ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಮುಂಜಾನೆ ಮನಸ್ಸು

May 29, 2007 - 7:59am — anivaasi

ದಕ್ಷಿಣ ಭೂಗೋಲಕ್ಕೆ ಚಳಿಗಾಲ ಕಾಲಿಡುತ್ತಿದ್ದಂತೆ ತಡವಾಗಿಯಾದರೂ ಸಿಡ್ನಿಯನ್ನೂ ಚಳಿ ಆವರಿಸುತ್ತಿದೆ. ದಪ್ಪ ದಪ್ಪನೆ ಬಟ್ಟೆಗಳು ಪೆಟ್ಟಿಗೆಯಿಂದ, ಗೂಡುಗಳಿಂದ ಹೊರಗೆ ಬಂದು ಮೈಗಳನ್ನು ತಬ್ಬಿಕೊಂಡು ಇನ್ನು ಮೂರು ನಾಕು ತಿಂಗಳು ನಗಾಡುತ್ತವೆ. ಅಡ್ಡಕ್ಕೆ ಬೀಳುವ ಬೆಳಗಿನ ಸೂರ್ಯನ ಬೆಳಕು ಶಾಖ ಹುಟ್ಟಿಸಲು ಮನಸ್ಸೇ ಇಲ್ಲದಂತೆ ರಸ್ತೆ, ರೈಲು ಹಳಿಗಳ ಮೇಲೆ ಬಿದ್ದುಕೊಂಡಿರುತ್ತದೆ. ಅನಾಥವಾಗಿ ಆದರೆ ತುಂಬಾ ತಾಜಾತನದಿಂದ.

ಇಂಥ ಮುಂಜಾನೆ ಆಪ್ತತೆ ಎಂದರೇನು ಎಂಬ ಪ್ರಶ್ನೆ ಮನಸ್ಸನ್ನಾವರಿಸಿತು. ಇಷ್ಟು ವರ್ಷ ಸಿಡ್ನಿಯಲ್ಲಿದ್ದರೂ ಇನ್ನೂ ಆಪ್ತವಾಗದ ಜಾಗ ಇರುವುದು ಸೋಜಿಗವಾಗುತ್ತದೆ. ಹಾಗೆಯೇ, ಈ ನೆಲಕ್ಕೆ ಕಾಲಿಟ್ಟ ಮೊದಲ ದಿನದಿಂದ ಆಪ್ತವಾದ ನಮ್ಮ ಹಳ್ಳಿಯನ್ನು ನೆನಪಿಸುವ ಮನೆಯ ಮಾಡುಗಳು ಈವತ್ತಿಗೂ ಮುದಕೊಡುವುದೂ ಸೋಜಿಗವಾಗುತ್ತದೆ. ಬೆಂಗಳೂರಿನಲ್ಲೂ ಹೀಗಾಗಬಹುದು ಅಂದುಕೊಂಡು ಸಮಾಧಾನದ ಜತೆಗೆ ಆತಂಕವಾಗುತ್ತದೆ.

ರೈಲು ಹಳಿಗಳ ಅಕ್ಕಪಕ್ಕ ಕಪ್ಪು ಕಟ್ಟಿದ ಜಲ್ಲಿ ಕಲ್ಲುಗಳನ್ನು ದಿಟ್ಟಿಸುತೀನಿ. ಒಂದೊಂದು ಕಲ್ಲಿಗೂ ತನ್ನದೇ ನಿರ್ದಿಷ್ಟ ಜಾಗ ಅಂತ ಇಲ್ಲ. ಆದರೆ ಆ ಕಲ್ಲಿನ ರಾಶಿಗೆ ತನ್ನದೇ ಜಾಗವಿದೆ, ಕೆಲಸವಿದೆ. ವ್ಯಕ್ತಿ-ಸಮಷ್ಟಿಯ ಯೋಚನೆ. ಪ್ಲಾಟ್‌ಫಾರ್ಮನಲ್ಲಿ ಅಲಂಕಾರ ಮಾಡಿಕೊಂಡು ಪಕ್ಕದಲ್ಲಿ ಬಂದು ನಿಲ್ಲುವ ತರುಣಿ, ಅಷ್ಟು ದೂರದಲ್ಲಿ ಎದೆಯುಬ್ಬಿಸಿ ನಿಂತ ಸೂಟ್‌ಧಾರಿ ಇವರೆಲ್ಲರೂ ಆ ಯೋಚನೆಯನ್ನು ಪ್ರಶ್ನೆಯಾಗಿಸುತ್ತಾರೆ.

ಬೆಂಗಳೂರಿನಲ್ಲಿ ಫ್ಯಾಕ್ಟರಿಯ ಮೊದಲ ಶಿಫ್ಟಿಗೆ ಮಂಜು ಮುಸುಕಿದ ಚಳಿಯಲ್ಲಿ ಸೈಕಲ್‌ ತುಳಿದು ಹೋಗುತ್ತಿದ್ದದ್ದು ನೆನಪಿಗೆ ಬಂತು. ಬರ್ಲಿನ್ ಗೋಡೆ ಬಿದ್ದ ಚರಿತ್ರೆಯ ಕ್ಷಣದಂತೆ ಭಾರತಕ್ಕೆ ಆರ್ಥಿಕ ಲಿಬರಲೈಸೇಶನ್‌ ಹೊಕ್ಕ ಕ್ಷಣವಿದೆಯೆ ಎಂದು ನನ್ನ ಅಲ್ಪ ತಿಳುವಳಿಕೆಯ ಬುಟ್ಟಿಯಲ್ಲಿ ಕೈಯಾಡಿಸುತೀನಿ. ವಾಸ್ತವದಲ್ಲಿ ಕ್ಷಣಗಳಿಗೆ ಹೆದರುವ, ಕ್ಷಣಗಳನ್ನು ಗುರುತಿಸಲು ಹೆದರುವ ಮನಸ್ಸು. ಹಾಗಾಗಿಯೇ ಅಮೂರ್ತವಾಗಿ ರಾಹುಕಾಲ ಗುಳಿಕಕಾಲ ಲೆಕ್ಕ ಹಾಕುವ ಮನಸ್ಸು ನನ್ನವರದು ಎಂದು ಆತಂಕ ತುಂಬಿದ ಸಮಾಧಾನ ತಾಳುತೀನಿ.

ನನ್ನನ್ನು ಬೆಚ್ಚಗಿಟ್ಟಿರುವ ಜಾಕೆಟ್ಟನ್ನು ಒಮ್ಮೆ ಸವರುತೀನಿ. ತುಂಬಾ ತಣ್ಣಗಿದೆ. ಅದಕ್ಕೂ ಚಳಿಯಾಗುತ್ತಿರಬಹುದು ಎಂದು ಮುಗಳು ನಗುತೀನಿ.

~.~
  • anivaasi ರವರ ಬ್ಲಾಗ್
  • Login or register to post comments
  • 314 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 29, 2007 - 10:53am — shivannakc

ಉ: ಮುಂಜಾನೆ ಮನಸ್ಸು

shivannakc's picture

ಆಹಾ! ಮಗುವಿನಂತಹ ಮನಸ್ಸು... ಆಲೋಚನೆಗಳು... ಇಷ್ಟ... ಇಷ್ಟಿಷ್ಟ...!

"ನಮ್ಮ ಹಳ್ಳಿಯನ್ನು ನೆನಪಿಸುವ ಮನೆಯ ಮಾಡುಗಳು ಈವತ್ತಿಗೂ ಮುದಕೊಡುವುದೂ ಸೋಜಿಗವಾಗುತ್ತದ"

ಮಾಡುಗಳು ಅಂದ್ರೆ?

ಬರಹದ ಧಾಟಿ ಬಹಳವಾಗಿ ಹಿಡಿಸಿತು... ಅದಕ್ಕಾಗಿ ತಮಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 11:06am — ASHOKKUMAR

ಉ: ಮುಂಜಾನೆ ಮನಸ್ಸು

ASHOKKUMAR's picture

ಮನೆಯ ಮಾಡು- roof
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 11:21am — shivannakc

ಉ: ಮುಂಜಾನೆ ಮನಸ್ಸು

shivannakc's picture

ಮುದ್ದಿನ ಅಶೋಕರವರೇ,

ಶರಣ್ರೀಯಪ್ಪಾ ಅರ್ಥ ತಿಳ್ಸಿದ್ಯಾಕ್ಕ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 12:32pm — shreekant.mishrikoti

ಉ: ಮುಂಜಾನೆ ಮನಸ್ಸು

shreekant.mishrikoti's picture

-ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲಾ ... (ಪುರಂದರದಾಸರು)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 12:32pm — shreekant.mishrikoti

ಉ: ಮುಂಜಾನೆ ಮನಸ್ಸು

shreekant.mishrikoti's picture

-ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲಾ ... (ಪುರಂದರದಾಸರು)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 12:32pm — shreekant.mishrikoti

ಉ: ಮುಂಜಾನೆ ಮನಸ್ಸು

shreekant.mishrikoti's picture

-ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲಾ ... (ಪುರಂದರದಾಸರು)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 1:05pm — mahesha

ಉ: ಮುಂಜಾನೆ ಮನಸ್ಸು

mahesha's picture

ಅನಿವಾಸಿಯವರ ಮತ್ತೊಂದು ಅಂದದ ಬರಹ.!!

ಚೆನ್ನಾಗಿದೆ.!! ಸಿಡ್ನಿಯ ಚಳಿ ನಿಮಗೆ ಬೆಂಗಳೂರು ಚಳಿ ನೆನೆಸಿದ್ದು, ನಿಮ್ಮ ಮತ್ತು ಬೆಂಗಳೂರ (ಭಾವಗಳ) ನಂಟಿನ ಆಳವನ್ನು ತೋರುತ್ತದೆ.

ನೀವು ಅನಿವಾಸಿಯಾದರೂ, ನಿಮ್ಮಲೇ ನಮ್ಮ ಬೆಂಗಳೂರು ನಿವಾಸಿಯಾಗಿರುವುದು, "ಚಿಗುರಿದ ಕನಸು" ಸಿನಿಮದ "ಬೇರಿನ ಸೆಳೆತ" ಮಾತನ್ನು ನೆನೆಸುತ್ತದೆ.

ನನ್ನಿ!!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ ಚಿಂತನ: ೫: ಮನಸ್ಸು ಘನ
  • ವಚನ ಚಿಂತನ: ೬: ಮನಸ್ಸು ಕೋತಿ
  • ಅಮ್ಮನ ಒಲವಿನ ಓಲೆ.....
  • ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
  • ನನ್ನ ಕಲ್ಪನೆಯ ಸಾಲುಗಳು...
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯಾಹೂ! ಕ್ರಿಕೆಟ್
  • ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gurubaliga
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 12:11pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:10pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:57am
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 11:55am
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:52am
  • thoughtsarenotenough
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 11:41am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator