ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಸಂಪದ ಆರ್ಕೈವಿನಿಂದ

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಅಲ್ಲದೆ ಇವುಗಳಿದೆ :
http://anivaasi.word...
http://paaducastu.wo...

ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.

ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು. ಅಲ್ಲ, ಝಾಡಿಸಲಿ ಬಿಡಿ - ಮುಳ್ಳನ್ನು ಮುಳ್ಳಿಂದಲೇ ತೆಗೀಬೇಕು, eye for an eye, ಧರ್ಮಾಂಧತೆಗೆ ಧರ್ಮಾಂಧತೆಯೇ ಮದ್ದು ಅನ್ನೋರಲ್ವ ಇವರು. ಇವರು ಅವರನ್ನ, ಅವರು ಇವರನ್ನ ಝಾಡಿಸಿದರೆ ನಮಗೊಳ್ಳೇದೆ - ಯಾಕಂದರೆ, ಎಲ್ಲಾ ಧರ್ಮದ ದೋಸೇನೂ ತೂತು ಅಂತ ಗೊತ್ತಾಗತ್ತೆ!

ಆ ಲೇಖನದ ಗಲಾಟೆಯಲ್ಲಿ ಯಾರೋ ಕೆಲವರು "ಅಂಕಿ ಅಂಶಗಳ ಸಮೇತ ಅವರ ಮಾತನ್ನು ಅಲ್ಲಗಳೆಯಲಿ" ಎಂದು ಸವಾಲೆಸೆದರು. ನನಗೋ ಹಂಗೆಲ್ಲಾ ಎದೆತಟ್ಟಿಕೊಂಡು ಯಾರಾದರೂ ಮಾತಾಡಿಬಿಟ್ಟರೆ ಅಂಜಿಕೆಯಾಗತ್ತೆ. ಸುಳ್ಳು ಹೇಳೋರು ಎದೆ ತಟ್ಟಿಕೊಂಡು ಹೇಳ್ತಾರ ಅಂತ. ಆದರೂ ಯಾರೂ ಇಲ್ಲದಾಗ ಏನಿರಬಹುದು ಅಂತಹ "ಮಹಾನ್ ಸತ್ಯ" ಅಂತ ಕುತೂಹಲ ಶುರು ಆಯ್ತು. ನೋಡಿದರೆ ಭೈರಪ್ಪನವರು ತಮ್ಮ ಯಥಾ ಬಗೆಯಲ್ಲಿ ಉಸಿರು ಬಿಗಿಹಿಡಿದು ಬರೆದ, ಕಾಮ, ಕೋಲನ್, ಸೆಮಿಕೊಲನ್ ಇಲ್ಲದ ಉದ್ದುದ್ದ ಪ್ಯಾರಾಗ್ರಾಫ್ ನೋಡೀನೇ ಸುಸ್ತಾಯ್ತು.

ಆಮೇಲೆ ಹತ್ತಾರು %ಗಳು ಒಂದೇ ಪ್ಯಾರಾದಲ್ಲಿ ಕಿಕ್ಕಿರಿದಿದ್ವು. ಇಲ್ಲಿ ಬಹುಪಾಲು ಸತ್ಯ ಇರಲೇಬೇಕು ಅಂತ ಹತ್ತಿರ ಹೋಗಿ ನೋಡಿದೆ. ಏನೋ ಏರುಪೇರು ಇದೆಯಲ್ಲಾ ಅನ್ನಿಸ್ತು. ನೋಡೋಕೆ ಶುರುಮಾಡಿದೆ. ಸಹಾಯಕ್ಕೆ ವಿಕೀಪಿಡಿಯಾ ["ಬಡವರ ಎನ್ಸೈಕ್ಲೋಪೀಡಿಯ"], ಅಲ್ಲದೆ world factbook ಕೂಡ ಆನ್‌ಲೈನ್ ಇದೆ.

ಸರಿ, ಅವುಗಳನ್ನಿಟ್ಟುಕೊಂಡು ಭೈರಪ್ಪನವರ "ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆ ಪಟ್ಟಿ" ನೋಡಿದರೆ, ಬರೀ ತಪ್ಪು ತಪ್ಪು ಅಂಕಿ-ಅಂಶ! ಹುಡುಕ್ತಾ ಕಂಡಿದ್ದನ್ನ ಇಲ್ಲಿ ಕಾಪಿ-ಪೇಸ್ಟ್ ಮಾಡಿದೀನಿ. ಜತೆ ಜತೆಗೆ, ಭೈರಪ್ಪಂಗೆ ಬೇಡವಾದ, ಹಾಗಾಗಿ ಅವರು ಹೇಳದ ಕೆಲವು ಇಂಟರೆಸ್ಟಿಂಗ್ ಸಂಗತಿಗಳೂ ಸಿಕ್ಕವು! ಅಷ್ಟಕ್ಕಾದರೂ ಭೈರಪ್ಪಂಗೆ ಥ್ಯಾಂಕ್ಸ್ ಹೇಳಲೇಬೇಕು.

ಅಂಗೋಲಾ : ಭೈರಪ್ಪ ಹೇಳೋ ೯೦ ಅಲ್ಲ ಬರೇ ೫೩! [indigenous beliefs 47%, Roman Catholic 38%, Protestant 15% (1998 est.)

ಬುರುಂಡಿ : ೭೮ ಅಲ್ಲ ೬೭ [ ಆದರೆ ಬುರುಂಡಿ ಮಕ್ಕಳ ಓದಿಗೆ ಇಂಡಿಯಾಕ್ಕಿಂತ ಹೆಚ್ಚು ಖರ್ಚು ಮಾಡತ್ತಂತೆ! 5.1%,GDP ಖರ್ಚು ಮಾಡಿದರೆ ಇಂಡಿಯ - 3.2% of GDP (2005) )

ಗಬನ್ - ೭೩ ಅಲ್ಲ ೫೫ ರಿಂದ ೭೫ ಇರಬಹುದಂತೆ! [including non-citizens practice at least some elements of Christianity. ಇಷ್ಟಾಗಿ ಈ ದೇಶಕ್ಕೆ ಅಧ್ಯಕ್ಷ ಒಬ್ಬ ಮುಸ್ಲಿಮ್] Christian 55%-75%, animist, Muslim less than 1%

ಚಾಡ್ - ೩೩ ಅಲ್ಲ ೩೪ [Muslim 53.1%, Catholic 20.1%, Protestant 14.2%, animist 7.3%, other 0.5%, unknown 1.7%, atheist 3.1% (1993 census) ]

ಕಾಂಗೋ (ಇದು ಯಾವ ಕಾಂಗೋ ಅಂತ ಕೂಡ ಬರದಿಲ್ಲ, ಎರಡಿದೆಯಲ್ಲ! ಬಹುಶಃ ರಿಪಬ್ಲಿಕ್ ಆಫ್ ಕಾಂಗೋ) - ೬೨ ಅಲ್ಲ ೫೦ : Christian 50%, animist 48%, Muslim 2%

ಕೆಮರೂನ್ : ೩೫ ಅಲ್ಲ ೪೦ [Muslim centres and Christian churches of various denominations operate freely throughout Cameroon.... The country is generally characterized by a high degree of religious tolerance. [ indigenous beliefs 40%, Christian 40%, Muslim 20% ]

ಈಸ್ಟ್-ಟಿಮೋರ್‍ : ೯೮[ಕರೆಕ್ಟ್!] Roman Catholic 98%, Muslim 1%, Protestant 1% (2005)

ಈಕ್ವಟೋರಿಯಲ್ ಗಿನಿ : ಯಾರಿಗೂ ಗೊತ್ತಿಲ್ಲ. ಭೈರಪ್ಪನ ಬಿಟ್ಟು : ೯೪ ಅಂತೆ! [nominally Christian and predominantly Roman Catholic, pagan practices]

ಇಥಿಯೋಪಿಯ : ೫೨ ಅಲ್ಲ ೬೦ [ Christian 60.8% (Orthodox 50.6%, Protestant 10.2%), Muslim 32.8%, traditional 4.6%, other 1.8% (1994 census) ]

ಟಾನ್ಸೇನಿಯಾ : ೨೦ ಅಲ್ಲ ೩೦ [ mainland - Christian 30%, Muslim 35%, indigenous beliefs 35%; Zanzibar - more than 99% Muslim ] Current statistics on religion in Tanzania are unavailable because religious surveys were eliminated from government census reports after 1967. Religious leaders and sociologists estimate that the Christian and Muslim communities are equal, each accounting for 30 to 40 percent of the population,

ಟೊಗೊ : ೨೩ ಅಲ್ಲ ೨೯ [ Christian 29%, Muslim 20%, indigenous beliefs 51% ]

ಉಗಾಂಡಾ : ೭೦ ಅಲ್ಲ ೮೪ [ Roman Catholic 41.9%, Protestant 42% (Anglican 35.9%, Pentecostal 4.6%, Seventh Day Adventist 1.5%), Muslim 12.1%, other 3.1%, none 0.9% (2002 census)]

ಲೈಬೀರಿಯಾ ೬೮ ಅಲ್ಲ ೪೦ [ Christian 40%, Muslim 20%, indigenous beliefs 40% ]

ಮೊಜಾಂಬಿಕ್ :೩೧ ಅಲ್ಲ ೪೧ [ Catholic 23.8%, Muslim 17.8%, Zionist Christian 17.5%, other 17.8%, none 23.1% (1997 census) ]

ಕೆನ್ಯಾ:೨೫ ಅಲ್ಲ ೭೮! [Protestant 45%, Roman Catholic 33%, Muslim 10%, indigenous beliefs 10%, other 2%
note: a large majority of Kenyans are Christian, but estimates for the percentage of the population that adheres to Islam or indigenous beliefs vary widely] Christianity was first brought to Kenya in the fifteenth century by the Portuguese and spread rapidly during the nineteenth century, when it experienced a revival. Today, the main Christian denominations in Kenya are Protestant confessions, which make up 38% of the country's religious composition.

ಮೊಜಾಂಬಿಕ್ : ೩೧ ಅಲ್ಲ ೪೬ [ half of the population does not profess to practice a religion or creed ... There are 732 religious denominations and 144 religious organizations registered with the Department of Religious Affairs of the Ministry of Justice.]

ನೈಜೀರಿಯಾ : ೫೨ ಅಲ್ಲ ೪೦ - [Muslim 50%, Christian 40%, indigenous beliefs 10% ] ನೈಜೀರಿಯಾದಲ್ಲಿ ಕ್ರಿಶ್ಚಿಯನ್ - ಮುಸ್ಲಿಮ್ ಹೊಡದಾಟದ ನಡುವೆ ಕ್ರಿಸ್ಲಾಂ ಅಂತ ಇದೆಯಂತೆ! [Chrislam is a blend of Christianity and Islam that takes practises from both the Bible and the Koran. It hopes to quell religious feuds among Nigerians.]

ಫಿಲಿಪೀನ್ಸ್ : ೮೪ ಅಲ್ಲ ೮೮ (ಅದರ್‍ ಕ್ರಿಶ್ಚಿಯನ್ನರಿಗೆ ಬೇಜಾರಾಗಬಾರದಲ್ಲ...) [Roman Catholic 80.9%, Muslim 5%, Evangelical 2.8%, Iglesia ni Kristo 2.3%, Aglipayan 2%, other Christian 4.5%, other 1.8%, unspecified 0.6%, none 0.1% (2000 census)]

ರುವಾಂಡಾ : ೬೯ ಅಲ್ಲ ೮೭ : [ Roman Catholic 56.5%, Protestant 26%, Adventist 11.1%, Muslim 4.6%, indigenous beliefs 0.1%, none 1.7% (2001) ]

ದಕ್ಷಿಣ ಆಫ್ರಿಕಾ ೭೮ ಅಲ್ಲ ೪೪ + ೩೬ = ೮೦ (ಇಲ್ಲಿ ಅದರ್‍ ಕ್ರಿಶ್ಚಿಯನ್ನರೂ ಸೇರಿಸಿಕೊಂಡಿದ್ದಾರೆ! ಆದರೂ ತಪ್ಪು!)  [ Zion Christian 11.1%, Pentecostal/Charismatic 8.2%, Catholic 7.1%, Methodist 6.8%, Dutch Reformed 6.7%, Anglican 3.8%, Muslim 1.5%, other Christian 36%, other 2.3%, unspecified 1.4%, none 15.1% (2001 census)]

ಸುಡಾನ್ : ೩೦ ಅಲ್ಲ ೫ (ಇದ್ಯಾಕೋ ತುಂಬಾ ಎಡವಟ್ಟು!) [ Sunni Muslim 70% (in north), Christian 5% (mostly in south and Khartoum), indigenous beliefs 25% ] Christianity reached what is now northern Sudan by about the fourth century. During the 19th century, British missionaries introduced the faith into the South Sudan.

ಸೌತ್ ಕೊರಿಯ : ೪೯ ಅಲ್ಲ ೨೬  [Christian 26.3% (Protestant 19.7%, Roman Catholic 6.6%), Buddhist 23.2%, other or unknown 1.3%, none 49.3% (1995 census) ]

ಪಾಪುವ ನ್ಯೂ ಗಿನಿ : ೯೭ ಅಲ್ಲ ೯೯ ಆದರೆ ಕ್ರಿಶ್ಚಿಯನ್ನರೊಳಗೇ ಇರುವ ಹಲವು ಪ್ರಬೇಧಗಳನ್ನು ಕ್ಯಾರೆ ಅನ್ನದೆ ಒಟ್ಟಿಗೆ ಲೆಕ್ಕ ಹಾಕಬೇಕು. [Roman Catholic 27%, Evangelical Lutheran 19.5%, United Church 11.5%, Seventh-Day Adventist 10%, Pentecostal 8.6%, Evangelical Alliance 5.2%, Anglican 3.2%, Baptist 2.5%, other Protestant 8.9%, Bahai 0.3%, indigenous beliefs and other 3.3% (2000 census)]

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ : ೮೨ ಅಲ್ಲ ೫೦ [ indigenous beliefs 35%, Protestant 25%, Roman Catholic 25%, Muslim 15% note: animistic beliefs and practices strongly influence the Christian majority ]

ಜೈರೆ (zaire? ಇದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇರಬೇಕು!) ೯೦ ಅಲ್ಲ ೯೪ [Roman Catholic 50%, Protestant 20%, Kimbanguist 10%, Muslim 10%, other (includes syncretic sects and indigenous beliefs) 10% ] The number of persons who can be categorized as belonging exclusively to one group or another is limited. Overlapping affiliations are more common... In the search for spiritual resources, the Congolese have frequently displayed a marked openness and pragmatism... Protestant churches are valued, as are their Catholic counterparts, not only for the medical and educational services they provide, but also for serving as islands of integrity in a sea of corruption.  ಆದರೆ ಜೈರೆ ಅಂತ ಒಂದು ದೇಶವೇ ಈಗಿಲ್ಲ! ಸುಮಾರು ಹನ್ನೊಂದು ವರ್ಷದ ಹಿಂದೆಯೇ ಅದಕ್ಕೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಂತ ನಾಮಕರಣವಾಗಿದೆ. ಇದು ಭೈರಪ್ಪನವರ ದಿವ್ಯಮತಿಗೆ ಗೊತ್ತಿಲ್ಲದೇ ಇದ್ದೀತೆ?

ಮೇಲಿನ ಅಂಕಿ ಅಂಶದ ತಪ್ಪುಗಳು ಅವರ ವಾದಕ್ಕೆ ತೊಂದರೆ ಏನೂ ಮಾಡಲ್ಲ, ಬಿಡಿ. ಕತ್ತೆಗೆ ಮೂರೇ ಕಾಲು ಅಂದುಕೊಂಡೇ ಅವರು ಸಾಧಿಸೋಕೆ ಹೊರಟಿರೋದನ್ನ ಸಾಧಿಸಿಬಿಡಬಹುದು! ಆದರೂ, ಅಲ್ರಿ, ಸತ್ಯದ ದೃಷ್ಟಾರ ಬರೆದಿರುವ ಅಂಕಿ-ಅಂಶ ಆಧಾರಿತ ಲೇಖನದಲ್ಲಿ ಸುಳ್ಳು, ತಪ್ಪು ಇರೋಕೆ ಸಾಧ್ಯನ? ಅವರ integrity ಬಗ್ಗೆ ಒಂದು ಚೂರಾದರೂ ಗೌರವ ವಿಶ್ವಾಸ ಇರಕೂಡದ? ಒಂದು ಪ್ಯಾರಾದಲ್ಲೇ ಇಷ್ಟೆಲ್ಲ ಸುಲಭದ ತಪ್ಪುಗಳು ಇರೋವಾಗ ಭೈರಪ್ಪ ತಮ್ಮ ಮಾತುಗಳನ್ನು ತೂಗಿ ಆಡ್ತಾರೆ ಅಂತೀರ? ತಮ್ಮ ವಿಷಯದ ಬಗ್ಗೆ ಕೊಂಚನಾದರೂ ಗಂಭೀರವಾದ ಕಾಳಜಿ, ಚಿಂತನೆ ಇದ್ದಿದ್ದರೆ, ಇಂತಹ ಕ್ಷುಲ್ಲಕ ತಪ್ಪುಗಳು ಯಾರಾದರೂ ಮಾಡ್ತಾರ? ಇದು ಕನ್ನಡದ ಜನಪ್ರಿಯ ಪೇಪರಿನಲ್ಲಿ ಬಂದಿರೋ ಕನ್ನಡದ ಜನಪ್ರಿಯ ಲೇಖಕರು ಬರೆದಿದ್ದು ಅಂತ ನಿಮ್ಮ ಮಕ್ಕಳಿಗೆ ಗೊತ್ತಾದರೆ, ಅವರು ಆಮೇಲೆ ಕನ್ನಡ ಓದೋದೆ ಬಿಟ್ಟುಬಿಟ್ಟಾರು. ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪ "ಓದುಗರನ್ನು ಉತ್ಪಾದನೆ ಮಾಡಿದವರು" ಅಂತ ಹೇಳಿಕೊಳ್ಳೋರಿಗೆ ಇದು ಕುಚೋದ್ಯ ಅನಿಸಬಹುದು. ನಿಜ, ಭೈರಪ್ಪ ಕವಾಯತು ಮಾಡಿಸಿದ ಸೈನ್ಯ ಬೆಂಗಾವಲಿಗೆ ಇರೋದು ಅವರ "ಉತ್ಪಾದನೆ"ಯ ಫಲಕ್ಕೆ ಸಾಕ್ಷಿ ಅಲ್ಲವೆ?

ಇನ್ನೂ ಬೇಕಾದಷ್ಟು "%ನ ಸತ್ಯಗಳು" ಅಲ್ಲಿವೆ. ಅದರ ಬಗ್ಗೆ ನೀವೇ ಒಂದು ಚೂರು ಟೈಮಿದ್ದರೆ ನೋಡಿ. ಆದರೂ ಇನ್ನೊಂದು ವಿಷಯ: "ಹಿಟ್ಲರ್ಸ್ ಪೋಪ್" ಪುಸ್ತಕದ ಬಗ್ಗೆ ಬೇರೆ ಕೂಗಿದಾರೆ. ಅದರ ಬಗೆಗಿನ ಅನುಮಾನಗಳು ಎಷ್ಟು ದಟ್ಟವಾಗಿದೆಯೆಂದರೆ, ಆ ಪುಸ್ತಕದ ಲೇಖಕನೇ ಹಿಂದೇಟು ಹಾಕಿದ್ದಾನೆ. ಆದರೆ, ಭೈರಪ್ಪನವರು ಅದನ್ನು ಹಿಡಿದು ಕಿರುಚುತಾನೇ ಇದ್ದಾರೆ! ಇನ್ನು ಕಾನ್ರಾಡ್  ಎಲ್ಸ್‌ಟ್ / ಗೋತಿಯೆ / ಎನ್.ಎಸ್.ರಾಜಾರಾಂ - ದ ಫ್ರಾಡ್ (ಈ ಸಲ ಫ್ರಾಲಿನ ಯಾಕೋ ಬಿಟ್ಟುಬಿಟ್ಟಿದ್ದಾರೆ) ಇವರ ಬಗ್ಗೆ ನೀವೇ ಓದಿಕೊಳ್ಳಿ. ಇವರೆಲ್ಲರ ಪರವಾಗಿ ಬೇಕಾದಷ್ಟು ಜನ ಸದ್ದು ಮಾಡ್ತಿದ್ದಾರೆ. ಆದರೆ ಸವಾಲೆಸದೋರು ಬೇಕಂತಂದರೆ ತುಸು ಹುಡುಕಬೇಕು.

ನಾನಿಷ್ಟು ನೋಡಿದ್ದೀನಿ. ನೀವಷ್ಟು ನೋಡಿಕೊಳ್ಳಿ.

ಅಂದ ಹಾಗೆ, ಭೈರಪ್ಪನವರ ಲೇಖನ ಮಕ್ಕಳ ಕೈಗೆ ಸಿಕ್ಕದ ಹಾಗೆ ನೋಡಿಕೊಳ್ಳಿ, ಗುಡ್ ಲಕ್! :)

Wikipedia: http://en.wikipedia....
World Fact Book: https://www.cia.gov/...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

rameshbalaganchi's picture

ಅನಿವಾಸಿಗಳೆ,

ನಿಮ್ಮ ಸಂಶೋಧನೆಗಾಗಿ ಧನ್ಯವಾದಗಳು. ಆದರೆ ಇದರಿಂದ ಪ್ರಪಂಚ ನೆಟ್ಟಗಾಗತ್ತೆ ಅನ್ನೋ ಭರವಸೆ ಏನೂ ಇಟ್ಕೋಬೇಡಿ. ಎರಡೂ ಪಕ್ಷಗಳು ಮತ್ತು ಅವುಗಳ ಕೈಂಕರ್ಯ ಮಾಡುವವರಿಗೆ ಬೇಕಾಗಿರೋದು ನಿಜ ಅಲ್ಲ. ತಮ್ಮ ತಮ್ಮ ನಿಲುವಿಗೆ ಅಂಟಿಕೊಳ್ಳೋಕ್ಕೆ ಅವರು ಇಟ್ಟುಕೊಂಡಿರುವ ಸಾಹಿತಿಗಳು ಹೇಳುವುದಷ್ಟೇ ( ಸುಳ್ಳೋ ನಿಜವೋ ಯಾರಿಗೆ ಬೇಕು?) ಅವರಿಗೆ ಬೇಕು. ಅದೇ ಅವರಿಗೆ ultimate reality.

"ಏರಿದವನು ಚಿಕ್ಕವನಿರಬೇಕು"

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ರಮೇಶರೆ,
ಅಯ್ಯೋ ಅಷ್ಟೊಂದು ನಿರಾಶೆ ಯಾಕೆ :) ಭೈರಪ್ಪನವರ ಮಾತುಗಳಿಂದ ಬೇಸತ್ತ ಹಲವರನ್ನು ಕಂಡಿದ್ದೇನೆ. ಅಂದ ಹಾಗೆ, ಇದು ಸಂಶೋಧನೆ ಏನಲ್ಲ. ಮತ್ತು ಇದೊಂದರಿಂದ ಏನೂ ಆಗುವುದಿಲ್ಲ. ಹಾಗಂತ, ಸುಮ್ಮನಿರಲು ಆದೀತೆ? :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

kadakolla05's picture

ವಿಕಿ ಪೀಡಿಯ ಹಾಗು ವರ್ಡ್ಲ ಪ್ಯಾಕ್ಟ್ ನ ಅಂಕಿ ಅಂಶಗಳು ಸರಿಯೆಂದು ನಿಮಗೆ ಯಾರು ಹೇಳಿದ್ದು? ಅಶ್ಟಕ್ಕೂ ಬೈರಪ್ಪನನ್ನು ಅಲ್ಲಗಳೆಯಲೇ ಬೇಕೆನ್ನುವಂತಿದೆ ನಿಮ್ಮ ಉದ್ದೇಶ. ಅಂಕಿ ಅಂಶ ತಪ್ಪಿರಲೂ ಬಹುದು ಆದರೆ ಅವರ ವಾದ ಸರಿ ಇದೆ. ಜೊತೆಗೆ ಒಂದು ಮಾತು.ಆದರೆ ಬೈರಪ್ಪನ ಬೀಜೇಪಿ ಓಲೈಕೆ ತಪ್ಪು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರೇನು ಏಸುವುದಿಲ್ಲ. ಬೇಕಾದರೆ ಅವರು ನಾಡನ್ನು ಕಾಲ ಕಸವಾಗಿ ಕಾಣಲಿಕ್ಕೂ ಹೇಸರು.

ನಾನು ಬೈರಪ್ಪನ ಕೈವಾರಿಯಲ್ಲ.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

kadakolla05ರವರೆ,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ನಾನು ಕೊಟ್ಟ ಅಂಕಿ-ಅಂಶಗಳು ತಪ್ಪಿರಬಹುದು. ನನ್ನ ಮೂಲ ತಿಳಿಸಿದ್ದೇನೆ. ತಪ್ಪಿದ್ದರೆ, ಯಾವ ಮೂಲದಿಂದ ಎಂದು ತಿಳಿಸಿ. ಅಥವಾ ಭೈರಪ್ಪನವರ ಮೂಲ ಯಾವುದು ಎಂದು ಗೊತ್ತಿದ್ದರೆ ತಿಳಿಸಿ. ಅದು ಹೇಗೆ ಸರಿ ಎಂದು ತಿಳಿಸಿ. ತಾಳೆ ಹಾಕಿ ತಿದ್ದಿಕೊಳ್ಳುತ್ತೇನೆ :)
ಅಂಕಿ-ಅಂಶ ತಪ್ಪಿದ್ದೂ ವಾದ ಸರಿ ಇರಬಹುದ? :) ಓಕೆ.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

ಅನಿವಾಸಿಯವರೇ...

ನೀವು ಹೇಳಿದ ಮೇಲೆ ನಾನೂ ಅಂಕಿ-ಅಂಶ ಹುಡುಕಿದೆ.

ಭೈರಪ್ಪನವರು ಇಲ್ಲಿನ:
http://www.christian...

ಅಂಕಿ-ಅಂಶಗಳನ್ನು ಯಥಾವತ್ತಾಗಿ ಬಳಸಿಕೊಂಡಂತಿದೆ...

--ಶ್ರೀ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

ನಿಂಮ ಲಿಂಕಲ್ಲಿ ಚೀಣಾ ಕ್ರಿಶ್ಚಿಯನ್ ದೇಶ!? :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

> ನಿಂಮ ಲಿಂಕಲ್ಲಿ...

:) ಅದು ನನ್ನದಲ್ಲರೀ...ಇಂಟರ್‍ನೆಟ್ ನಲ್ಲಿ ಸಿಕ್ಕಿದ್ದು...
ಚೈನಾ ದೇಶದ ಜನಸಂಖ್ಯೆ ೧೩೩೦ ಮಿಲಿಯನ್ ಅಲ್ವಾ? ಅದರಲ್ಲಿ ೧೦೦ ಮಿಲಿಯನ್ ಕ್ರಿಶ್ಚಿಯನ್ ಇರಬಹುದು...
ಚೈನಾಗೆ ಹೋದವರನ್ನ ಕೇಳಬೇಕು...

--ಶ್ರೀ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

ಅದರಲ್ಲಿ ೧೦೦ ಮಿಲಿಯನ್ ಕ್ರಿಶ್ಚಿಯನ್ ಇರಬಹುದು...
ಚೈನಾಗೆ ಹೋದವರನ್ನ ಕೇಳಬೇಕು...

:) ಹೋದವರನ್ನು ಕೇಳದೇ ಮೊದಲನೆಯ ಸಾಲು ಹೇಳಿದ್ದೇ? :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

ಮೇಲಿನ ಇಡೀ ಬರಹ ವಿಕೀಪೀಡಿಯ ಆಧಾರದ ಮೇಲೆ ನಿಂತಿದೆ...!!!!

ಅನಿವಾಸಿಯವರ ಬರಹದಿಂದ:
"ಅವರ integrity ಬಗ್ಗೆ ಒಂದು ಚೂರಾದರೂ ಗೌರವ ವಿಶ್ವಾಸ ಇರಕೂಡದ? ಒಂದು ಪ್ಯಾರಾದಲ್ಲೇ ಇಷ್ಟೆಲ್ಲ ಸುಲಭದ ತಪ್ಪುಗಳು ಇರೋವಾಗ ಭೈರಪ್ಪ ತಮ್ಮ ಮಾತುಗಳನ್ನು ತೂಗಿ ಆಡ್ತಾರೆ ಅಂತೀರ?"

ಅನಿವಾಸಿಯವರೂ ಅವರೇ ಬಳಸಿದ ಅಂಕಿಗಳಲ್ಲಿ, 1995, 1997, 2001 ಹೀಗೆ ಹೇಳಿದ್ದಾರೆ...!!! ಒಮ್ಮೆ ಯೋಚಿಸಿ... :)
ಅನಿವಾಸಿಯವರು ವಿಕೀಪೀಡಿಯ ಬಳಸಿದರೆ, ನಾನು ಈ ಕೊಂಡಿ ಕೊಟ್ಟೆ ಅಷ್ಟೆ...

ಇಲ್ಲಿ ನಾನು ನಿಜ ಯಾವುದು ಸುಳ್ಳು ಯಾವುದು ಎಂಬ ನಿಲುವನ್ನು ತಳೆದಿಲ್ಲ...
ಅನಿವಾಸಿಯವರು ಇಂಟರ್‍ನೆಟ್ ಬಳಸಿದಂತೆ ನಾನೂ ಬಳಸಿಕೊಂಡೆ ಅಷ್ಟೆ :) ಇಲ್ಲಿಗೆ ಕಥೆ ಮುಗಿಯಿತೂ...

--ಶ್ರೀ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

ಅನಿವಾಸಿಯವರು ಬರೀ ವಿಕೀಪಿಡಿಯ ತೋರಿಸಿಲ್ಲ https://www.cia.gov/... ಇದು ಕೂಡ ಇದೆಯಲ್ಲ.

ಆದರೆ ಗಮನಿಸಿರಿ.. ಅನಿವಾಸಿಯವರು ಯಾವ ಪತ್ರಿಕೆಯಲ್ಲೂ ತಮ್ಮ ಬರಹ ಹೊರತಂದಿಲ್ಲ..

ಆದರೆ ವಿಕ ಬಯ್ರಪ್ಪರ ಬರಹವನ್ನು ಮೊದಲ ಪುಟದಲ್ಲೇ ಹಾಕಿತ್ತು.. ಹಾಗು ಬಯ್ರರ ಅಂಕಿ-ಅಂಶಗಳ ಆದಾರ ಪ್ರಶ್ನಿಸಬಹುದಾಗಿತ್ತು.. ಇದು ಸರಿಯಲ್ಲ ಎಂಬುದು ಅನಿವಾಸಿಗಳು ಹೇಳ್ತಾ ಇರೋದು..

ಇಬ್ಬರ ಅಂಕಿ-ಅಂಶಗಳು ಬರೀ ಊಹೆ.. ಆದರೆ ಅನಿವಾಸಿ ಒಂದು ಬ್ಲಾಗ್ ಬರೆದುಕೊಂಡರೇ, ಬಯ್ರಪ್ಪರ ಬರಹವನ್ನು ಮೊದಲ ಪುಟದಲ್ಲಿ ವಿಕ ಹೊರತಂದಿದೆ..

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

ನೀವು ಹೇಳುವುದು ನಿಜವೇ...
ಆದರೆ fact book ಆಗಲಿ, ಯಾವುದೇ ಸರ್ಕಾರಿ ಅಂಕಿ-ಅಂಶಗಳಾಗಲಿ ಜನಗಣತಿ ಮಾಡಿದ ವರ್ಷದ ಅಂಕಿ-ಅಂಶ ಮಾತ್ರ ತೋರುತ್ತದೆ...
ಇಲ್ಲಿ ಅನಿವಾಸಿಯವರು ಯಾರನ್ನೂ ತಪ್ಪು ದಾರಿಗೇನು ಎಳೆದಿಲ್ಲ..ಆದರೆ 1995, 1997 ಅಂಕಿಗಳು ನಿಜ ಪರಿಸ್ಥಿತಿಗಿಂತ ಬಹಳಷ್ಟು ವ್ಯತ್ಯಾಸವಾಗಿರಬಹುದು ಎಂಬುದಕ್ಕೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಮತಾಂತರವೇ ಸಾಕ್ಷಿ...
ಇಲ್ಲಿ ಈ ಲೇಖನ ಓದುವವರು, ಈ ಎರಡು ಮಾಹಿತಿಯನ್ನು ಮನಸ್ಸಿನಲ್ಲಿರಸಲಿ ಎಂಬುದಕ್ಕೆ ಆ ಕೊಂಡಿ ಕೊಟ್ಟೆ...

--ಶ್ರೀ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಶ್ರೀ,
ಕೊಂಡಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್.
ಭೈರಪ್ಪನವರ ಲೇಖನದ ಮುಂದಿನ ಭಾಗ ನೀವು ಕೊಟ್ಟ ಪೇಜಿನ ಕೆಳಗಿನ ಮಾಹಿತಿಯ ಕನ್ನಡೀಕರಣವೇ! ಭೈರಪ್ಪ ಆ ವೆಬ್‌ಸೈಟಿಗೆ ಕ್ರೆಡಿಟ್ ಕೊಡಬೇಕಿತ್ತು, ಅಲ್ವ? :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

ಅನಿವಾಸಿಯವರೇ,
ಹೌದು ನಿಜ, ಅವರು ಕ್ರೆಡಿಟ್ ಕೊಡಬೇಕಿತ್ತು...ಹಾಗೆ ಪ್ರಕಟಿಸುವುದು ತಪ್ಪು...
--ಶ್ರೀ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

sb1966's picture

ಪರೀಕ್ಷೆಯಲ್ಲಿ ಫೇಲಾಗುವುದಕ್ಕೆ ನೀವೇನೂ ಭೈರಪ್ಪನವರನ್ನ ನಂಬಿಕೊಳ್ಳಬೇಕಿಲ್ಲ. ಸರಿಯಾಗಿ ಓದದೇ ಕಾಲಹರಣ ಮಾಡಿದರೆ ಸಾಕು!! ನೀವು ಭೈರಪ್ಪನವರನ್ನು ವಿರೋಧಿಸಬೇಕೆಂದಿದ್ದರೆ ನೇರವಾಗೇ ಆರೋಪಿಸಬಹುದಿತ್ತಲ್ಲಾ!ತಲೆಬರಹ ಈ ರೀತಿ ಬರೆದು ನಂತರ ನೂರೆಂಟು %ಗಳನ್ನ ತೋರಿಸಿ ಅವರು ತಪ್ಪು ಅಂತ ಹೇಳಬೇಕಿಲ್ಲ. ೯೭ ಅಲ್ಲ ೯೯,೭೮ ಅಲ್ಲ ೪೪ + ೩೬ = ೮೦ , ೮೪ ಅಲ್ಲ ೮೮ ಮತ್ತೆ ೩೧ ಅಲ್ಲ ೪೬ - ನನಗಂತೂ ನೀವು ಏನನ್ನ ಹೇಳುತ್ತಿದ್ದೀರೆಂದು ಅರ್ಥವಾಗಲಿಲ್ಲ! ನೀವು ಅವರ ವಿಚಾರವನ್ನ ವಿರೋಧಿಸುತ್ತಿದ್ದೀರೋ ಅಥವಾ ಅಂಕಿ, ಅಂಶಗಳನ್ನೋ! ಅಥವಾ....

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಅಥವಾ.... ಏನು? ಕೊಶ್ಚನ್ ಕಂಪ್ಲೀಟ್ ಮಾಡಿ! :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

ಅನಿವಾಸಿಗಳೇ ಪಾಪಾ ಅವರಿಗೆ ಬರಹ ಅರ್ತ ಆಗದೇ ಇದ್ದರೂ ಕಮೆಂಟು ಬರೆದಿದ್ದಾರೆ :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಅವರೊಬ್ಬರೇ ಅಲ್ಲ... :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

ಹಾಗಾ.. ಪಾಪಾ! :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

harshab's picture

ನಿಮ್ಮ ಈ ಸಾಲಂತು ಅರ್ಥ ಆಗ್ಲಿಲ್ಲ:

""ಇದು ಕನ್ನಡದ ಜನಪ್ರಿಯ ಪೇಪರಿನಲ್ಲಿ ಬಂದಿರೋ ಕನ್ನಡದ ಜನಪ್ರಿಯ ಲೇಖಕರು ಬರೆದಿದ್ದು ಅಂತ ನಿಮ್ಮ ಮಕ್ಕಳಿಗೆ ಗೊತ್ತಾದರೆ, ಅವರು ಆಮೇಲೆ ಕನ್ನಡ ಓದೋದೆ ಬಿಟ್ಟುಬಿಟ್ಟಾರು.""

""ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.""
ನಿಮ್ಮ ಬ್ಲಾಗಿನ ಟೈಟಲ್ ಅಂತು, ಏನಂತಾ ದೇವರಾಣೆಗೂ ಅರ್ಥ ಆಗ್ಲಿಲ್ಲ. ಇಲ್ಲಿ ಯಾರು ಯಾವ ಪರೀಕ್ಷೆನ, ಭೈರಪ್ಪನ್ನವರನ್ನ ನಂಬಿಕಂಡು ಬರ್ದಿದಾರೆ? ಬರಿತಿದಾರೆ ?

""ಸಹಾಯಕ್ಕೆ ವಿಕೀಪಿಡಿಯಾ ["ಬಡವರ ಎನ್ಸೈಕ್ಲೋಪೀಡಿಯ"], ಅಲ್ಲದೆ world factbook ಕೂಡ ಆನ್‌ಲೈನ್ ಇದೆ.""
ಇಲ್ಲಿ ಕೊಟ್ಟಿರೋದು ಸರಿ ಅಂತ ಹೆಂಗೆ ಹೇಳ್ತಿದಿರೋ, ಗೊತ್ತಿಲ್ಲಾ?

"ಆದರೆ, ಭೈರಪ್ಪನವರು ಅದನ್ನು ಹಿಡಿದು ಕಿರುಚುತಾನೇ ಇದ್ದಾರೆ!"

ಅಂದ ಹಾಗೆ ತಾವು ಯಾಕೆ ಈ ಪಾಟಿ %% ಅಂತ ಅರಚಾಡ್ತಿದಿರೋ, ಗೊತ್ತಾಗೋದು ಬ್ಯಾಡ ಬಿಡಿ...

""ಅಂದ ಹಾಗೆ, ಭೈರಪ್ಪನವರ ಲೇಖನ ಮಕ್ಕಳ ಕೈಗೆ ಸಿಕ್ಕದ ಹಾಗೆ ನೋಡಿಕೊಳ್ಳಿ, ಗುಡ್ ಲಕ್! ""

ಇದನ್ನ ಓದಿ, ಇನ್ನ ನಗ್ತಿದೀನಿ, ನೋಡಿ ಸ್ವಾಮೀ.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

harshabರವರೆ,
ಅರ್ಥ ಆಗ್ಲಿಲ್ಲ, ಗೊತ್ತಿಲ್ಲ, ಗೊತ್ತಾಗೋದು ಬ್ಯಾಡ. ಆದರೂ ನಗ್ತಿದೀರ - ನೀವು ನಿಜವಾಗಲೂ ಅದೃಷ್ಟವಂತರು. ನಗಿ :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

varunbhatbm's picture

ಭೈರಪ್ಪನವರಂತೂ ಏನೋ ಒಂದು ಪ್ರೂವ್ ಮಾಡೋಕೆ ಲೇಖನ ಬರೆದ್ರು..
ನೀವು ಏನಕ್ಕೆ ಈ ಲೇಖನ ಬರೆದಿದ್ದೀರಾ ಅಂತ ಖಂಡಿತ ನನಗೆ ಗೊತ್ತಾಗಿಲಿಲ್ಲ...

-ವರುಣ್ ಭಟ್
http://varunbhat.name

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಹ.. ಹ.. ignorance is bliss - ಅಂತಾರೆ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

varunbhatbm's picture

ಧನ್ಯವಾದಗಳು..
ಸ್ವಲ್ಪ ಜ್ಞಾನ ಸಂಪಾದಿಸೋಕೆ ಪ್ರಯತ್ನ ಪಡ್ತೀನಿ.. :)

-ವರುಣ್ ಭಟ್
http://varunbhat.name

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಜ್ಞಾನವಿದ್ದರೆ ಸಾಕೆ? ತಿಳುವಳಿಕೆ/understanding ಇದ್ದರೆ ಒಳಿತಲ್ಲವೇ?
ಬೈರನ್ (ಭೈರಪ್ಪ ಅಲ್ಲ) ಮಾತು ಗೊತ್ತಲ್ಲ - The tree of knowledge is not that of life. :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

varunbhatbm's picture

ಅವೆರಡೂ ಒಂದೇ ಎಂದು ನನಗನ್ನಿಸುತ್ತೆ..

-ವರುಣ್ ಭಟ್
http://varunbhat.name

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

harshaperla's picture

ಅನಿವಾಸಿಗಳ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಸಂಪದ ಪುಟವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ತೆರೆದಿಡಬೇಡಿ. ಕನಿಷ್ಟ ನಿಮ್ಮ ಮಕ್ಕಳು ಓದದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.
ಅವರ ಲೇಖನಗಳಲ್ಲಿನ ಕೆಲವು ತಪ್ಪುಗಳು:

>> ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ
ಇಲ್ಲ, ಕ್ರಿಶ್ಚಿಯನ್ನರ ವಿರುದ್ಧ ಬರೆದಿದ್ದರು.

>>ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ
ಅವರ ಲೇಖನ ಪ್ರಕಟವಾಗಿದ್ದು ಮೊನ್ನೆ ಅಲ್ಲ, ಅಕ್ಟೊಬರ್ ೧೬ರಂದು.

>>ಎಲ್ಲಾ ಧರ್ಮದ ದೋಸೇನೂ ತೂತು
ತಪ್ಪು. ಹಿಂದು ಧರ್ಮದಲ್ಲಿ ತೂತುರಹಿತ ದೋಸೆಗಳೂ ಇವೆ.

>>ಉಸಿರು ಬಿಗಿಹಿಡಿದು ಬರೆದ, ಕಾಮ, ಕೋಲನ್, ಸೆಮಿಕೊಲನ್ ಇಲ್ಲದ ಉದ್ದುದ್ದ ಪ್ಯಾರಾಗ್ರಾಫ್
ಅವರು ಉಸಿರು ಬಿಗಿ ಹಿಡಿದು ಬರೆದಿಲ್ಲ, ಕೆಲವು ದಿನಗಳೇ ತೆಗೆದುಕೊಂಡಿದ್ದರು. ಅಷ್ಟು ಸಮಯ ಉಸಿರು ಬಿಗಿಹಿಡಿದಿದ್ದರೆ ಸಾಯುತ್ತಿದ್ದರು.

>>ಆಮೇಲೆ ಹತ್ತಾರು %ಗಳು ಒಂದೇ ಪ್ಯಾರಾದಲ್ಲಿ ಕಿಕ್ಕಿರಿದಿದ್ವು.
ಅದು ಹತ್ತಾರು ಅಲ್ಲ, ೨೪

ಯಾವುದೇ ದೇಶದ ಜನಸಂಖ್ಯೆಯನ್ನು ನಿಖರವಾಗಿ ವಿಂಗಡಿಸಲು ಸಾಧ್ಯವಿಲ್ಲ. ಭಾರತದ ಕ್ರಿಶ್ಚಿಯನ್ನರು ೨.೩% ಅಂತ ನಿಮ್ಮ ಸತ್ಯದ ಮೂಲವಾದ ವಿಕಿಪೀಡಿಯ ಹೇಳುತ್ತದೆ. ಆದರೆ ಅನಧಿಕೃತ ಕ್ರಿಶ್ಚಿಯನ್ನರು ಎಷ್ಟೆಂದು ನಿಮಗೆ ಗೊತ್ತೆ?
ಅವರ ಅಂಕಿ ಅಂಶಗಳ ಬದಲು ವಿಚಾರದ ಬಗ್ಗೆ ಮಾತಾಡಿ, ಅಲ್ಲಿ ಅವರು ಪ್ರತಿಪಾದಿಸುತ್ತಿರುವುದು ಒಂದು ವಿಚಾರವನ್ನು. ಆ ಸಂಖ್ಯೆಗಳ ಬದಲು ನೀವು ತಿಳಿಸಿದ "ಸತ್ಯ" ಅಂಕಿ ಅಂಶ ಸೇರಿಸದರೂ ವಾದಕ್ಕೇನೂ ಪರಿಣಾಮವಾಗುವುದಿಲ್ಲ. ಮುಂದಿನ ಬಾರಿ ಯಾವುದೇ ಅಂಕಿ ಅಂಶಗಳನ್ನು ಉಲ್ಲೇಖಿಸುವಾಗಲೂ ವಿಕಿಪೀಡಿಯಾವನ್ನೇ ಉಲ್ಲೇಖಿಸಿ ಎಂದು ಭೈರಪ್ಪನವರಿಗೆ ಪತ್ರ ಬರೆಯೋಣವಂತೆ.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

೧) "ಹಿಂದು ದರ್ಮ" ಅಂದರೇನು? ಮತ್ತು ಅದರ ತಿಯಾಲಜಿ ಏನು?
೨) "ಅನಧಿಕೃತ ಕ್ರಿಶ್ಚಿಯನ್ನರು" ಹೀಗಂದರೇನು? ಹಿಂದು ಎಂದು ಕರೆಸಿಕೊಳ್ಳುವರೆಲ್ಲ ಅದಿಕ್ರುತ ಹಿಂದುಗಳೇ? ಲಿಂಗಾಯತರು ಇವರಲ್ಲಿ ಹಲವರು ನಾವು ಬರೀ ಲಿಂಗಾಯತರು(ಬಸವ ದರ್ಮ) ಹಿಂದುಗಳಲ್ಲ ಎಂದು ಹೇಳಿದ್ದಾರೆ. ಅದಿಕ್ರುತ ಹಿಂದುವಿನ ಲಕ್ಶಣವೇನು? ಯಾವ ಕ್ರಯ್ಟೀರಿಯದ ಮೇಲೆ ಕ್ರಿಶಿಯನ್ ಇಲ್ಲವೇ ಹಿಂದೂ ಆಗ್ತಾರೆ?

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

http://sampada.net/f...

ಇಲ್ಲಿ ನಮಗೆ ಜ್ನಾನಮಾರ್ಗ ತೋರಿಸಬೋದು.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ವೆಲ್ ಡನ್ harshaperla :)
>>ಅದು ಹತ್ತಾರು ಅಲ್ಲ, ೨೪
ಅದು ಟ್ರಿಕ್ಕು ಮಾತು ... % ಒಂದೂ ಇಲ್ಲ :) ಎಲ್ಲಾ ಶೇಕಡಗಳು!

>>ಅವರ ಅಂಕಿ ಅಂಶಗಳ ಬದಲು ವಿಚಾರದ ಬಗ್ಗೆ ಮಾತಾಡಿ, ಅಲ್ಲಿ ಅವರು ಪ್ರತಿಪಾದಿಸುತ್ತಿರುವುದು ಒಂದು ವಿಚಾರವನ್ನು.
ಅವರ ವಿಚಾರಕ್ಕೆ ತಳಹದಿಯಾಗಿ ಆ ಅಂಕಿ-ಅಂಶಗಳನ್ನು ಬಳಸಿದ್ದಾರೆ. ಅದು ಬೇಕಂತ ಅವರಿಗೆ ಅನಿಸಿದೆ ಅದಕ್ಕೆ ಹಾಕಿದ್ದರೆ.

>>ಆ ಸಂಖ್ಯೆಗಳ ಬದಲು ನೀವು ತಿಳಿಸಿದ "ಸತ್ಯ" ಅಂಕಿ ಅಂಶ ಸೇರಿಸದರೂ ವಾದಕ್ಕೇನೂ ಪರಿಣಾಮವಾಗುವುದಿಲ್ಲ
ಅದನ್ನು ಬರಹದಲ್ಲಿ ನಾನೇ ಹೇಳಿದ್ದೀನಿ. ಇನ್ನೊಂದು ಸಲ ನೋಡಿ. :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

keerthi2kiran's picture

Quote:
ಅವರು ಉಸಿರು ಬಿಗಿ ಹಿಡಿದು ಬರೆದಿಲ್ಲ, ಕೆಲವು ದಿನಗಳೇ ತೆಗೆದುಕೊಂಡಿದ್ದರು.

ಅಷ್ಟೆಲ್ಲಾ ಏನ್ ತಲೆ ಕೆಡ್ಸ್ಕೊಂಡಿಲ್ಲ. ಅವರು ಬರೆದಿರೋದೆಲ್ಲಾ ಈ ಕಡತದಲ್ಲಿದೆ. ಇದು ಮೆಯ್ಲ್ ನಲ್ಲಿ ಅವರು ಲೇಖನ ಬರೆಯೋದಕ್ಕೆ ೪ ದಿನ ಮುಂಚೇನೆ ಬಂದಿತ್ತು.
http://www.sdfglobal...

ಕೀರ್ತಿ ಕಿರಣ್ ಎಂ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

keerthi2kiranರವರೆ,

ಇಂತಹ pamphletಗಳನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇವೆ! ನಾನು ಚಿಕ್ಕವನಿದ್ದಾಗಲಿಂದಲೂ ಕೇಳಿದ ಮಾತು: ಇನ್ನೈದು ವರ್ಷಕ್ಕೆ ಇಂಡಿಯಾ ಮುಸ್ಲಿಮ್/ಕ್ರಿಶ್ಚಿಯನ್ (ಆ ಹೊತ್ತಿಗೆ ಯಾರ ಮೇಲೆ ಸಿಟ್ಟಿದೆಯೋ) ದೇಶವಾಗಿ ಹೋಗತ್ತೆ ಅಂತ. :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

mahesha's picture

ಅನಿವಾಸಿಗಳೇ,

ನಂನಿ......

ನೀವು ಹೇಳಿದ "ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ" ನಾವು ಆಗಲೇ ಮಾಡಿಯಾಗಿದೆ.. ಅದಕ್ಕೇ ನಾನು ’ಬೆಳಬೆಳಗ್ಗೆ ನ್ಯೂಸ್ ಪೇಪರ್‍ ಓದೋದೇ’ ಬೇಡ ಅಂದಿದ್ದು..

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಅರವಿಂದ್'s picture

ಅನಿವಾಸಿಯವರೆ, ನೀವು ಅಂಕಿ ಅಂಶ ಕೊಟ್ಟ ಪ್ರತಿ ಪುಟಗಳನ್ನು, ಹಾಗು ಅದರಲ್ಲಿ ಬರುವ ಉಪ ಪುಟಗಳನ್ನು ನೋಡಿದವರಿಗೆ, ತಲೆ ಬುಡ ಅರ್ಥವಾಗುತ್ತಿಲ್ಲ ( ಸಂಪದ ಸ್ನೇಹಿತರ ಅಬಿಪ್ರಾಯಗಳನ್ನು ಓದಿ), ಇಷ್ಟೆಲ್ಲಾ ಅಂಕಿ ಅಂಶಗಳ ಅವಶ್ಯಕತೆ ಬ್ಯೆರಪ್ಪನವರಿಗೂ ಬೇಡ, ಕ್ರಿಶ್ಚಿಯನ್ ಸಮುದಾಯಕ್ಕೂ ಬೇಡದ ವಿಚಾರ, ಆದರೆ ನಿಮ್ಮ ಅಭಿಪ್ರಾಯ ಎಷ್ಟು ಸರಿ ಎಂದು ಒಮ್ಮೆ ಯೋಚಿಸಿನೋಡಿ.

ದೇಶದ ಶಾಂತಿ, ಸಂಯಮದ ಮುಂದೆ ಈ ವಿಚಾರಗಳೆಲ್ಲ ನಗಣ್ಯ, ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸುವ ಹಕ್ಕು ಇದೆ, ಆದರೆ ಯಾರ ಅಸ್ತಿತ್ವದ ಕುರಿತು ವಿಡಂಬನೆ ಸರಿಯಲ್ಲ

ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
ಅರವಿಂದ್ ಎಚ್

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

keerthi2kiran's picture

ಆದ್ರೆ, ವಾದ ಮಂಡಿಸಕ್ಕೆ ತಪ್ಪು ತಪ್ಪು/ inaccurate ಅಂಕಿಅಂಶ ಕೊಡೋದು ಸರಿ ಅಲ್ಲ. ಹಾಗೇ ಅವರು ಲೇಖನದಲ್ಲಿ ಬರೆದಿರೋ ಇನ್ನೂ ಕೆಲವು ವಿಷಯಗಳು accurate ಆಗಿಲ್ಲ.

ಕೀರ್ತಿ ಕಿರಣ್ ಎಂ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

ಕೀರ್ತಿ,

ಅನಿವಾಸಿಯವರು ಕೊಟ್ಟ ಅಂಕಿ-ಅಂಶಗಳಲ್ಲಿ ಯಾವುದು ಸರಿಯಿಲ್ಲ ಎಂದು ಬೆಟ್ಟು ಮಾಡಿ ತೋರಿ, ಮತ್ತು ಸರಿ ಯಾವುದು ಎಂದು ಪುರಾವೆ ಸಹಿತ ತಿಳಿಸಿ...
ಅನಿವಾಸಿಯವರು ಎಲ್ಲಿಂದ ಅಂಕಿ-ಅಂಶ ತೆಗೆದುದಾಗಿ ಈಗಾಗಲೆ ತಿಳಿಸಿದ್ದಾರೆ...

--ಶ್ರೀ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಶ್ರೀ,
ಕೀರ್ತಿಯವರು ಭೈರಪ್ಪನವರ ಲೇಖನದ ಬಗ್ಗೆ ಹೇಳಿದ್ದಾರೆ ಎಂದು ಕಾಣುತ್ತದೆ :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

srinivasps's picture

ಓಹ್ ಹಾಗೆ... :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

keerthi2kiran's picture

ನಾನು ಹೇಳಿದ್ದು ಭೈರಪ್ಪನವರು ಸರಿಯಾದ ಅಂಕಿ ಅಂಶ ಕೊಟ್ಟಿಲ್ಲ ಅಂತ (ನಾನು ಅನಿವಾಸಿಗಳ ಪರ ಇದೀನಿ. ವಿರುದ್ಧ ಅಲ್ಲ).
ಬೇರೆ ಬೇರೆ ಮೂಲಗಳು ಬೇರೆ ಬೇರೆ ಅಂಕಿ ಅಂಶ ಕೊಡ್ತಿವೆ. ಹಾಗಾಗಿ ಇವರು ಸರಿ, ಇವರು ತಪ್ಪು ಅಂತ ಹೇಳಕ್ಕಗಲ್ಲ. ಮತ್ತೆ ಅಂಕಿ ಅಂಶಗಳ್ನ ವಾದಕ್ಕೆ ಬಳಸೋದೂ ತಪ್ಪಾಗತ್ತೆ.
ಕೀರ್ತಿ ಕಿರಣ್ ಎಂ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಅರವಿಂದ್,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
>>ಆದರೆ ನಿಮ್ಮ ಅಭಿಪ್ರಾಯ ಎಷ್ಟು ಸರಿ ಎಂದು ಒಮ್ಮೆ ಯೋಚಿಸಿನೋಡಿ.
ನಿಮ್ಮ ಅಭಿಪ್ರಾಯ ಏನು ಎಂದು ಬಿಡಿಸಿ ಹೇಳಿದರೆ ಒಳ್ಳೆಯದು. ಅಂಕಿ-ಅಂಶ ನಂತರದ ಲೇಖನದ ಕೊನೆಯ ಭಾಗವನ್ನು ಓದಿದಿರ?

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಸಂಗನಗೌಡ's picture

ಆಂದ್ರದಾಗ, ಕ್ರಿಸ್ಚಿಯಾನಿಟಿ ಹರಡಾಕಂತನss, ಟಿ.ವಿ. ಚಾನೆಲ್ ಒಂದ್ ಮಾಡಕೊಂಡಾರss,.. ಸುಮ್ಮs.. ನಿಮಗೆಲ್ಲ ಸಂಗತಿ ತಿಳಸಾಕ ಹೇಳಿದ್ನಿ...

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಜನ ಹೆಚ್ಚೆಚ್ಚು ಧರ್ಮಿಷ್ಠರಾದರೆ ಒಳ್ಳೇದೇ ಅಲ್ಲವಾ ಸಂಗನ? :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

muralihr's picture

ಭೈರಪ್ಪಾ ಬೇರೆ ದೇಶದ ಪಾಪುಲೇಷನ್ ಕೌ೦ಟ್ ತೆಗೆದುಕೊಳ್ಳುವ ಬದಲಿ
ನಮ್ಮ ದೇಶದಲ್ಲೇ ತಗೊ೦ಡಿದ್ದರೆ - ನಾವೇ vErify ಮಾಡ್ ಬಹುದಾಗಿತ್ತು.

ನೋಡ್ರಿ - ನೀವು ಶ್ರೀ ಶೈಲದಲ್ಲಿ ಒಮ್ಮೆ ಹೋಗಿ ನೋಡಿ.ಅದು ಪುರಾತನ ಶಿವ ಕ್ಷೇತ್ರ.
ಸರ್ಕಾರ "ಪ್ರಾಜೆಕ್ಟ್ ಟೈಗರ್ " ಮಾಡಿದ್ದೇ ಕ್ಷಣ, ಅಲ್ಲಿ ನಮ್ಮ ಚರ್ಚ್ ಗಳು ಧಾಳಿ ಇಟ್ಟವು.
ಹಾಗೇ ನಾನು ಅಕ್ಕ ಮಹಾದೇವಿಯ ದಾರಿ (ಕರ್ನಾಟಕ - ಶ್ರೀ ಶೈಲ ಅಡವಿಯ ದಾರಿ) ಯಲ್ಲಿ ಪ್ರಯಾಣ ಮಾಡ್ತಿದ್ದೆ.
ಕ೦ಡದ್ಡೇನಪ್ಪಾ ಅ೦ದರೆ - ಎಲೆಲ್ಲೂ "ಜೀಸಸ್ " ಚಿತ್ರದೊ೦ದಿಗೆ -- ಅವನ್ ಮಾತ್ರ ದೇವರ ಮಗ ಅನ್ನೋ ಬರಹಗಳು.

ಅಲ್ಲಿರುವ ಚೆ೦ಚು ಆದಿವಾಸಿಗಳಿಗೆ "ಸೆಕ್ಸ್ " ಪಾಪ ಹ೦ಗೇ ಹಿ೦ಗೇ ಅನ್ನೋ ತತ್ತ್ವ ತಲೆ ಯೊಳಗೆ ಹಾಕಿದ್ವೂ.
ಆದಿವಾಸಿ ಜನರಲ್ಲಿ "ಸೂಳೆಗಾರಿಕೆ " ಇಲ್ಲಾ. ಅದೇ ರೀತಿ "ಮದ್ವೇ " ಅನ್ನೋದು
ಇದ್ರೂ ಗ೦ಡು ಹೆಣ್ಣೂ ಸೆಕ್ಸ್ ವಿಷಯದಲ್ಲಿ ಸ್ವಲ್ಪ ಮುಕ್ತರಾಗಿಯೂ , ಮುಗ್ಡರಾಗಿಯೂ ಇರ್ತಾರೆ.
ಈ ರೀತಿ "ಸೆಕ್ಸ್ " ಪಾಪ ಅನ್ನೋ ತತ್ತ್ವಗಳು ತುರುಕಿ , ಆದಿವಾಸಿ ಜನರ
ಪೂರ್ತಿ ಜೀವನ ಪದ್ದತಿ ನಾಶ ಮಾಡಿದೆ.
ಈಗ ಅಲ್ಲಿನ ಜನರಲ್ಲಿ "ಏಡ್ಸ್ ರೋಗ " ಮತ್ತು ಹಲವಾರು ಲೈ೦ಗಿಕ ರೋಗ ಕಾಣ್ಸತ್ತೆ.

ಭೈರಪ್ಪ ಸುಮ್ಕೇ "ಪಾಪುಲೇಷನ್ ಕೌ೦ಟ್" ಕೊಟ್ಟಿರುವುದು ಯಾಕಪ್ಪಾ ಅ೦ದರೆ -
ಈ ರೀತಿ ದೇಶಗಳು ತಮ್ಮ ಸ್ವ೦ತ ದೇಶೀ ಸ೦ಸ್ಕೃತಿಯನ್ನು ಕಳೆದು ಕೊ೦ಡು
ಚರ್ಚ್ ನ "ಸ೦ಸ್ಕೃತಿ" ಗೆ ಶರಣಾಗಿದ್ದಾವೆ ಅ೦ತ ತೋರಿಸೋಕ್ಕೆ ಅನ್ಸತ್ತೆ.

ನಮ್ಮ ಬಿಳಿಗಿರಿ ರ೦ಗನ ಬೆಟ್ಟದ ಆದಿವಾಸಿಗಳ ಮಧ್ಯೆ ಒ೦ದು ವಾರ ಕಳೆದಿದ್ದೆ.
ಅಲ್ಲಿ ವಿವೇಕಾನ೦ದ ಗಿರಿಜನ ಕಲ್ಯಾಣ ಕೇ೦ದ್ರ ಅಲ್ಲಿನ ಜನರ ನ೦ಬಿಕೆಗಳನ್ನು ಮತ್ತು ಸ೦ಸ್ಕೃತಿಯನ್ನು
ಹಾಳು ಮಾಡದೇ - ಅವರನ್ನು ಅವರ ಪಾಡಿಗೆ ಬಿಟ್ಟಿವೆ.
ಎಲ್ಲಿ ಬೇಕೋ ಅಲ್ಲಿ ಮಾತ್ರ (ಆರೋಗ್ಯ , ಜೇನು ಸಾಗಾಣಿಕೆ , ಔಷದಿಯ ಸಸ್ಯಗಳಿ೦ದ ಔಷದಿಗಳ ಉತ್ಪಾದನೆ )- Interfere ಆಗಿದ್ದಾರೆ.

ಅವರ ಒ೦ದು ಹಬ್ಬದಲ್ಲಿ ಪಾಲ್ಗೊ೦ಡಿದ್ದೆ.
ನನ್ನ ದೃಷ್ಟಿ ಏನಪ್ಪಾ ಅ೦ದರೆ ಈ ಜನರಿ೦ದ ಆಧುನಿಕ ಸ೦ಸ್ಕ್ರುತಿ ಕಲೆಯೋದು ತು೦ಬಾ ಇದೆ ಅ೦ತಾ.
ಅಲ್ಲಿ ಕೂಡ ಒಬ್ಬ ಮಿಷನರಿ ಬ೦ದಿದ್ದಾ.
ಅವನ (ಚರ್ಚ್) ದೃಷ್ಟಿ ಈ ಜನ ಮೂಡ ನ೦ಬಿಕೆ ಉಳ್ಳವರು - ಇವರನ್ನು ಏಸು ಮಾತ್ರ ಕಾಪಾಡ್ತಾನೆ.
ಆದರಿ೦ದಾ ಇವರನ್ನು ಕನ್ ವರ್ಟ್ ಮಾಡ್ ಬೇಕು.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಮುರಳಿ,

Quote:
ಭೈರಪ್ಪಾ ಬೇರೆ ದೇಶದ ಪಾಪುಲೇಷನ್ ಕೌ೦ಟ್ ತೆಗೆದುಕೊಳ್ಳುವ ಬದಲಿ
ನಮ್ಮ ದೇಶದಲ್ಲೇ ತಗೊ೦ಡಿದ್ದರೆ - ನಾವೇ vErify ಮಾಡ್ ಬಹುದಾಗಿತ್ತು.

ಇಲ್ಲಿ ಎರಡು ಸಂಗತಿ ಇದೆ. ಒಂದು - ಸುಲಭದಲ್ಲಿ ವೆರಿಫೈ ಮಾಡಕ್ಕೆ ಆಗ್ದೆ ಇರೋ ಕೌಂಟ್ ಕೊಡೋದೇ ಒಂದು ಹುನ್ನಾರ. ಎರಡನೇದು - ನಮ್ಮ ದೇಶದಲ್ಲಿ ಸಿಗೋ ಕೌಂಟನ್ನ ನಮ್ಮ ವಾದಕ್ಕೆ ಸರಿಯಾಗಿ ಒಪ್ಪೋದು/ಬಿಡೋದು ಮಾಡ್ತೀವಿ. ಆ ಕೌಂಟಿನ ಬಗ್ಗೇನೆ ಅನುಮಾನ ಅಂತೀವಿ. ಭೈರಪ್ಪನವರ ಹಾಗೆ ಮೂಲವಿಲ್ಲದ ವೆಬ್‌ಸೈಟಿಂದ ಸಿಗೋ ಕೌಂಟು ನಮ್ಮ ವಾದಕ್ಕೆ ಒಪ್ಪತ್ತಾದ್ದರಿಂದ ಹಿಂದೆಮುಂದೆ ನೋಡದೆ ಒಪ್ಪತೀವಿ.
Quote:
ನೋಡ್ರಿ - ನೀವು ಶ್ರೀ ಶೈಲದಲ್ಲಿ ಒಮ್ಮೆ ಹೋಗಿ ನೋಡಿ.ಅದು ಪುರಾತನ ಶಿವ ಕ್ಷೇತ್ರ.

ನೀವು ಸುತ್ತಾಡಿ ನೋಡಿದ ಊರಗಳಲ್ಲಿ "ನಿಮಗೆ" ಚರ್ಚುಗಳೇ ಕಾಣ್ತಿವೆ. ಸರಿ. ಕಳೆದ ಹದಿನೈದು-ಇಪ್ಪತ್ತು ವರ್ಷಗಳಲ್ಲಿ ನಮ್ಮ ನಾಡಲ್ಲಿ ಎಲ್ಲ ಧರ್ಮಗಳೂ ತಾಂಡವ ಆಡ್ತಿದಾವೆ ಅನ್ನೋದನ್ನ ಅನುಕೂಲಕ್ಕಾಗಿ ಮರೆತುಬಿಡ್ತೀರ, ಅಥವಾ ನಿಮಗೆ ಅದು ನಿಮ್ಮ ಕಣ್ಣಿಗೆ ಕಾಣೋದೇ ಇಲ್ಲ!
Quote:
ಅಲ್ಲಿರುವ ಚೆ೦ಚು ಆದಿವಾಸಿಗಳಿಗೆ "ಸೆಕ್ಸ್ " ಪಾಪ ಹ೦ಗೇ ಹಿ೦ಗೇ ಅನ್ನೋ ತತ್ತ್ವ ತಲೆ ಯೊಳಗೆ ಹಾಕಿದ್ವೂ.

ಇನ್ನು ಚೆಂಚು ಆದಿವಾಸಿಗಳ ಬಗ್ಗೆ ಹೇಳಿದೀರ. ಹದಿನೆಂಟನೇ ಶತಮಾನದ ಓರಿಯಂಟಲಿಸ್ಟ್ ತರ ಮಾತಾಡ್ತಾ ಇದ್ದೀರ. "Noble Savage" ನೆನಪಿಸಿಕೊಳ್ಳಿ. ನಾವು "Savage" ಅಲ್ಲ, ನೋಬಲ್ ಅನ್ನೋದು ಎಂತಹ ಮೋಸ ಅಂತ ನಿಮಗೆ ಗೊತ್ತಿದೆ. ಅಲ್ಲದೆ ಏಡ್ಸ್ ರೋಗಕ್ಕೂ ಚರ್ಚಿಗೂ ಆಫ್ರಿಕಾದಲ್ಲಿ ಇರುವ ಕೊಂಡಿಯನ್ನು ಇಲ್ಲಿ ತುಂಬಾ ಚೀಪಾಗಿ ಬಳಸ್ತಾ ಇದ್ದೀರ. ಸೆಕ್ಸ್ ಪಾಪ ಅಲ್ಲ ಅಂತ, ಅಥವಾ ಅದರ ಬಗ್ಗೆ ಪಾಪಪ್ರಜ್ಞೆ ನಮಗೆ ಕ್ರಿಶ್ಚಿಯನ್ನರಿಂದಲೇ ಬರಬೇಕೆ? ಇದು ಧರ್ಮಕ್ಕಿಂತ ಸಂಸ್ಕೃತಿಯ ಸಮಾಚಾರ ಅಲ್ಲವ? ಏಡ್ಸಿನ ತೊಂದರೆಗೆ ಚರ್ಚಿನ ತಲೆ ಮೇಲೆ ಗೂಬೆ ಕೂಡಿಸುವ ಮೂಲಕ ನಾವು ಕೊಡಬೇಕಾದ ಅತಿ ಮುಖ್ಯವಾದ basic health ಜವಾಬ್ದಾರಿಯಿಂದ ಮುಕ್ತಗೊಳಿಸ್ತಾ ಇದ್ದೀರ. ಇದು ರಾಜಕಾರಣಿಗಳಿಗೆ ತುಂಬಾ ಅನುಕೂಲವಾದ ವಾದ. ಇದು ನಿಮಗೆ ಗೊತ್ತರದಂತಹ ವಿಚಾರವೇನಲ್ಲ ಅಂದುಕೊಂಡಿದ್ದೆ.
Quote:
ಭೈರಪ್ಪ ಸುಮ್ಕೇ "ಪಾಪುಲೇಷನ್ ಕೌ೦ಟ್" ಕೊಟ್ಟಿರುವುದು ಯಾಕಪ್ಪಾ ಅ೦ದರೆ -

ಒಳ್ಳೇ ಭೈರಪ್ಪನ ಅಪಾಲಜಿಸ್ಟ್ ತರ ಇದೆ ನಿಮ್ಮ ಸ್ಟೇಟ್‌ಮೆಂಟು! :) ಟ್ರೈಬಲ್ ಸಂಸ್ಕೃತಿಯನ್ನ "ಮುಗ್ಧ" "ಮುಕ್ತ" "ನೋಬಲ್" ಎಂದು ರಮ್ಯವಾಗಿ ನೋಡೋದು ಅವರನ್ನು savage ಅಂತ ನೋಡುವ ಇನ್ನೊಂದು ಮುಖ ಅಷ್ಟೆ. ನಿಮ್ಮಂತವರಿಗೆ, ತಮ್ಮ ಉಳಿವಿಗಾಗಿ ಲೋಕಲ್ ಸಂಸ್ಕೃತಿಯನ್ನು ಚರ್ಚಿನ ಆಚರಣೆಗಾಗಿ (ಬೇರೆ ಧರ್ಮಗಳ ಹಾಗೆ) ಬಳಸಿಕೊಳ್ಳೋದು ಕಾಣೋದೇ ಇಲ್ಲ, ಅಥವಾ ಅನುಕುಲವಾಗಿ ಮರೆತುಬಿಡ್ತೀರ. ಧರ್ಮಗಳು ಹೀಗ್ಮಾಡೋದು ಸರಿ ಅಂತ ನನ್ನ ನಿಲುವಲ್ಲ. ಆದರೆ, ಎಲ್ಲ ಧರ್ಮಗಳೂ ಇವನ್ನ ಮಾಡಿವೆ/ಮಾಡ್ತಿವೆ ಅನ್ನೋದನ್ನ ಕೂಡ ನಿಮಗೆ ಹೇಳಬೇಕಾಗಿಲ್ಲ ಅಂದುಕೊಂಡಿದ್ದೆ :) ಸಂಸ್ಕೃತಿ ಅನ್ನೋದು ಧರ್ಮಕ್ಕಿಂತ ನೂರು ಪಾಲು ಗಟ್ಟಿಯಾದ್ದು. ಅದು ಬದಲಾಗೋದ್ರಿಂದ. ಅದರ ಕಾಲಡಿ ಧರ್ಮಗಳು ನಲುಗ್ತಾವೆ ಅನ್ನೋದನ್ನ ನೆನಪಿಟ್ಕೋಬೇಕು.
Quote:
ನಮ್ಮ ಬಿಳಿಗಿರಿ ರ೦ಗನ ಬೆಟ್ಟದ ಆದಿವಾಸಿಗಳ ಮಧ್ಯೆ ಒ೦ದು ವಾರ ಕಳೆದಿದ್ದೆ.

ನೀವು ಅವರ ಜತೆ ದಿನ ಕಳೆದಿದ್ದು ನಿಮ್ಮ ಅದೃಷ್ಟ ಮತ್ತು ಕೇಳಿ ನನಗೆ ಹೊಟ್ಟೆ ಉರಿ ಆಗ್ತಿದೆ. :) ಆದರೆ, ನಿಮ್ಮಲ್ಲಿ ಒಂದು ಡೇಂಜರ್‍ ಕಾಣ್ತಿದೆ. ಒಬ್ಬ ಮನುಷ್ಯನ ಎದುರು ನಿಂತ ತಕ್ಷಣ ಅವನೆಲ್ಲಾ ಒಳಗು ಮತ್ತು ಚರಿತ್ರೆ ಅರ್ಥ ಆಗಿದೆ ಅಂದುಕೊಳ್ಳೋದು ಆ ಡೇಂಜರ್‍. ಅದರ ಅರಿವು ನಿಮಗೆ ಇದೆ ಅಲ್ಲವೆ? ಯಾಕೆಂದರೆ ಯೂರೋಪು/ಅಮೇರಿಕಾದ ಟೂರಿಸ್ಟ್‌ಗಳು ಆಫ್ರಿಕಾದ ದೇಶಗಳೆಲ್ಲಾ ಸುತ್ತತಾರೆ. ಅವರು ಏನು ನೋಡ್ತಾರೆ? :)
Quote:
ನನ್ನ ದೃಷ್ಟಿ ಏನಪ್ಪಾ ಅ೦ದರೆ ಈ ಜನರಿ೦ದ ಆಧುನಿಕ ಸ೦ಸ್ಕ್ರುತಿ ಕಲೆಯೋದು ತು೦ಬಾ ಇದೆ ಅ೦ತಾ.

ಮೊದಲೇ ಹೇಳಿದ ಹಾಗೆ, ಚರ್ಚುಗಳು "ಕಾಪಾಡೋ" ನಿಲುವಿಗೂ, ಈ ನಿಮ್ಮ "noble" ಅನ್ನುವ ಮಾತಿಗೂ ಹೆಚ್ಚೇನೂ ಅಂತರವಿಲ್ಲ. ಹೀಗೆ ಹೇಳ್ಕೊಂಡು ನಮ್ಮ ದೇಶದ ಹಲವು ಕಡೆ tribalsನ ಜೀವನ್ಮೂಲ, ಸಂಪನ್ಮೂಲವನ್ನು ಸಕತ್ತಾಗಿ ಸುಲಿಯೋದರಲ್ಲಿ ನಾವು ಯಾವ ದೇಶಕ್ಕೂ ಕಡಿಮೆಯಿಲ್ಲ. ಅದರ ಬಗ್ಗೆಗಿನ ದಾಖಲೆಗಳು ಸಿಗೋದು ಕಷ್ಟ, ಅದೂ ಈ ಸಮಸ್ಯೆಯ ಇನ್ನೊಂದು ಮುಖ.

ಅಯ್ಯೋ ಮುರುಳಿ,
ನಿಮಗೆ ಕೊಟ್ಟ ಉತ್ತರ ಮೂಲ ಬರಹಕ್ಕಿಂತ ಉದ್ದವಾಯಿತೇನೋ ಅಂತ ಹೆದರಿ ಇಲ್ಲಿಗೆ ನಿಲ್ಲಿಸ್ತೀನಿ.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

vijendra's picture

ಅನಿವಾಸಿಗಳಿಗೆ ಬರೇ ಭೈರಪ್ಪರವರ ಅಂಕಿ ಅಂಶಗಳ ಬಗ್ಗೆ ತಕರಾರಿದೆ ಅಂತ ತಿಳಿದಿದ್ದೆ. ಈಗ ನೋಡಿದ್ರೆ ಭೈರಪ್ಪರವರ ವಿಷಯದ ಬಗ್ಗೆನೇ ತಕರಾರಿದೆ

ಸ್ವಲ್ಪ ಈ ವಿಷಯ ಓದೋದು ಒಳ್ಳೇದು
http://sampada.net/a...

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

vijendraರೆ,
ನಿಮ್ಮ ಅಮೂಲ್ಯ ಸಲಹೆಗೆ ಥ್ಯಾಂಕ್ಸ್.
ಆದರೆ, ಓದಿದರೆ ಏಕೆ ಒಳ್ಳೇದು ಅಂತ ಹೇಳಿದ್ದರೆ ಚೆನ್ನಿತ್ತು. ಹಾಗೆಯೇ ಬೇರೆಯವರ ಮಾತಿರಲಿ, ತಕರಾರಿನ ಬಗ್ಗೆ ನಿಮ್ಮ ಮಾತೇನು ಎಂದು ಹೇಳುವುದು ಸೂಕ್ತವಲ್ಲವೆ?

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

muralihr's picture

ನಮ್ಮ ದೇಶದಲ್ಲಿ , ನಮ್ಮೂರಲ್ಲಿ , ನಮ್ಮ ಜನರೊಡನೆ ಬದುಕೋದು ಟೂರಿಸ೦ ಅ೦ದರೆ
ನಾ ಏನ್ ಹೇಳೋದು ?
ಇದೇ "ಡೇ೦ಜರ್ " ಅನ್ಸತ್ತೆ. ನಾ ಅಲ್ಲಿಗೆ ಯಾಕ್ ಹೋಗಿದ್ದೆ ಏನು ತಿಳಿಯದೇ
ಸುಮ್ಕೇ "ಟೂರಿಸ್ಟ್ " ಅನ್ನೋ ಲೇಬಲ್ ಹಚ್ಚುವುದು ಬೇಕಿತ್ತೇ ?

ನೀವು ಕ೦ಡಿರೋ ಪ್ರಪ೦ಚದ ಕನ್ನಡಕದಲ್ಲಿ ನನ್ನನ್ನು ನೋಡುವ
ಪ್ರಯತ್ನ ಮಾಡ್ತಾಯಿದ್ದೀರಾ. ಇದಕ್ಕೆ ನಾ ಏನ್ ಹೇಳೋದು ?

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಮುರಳಿ,
ನನ್ನ ಪ್ರತಿಕ್ರಿಯೆ ತಪ್ಪು ಅಭಿಪ್ರಾಯ ಹುಟ್ಟಿಸಿದೆ, ಮನ್ನಿಸಿ. ಟೂರಿಸ್ಟ್ ಉದಾಹರಣೆ ಕೊಟ್ಟಿದ್ದರಿಂದಾಗಿ. ನೀವು ನನಗೆ ಗೊತ್ತಿದ್ದೂ, ನಿಮ್ಮದು ಟೂರಿಸ್ಟ್ ಮನಸ್ಸು ಅಂತ ನಾನು ಹೇಳುತ್ತಿಲ್ಲ. ನಾನು ಡೇಂಜರ್‍ ಅಂದಿದ್ದು ಅದಕ್ಕಿಂತ ತುಸು ಗಂಭೀರವಾದ ವಿಚಾರದ ಬಗ್ಗೆ. ಟೂರಿಸ್ಟ್ ಮನಸ್ಥಿತಿ ಇಟ್ಟುಕೊಂಡು ಅವರು ಅಲ್ಲಿ ಹೋದ ಹಾಗೆ orientalist ಮನಸ್ಥಿತಿ ಇಟ್ಟುಕೊಂಡು ನೀವು ಇಲ್ಲಿ ಹೋದಂತಿದೆ ಎಂದುದು. ನೀವು "ಮುಗ್ಧ"ರು "ಮುಕ್ತ"ರು ಎಂದ ಮಾತಿನ ಮೇಲೆ ಆಧರಿಸಿದ ಸಂಗತಿ ಅದು.
ಅಂದ ಹಾಗೆ, ನನ್ನಂತಹ ಹುಲುಮಾನವರು "ನಾವು ಕಂಡ ಪ್ರಪಂಚದ ಕನ್ನಡಕ"ದಲ್ಲಿಯೇ ನೋಡಲು ಸಾಧ್ಯ. ನಮಗೆ ದಿವ್ಯದೃಷ್ಟಿ ಎಲ್ಲಿಂದ ಬರಬೇಕು ನೀವೇ ಹೇಳಿ :)

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

keerthi2kiran's picture

ಇಲ್ಲಿಗೇ ನಿಲ್ಲಿಸಿಬಿಟ್ರೆ ಹೇಗೆ?
>>ಅಲ್ಲಿ ಕೂಡ ಒಬ್ಬ ಮಿಷನರಿ ಬ೦ದಿದ್ದಾ.
>>ಅವನ (ಚರ್ಚ್) ದೃಷ್ಟಿ ಈ ಜನ ಮೂಡ ನ೦ಬಿಕೆ ಉಳ್ಳವರು - ಇವರನ್ನು ಏಸು ಮಾತ್ರ ಕಾಪಾಡ್ತಾನೆ.
>>ಆದರಿ೦ದಾ ಇವರನ್ನು ಕನ್ ವರ್ಟ್ ಮಾಡ್ ಬೇಕು.
ಇದರ ಬಗ್ಗೆ ಏನಂತೀರ ಅಂತಾನೂ ಹೇಳಿ. ನಾನೂ ಈ ರೀತಿ ಜನ (ಮಿಷನರಿ) ತುಂಬಾ ನೋಡಿದೀನಿ.

ಕೀರ್ತಿ ಕಿರಣ್ ಎಂ

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

anivaasi's picture

ಕೀರ್ತಿ ಕಿರಣ್,
ನಾನು ಹೇಳುವುದಿರಲಿ, "ಈ ರೀತಿ ಜನ"ರನ್ನು ನೋಡಿದಾಗ ನಿಮಗೆ ಏನನಿಸುತ್ತದೆ?
"ಏಸು ಮಾತ್ರ ಕಾಪಾಡುತ್ತಾನೆ" ಎನ್ನುವುದು ಎಷ್ಟು ಬಾಲಿಶವೋ, ಅಲ್ಲಿಯವರು ಕನ್ವರ್ಟ್ ಆಗದ ಹಾಗೆ ಅವರನ್ನು ರಕ್ಷಿಸಬೇಕು ಎಂದು ಹೊರಡುವುದೂ ಅಷ್ಟೆ ಬಾಲಿಶ. ಟ್ರೈಬಲ್ ಜನರನ್ನು ಬುದ್ಧಿಯಿರುವ ಮನುಷ್ಯರೆಂದು ಗೌರವಿಸದೇ ಹೋದಾಗ ಅವರನ್ನು ಕಾಪಾಡಬೇಕು ಎಂಬ ಹಂಬಲ ಹುಟ್ಟುತ್ತದೆ. ಶಿವರಾಮ ಕಾರಂತರ "ಚೋಮನದುಡಿ" ಓದಿಲ್ಲದಿದ್ದರೆ ಓದಿ. ಓದಿದ್ದರೆ ಇದನ್ನು ನೆನಪಿಸಿಕೊಳ್ಳಿ: ನಮ್ಮ ವ್ಯವಸ್ಥೆ, ಪದ್ಧತಿಯಿಂದಾಗಿ ಅಂಗೈಯಗಲ ಸ್ವಂತದ ಭೂಮಿ ಸಿಗದೆ ಪರಿತಪಿಸಿ, ಕಡೆಗೆ ಚೋಮ ಕನ್ವರ್ಟ್ ಆಗಲು ಹೊರಟಾಗ ಅವನ ನಂಬಿಕೆ ಅವನನ್ನು ತಡೆಯುತ್ತದೆ. ಎಲ್ಲರಲ್ಲಿಯೂ ಹಾಗೇ ಆಗುತ್ತದೆ ಎಂದಲ್ಲ. ನಾವು ಹೆಚ್ಚು ತಿಳಿದವರು, ಅವರು ಏನೂ ತಿಳಿಯದವರು, ಅವರನ್ನು ಆಕ್ರಮಣಕಾರಿ ಪಾದ್ರಿಗಳಿಂದ ರಕ್ಷಿಸಬೇಕು ಎಂಬ ನಿಲುವಿನ ಬಗ್ಗೆ ತಿಳಿಮನಸ್ಸಿನಿಂದ ಯೋಚಿಸುವುದು ಒಳ್ಳೆಯದು.

ಉ: ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

keerthi2kiran's picture

ಹೌದು... ನೀವು ಹೇಳೋದು ಸರಿ. ಮತಾಂತರಗೊಳ್ಳೋದು ಬಿಡೋದು ಅವರವರ ಇಷ್ಟ.
ಕೀರ್ತಿ ಕಿರಣ್ ಎಂ