Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

June 26, 2007 - 4:06pm — anivaasi

ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು. ಹೌದು, "ನೀಲುಗಳು" ಒಂದು ಕಾವ್ಯ ಪ್ರಕಾರವಾಗಬೇಕು ಅಂತ ಅನಿಸಿತು. ಅದಕ್ಕೆ ನೀಲು ಪದ್ಯಗಳ ಜಾಡಿನಲ್ಲೇ ಬರೆಯಬೇಕು ಅಂತ ಅನಿಸಿತು. ಇದು ನನ್ನ ಮೇಲಿನ ಲಂಕೇಶರ ಪ್ರಭಾವ ಅಂತಲೇ ಇಟ್ಕೊಳ್ಳಿ. ಹಾಗಾದರೆ ಲಂಕೇಶರ ಪದ್ಯಗಳು ಪ್ರಕಟವಾಗಿವೆಯೆ ಎಂದು ಹುಡುಕಿದಾಗ "ನೀಲು ಕಾವ್ಯ" ಅಂತ ಪ್ರಕಟವಾಗಿದೆ ಅಂತ ಪತ್ರಿಕೆಯಲ್ಲಿ ಓದಿದೆ. ತುಂಬಾ ಸಂಭ್ರಮದಿಂದ ತರಿಸಿಕೊಂಡು "ರೆಫೆರ್‍" ಮಾಡಲು ತೊಡಗಿದ್ದೇನೆ! ಈ ಸಂಪುಟದಲ್ಲಿ ಲಂಕೇಶರು 1981-1984 ರವರೆಗೆ ಬರೆದವುಗಳು ಮಾತ್ರ ಇವೆ. ಮುನ್ನುಡಿಯಲ್ಲಿ ಕಿ.ರಂ.ನಾಗರಾಜರು "ವಾರಕ್ಕೆ ಸರಾಸರಿ ಇಪ್ಪತ್ತು ಸಾಲುಗಳಂತೆ ಇಪ್ಪತ್ತು ವರ್ಷಗಳ ತುಂಬ ಹಬ್ಬಿಕೊಂಡಿದ್ದು"..."ಸುಮಾರು ಹದಿನೆಂಟು ಸಾವಿರ ಸಾಲುಗಳ" ಬರಹ ಇರಬಹುದೆಂದು ಅಂದಾಜು ಹಾಕುತ್ತಾರೆ ಮತ್ತು "ಈ ಕಾಲಮಾನದಲ್ಲಿ ನಮ್ಮ ಆಸುಪಾಸಿನಲ್ಲಿ ಇಷ್ಟು ವ್ಯಾಪಕವಾದ ಕಾವ್ಯ ರಚನೆಯಾದದ್ದು ಅಪರೂಪ" ಎಂದು ಅಭಿಪ್ರಾಯಪಡುತ್ತಾರೆ.ಮುಖಪುಟ

ತಮ್ಮ ಪತ್ರಿಕೆಯಲ್ಲಿ ಲಂಕೇಶರು "ಟೀಕೆ-ಟಿಪ್ಪಣಿ" ಎಂದು ಬರೆಯುತ್ತಿದ್ದರು. ಅದು ಈಗಾಗಲೇ ಪುಸ್ತಕರೂಪದಲ್ಲಿ ಹೊರಬಂದಿದೆ. ಅದು ಕೂಡ ಒಂದು ಪ್ರಜ್ಞಾವಂತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಅವುಗಳನ್ನು ಲಂಕೇಶರ ಬ್ಲಾಗ್ ಅನ್ನಬಹುದು. ಆದರೆ ಅದಕ್ಕಿಂತ, ತುಂಬಾ ಭಿನ್ನವಾಗಿ, ಕಲಾತ್ಮಕವಾಗಿ, ಕಾವ್ಯಮಯವಾಗಿ "ನೀಲು" ಮೂಲಕ ಲಂಕೇಶರು ಮಾತಾಡಿದ್ದಾರೆ. ಕೆಲವು ಸಲ ತಮ್ಮ ಸ್ವಂತ ಅನಿಸಿಕೆಯನ್ನೂ ನೀಲುವಿನ ಮಾತಿನ ಚೂಪಿಗೆ ಒಡ್ಡಿದ್ದಾರೆ, ಟೀಕಿಸಿಕೊಂಡಿದ್ದಾರೆ ಎನ್ನುವುದು ನನ್ನೊಬ್ಬನ ಅನಿಸಿಕೆ ಇರಲಾರದು . ಲಂಕೇಶರು ತಮ್ಮನ್ನು ತಾವು ಮೀರುತ್ತಿದ್ದ ರೀತಿಯದು ಎಂದು ಬಗೆಯುತ್ತೇನೆ. ಹಾಗಾಗಿಯೇ "ನೀಲು" ಎಂಬ ತಮ್ಮ ಮತ್ತೊಂದು ಬದಿಯನ್ನು ಮುಖ್ಯವಾಗಿ ತಮ್ಮನ್ನು ತಾವು ಮೀರುವ ತಂತ್ರವಾಗಿ ಲಂಕೇಶರು ಬಳಸಿದ್ದಾರೆ. ಅದಕ್ಕೇ ನನಗೆ "ನೀಲು" ಪದ್ಯಗಳೂ ಒಂದು ರೀತಿಯ ನಿಯತಕಾಲಿಕ ಬ್ಲಾಗ್‌ನಂತೆ ಕಾಣುತ್ತದೆ. ಇತ್ತೀಚೆಗೆ ನಾನು ನನ್ನ ಬ್ಲಾಗುಗಳಿಗೆ ಬೇರೆ ಬೇರೆ ರೂಪಕೊಡುವ ಪ್ರಯತ್ನಪಟ್ಟಿದ್ದೇನೆ. ಆ ಪ್ರಯತ್ನಕ್ಕೂ, ಕೇಶವ ಕುಲಕರ್ಣಿಯವರ "ನೀಲುಗಳು" ಎಂಬ ತಲೆಪಟ್ಟಿಗೂ, ಲಂಕೇಶರ "ನೀಲು ಕಾವ್ಯ"ದ ಪ್ರಕಟಣೆಗೂ ಒಂದು ರೀತಿಯ ಯೋಗಾಯೋಗ ಸಂಬಂಧವಿದೆಯೇ ಎಂದು ಅಚ್ಚರಿಪಡುತ್ತಿದ್ದೇನೆ.

ನನ್ನ ನೆನಪಿನಲ್ಲಿ ನಿಂತಿದ್ದ ನೀಲು ಪದ್ಯಗಳ ಜಾಣತನ, ಪೋಲಿತನ, ವಿಲಕ್ಷಣ ಪ್ರಜ್ಞೆ ಈವತ್ತಿಗೂ ಮುದಕೊಡುತ್ತವೆ. ಯಾವುದೇ ರೀತಿಯ ಅಗ್ಗದ ಚಟಾಕಿಗೋ, ಶಾಕ್ ಮಾಡಲೆಂದೋ ಬರೆದಂಥ ಪದ್ಯಗಳಲ್ಲ ಅವು. ಆ ಪದ್ಯಗಳಿಗೆ ವಿಶಿಷ್ಟವಾದ ಪ್ರಜ್ಞೆ ಮತ್ತು ಯೋಚನಾ ಕ್ರಮ ಇರುವಂತೆ ಕಾಣುತ್ತದೆ. ಅದೇನು ಎಂದು ನಿಖರವಾಗಿ ಹೇಳುವುದು ನನ್ನ ಕೈಯಿಂದ ಆಗದ ಕೆಲಸ. ಆದರೆ ಸುತ್ತಲಿನ ಆಗುಹೋಗುಗಳಿಗೆ ಸರ್ವೆಸಾಮಾನ್ಯವಾದ ಪ್ರತಿಕ್ರಿಯೆ, ಯೋಚನೆಗಳನ್ನು ಮೀರುತ್ತಿತ್ತು ಎಂದಂತೂ ಧೈರ್ಯವಾಗಿ ಹೇಳಬಹುದು. ಯಾವ ಸಂದರ್ಭದಲ್ಲೋ ಬರೆದ ಈ ಪದ್ಯಗಳು ಇಂದಿಗೂ ತನ್ನ ಬೆಳಕು ಚೆಲ್ಲುವುದು ನನ್ನ ಮಟ್ಟಿಗಂತೂ ಸೋಜಿಗವಲ್ಲ. ಈ ಎರಡರಲ್ಲಿ ಯಾವುದು ಹಾಕಲಿ ಎಂದು ನಿರ್ಧರಿಸಲಾಗದೆ ಎರಡನ್ನೂ ಹಾಕಿಬಿಟ್ಟಿದ್ದೇನೆ!

ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು
ಯಾಕೆಂದರೆ
ದುಷ್ಟ ಮನುಷ್ಯನಂತೆ ಅದು
ಅಕಸ್ಮಾತ್
ಪಶ್ಚಾತ್ತಾಪ ಪಡಲಾರದು
-ಪುಟ 174

ಕಂಡದ್ದು ಕಂಡಹಾಗೆ
ಹೇಳುವವನ ವರಸೆಗೆ
ಮರುಳಾಗಬೇಡಿ-
ಕಂಡ ಕಣ್ಣು, ಹೇಳುವ ನಾಲಗೆ
ಬೇರೆ ಬೇರೆ!
-ಪುಟ 134

ನೀಲು ಎಂಬ ಹೆಸರು ಹೊಳೆಸುವ ಯೋಚನೆಗಳೇ ವಿಚಿತ್ರ. "blues"ನ ನೆರಳಿದೆ ಆ ಹೆಸರಿಗೆ ಎಂದು ಯಾವಾಗಲೂ ನನಗೆ ಅನಿಸುತ್ತಿತ್ತು. ಯಾವುದೋ ಮೊಟಕುಗೊಳಿಸಿದ ಹೆಸರಾಗಿ ಆಪ್ತತೆಯಿಂದ ಆವರಿಸುತ್ತದೆ. ಹಾಗೆ ತೋರುತ್ತಲೇ ವಿಲಕ್ಷಣತೆಯನ್ನು ತನ್ನ ಸಾಲುಗಳಲ್ಲಿ ಮೆರೆಸುತ್ತದೆ. ಜೀವನವನ್ನು ಅರಿಯುವ ವಿನಯದ ಜತೆಗೆ ತನ್ನ ನಿಲುವಿನ ಬಗ್ಗೆ ಅಗಾಧವಾದ ಸ್ಥೈರ್ಯವೂ ಕಾಣುತ್ತದೆ. ಹೆಣ್ಣಾಗಿ ಆಡುವ ಮಾತುಗಳು ಆ ಸ್ಥೈರ್ಯಕ್ಕೆ ಸಾಮಾನ್ಯಕ್ಕಿಂತ ಹೆಚ್ಚು ಆಳವನ್ನು ಕೊಡುತ್ತದೆ. ಹಾಗಂತ ಯಾವುದೇ ರೀತಿಯ ದೊಡ್ಡಸ್ತಿಕೆಯನ್ನೂ ನೀಲು ಮೆರೆಯುವುದಿಲ್ಲ. ಬದಲಾಗಿ ಎಲ್ಲರನ್ನೂ ಕಾಡಬಹುದಾದ ತಲ್ಲಣಗಳನ್ನು ಕಾವ್ಯವಾಗಿ ನಿರೂಪಿಸುತ್ತದೆ. ಜಾಣತನದ ಜತೆಗೆ ಉಳಿದ ಭಾವಗಳನ್ನು ತೋರುವ ನೀಲುವಿನ ಬಗ್ಗೆಯೇ ಇರುವ ಈ ಪದ್ಯ ಗಮನಿಸಿ-

ನೀಲುವಿನಂತೆ ಬರೆಯಲು ಬಯಸುವ
ಜಾಣೆಯರು
ನೀಲುವಿನಂತೆ ಭಯ, ಕಾತರ,
ಆತಂಕ ಪಡುವುದ ಕಲಿಯಬೇಕು
-ಪುಟ 90

ವಿನಯಪೂರ್ವಕವಾಗಿ ತನ್ನ ತುಂಟಾಟವನ್ನು ಬಿಡದೆ ಕಾಳಿದಾಸನ ಬಗ್ಗೆ ಹೇಳುತ್ತಾ, ಬೇರೆ ಬರಹಗಾರರಿಗೂ ಅನ್ವಯಿಸುವ ಆತ್ಮರತಿಯ ಬಗೆಗಿನ ಈ ಟೀಕೆ ನೋಡಿ.

ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ
ಅನಿಸುತ್ತದೆ, ಕ್ಷಮಿಸಿ
-ಪುಟ 95

ಹಾಗೆಯೇ ಅಭಿರುಚಿ ಯಾರ ಸ್ವತ್ತೂ ಅಲ್ಲ ಮತ್ತು ಅದು ಬದುಕಿನಲ್ಲಿ ಹಾಸು ಹೊಕ್ಕಾಗಿರುವಂಥದು ಎನ್ನುವ ಈ ಸುಂದರ ವ್ಯಾಖ್ಯಾನ ನನ್ನ ಮನಸ್ಸನಂತೂ ಸೂರೆಗೊಂಡಿತು:

ಕಡು ಬಡವ ಕೂಡ
ತನ್ನ ಗುಡಿಸಲಲ್ಲಿ
ಸುಂದರ ಮಣ್ಣಿನ ತಟ್ಟೆಯ ಪಕ್ಕಕ್ಕೆ
ಹೊಳೆವ ತಾಮ್ರದ ಗಿಂಡಿಯಲ್ಲಿ
ನೀರಿಟ್ಟುಕೊಂಡರೆ
ಅದೇ ಅಭಿರುಚಿ
-ಪುಟ 164ಲಂಕೇಶರು

"ನೀಲು ಕಾವ್ಯ" ತರಿಸಿಕೊಂಡು ಮೊದಲು ಕೈಯಲ್ಲಿ ಹಿಡಿದಾಗ ಆದ ಅನುಭವ ನಿಮಗೆ ಹೇಳದಿದ್ದರೆ ಸರಿ ಹೋಗುವುದಿಲ್ಲ. ನಾಟಕವೊಂದರ ತಾಲೀಮಿಗೆ ಹೋದಾಗ ನನ್ನ ಕೈಗೆ ಪುಸ್ತಕ ಬಂತು. ನಾಟಕ ಮಾಡುವ ಉತ್ಸಾಹ ಒಂದು ಕ್ಷಣ ಜರ್‍ರನೆ ಇಳ್ಳಿದುಹೋಗಿ, ಈ ಪದ್ಯಗಳನ್ನು ಓದುತ್ತಾ ಕೂತು ಬಿಡೋಣ ಅನಿಸಿತು. ತಾಲೀಮು ಮಾಡುವ ಬದಲು, ಎಲ್ಲರಿಗೂ ಕೆಲವು ಪದ್ಯಗಳನ್ನು ಜೋರಾಗಿ ಓದುತ್ತಾ ಕೂರೋಣ ಅನಿಸಿತು. ನಾಟಕದ ಉಳಿದವರು ಬೆದರಿಸಿದಾಗ ಪುಸ್ತಕ ಪಕ್ಕಕ್ಕಿಟ್ಟು ತಾಲೀಮಿನಲ್ಲಿ ತೊಡಗಿಕೊಂಡೆ.

"ನೀಲು ಕಾವ್ಯ"ವನ್ನು ಪ್ರಕಟಿಸಿದವರ ಬಗ್ಗೆ ಧನ್ಯತೆಯಿಂದ ನಂತರ ಮತ್ತೆ ಓದತೊಡಗಿದಾಗ ಆ ಪದ್ಯ ರೂಪಕ್ಕೆ ಅಚ್ಚಿನ ಅಕ್ಷರಗಳು ಹೊಂದುವುದಿಲ್ಲ ಅನಿಸಿತು. ಆ ಪದ್ಯಗಳ ಒಂದು ಮುಖ್ಯ ಲಕ್ಷಣ ಲಂಕೇಶರ ಕೈಬರಹವೂ ಕೂಡ ಆಗಿತ್ತು. ಕೆಲವು ಪದ್ಯಗಳನ್ನು ಪತ್ರಿಕೆಯಲ್ಲಿ ಕಾಣಿಸಿದ ಲಂಕೇಶರ ಕೈಬರಹದಲ್ಲೇ ಪುಸ್ತಕದಲ್ಲೂ ಮೂಡಿಸಿರುವುದು ಸ್ವಲ್ಪ ಮಟ್ಟಿನ ಸಮಾಧಾನವೇನೋ ಹೌದು. ಅದು ಪದ್ಯಗಳಿಗೆ ತರುವ ಆತ್ಮೀಯತೆ ಮತ್ತು ಜರೂರಿ ಅನನ್ಯ. ಹಾಗಾಗಿಯೇ ಪೂರ ಪುಸ್ತಕವನ್ನು ಅವರ ಕೈಬರಹದಲ್ಲೇ, ಅದರೊಡನೆಯ ಚಿತ್ರಗಳೊಂದಿಗೇ ಪ್ರಕಟಿಸಬೇಕಾಗಿತ್ತು ಅನಿಸಿತು. ಮರುಕ್ಷಣ ಹಾಗೆ ಪ್ರಕಟಿಸುವುದಕ್ಕೆ ತಗಲುವ ವೆಚ್ಚದ ಅರಿವಾಗಿ ಹೀಗೇ ಸರಿ ಅಂದೂ ಅನಿಸಿತು. ಆದರೆ ಮುಂದೊಂದು ದಿನ ತೂಗುಹಾಕಲು ಬರುವಂಥ ಪುಟ್ಟ ಫ್ರೇಮಿನ ಚಿತ್ರ-ಕವನಗಳಾಗಿ ಇವುಗಳನ್ನು ಹೊರತಂದರೆ ಸುಂದರವಾಗಿರುತ್ತದೆ ಎಂಬ ಕನಸಿಗೇ ಉದ್ವಿಗ್ನಗೊಂಡೆ!

  • ನೀಲುಗಳು
  • ಪುಸ್ತಕ
Ornamental seperator
  • anivaasi ರವರ ಬ್ಲಾಗ್
  • Login or register to post comments
  • 449 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 26, 2007 - 4:41pm — anivaasi

ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

anivaasi's picture

ಪ್ರಕಟಣೆ ಹಾಕಲು ಮರೆತೆ:
ಲಂಕೇಶ್ ಪ್ರಕಾಶನ
9, E.A.T ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪
ಬೆಲೆ: ರೂ. ೧೫೦/-

  • Login or register to post comments
  • link
  • Email this ಪ್ರತಿಕ್ರಿಯೆ
June 27, 2007 - 4:09am — keshav

ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

keshav's picture

ಅನಿವಾಸಿಯವರೇ,

ತುಂಬ ಚೆನ್ನಾಗಿ ಬರೆದಿದ್ದೀರಿ. ನಾನು ನೀಲುಗಳು ಎಂದು ಕರೆಯುವುದಕ್ಕೂ, ನೀವು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಂತೆ ನಿಮಗೆ ನೀಲುಕಾವ್ಯ ಸಿಕ್ಕಿದ್ದು ಕಾಕತಾಳಿಯವೇ ಅಲ್ಲವೇ? ನಾನು ನೀಲುಕಾವ್ಯವನ್ನು ಓದಲು ಉತ್ಸುಕನಾಗಿದ್ದೇನೆ. ಈ ಸಲ ಭಾರತಕ್ಕೆ ಬಂದಾಗ ಮಾಡುವ ಮೊದಲ ಕೆಲಸಗಳಲ್ಲಿ ಅದೂ ಒಂದು.

ಥ್ಯಾಂಕ್ಸ್!

ಕೇಶವ
Visit my blog:
http://kannada-nudi.blogspot.com

  • Login or register to post comments
  • link
  • Email this ಪ್ರತಿಕ್ರಿಯೆ
June 27, 2007 - 6:04pm — srinivasc

ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

srinivasc's picture

lankesh anthaha raw barahagaararu intaha kaavyagaLannoo bareyuttaara eMbu aashcaryavaaguttade neevu neelugaLa bagge baredu oLLeya kelavasavannu maaDiddeeri. KaMDita ee pustakavannu koMDu Oduva manassaagide

  • Login or register to post comments
  • link
  • Email this ಪ್ರತಿಕ್ರಿಯೆ
June 27, 2007 - 6:13pm — mahesha

ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

mahesha's picture

ನನ್ನಿ.. ಓದ್ತೀನಿ!

  • Login or register to post comments
  • link
  • Email this ಪ್ರತಿಕ್ರಿಯೆ
June 27, 2007 - 6:48pm — shreekant.mishrikoti

ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

shreekant.mishrikoti's picture

ನಾನು ಲಂಕೇಶ್ ಪತ್ರಿಕೆಯನ್ನು ಆರಂಭದಿಂದಲೇ ( ಆರಂಭ ಏನ್ಬಂತು ? ಅದಕ್ಕೂ ಮೊದಲಿನಿಂದಲೇ ! -!? - ಅದ್‍ ಹೇಗ್ ಸಾಧ್ಯ ಅಂತೀರ? - ಪತ್ರಿಕೆ ಪ್ರಾರಂಭವಾಗುವ ಮೊದಲು , ಅವರ ವಿಡಂಬನಾ ಲೇಖನಗಳು ಪ್ರಜಾವಾಣಿಯಲ್ಲಿ ಸತತ ಬರುತ್ತಿದ್ದವು! ) ಅನೇಕ ವರ್ಷ ಓದಿದವನು .
ನೀಲು ಕವನಗಳು ಅಲ್ಲಲ್ಲಿ ಕೈಬರಹ ಮತ್ತು ಚಿತ್ರದೊಂದಿಗೆ ಪ್ರಕಟವಾಗುತ್ತಿದ್ದವು . ಅವೂ ಮುಖ್ಯ ಆಕರ್ಷಣೆ ಆಗಿದ್ದವು.

ಈ ಪುಸ್ತಕವನ್ನೂ ನೋಡಿದ್ದೇನೆ. ಆದರೆ ಕೈಬರಹ ಇಲ್ಲ ಅನ್ನುವದು ಒಂದು . ಎಲ್ಲ ಒಳ್ಳೆಯ ವಿಷಯ ಒಂದೆಡೆ ಇದ್ದರೆ , ಅದೇಕೋ ಓದಲು ಸ್ವಲ್ಪ ಸರಿ ಎನಿಸಲಿಲ್ಲ . ಹಾಗಾಗಿ ಕೊಳ್ಳಲಿಲ್ಲ . ಆದರೂ ಇನ್ನೊಮ್ಮೆ ಈ ಪುಸ್ತಕ ಕಂಡ ತಕ್ಷಣ ಕೊಳ್ಳುವೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
June 28, 2007 - 4:31pm — anivaasi

ಉ: ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

anivaasi's picture

ಕೇಶವರೆ, ಬರಹದ ಬಗ್ಗೆ ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್. ನಿಮ್ಮಿಂದ ಹೆಚ್ಚು ಹೆಚ್ಚು ನೀಲುಗಳು ಬರಲಿ.
ಶ್ರೀನಿವಾಸರೆ, ಯಾಕೆ ಲಂಕೇಶರು "raw" ಎಂದಿರೋ ಗೊತ್ತಾಗಲಿಲ್ಲ. ನನಗಂತೂ ಅವರ "ಅವ್ವ" ಪದ್ಯ ತುಂಬ ಪ್ರಿಯ ಮತ್ತು ಪ್ರತಿಸಲವೂ ಓದಿಸಿಕೊಳ್ಳತ್ತೆ.
ಥ್ಯಾಂಕ್ಸ್ ಮಹೇಶ್!
ಶ್ರೀಕಾಂತರೆ, ಪದ್ಯಗಳು ಒಟ್ಟಿಗೆ ಸಂದಣಿಯಾಗಿರುವುದು ನಿಜ. ಆದರೆ, ಚಿತ್ರಗಳೊಂದಿಗೆ ಹಾಕಿದರೆ ತುಂಬಾ ಬೆಲೆಯಾಗಬಹುದು ಅಂದುಕೊಂಡೆ. ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀಲು ಕಾವ್ಯ ಮುಖಪುಟ
  • ಲಂಕೇಶರು
  • ಝೆನ ಕಥೆ ೩೬: ಛತ್ರ
  • ಮುಕ್ತಾಯ
  • ಝೆನ್ ಕಥೆ ೩೩: ಸಾವಧಾನ!
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator