's picture

ಅದು ಹಾಗಲ್ಲ ;

"ನಿನ್ನೆ ರಾತ್ರಿ ನನಗೆ ಕೆಟ್ಟ ಕನಸು ಬಿದ್ದಿತು ; ಅವನು ಸಿನೆಮಾ ಸ್ಟಾರ್ ಆಗುವ ಕನಸು ಕಾಣ್ತಿದ್ದಾನೆ ."

’ಕನಸು ಕಾಣುವದು’ ಪ್ರಜ್ನಾಪೂರ್ವಕ ಕ್ರಿಯೆ ; ನಾವು ಮುಂದೊಂದು ದಿನ ಏನೋ ಸಾಧಿಸುವ ಬಗ್ಗೆ ಒಳ್ಳೆಯ ಕನಸು ಕಾಣುತ್ತೇವೆ . ಕೆಟ್ಟ ಕನಸನ್ನು ಯಾರೂ ಕಾಣೋದಿಲ್ಲ ;

ಕನಸು ಬೀಳುವದು ನಮ್ಮ ಕೈಲಿಲ್ಲ ; ಹಾಗಾಗಿ ಒಳ್ಳೇ ಕನಸು ಕೆಟ್ಟ ಕನಸು ’ಬೀಳುತ್ತವೆ’

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 2:49pm — ವೈಭವ

ಉ: ಕನಸಿನ ಹಗಲು ಕಾಟ

ವೈಭವ's picture

ಮಿಶ್ರಿಕೋಟಿ ಸಾರ್,
ನೀವು ಹೇಳುವುದು ನನಗೆ ಹೆಚ್ಚು ಸರಿ ಅನ್ನಿಸುತ್ತಿದೆ. ಇದನ್ನೆ ನಾನು ಹೇಳಿರುವುದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 26, 2007 - 12:45pm — mahesha

ಉ: ಕನಸಿನ ಹಗಲು ಕಾಟ

mahesha's picture

ಅನಿವಾಸಿಗಳೇ,

ನೀವು ನಿಮ್ಮ ಕನವನ್ನು ನೀವು ಹೋದಲ್ಲೆಲ್ಲ ಕರೆದುಕೊಂಡು ಹೋಗ್ತೀರ(ಅದೇ ಬರ್ತದೆ ಅಂದ್ರೂ ಇದೇ ಅರಿತ) ಅಂದ್ರೆ, ನಿಮಗೆ ನಿಮ್ಮ ಕನವು ಬಲು ಹಿಡಿಸಿದೆ, ಇಲ್ವೇ ಅದರ ಬಗ್ಗೆ ನಿಮಗೆ ಸಿಕ್ಕಾಪಟ್ಟೆ ಗೊಡವೆಯಾಗಿದೆ.

ಹಿಡಿಸಿದ ಕನವಾದ್ರೆ ಒಳ್ಳೇದು, ಆದ್ರೆ ಗೊಡವೆಯ ಕನಸಾದ್ರೆ ಬಲು ಎಡರು...

ನಮಗೆ ಇಂತಹ ನಮ್ಮ ಇನಿ-ಕನವುಗಳು ಮುರಿದುಬೀಳುವ ಅಂಜಿಕೆಯೇ ಇಂತಹ ಮರುಳಿಗೆ ಓಸುಗರಗಳಾಗಬಹುದು ಹಲವೊತ್ತು.

ಇದಕ್ಕೆ ತೀರು ನಾವೆ ಕಂಡುಕೊಳ್ಳಬೇಕಲ್ವಾ!!

೧) ಅದೊಂದು ಕನವೆಂದು ಬಿಟ್ಟುಬಿಡುವುದು ( ಒರಗಿ ಕಂಡ ಕನಗಳಲ್ಲಿ ಹೆಚ್ಚಿನವನ್ನು ಹೀಗೆ ಬಿಟ್ಟುಬಿಡೋದು ಅಲ್ವಾ )
೨) ಅದರ ಕೂಟ ಒದ್ದಾಡೋದನ್ನ ಅಲುವಾಟ ಮಾಡಿಕೊಂಡು ಬಿಡೋದು.( ಇದೊಂದು ಎಂತೂ ಬಂಬಿಡದ ಪಿಡುಗೆಂದು )
೩) ಅದಕ್ಕೆ ಕೊನೆಗಾಣಿಸುವ, ಅದನ್ನು ತೀರಿಸಿಕೊಳ್ಳುವುದು. ( ಮೊದಲು ಅದಕ್ಕೆ ಒತ್ತುಕೊಟ್ಟು )

ಇನ್ನು ಹಲವು-ಕೊನೆಗಳನ್ನು ಕಾಣಬಹುದೇನೋ.. !

ಇದೆಲ್ಲ ಇರಲಿ...

ಏನು ಹ್ಯಾಂಗ್ ಓವರಾ? Smiling ( ತರಲೆಗೆ )
-
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 1:03am — anivaasi

ಉ: ಕನಸಿನ ಹಗಲು ಕಾಟ

anivaasi's picture

ಬೀಳುವುದು, ಕಾಣುವುದು ಎಲ್ಲ ನುಡಿಯ semantics ಅನ್ಸತ್ತೆ. ನನಗೆ ಅವುಗಳು ಇವೆ ಅಷ್ಟೆ Smiling ಬೇಡದ ಕಡೆ, ಬೇಡದ ಹೊತ್ತಿನಲ್ಲೂ...
ಕಜೆ, ಡಾಕ್ಟರು, ಮಹೇಶ ಎಲ್ಲ ಪರಿಹಾರದತ್ತ ಬೆಟ್ಟು ತೋರಿಸಿದ್ದಾರೆ, ಆದರೆ "ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ" Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿದ್ದೆಯಿಂದ ಆದ ನನ್ನ ಅನುಭವಗಳು
  • ಕೊಲೆಗಾರನ ಕಳವಳ
  • ಏನ ಬರೆಯಲಿ
  • ಕನಸು ಭವಿಷ್ಯ ಸೂಚಕವೇ?
  • ಬಯಕೆ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator