ನೀಳ್ಗತೆ
ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ;
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.
- anivaasi's blog
- Login or register to post comments
- 953 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನೀಳ್ಗತೆ
ಮುದುಕ ಮುದುಕಿಗೆ ಕಣ್ಣೂ ಕಾಣಲ್ಲ.. ಪಾಪ..
ಇದೇ ಕತೆ ಹೀಗೆ ಬರೆದರೆ.. ಹೇಗೆ?
ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಹುಡುಗ ಹುಡುಗಿ;
ಆಕೆಯ ನಣುಪು ಅಂಗೈಯೊಳಗೆ
ಆತನ ಬಿರುಸು ಅಂಗೈ
ದಾರಿಯುದ್ದಕ್ಕೂ ಸದ್ದಿಲ್ಲದ ಮಾತುಕತೆ-
ಅವನ ಕಣ್ಣುಮನ ಇವಳ ಮೇಲೆ... ಇವಳ ಮನಗಣ್ಣು ಅವನ ಅವನ ಮೇಲೆ.
ಅಂಗೈಗಳು ಕಣ್ಣುನೋಟಗಳು
ಒಂದನ್ನೊಂದು ಸವರುತ್ತಲೇ ಇದ್ದವು....
:) ಚನ್ನಾಗಿಲ್ವ? ತಲೆಹರಟೇನಾ? :)
ಉ: ನೀಳ್ಗತೆ
ಮಹೇಶರೆ,
ಚೆನ್ನಾಗಿದೆ! "ಇದೇ" ಹಂದರದಲ್ಲಿ "ಬೇರೆ" ಕತೆ ಹೇಳಿದ್ದೀರ ಅನಿಸಿತು.
ನಿಮ್ಮ ಬರಹದ ಒಳಗನ್ನು ಅನುಭವಿಸುತ್ತಿರುವವರಿಗೆ ಅದು ಕ್ಲೀಷೆ ಅನಿಸುವುದಿಲ್ಲ ಅಲ್ಲವೆ? :)
ನನ್ನ ಮೂಲ ಬರಹದಲ್ಲಿ ಬೇಕಂತಲೇ ಕಣ್ಣಿನ ಸಂಗತಿಯಿಲ್ಲ. ಅದಕ್ಕಿಂತ ಮಿಗಿಲಾದ ಕಿವಿಯ ಮತ್ತು ಸೋಂಕಿನ ಸಂಗತಿಯಿದೆ! ಯೋಚಿಸಿ ನೋಡಿ.